Weekend with Ramesh: ರಮ್ಯಾ–ರಕ್ಷಿತಾ ನಡುವೆ ತಂದಿಟ್ಟಿದ್ಯಾರು? ಅಪ್ಪು.. ಸಂಜು.. ಈ ಸಂಚಿಕೆ ವೀಕ್ಷಿಸಲು 5 ಕಾರಣಗಳಿವು!

ಕನ್ನಡ ಮೋಸ್ಟ್ ಎಕ್ಸ್‌ಪೆಕ್ಟೆಡ್ ಟಾಕ್ ಶೋ 'ವೀಕೆಂಡ್ ವಿತ್ ರಮೇಶ್'. ಕೋವಿಡ್, ಲಾಕ್‌ಡೌನ್‌ ಅಂತ ನಾಲ್ಕು ಈ ಶೋ ನಡೆದಿರಲಿಲ್ಲ. ಈಗ ನಾಲ್ಕು ವರ್ಷಗಳ ಬಳಿಕ ಮತ್ತೆ ಇದೇ ಟಾಕ್‌ ಶೋದ 5ನೇ ಸೀಸನ್ ಆರಂಭ ಆಗುತ್ತಿದೆ. ಇದರ ಮೊದಲ ಅತಿಥಿಯಾಗಿ ಮೋಹಕತಾರೆ ರಮ್ಯಾ ಆಗಮಿಸುತ್ತಿದ್ದಾರೆ.

ಜೀ ಕನ್ನಡ ಕೆಲವು ದಿನಗಳ ಹಿಂದಷ್ಟೇ ಮೋಹಕತಾರೆ ರಮ್ಯಾ 'ವೀಕೆಂಡ್ ವಿತ್ ರಮೇಶ್' ಸೀಸನ್ 5ರ ಮೊದಲ ಅತಿಥಿ ಎಂದು ಹೇಳಿತ್ತು. ಅದರಂತೆಯೇ ಈಗ ಹೊಚ್ಚ ಹೊಸ ಪ್ರೋಮೊವನ್ನು ರಿಲೀಸ್ ಮಾಡಿದೆ. ಈ ಪ್ರೋಮೊವೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Weekend With Ramesh Season 5; First Guest Ramya Episode Promo Released

ಸಿನಿಮಾ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರೋ ಗಣ್ಯ ವ್ಯಕ್ತಿಗಳನ್ನು ಈ ಕಾರ್ಯಕ್ರಮಕ್ಕೆ ಕರೆಸಲಾಗುತ್ತೆ. ಅವರ ಬದುಕನ್ನು ಕಿರುತೆರೆಯಲ್ಲಿ ವೀಕ್ಷಕರ ಕಣ್ಣಿಗೆ ಕಟ್ಟುವಂತೆ ತೋರಿಸಲಾಗುತ್ತೆ. ಎಂದೂ ಕೇಳದ ಸಾಧನೆ ಬದುಕಿನ ಪ್ರಮುಖ ಅಧ್ಯಾಯಗಳು ಇದೇ ವೇದಿಕೆ ಮೇಲೆ ರಿವೀಲ್ ಆಗುತ್ತೆ. ಈಗ ಸೀಸನ್ 5ರ ಮೊದಲ ಸಂಚಿಕೆಗೆ ರಮ್ಯಾ ಆಗಮಿಸುತ್ತಿದ್ದು, ಈ ಎಪಿಸೋಡ್ ವೀಕ್ಷಣೆ ಮಾಡುವುದಕ್ಕೆ 5 ಕಾರಣಗಳು ಹೀಗಿವೆ.

1 ಮೋಹಕತಾರೆ ರಮ್ಯಾ ಬಾಲ್ಯ

ಸ್ಯಾಂಡಲ್‌ವುಡ್‌ನ ಲಕ್ಕಿ ಕ್ವೀನ್ ರಮ್ಯಾ ಸಿನಿಮಾರಂಗದ ಸಾಧನೆಗಳನ್ನು ವಿಶೇಷವಾಗಿ ಹೇಳಬೇಕಿಲ್ಲ. ಸತತ ದಶಕಗಳ ಕಾಲ ಕನ್ನಡ ಚಿತ್ರರಂಗದಲ್ಲಿ ನಂಬರ್ 1 ನಟಿಯಾಗಿ ರಮ್ಯಾ ನೆಲೆಯೂರಿದ್ದರು. ಆದರೆ, ಮೋಹಕತಾರೆ ಬಾಲ್ಯದ ಬಗ್ಗೆ ಅವರ ಅಭಿಮಾನಿಗಳಿಗೆ ಹೆಚ್ಚಾಗಿ ಗೊತ್ತಿಲ್ಲ.

