Weekend With Ramesh: ಈ ವಾರ ಸಾಧಕರ ಸೀಟಿನಲ್ಲಿ ಕೂರೋರು ಒಬ್ರು ಮಂಡ್ಯದವ್ರು.. ಮತ್ತೊಬ್ರು ಚಾಮರಾಜನಗರದವ್ರು!
ಸಿನಿಮಾ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರ ಬದುಕನ್ನು ತೋರಿಸುವ ಕಾರ್ಯಕ್ರಮವೇ 'ವೀಕೆಂಡ್ ವಿತ್ ರಮೇಶ್'. ನಾಲ್ಕು ವರ್ಷಗಳ ಬಳಿಕ ಮತ್ತೆ ಈ ಕಾರ್ಯಕ್ರಮ ನಡೆಯುತ್ತಿದ್ದು, ವೀಕ್ಷಕರು ಮನಸಾರೆ ಇಷ್ಟ ಪಟ್ಟಿದ್ದಾರೆ.
ಐಪಿಎಲ್, ಎಲೆಕ್ಷನ್ ಅಬ್ಬರದ ನಡುವೆಯೂ ಮನೆ ಮಂದಿಯೆಲ್ಲ ಕೂತು ಈ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮವನ್ನು ನೋಡುತ್ತಿದ್ದಾರೆ. ಈಗಾಗಲೇ ಈ ಕಾರ್ಯಕ್ರಮಕ್ಕೆ ಐದು ಮಂದಿ ಅತಿಥಿಗಳು ಬಂದು ಹೋಗಿದ್ದಾರೆ. ಮೋಹಕತಾರೆ ರಮ್ಯಾ ಮೊದಲ ಅತಿಥಿಯಾಗಿ ಸಾಧಕ ಸೀಟಿನಲ್ಲಿ ಕೂತಿದ್ದರು.

ಇನ್ನು ಈ ವಾರ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ಬರುವ ಅತಿಥಿಗಳ ಬಗ್ಗೆ ಕುತೂಹಲವಿತ್ತು. ಈಗಾಗಲೇ ಜೀ ಕನ್ನಡ ಸೋಶಿಯಲ್ ಮೀಡಿಯಾದಲ್ಲಿ ಈ ವಾರದಲ್ಲಿ ಅತಿಥಿಗಳು ಯಾರು? ಅನ್ನೋದಕ್ಕೆ ಸುಳಿವು ನೀಡಿದೆ. ಹಾಗಿದ್ರೆ, ಅಸಲಿಗೆ ಈ ವಾರ ಸಾಧಕರ ಸೀಟಿನಲ್ಲಿ ಕೂರುವ ಅತಿಥಿಗಳು ಯಾರು? ಅವರ ಕುರಿತಾದ ಡಿಟೈಲ್ಸ್ ಇಲ್ಲಿದೆ.
ಸಾಧಕರ ಸೀಟಿನಲ್ಲಿ ಕೂರೋ ಅತಿಥಿ ಯಾರು?
ವೀಕೆಂಡ್ ಬಂತು ಅಂದ್ರೆ, ಓಟಿಟಿ ಅಂತ ಬ್ಯುಸಿಯಾಗುತ್ತಿದ್ದವರು, ರಮೇಶ್ ಅರವಿಂದ್ ನಡೆಸಿಕೊಡುವ ಕಾರ್ಯಕ್ರಮದ ಮುಂದೆ ಕೂರುತ್ತಿದ್ದಾರೆ. 'ವೀಕೆಂಡ್ ವಿತ್ ರಮೇಶ್' ಆ ಮಟ್ಟಿಗೆ ಹೆಸರು ಮಾಡಿದೆ. ಕಳೆದ ಮೂರು ವಾರಗಳಂತೆ ಈ ವಾರ ಕೂಡ ಮುಂದಿನ ಅತಿಥಿಗಳು ಯಾರು? ಅನ್ನೋದನ್ನು ನೋಡುವುದಕ್ಕೆ ಕಾತುರರಾಗಿದ್ದಾರೆ. ಅದಕ್ಕೀಗ ಉತ್ತರ ಸಿಕ್ಕಿದೆ.
ಜೀ ಕನ್ನಡ ತನ್ನ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಫೋಟೊವೊಂದನ್ನು ಶೇರ್ ಮಾಡಿದ್ದು, "ಒಬ್ಬರದ್ದು ಫನ್ ಲವ್ವಿಂಗ್.. ಇನ್ನೊಬ್ಬರದ್ದು ಖಡಕ್ ಆಕ್ಟಿಂಗ್, ಈ ವೀಕೆಂಡ್‌ನಲ್ಲಿ ಬರ್ತಿರೋ ರಂಗಕಲಾವಿದ ಅತಿಥಿಗಳು ಯಾರು?" ಅಂತ ಕ್ಯಾಪ್ಷನ್ ಕೊಟ್ಟು ಕುತೂಹಲ ಕೆರಳಿಸಿದೆ. ಈ ಮೂಲಕ ಈಗಾಗಲೇ ಮಂಡ್ಯ ರಮೇಶ್ ಹಾಗೂ ಅವಿನಾಶ್ ಈ ವಾರದ ಅತಿಥಿಗಳು ಅನ್ನೋದು ವೀಕ್ಷಕರಿಗೆ ಗೊತ್ತಾಗಿದೆ.

