Weekend With Ramesh: "ಪ್ರಭುದೇವ ಅಮಾವಾಸ್ಯೆಯಲ್ಲಿ ಹುಟ್ಟಿದ್ದಾನೆ ಅಂದ್ರು": ತಂದೆಯ ಮಾತು ಪ್ರೋಮೊದ ಹೈಲೈಟ್

'ವೀಕೆಂಡ್ ವಿತ್ ರಮೇಶ್' ಸೀಸನ್ 5 ನಾಲ್ಕು ವರ್ಷಗಳ ಬಳಿಕ ಮತ್ತೆ ಆರಂಭ ಆಗಿದೆ. ಮೊದಲ ಅತಿಥಿಯಾಗಿ ಮೋಹಕತಾರೆ ರಮ್ಯಾ ಸಾಧಕರ ಸೀಟಿನಲ್ಲಿ ಕೂತಿದ್ದರು. ಬಹುದಿನಗಳಲ್ಲಿ ವೀಕೆಂಡ್ ವಿತ್ ರಮೇಶ್‌ಗೆ ರಮ್ಯಾ ಬರಬೇಕು ಅನ್ನೋದು ಹಲವರ ಒತ್ತಾಸೆಯಾಗಿತ್ತು.

ಮೊದಲ ಸಂಚಿಕೆನೇ ಉತ್ತಮವಾಗಿ ಮೂಡಿಬಂದಿದ್ರೂ, ರಮ್ಯಾ ಆಂಗ್ಲ ಭಾಷೆಯಲ್ಲಿಯೇ ಅತಿಯಾಗಿ ಬಳಸಿದ್ದರಿಂದ ಟ್ರೋಲ್ ಆಗಿದ್ದರು. ಅದೆಲ್ಲವನ್ನು ಪಕ್ಕಕ್ಕೆ ಇಟ್ಟು ಎರಡನೇ ಅತಿಥಿಯ ಭಾರತದ ಮೈಕಲ್ ಜಾಕ್ಸನ್ ಪ್ರಭುದೇವ ಅವರ ಪ್ರೋಮೊ ರಿಲೀಸ್ ಮಾಡಿದೆ ಜೀ ಕನ್ನಡ.

'ವೀಕೆಂಡ್ ವಿತ್ ರಮೇಶ್'ನಲ್ಲಿ ಪ್ರಭುದೇವ ಎಪಿಸೋಡ್ ಇದೇ ಶನಿವಾರ ಪ್ರಸಾರ ಆಗಲಿದೆ. ಡ್ಯಾನ್ಸಿಂಗ್ ಲೆಜೆಂಡ್ ಹಿಂದೆಂದೂ ಕನ್ನಡದ ಟಿವಿ ಕಾರ್ಯಕ್ರಮದಲ್ಲಿ ತಮ್ಮ ಬದುಕಿನ ಅನಾವರಣವನ್ನು ಮಾಡಿಲ್ಲ. ಹೀಗಾಗಿ ಈ ಪೋಮೊ ಸಖತ್ ಇಂಟ್ರೆಸ್ಟಿಂಗ್ ಅಂತ ಅನಿಸುತ್ತಿದೆ. ಹಾಗಿದ್ದರೆ, ಪ್ರೋಮೊದಲ್ಲಿ ಏನೆಲ್ಲಾ ರಿವೀಲ್ ಆಗಿದೆ ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.

Weekend With Ramesh Season 5 After Ramya Prabhudeva Episode Promo Released By Zee Kannada

"ಅಮಾವಾಸ್ಯೆ ದಿನ ಹುಟ್ಟಿದ್ದಾನೆ ಅಂದ್ರು"

ಭಾರತದ ಮೈಕಲ್‌ಜಾಕ್ಸನ್ ಪ್ರಭುದೇವ 'ವೀಕೆಂಡ್ ವಿತ್ ರಮೇಶ್‌'ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಸಾಧಕರ ಸೀಟಿನಲ್ಲಿ ಕೂತು ತಮ್ಮ ಬದುಕಿನ ಅನಾವರಣವನ್ನು ಮಾಡಿರೋ ತುಣುಕುಗಳು ಕಿಕ್ ಕೊಡುತ್ತಿವೆ. ಈ ಸಂಚಿಕೆಯಲ್ಲಿ ಆತ್ಮೀಯರು, ಕುಟುಂಬಸ್ಥರು ಆಗಮಿಸಿ ಪ್ರಭುದೇವ ಬಗ್ಗೆ ಮಾಹಿತಿಯನ್ನು ರಿವೀಲ್ ಮಾಡಿದ್ದಾರೆ.