ರಮ್ಯಾ ಹುಟ್ಟಿದ್ದು ಎಲ್ಲಿ? ಅವರ ಶಿಕ್ಷಣ, ಬಾಲ್ಯದ ದಿನಗಳು, ಹೀಗೆ ಹಿಂದೆಂದೂ ರಮ್ಯಾ ಮಾತೇ ಆಡದ ತಮ್ಮ ಬಾಲ್ಯದ ಬಗ್ಗೆ ವೀಕೆಂಡ್ ವಿತ್ ರಮೇಶ್‌ನಲ್ಲಿ ರಿವೀಲ್ ಮಾಡುವ ಸಾಧ್ಯತೆಗಳಿವೆ. ಬಾಲ್ಯದಿಂದ ಸಿನಿಮಾರಂಗಕ್ಕೆ ಎಂಟ್ರಿ ಕೊಡುವವರೆಗಿನ ಬದುಕಿನ ಅನಾವರಣ ಆಗಲಿದೆ.

Weekend With Ramesh Season 5; First Guest Ramya Episode Promo Released

2 ರಕ್ಷಿತಾ-ರಮ್ಯಾ ನಡುವಿನ ಕಾಂಪಿಟೇಷನ್

ಮೋಹಕತಾರೆ ರಮ್ಯಾ ಹಾಗೂ ರಕ್ಷಿತಾ ಇಬ್ಬರೂ ಹೆಚ್ಚು ಕಡಿಮೆ ಸಮಕಾಲೀನರು. ರಕ್ಷಿತಾ ಸ್ವಲ್ಪ ಬೇಗ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರೂ, ಇಬ್ಬರು ಒಂದೇ ಕಾಲಘಟ್ಟದವರು ಎಂದು ಹೇಳಬಹುದು. ಪುನೀತ್ ನಾಯಕನಾಗಿ ನಟಿಸಿದ ಮೊದಲ ಸಿನಿಮಾದಲ್ಲಿ 'ಅಪ್ಪು' ರಕ್ಷಿತಾ ಹೀರೊಯಿನ್. ಅಪ್ಪು ಎರಡನೇ ಸಿನಿಮಾಗೆ ರಮ್ಯಾ ನಾಯಕಿ. ಆದರೆ, ಇವರಿಬ್ಬರ ನಡುವೆ ಪೈಪೋಟಿ ಇತ್ತು ಅನ್ನೋ ಸುದ್ದಿ ಸ್ಯಾಂಡಲ್‌ವುಡ್‌ನಲ್ಲಿ ಓಡಾಡುತ್ತಿತ್ತು. ಈ ಬಗ್ಗೆ ರಿವೀಲ್ ಮಾಡುವ ಸಾಧ್ಯತೆಯಿದೆ.

3 ರಕ್ಷಿತಾ-ರಮ್ಯಾ ನಡುವೆ ತಂದಿಟ್ಟಿದ್ಯಾರು?

ರಮ್ಯಾ ಹಾಗೂ ರಕ್ಷಿತಾ ಇಬ್ಬರೂ ತಮ್ಮ ವೃತ್ತಿ ಬದುಕಿನಲ್ಲಿ ಪೀಕ್‌ನಲ್ಲಿದ್ದರು. ಇಬ್ಬರೂ ಪೈಪೋಟಿಗೆ ಬಿದ್ದು ಸಿನಿಮಾದಲ್ಲಿ ನಟಿಸುತ್ತಿದ್ದರು. ಹೀಗಾಗಿ ಇಬ್ಬರ ಒಂದೇ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಸ್ಕ್ರೀನ್ ಶೇರ್ ಮಾಡಿಕೊಂಡಿರಲಿಲ್ಲ. ಈಗ ಪ್ರೋಮೊದಲ್ಲಿ ನಿರ್ದೇಶಕ ಮಹೇಶ್ ಬಾಬು ಮುಂದೇನೇ ನಮ್ಮಿಬ್ಬರ ನಡುವೆ ತಂದಿಟ್ಟು ಮಜಾ ತೆಗೆದುಕೊಳ್ಳುತ್ತಿದ್ದರು ಎಂದು ತಮಾಷೆಯಾಗಿ ಕಾಲೆಳೆದಿದ್ದಾರೆ.