ರಂಗಕಲಾವಿದ ಮಂಡ್ಯ ರಮೇಶ್
ಮಂಡ್ಯ ರಮೇಶ್ ಈ ವಾರದ 'ವೀಕೆಂಡ್ ವಿತ್ ರಮೇಶ್' ವಿಶೇಷ ಅತಿಥಿ. ಹಾಸ್ಯ ಕಲಾವಿದರಾಗಿ, ರಂಗಭೂಮಿ ಕಲಾವಿದರಾಗಿ ಮಂಡ್ಯ ರಮೇಶ್ ಗುರುತಿಸಿಕೊಂಡಿದ್ದಾರೆ. ಕಳೆದ ಎರಡೂ ಮೂರು ದಶಕಗಳಿಂದ ಚಿತ್ರರಂಗದಲ್ಲಿ ವಿವಿಧ ಪಾತ್ರಗಳನ್ನು ಮಾಡಿ ರಂಜಿಸಿದ್ದಾರೆ.
ಸದ್ಯ ಮೈಸೂರಿನಲ್ಲಿ ನಟನಾ ರಂಗಶಾಲೆಯನ್ನು ಆರಂಭಿಸಿ, ರಂಗ ತರಬೇತಿಯನ್ನು ನೀಡುತ್ತಿದ್ದಾರೆ. 'ರಂಗವಲ್ಲಿ' ಹಾಗೂ 'ಕನವರಿಕೆ' ಅನ್ನೋ ಎರಡು ಪುಸ್ತಕವನ್ನು ಬರೆದಿದ್ದು, ಇದು ಅವರ ರಂಗಭೂಮಿ ಬದುಕಿನ ಕುರಿತಾದ ಪುಸ್ತಕಗಳಾಗಿವೆ.
ಹಿರಿಯ ಕಲಾವಿದ ಅವಿನಾಶ್
ಮಂಡ್ಯ ರಮೇಶ್ ಜೊತೆ ಈ ವಾರ ಸಾಧಕರ ಸೀಟಿನಲ್ಲಿ ಕಾಣಿಸಿಕೊಳ್ಳುವ ಅತಿಥಿ ಅವಿನಾಶ್. ಈ ಹಿರಿಯ ನಟನ ಹುಟ್ಟೂರು ಚಾಮರಾಜನಗರದ ಯೆಲಂದೂರು. ವಿದ್ಯಾಭ್ಯಾಸ ಮಾಡುವಾಗಲೇ ಅವಿನಾಶ್ ರಂಗಭೂಮಿ ಹಾಗೂ ಸಿನಿಮಾಗಳಲ್ಲಿ ಆಸಕ್ತಿ ಹೊಂದಿದ್ದರು. ಇದೇ ವೇಳೆ ಅವಿನಾಶ್ ಮೈಸೂರಿನ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಇಂಜಿನಿಯರಿಂಗ್‌ನಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರಾಗಿದ್ದರು. ಆ ಬಳಿಕ ಬೆಂಗಳೂರಿನ ಎಂಇಎಸ್ ಕಾಲೇಜಿನಲ್ಲೂ ಸೇವೆ ಸಲ್ಲಿಸಿದ್ರು.
ಟೀಚಿಂಗ್ ಕೆಲಸಕ್ಕೆ ಗುಡ್ ಬೈ ಹೇಳಿ ನಟನೆಯನ್ನೇ ಸೀರಿಯಸ್ ಆಗಿ ತೆಗೆದುಕೊಂಡಿದ್ದರು. ಅಲ್ಲಿಂದ ಇಲ್ಲಿವರೆಗೂ ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಸುಮಾರು 400ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೆ ಬಾಲಚಂದಿರ್, ಗಿರೀಶ್ ಕಾಸರವಳ್ಳಿ, ಟಿ ಎನ್ ಸೀತಾರಂ, ಟಿ ಎಸ್ ನಾಗಾಭರಣ, ಪ್ರಶಾಂತ್ ನೀಲ್,ಮುರುಗದಾಸ್ ಸೇರಿದಂತೆ ಹಲವು ಗ್ರೇಟ್ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದಾರೆ.


Click it and Unblock the Notifications











