Weekend With Ramesh: ಹೃದಯವಂತರ ಜೀವನಗಾಥೆಗೆ 1 ದಿನ ಸಾಲಲಿಲ್ಲ.. 2 ದಿನ ಬೇಕಿತ್ತು!
'ವೀಕೆಂಡ್ ವಿತ್ ರಮೇಶ್' ಸೀಸನ್ 5 ಕಿರುತೆರೆಯಲ್ಲಿ ಮೋಡಿ ಮಾಡುತ್ತಿದೆ. ಪ್ರತಿವಾರ ಸಾಧಕರ ಸೀಟಿನಲ್ಲಿ ಸಾಧಕರು ಕೂತು ತಮ್ಮ ಬದುಕಿನ ಅನಾವರಣ ಮಾಡುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಯಾರ ಜೀವನಗಾಥೆಯನ್ನು ತಿಳಿದುಕೊಳ್ಳಬೇಕು ಅನ್ನೋ ಹಂಬಲವಿತ್ತು. ವೀಕ್ಷಕರ ಆಸೆಯಂತೆ ಒಬ್ಬೊಬ್ಬರೇ ಸಾಧಕರ ಸೀಟಿನಲ್ಲಿ ಕೂತು, ಬದುಕಿನ ಅನಾವರಣ ಮಾಡುತ್ತಿದ್ದಾರೆ.
'ವೀಕೆಂಡ್ ವಿತ್ ರಮೇಶ್' ಸೀಸನ್ 5ನಲ್ಲಿ ಈಗಾಗಲೇ ಮೋಹಕತಾರೆ ರಮ್ಯಾ ಮೊದಲ ಅತಿಥಿಯಾಗಿ ಆಗಮಿಸಿದ್ದಾರೆ. ಇನ್ನು ಎರಡನೇ ಅತಿಥಿಯಾಗಿ ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ ಆಗಮಿಸಿದ್ದರು. ರಮ್ಯಾ ಎಪಿಸೋಡ್ ಟ್ರೋಲ್ ಆಗಿದ್ದರೆ, ಪ್ರಭುದೇವ ಸಂಚಿಕೆಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಈಗ ಮೂರನೇ ವಾರದ ಸಾಧಕರ ಎಪಿಸೋಡ್‌ಗಳಿಗೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಮೂರನೇ ವಾರದಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ. ಮಂಜುನಾಥ್ ಹಾಗೂ ಕನ್ನಡ ಚಿತ್ರರಂಗದ ಹಿರಿಯ ನಟ ದತ್ತಣ್ಣ ಆಗಮಿಸಿದ್ದರು. ಇಬ್ಬರೂ ಒಂದೊಂದು ದಿನ ಸಾಧಕರ ಸೀಟ್‌ನಲ್ಲಿ ಕೂತಿದ್ದಾರೆ. ಅವರ ಜೀವನಗಾಥೆಯನ್ನು ವೀಕ್ಷಕರ ಮುಂದೆ ಇಡಲಾಗಿದೆ. ಆದರೂ, ವೀಕ್ಷಕರಿಗೆ ಈ ಎಪಿಸೋಡ್‌ಗಳು ಸಮಾಧಾನ ತಂದಿಲ್ಲ. ಡಾ.ಮಂಜುನಾಥ್ ಹಾಗೂ ದತ್ತಣ್ಣ ಸಂಚಿಕೆಗಳ ಬಗ್ಗೆ ನೆಟ್ಟಿಗರು ಏನಂತಿದ್ದಾರೆ? ತಿಳಿಯುವುದಕ್ಕೆ ಮುಂದೆ ಓದಿ.
ಹೃದಯವಂತರ ಜೀವನಗಾಥೆಗೆ 2 ದಿನ ಬೇಕಿತ್ತು!
ಡಾ.ಮಂಜುನಾಥ್ ಹಾಗೂ ಹಿರಿಯ ನಟ ದತ್ತಣ್ಣ ಇಬ್ಬರಿಗೂ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಒಂದೊಂದು ದಿನ ಮೀಸಲಿಡಲಾಗಿತ್ತು. ಈ ಇಬ್ಬರೂ ಸಾಧಕರ ಬದುಕು ವೀಕ್ಷಕರಿಗೆ ಖುಷಿಕೊಟ್ಟಿದೆ. ಆದರೆ, ಇಬ್ಬರ ಜೀವನಗಾಥೆಗೆ ಒಂದು ದಿನ ಸಾಲಲಿಲ್ಲ. 2 ಎರಡು ದಿನ ಇರಬೇಕಿತ್ತು ಅನ್ನೋ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಒಬ್ಬೊಬ್ಬರ ಸಾಧನೆಯನ್ನೂ ಎರಡು ದಿನ ತೋರಿಸಬೇಕಿತ್ತು ಅಂತ ನೆಟ್ಟಿಗರು ಅಭಿಪ್ರಾಯ ಪಡುತ್ತಿದ್ದಾರೆ.
