ಡಿಕೆ ಶಿವಕುಮಾರ್‌ಗೂ ಸಿಹಿ ಕಹಿ ಚಂದ್ರುಗೂ ಏನು ಸಂಬಂಧ? ವೀಕೆಂಡ್‌ಗೆ ಬಂದು ಡಿಕೆಶಿ ಬಗ್ಗೆ ಹೇಳಿದ್ದೇನು?
ಕಾಂಗ್ರೆಸ್‌ನ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಈ ವಾರದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಅತಿಥಿ. ಇದೊಂದು ಎಪಿಸೋಡ್‌ಗಾಗಿ ಅದೆಷ್ಟೋ ಮಂದಿ ಕಾದು ಕೂತಿದ್ದರು. ಡಿಕೆ ಶಿವಕುಮಾರ್ ಹಿನ್ನೆಲೆಯನ್ನು ತಿಳಿದುಕೊಳ್ಳುವುದಕ್ಕೆ ಹಾತೊರೆಯುತ್ತಿದ್ದರು.
ನಿರೀಕ್ಷೆ ಮಾಡಿದಂತೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಜೀ ಕನ್ನಡದ ಜನಪ್ರಿಯ ಕಾರ್ಯಕ್ರಮ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಇದೇ ವೀಕೆಂಡ್‌ನಲ್ಲಿ ಎರಡು ದಿನ ಡಿಸಿಎಂ ಕಾರ್ಯಕ್ರಮ ಪ್ರಸಾರ ಆಗಲಿದೆ. ಈ ಕಾರ್ಯಕ್ರಮದ ಮೊದಲ ಪ್ರೋಮೊ ಕೂಡ ರಿಲೀಸ್ ಆಗಿದೆ.

ಪ್ರತಿ ಸಂಚಿಕೆಯಂತೆ ಡಿಕೆ ಶಿವಕುಮಾರ್ ಎಪಿಸೋಡ್‌ಗೆ ಅವರ ಆತ್ಮೀಯರು, ಸ್ನೇಹಿತರು, ವೇದಿಕೆ ಬಂದಿದ್ದಾರೆ. 'ಟ್ರಬಲ್ ಶೂಟರ್' ವ್ಯಕ್ತಿತ್ವದ ಬಗ್ಗೆ ಮಾತಾಡಿದ್ದಾರೆ. ಇದೇ ವೇಳೆ ಕನ್ನಡ ಚಿತ್ರರಂಗದ ಹಿರಿಯ ನಟ ಸಿಹಿ ಕಹಿ ಚಂದ್ರು ಕೂಡ ಡಿಕೆಶಿ ಬಗ್ಗೆ ಮಾತಾಡಿದ್ದಾರೆ. ಅಷ್ಟಕ್ಕೂ ದಾವಣಗೆರೆ ಮೂಲದ ಸಿಹಿ ಕಹಿ ಚಂದ್ರುಗೂ, ಕನಕಪುರದ ಡಿಕೆ ಶಿವಕುಮಾರ್‌ಗೂ ಎಲ್ಲಿಂದೆಲ್ಲಿಯ ಸಂಬಂಧ? ಅನ್ನೋದನ್ನು ತಿಳಿಯಲು ಮುಂದೆ ಓದಿ.
ಡಿಕೆಶಿ ಜೊತೆ ಸಿಹಿ ಕಹಿ ಚಂದ್ರು
ಡಿಕೆ ಶಿವಕುಮಾರ್ ಯಾರು? ಅವರ ಹಿನ್ನೆಲೆಯೇನು? ಅನ್ನೋದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಇದು ಸಾಮಾನ್ಯರಲ್ಲಿ ಸಾಮಾನ್ಯರಿಗೂ ಗೊತ್ತಿದೆ. ಹೀಗಿದ್ದರೂ, ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಯಾರಿಗೂ ಗೊತ್ತಿರದ ಸಂಗತಿಗಳೇನು ರಿವೀಲ್ ಆಗುತ್ತೆ? ಅನ್ನೋದು ಕುತೂಹಲವಿದೆ. ಅದನ್ನೇ ನೋಡುವುದಕ್ಕೆ ವೀಕ್ಷಕರು ಕಾದು ಕೂತಿದ್ದಾರೆ.
