ಚಾಮರಾಜನಗರ ಕನ್ನಡ ಮಾತಾಡಿ ಮನಗೆದ್ದಿದ್ದ ಪ್ರಭುದೇವ: TRP ಆಟದಲ್ಲಿ ಸೋತ್ರಾ ಗೆದ್ರಾ?

'ವೀಕೆಂಡ್ ವಿತ್ ರಮೇಶ್' ಸೀಸನ್ 5 ಕಿರುತೆರೆ ವೀಕ್ಷಕರಿಗೆ ಮತ್ತೆ ಹತ್ತಿರವಾಗುತ್ತಿದೆ. ವೀಕೆಂಡ್ ಟೆಂಟ್‌ಗೆ ಬಂದ ಅತಿಥಿಗಳ ಸಾಧನೆಯನ್ನು ಕಂಡು ಇಷ್ಟ ಪಟ್ಟಿದ್ದಾರೆ. ಅತಿಥಿಗಳನ್ನು ಹೊಗಳಿ ಕೊಂಡಾಡಿದ್ದಾರೆ. ದಿನದಿಂದ ದಿನಕ್ಕೆ 'ವೀಕೆಂಡ್ ವಿತ್ ರಮೇಶ್' ಜನಮನ ಗೆಲುತ್ತಾ ಮುನ್ನುಗ್ಗುತ್ತಿದೆ.

ಈಗಾಗಲೇ ಮೋಹಕತಾರೆ ರಮ್ಯಾ, ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ, ಡಾ. ಮಂಜುನಾಥ್ ಹಾಗೂ ಹಿರಿಯ ನಟ ದತ್ತಣ್ಣ ಸಾಧಕರ ಸೀಟ್‌ ಅಲಂಕರಿಸಿದ್ದಾರೆ. ನಾಲ್ಕು ಅತಿಥಿಗಳ ಬಳಿಕ 5ನೇ ಅತಿಥಿಯ ಸಾಧನೆ ಈ ವಾರ ಪ್ರಸಾರ ಆಗಲಿದೆ.

Weekend With Ramesh Season 5 Prabhu Deva Episode TRP Rating

ವೀಕೆಂಟ್ ವಿತ್ ರಮೇಶ್ ಬಗ್ಗೆ ರಮ್ಯಾ ಎಪಿಸೋಡ್ ಬಿಟ್ರೆ ಉಳಿದ ಅತಿಥಿಗಳ ಸಂಚಿಕೆಗೆ ಸೋಶಿಯಲ್ ಮೀಡಿಯಾದಲ್ಲಿ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ. ಇಷ್ಟೆಲ್ಲಾ ಇದ್ರೂ ಈ ಕಾರ್ಯಕ್ರಮಕ್ಕೆ ಟಿಆರ್‌ಪಿ ಎಷ್ಟಿದೆ? ಅನ್ನೋ ಕುತೂಹಲಕ್ಕೆ ಪ್ರತಿವಾರ ಉತ್ತರ ಸಿಗುತ್ತೆ. ಈ ವಾರ ಪ್ರಭುದೇವ ಎಪಿಸೋಡ್‌ನ ಟಿಆರ್‌ಪಿ ರೇಟಿಂಗ್ ಹೊರಬಿದ್ದಿದೆ.

ಪ್ರಭುದೇವ ಎಪಿಸೋಡ್‌ಗೆ ಸಿಕ್ಕ ರೇಟಿಂಗ್ ಎಷ್ಟು?

ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ ಸಂಚಿಕೆ ಮೇಲೆ ಎಲ್ಲರ ನಿರೀಕ್ಷೆ ಇತ್ತು. ಅಷ್ಟು ಚೆನ್ನಾಗಿ ಕನ್ನಡ ಮಾತಾಡಲು ಬಾರದ ಪ್ರಭುದೇವ ಸಂಚಿಕೆ ಹೇಗಿರುತ್ತೋ? ಅನ್ನೋ ಪ್ರಶ್ನೆ ಎದ್ದಿತ್ತು. ಆದರೆ, ನಿರೀಕ್ಷೆ ಮಾಡಿದ್ದಕ್ಕಿಂತ ದುಪ್ಪಟ್ಟು ರೆಸ್ಪಾನ್ಸ್ ಸಿಕ್ಕಿತ್ತು. ಅಪ್ಪಟ ಚಾಮರಾಜನಗರ ಕನ್ನಡದಲ್ಲಿ ಮಾತಾಡಿ ಕನ್ನಡಿಗರ ಮನಗೆದ್ದಿದ್ದರು.

ಪ್ರಭುದೇವ ಬಾಲ್ಯ, ಡ್ಯಾನ್ಸರ್ ಜರ್ನಿ, ಆಕ್ಟಿಂಗ್, ಡೈರೆಕ್ಷನ್ ಎಲ್ಲವೂ ಮಜಭೂತಾಗಿತ್ತು. ಆದರೂ, ಹೆಚ್ಚಾಗಿ ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಳ್ಳದೇ ಇರೋದ್ರಿಂದ ಸೋಶಿಯಲ್ ಮೀಡಿಯಾಗಷ್ಟೇ ಸೀಮಿತವಾಗಿಬಿಡುತ್ತಾ? ಅನ್ನೋ ಪ್ರಶ್ನೆನೂ ಎದ್ದಿತ್ತು. ಅದಕ್ಕೆ ಈ ವಾರ ಉತ್ತರ ಸಿಕ್ಕಿದೆ. ಟಿಆರ್‌ಪಿ ಆಟದಲ್ಲಿ ಪ್ರಭುದೇವ ಎಪಿಸೋಡ್‌ಗೆ 5.7 ರೇಟಿಂಗ್ ಸಿಕ್ಕಿದೆ.