4 ಅಪ್ಪು ನೆನೆದು ಕಣ್ಣೀರು

ರಮ್ಯಾ ವೃತ್ತಿ ಬದುಕು ಆರಂಭ ಆಗಿದ್ದು ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಸಿನಿಮಾದಿಂದಲೇ. ಹೀಗಾಗಿ ಅಪ್ಪು ಹಾಗೂ ರಮ್ಯಾ ನಡುವೆ ಸ್ನೇಹ ಸಂಬಂಧವಿತ್ತು. ಹೀಗಾಗಿ ಮತ್ತೆ ನಟನೆಗೆ ಮರಳಲು ನಿರ್ಧರಿಸಿದಾಗ, ರಮ್ಯಾ ಅಪ್ಪು ಸಿನಿಮಾದ ಮೂಲಕನೇ ಕಮ್‌ಬ್ಯಾಕ್ ಮಾಡಲು ನಿರ್ಧರಿಸಿದ್ದರು. ಹೀಗಾಗಿ ಪ್ರೋಮೊದಲ್ಲಿ ಅಪ್ಪು ನೆನೆದು ಕಣ್ಣೀರು ಹಾಕಿದ್ದಾರೆ. ಈ ಕಾರಣಕ್ಕೆ ಭಾವನಾತ್ಮಕ ಸನ್ನಿವೇಶಗಳು ಹೆಚ್ಚಿರುವ ಸಾಧ್ಯತೆಯಿದೆ.

5 ಕಾಂಟ್ರವರ್ಸಿ-ರಾಜಕೀಯ

ರಮ್ಯಾ ಸ್ಯಾಂಡಲ್‌ವುಡ್‌ನಲ್ಲಿ ಎಷ್ಟು ಜನಪ್ರಿಯರೋ ಅಷ್ಟೇ ಕಾಂಟ್ರವರ್ಸಿಯಲ್ಲೂ ಫೇಮಸ್. ರಮ್ಯಾ ವೃತ್ತಿ ಬದುಕಿನಲ್ಲಿ ಕೆಲವು ಸಿನಿಮಾ ನಿರ್ಮಾಪಕರು, ನಟರೊಂದಿಗೆ ಕಿತ್ತಾಡಿಕೊಂಡಿದ್ದಾರೆ. ಅದ್ಯಾಕೆ ಅನ್ನೋದನ್ನು ರಿವೀಲ್ ಮಾಡುವ ಸಾಧ್ಯತೆಗಳಿವೆ. ಅಲ್ಲದೆ, ವೃತ್ತಿ ಬದುಕಿನ ಉತ್ತುಂಗದಲ್ಲಿರುವಾಗಲೇ ರಾಜಕೀಯಕ್ಕೆ ಎಂಟ್ರಿಕೊಟ್ಟಿರೋ ಕೊಟ್ಟಿದ್ಯಾಕೆ? ರಾಜಕೀಯ ರಂಗದಲ್ಲಿ ಏನಾಯ್ತು? ಅನ್ನೋದನ್ನು ರಿವೀಲ್ ಮಾಡಬಹುದು. ಈ ಕಾರಣಕ್ಕೆ 'ವೀಕೆಂಡ್ ವಿತ್ ರಮೇಶ್' ಮೊದಲ ಸಂಚಿಕೆನೇ ಕಿಕ್ ಕೊಡಬಹುದು.

More from Filmibeat

English summary
Weekend With Ramesh Season 5; First Guest Ramya Episode Promo Released. In this promo Ramya revealed Mahesh Babu is the reason behind Upset With Rakshitha, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X