ಸದ್ಯ ಡಿಕೆ ಶಿವಕುಮಾರ್ ಕುತೂಹಲ ಕೆರಳಿಸಿದೆ. ಕನ್ನಡ ನಟ ಸಿಹಿ ಕಹಿ ಚಂದ್ರು ಈ ಕಾರ್ಯಕ್ರಮ ಆಗಮಿಸಿದ್ದು, ಡಿ ಕೆ ಶಿವಕುಮಾರ್ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ. " ಏನಾದ್ರೂ ಆದ್ರೆ ಶಿವಕುಮಾರ ಇದ್ದಾನೆ ಅನ್ನೋ ಧೈರ್ಯ" ಎಂದು ಹೇಳಿದ್ದಾರೆ. ಹೀಗಾಗಿ ಇವರಿಬ್ಬರಿಗೂ ಏನು ಸಂಬಂಧ? ಅನ್ನೋ ಪ್ರಶ್ನೆ ವೀಕ್ಷಕರನ್ನು ಕಾಡುತ್ತಿದೆ.
ಡಿಕೆಶಿ- ಸಿಹಿ ಕಹಿ ಚಂದ್ರು ಸಹಪಾಠಿಗಳು?
ಡಿಕೆ ಶಿವಕುಮಾರ್ ಹಾಗೂ ಸಿಹಿ ಕಹಿ ಚಂದ್ರು ಇಬ್ಬರಿಗೂ ಒಂದು ಆತ್ಮೀಯ ಸಂಬಂಧವಿದೆ. ಡಿಕೆ ಶಿವಕುಮಾರ್ ಹಾಗೂ ಚಂದ್ರು ಇಬ್ಬರೂ ಬೆಂಗಳೂರಿನಲ್ಲಿ ಶಿಕ್ಷಣ ಮುಗಿಸಿದ್ದಾರೆ. ಹೀಗಾಗಿ ಇಬ್ಬರೂ ಸಹಪಾಠಿಗಳಾಗಿದ್ದರು ಎಂದು ಹೇಳಲಾಗುತ್ತಿದೆ.
ಈ ಕಾರಣಕ್ಕೆ, ಸಿಹಿ ಕಹಿ ಚಂದ್ರು ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ್ದಾರೆ. ಆದರೆ, ಇಬ್ಬರೂ ಒಟ್ಟಿಗೆ ವಿದ್ಯಾಭ್ಯಾಸ ಮುಗಿಸಿದ್ದು ಎಲ್ಲಿ? ಯಾವಾಗ? ಯಾವ ಕಾಲೇಜು ಅಥವಾ ಶಾಲೆ? ಅನ್ನೋದನ್ನು ಕಾರ್ಯಕ್ರಮದಲ್ಲಿಯೇ ರಿವೀಲ್ ಆಗಲಿದೆ. ಅಲ್ಲಿವರೆಗೂ ಸಸ್ಪೆನ್ಸ್ ಆಗಿಯೇ ಉಳಿಯಲಿದೆ.
7ನೇ ತರಗತಿಯಿಂದ ರಾಜಕಾರಣಿ ಆಗೋ ಕನಸು
ಡಿ ಕೆ ಶಿವಕುಮಾರ್ ಹಂತ ಹಂತವಾಗಿ ರಾಜಕೀಯದಲ್ಲಿ ಬೆಳೆದು ಬಂದಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ತಳಮಟ್ಟದಿಂದ ಬೆಳೆದು ಇಂದು ಉಪಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿದ್ದಾರೆ. ಇಲ್ಲಿವರೆಗೂ ಬೆಳೆದು ಬಂದಿದ್ದರ ಹಿಂದಿನ ಜರ್ನಿ ದೊಡ್ಡದಿದೆ. ಆದರೆ, ಈ ಕನಸು ಕಂಡಿದ್ದು, 7ನೇ ತರಗತಿಯಲ್ಲೇ ಅನ್ನೋದನ್ನು ಡಿಕೆ ಶಿವಕುಮಾರ್ ರಿವೀಲ್ ಮಾಡಿದ್ದಾರೆ.
ರಾಜಕೀಯದಲ್ಲಿ ಡಿಕೆ ಶಿವಕುಮಾರ್‌ಗೆ ದಿಗ್ಗಜರಾದ ಎಸ್ ಎಂ ಕೃಷ್ಣ ಹಾಗೂ ಎಸ್ ಬಂಗಾರಪ್ಪ ಇಬ್ಬರೂ ಗುರುಗಳು. ಅವರ ರಾಜಕೀಯ ಪಯಣ ಇಲ್ಲಿವರೆಗೂ ಬರುವುದಕ್ಕೆ ಪ್ರಮುಖ ಕಾರಣವೇ ಈ ಇಬ್ಬರು ದಿಗ್ಗಜರು. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಇವರಿಬ್ಬರ ಬಗ್ಗೆನೂ ಡಿಕೆಶಿ ಮನಸ್ಸು ಬಿಚ್ಚಿ ಮಾತಾಡಿದ್ದಾರೆ ಎನ್ನಲಾಗಿದೆ.


Click it and Unblock the Notifications