"ಛೇ.. ಡಾ.ಮಂಜುನಾಥ್ ಅವರ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ 2 ದಿನ ಇರಬೇಕಿತ್ತು. ಚಿತ್ರನಟರ ಜೀವನ ಕಥೆಗಿಂತ ಇಂಥವರ ಜೀವನ ಸಾಧನೆ ಹೆಚ್ಚೆಚ್ಚು ಪ್ರೇರಣೆ. ದತ್ತಣ್ಣ ನವರ ಜೀವನಗಾಥೆ ಕೂಡ ಎರಡು ದಿನ ಬರಬೇಕಿತ್ತು." ಎಂದು ನೆಟ್ಟಿಗರೊಬ್ಬರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

"ಡಿಲೀಟ್ ಮಾಡಿದ ತುಣುಕುಗಳು ಇದ್ದರೆ ಹಾಕಿ"
ಜಯದೇವ ಹೃದ್ರೋಗ ಹಾಗೂ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಮಂಜುನಾಥ್ ಅವರ ಸಂಚಿಕೆ ವೀಕ್ಷಕರನ್ನು ಇನ್ನಿಲ್ಲದಂತೆ ಕಾಡಿದೆ. ಅವರ ಸಾಧನೆಯನ್ನು ಕಣ್ತುಂಬಿಕೊಂಡ ಜನತೆ ಥ್ರಿಲ್ ಆಗಿದೆ. ಅದೇ ಇನ್ನೊಂದು ಕಡೆ ಹಿರಿಯ ನಟ ದತ್ತಣ್ಣ ಅವರ ಸಿನಿಮಾಗೆ ಬರುವುದಕ್ಕಿಂತ ಮುನ್ನ ಹಾಗೂ ನಂತರದ ಜರ್ನಿ ಕೂಡ ಅಷ್ಟೇ ಇಂಟ್ರೆಸ್ಟಿಂಗ್ ಆಗಿತ್ತು. ಹೀಗಾಗಿ ಇಬ್ಬರ ಸಾಹಸಗಾಥೆಯನ್ನು 2 ದಿನ ತೋರಿಸಬೇಕಿತ್ತು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಇದೇ ವೇಳೆ ಜೀ ಕನ್ನಡಕ್ಕೆ ಸಲಹೆಯನ್ನೂ ನೀಡುತ್ತಿದ್ದಾರೆ. "ಎಪಿಸೋಡ್‌ನಲ್ಲಿ ತೋರಿಸದೆ ಇರುವ ದೃಶ್ಯಗಳು ಇದ್ದರೆ, ಅದನ್ನು ತೋರಿಸಿ" ಎಂದು ಸಲಹೆಯನ್ನು ನೀಡಿದ್ದಾರೆ. ಹೀಗಾಗಿ ರಮೇಶ್ ಅರವಿಂದ್ ನಡೆಸಿಕೊಡುವ ಜೀ ಕನ್ನಡ ನೆಟ್ಟಿಗರ ಈ ಬೇಡಿಕೆಯನ್ನು ಪರಿಗಣಿಸುತ್ತಾ? ಅನ್ನೋ ಕುತೂಹಲ ಹೆಚ್ಚಾಗಿದೆ.
ದತ್ತಣ್ಣ ಬದುಕಿನ ಸತ್ಯಗಳ ಅನಾವರಣ
ದತ್ತಣ್ಣ ಅವರ ಜರ್ನಿಯನ್ನು ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ದತ್ತಣ್ಣ ಅವರ ಬದುಕು, ಶಿಕ್ಷಣ ಅವರಿಗಿದ್ದ ಆಸಕ್ತಿಯ ಅನಾವರಣ ಆಗಿದೆ. ಓದಿನಲ್ಲಿ ಚುರುಕಿದ್ದ ದತ್ತಣ್ಣಗೆ ಶಿಕ್ಷಣದಲ್ಲಿ ಉತ್ತಮ ಸಾಧನೆಯನ್ನೇ ಮಾಡಿದ್ದರು. ಓದುವಾಗಲೇ ಕ್ರೀಡೆ ಹಾಗೂ ನಾಟಕಗಳಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡಿದ್ದರು. ಹೀಗಾಗಿ ಅವರ ಬದುಕು ಇಂಟ್ರೆಸ್ಟಿಂಗ್ ಅಂತ ಅನಿಸಿದೆ.
ಇದರೊಂದಿಗೆ ದತ್ತಣ್ಣ ಅವರಿಂದಲೇ ಕೆಲವು ಸತ್ಯಗಳನ್ನು ಕೇಳಬೇಕು ಅಂತಿದ್ದವರಿಗೂ ಉತ್ತರ ಸಿಕ್ಕಿದೆ. ದತ್ತಣ್ಣ ಯಾಕೆ ಮದುವೆ ಆಗಿಲ್ಲ ಅನ್ನೋದನ್ನು ತಿಳಿದುಕೊಳ್ಳಬೇಕು ಅಂತಿದ್ದ ಅಭಿಮಾನಿಗಳಿಗೂ ಉತ್ತರ ಸಿಕ್ಕಿದೆ. ಸ್ನೇಹಿತರ ಬಳಿ ದತ್ತಣ್ಣ ಸಂಸಾರ ಅನ್ನೋದು ಗೋಳು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಯಾವಾಗಲೂ ಫ್ರಿಯಾಗಿ ಇರಬೇಕು ಎನ್ನುತ್ತಿದ್ದನ್ನು ಅವರ ಸ್ನೇಹಿತರು ರಿವೀಲ್ ಮಾಡಿದ್ದಾರೆ.


Click it and Unblock the Notifications