Weekend With Ramesh Season 5 Prabhu Deva Episode TRP Rating

ರಮ್ಯಾ ಹಾಗೂ ಪ್ರಭುದೇವ ಸೇಮ್ ಟು ಸೇಮ್

ಮೋಹಕತಾರೆ ರಮ್ಯಾ ಎಪಿಸೋಡ್ ಟ್ರೋಲ್‌ಗೆ ಒಳಗಾಗಿತ್ತು. ಆದರೂ, ರಮ್ಯಾ ಎಪಿಸೋಡ್‌ಗಿಂತ ಪ್ರಭುದೇವ ಸಂಚಿಕೆ ಕಡಿಮೆ ಅನ್ನೋ ನಿರೀಕ್ಷೆಯಿತ್ತು. ಆದರೆ, ಪ್ರಭುದೇವ ಹಾಗೂ ರಮ್ಯಾ ಇಬ್ಬರ ಎಪಿಸೋಡ್‌ಗಳಿಗೂ ಹೆಚ್ಚು ಕಡಿಮೆ ಒಂದೇ ರೇಟಿಂಗ್ ಸಿಕ್ಕಿದೆ.

ನಟಿ ರಮ್ಯಾ ಆಂಗ್ಲ ಭಾಷೆಯಲ್ಲಿ ಹೆಚ್ಚಾಗಿ ಮಾತಾಡಿದ್ದರಿಂದ ಟ್ರೋಲ್ ಆಗಿದ್ದರು. ಹೀಗಿದ್ದರೂ ಮೋಹಕತಾರೆ ಎಪಿಸೋಡ್‌ಗೆ 5.8 ಟಿಆರ್‌ಪಿ ಸಿಕ್ಕಿತ್ತು. ಹಾಗೆ ನೋಡಿದರೆ, ಪ್ರಭುದೇವ ಎಪಿಸೋಡ್‌ಗೆ 5.7 ಸಿಕ್ಕಿದ್ದು ಉತ್ತಮ ರೇಟಿಂಗ್ ಅಂತಲೇ ಹೇಳಬಹುದು.

ಡಾಲಿ ಮೇಲೆ ಎಲ್ಲರ ಕಣ್ಣು

ಪ್ರಭುದೇವ ಸಂಚಿಕೆ ಬಳಿಕ ಸಿನಿಮಾ ಕ್ಷೇತ್ರ ಅಲ್ಲದ ಸಾಧಕರನ್ನು ಕರೆಸಲಾಗಿತ್ತು. ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ. ಮಂಜುನಾಥ್ ಅವನ್ನು ಅತಿಥಿಯಾಗಿ ಕರೆಸಲಾಗಿತ್ತು. ಇವರೊಂದಿಗೆ ಹಿರಿಯ ನಟ ದತ್ತಣ್ಣ ಕೂಡ ವೀಕೆಂಡ್ ವಿತ್ ರಮೇಶ್ ವೇದಿಕೆ ಕರೆದುಕೊಂಡು ಬರಲಾಗಿತ್ತು. ಈ ವಾರ ಡಾಲಿ ಧನಂಜಯ್ ಸಾಧಕರ ಸೀಟ್‌ನಲ್ಲಿ ಕೂರಲಿದ್ದಾರೆ.

ಡಾಲಿ ಧನಂಜಯ್ ಎಪಿಸೋಡ್‌ನ ಪ್ರೋಮೊಗಳು ಈಗಾಗಲೇ ವೀಕ್ಷಕರನ್ನು ಸೆಳೆಯುತ್ತಿವೆ. ಧನಂಜಯ್ ಕಷ್ಟದ ದಿನಗಳು, ಸಿನಿಮಾ ಜರ್ನಿ, ಕುಟುಂಬದ ಪರಿಚಯ ಆಗಲಿದೆ. ಹಾಗೇ ಆರಂಭದ ದಿನಗಳಲ್ಲಿ ಧನಂಜಯ್ ಅವಮಾನಿಸಿ ಘಟನೆಗಳನ್ನು ಅನಾವರಣ ಮಾಡಲಿದ್ದಾರೆ. ಏನೇ ಇದ್ರೂ, ವೀಕೆಂಡ್ ವಿತ್ ರಮೇಶ್ ಎರಡನೇ ವಾರದ ಟಿಆರ್‌ಪಿ ಸ್ಥಿರವಾಗಿದ್ದು, ಮುಂದಿನ ವಾರ ಹೇಗಿರುತ್ತೆ ಅನ್ನೋ ಕೌತಕವಂತೂ ಇದೆ.

More from Filmibeat

English summary
Weekend With Ramesh Season 5 Prabhu Deva Episode TRP Rating, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X