ಆದರೆ, ಪ್ರಭುದೇವ ತಂದೆ ಮೂಗೂರು ಸುಂದರ್ ಎಂಟ್ರಿ ಈ ಎಪಿಸೋಡ್‌ನ ಪ್ರಮುಖ ಘಟ್ಟ. ಈ ಪ್ರೋಮೊದಲ್ಲಿ ಮೂಗೂರು ಸುಂದರ್ ಅವರ ಮಗನ ಹುಟ್ಟಿನ ರಹಸ್ಯವನ್ನು ರಿವೀಲ್ ಮಾಡಿದ್ದಾರೆ. ಈ ಪ್ರೋಮೊದಲ್ಲಿ ಬ್ಯಾಕ್‌ಗ್ರೌಂಡ್‌ನಲ್ಲಿ ಪ್ರಭುದೇವ ಅವರ ತಂದೆ, ಮಗ "ಅಮಾವಾಸ್ಯೆಯಲ್ಲಿ ಹುಟ್ಟಿದ್ದಾನೆ ಅಂದ್ರು" ಅಂತ ಹೇಳಿದ್ದಾರೆ. ಇದು ಇಡೀ ಎಪಿಸೋಡ್‌ನ ಕುತೂಹಲದ ಘಟ್ಟ.

Weekend With Ramesh Season 5 After Ramya Prabhudeva Episode Promo Released By Zee Kannada

ಕನ್ನಡ ಹಾಡಿಗೆ ಹೆಜ್ಜೆ.. ಮೂನ್‌ವಾಕ್

ಪ್ರಭುದೇವ ಅದ್ಯಾವುದೇ ಕಾರ್ಯಕ್ರಮಕ್ಕೆ ಹೋದರೂ, ಡ್ಯಾನ್ಸ್ ಇಲ್ಲದೆ ಹೊರ ಬರುವ ಹಾಗಿಲ್ಲ. ವೀಕ್ಷಕರ ಡಿಮ್ಯಾಂಡ್ ಕೂಡ ಇದೇನೆ. 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲೂ ಪ್ರಭುದೇವ ಭರ್ಜರಿಯಾಗಿ ಸ್ಟೆಪ್ಸ್ ನೋಡುವುದಕ್ಕೆ ಸಿಗುತ್ತಿದೆ. ಅಲ್ಲದೆ, ತಂದೆ ಮೂಗೂರು ಸುಂದರ್ ಜೊತೆ ಹುಟ್ಟಿದರೆ "ಕನ್ನಡ ನಾಡಿನಲ್ಲಿ ಹುಟ್ಟಬೇಕು" ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇದು ಕಾರ್ಯಕ್ರಮದಲ್ಲಿ ನೆನಪಿನಲ್ಲಿ ಉಳಿಯುವ ಘಳಿಗೆ ಆಗಬಹುದು.

ಇದರೊಂದಿಗೆ ನಿರೂಪಕ ರಮೇಶ್ ಅರವಿಂದ್ ಜೊತೆ ಪ್ರಭುದೇವ ಮೂನ್ ವಾಕ್ ಮಾಡಿದ್ದಾರೆ. ಇದು ಕೂಡ ಪ್ರೋಮೊದ ಹೈಲೈಟ್. ಹೀಗಾಗಿ ಡ್ಯಾನ್ಸಿಂಗ್ ಲೆಜೆಂಡ್ ಹಾಗೂ ರಮೇಶ್ ಅರವಿಂದ್ ಜುಗಲ್‌ಬಂದಿ ಕೂಡ ಕಾರ್ಯಕ್ರಮದ ಹೈಲೈಟ್ ಆಗುವ ಸಾಧ್ಯತೆಯಿದೆ.

"ನನ್ನ ಬಾಡಿನೇ ಆಡೋದು"

ಪ್ರಭುದೇವ ಎಪಿಸೋಡ್ ಸಖತ್ ಇಂಟ್ರೆಸ್ಟಿಂಗ್ ಆಗಿರುತ್ತೆ ಅನ್ನೋ ಸುಳಿವನ್ನು ಈಗಾಗಲೇ ಪ್ರೋಮೊ ಕೊಟ್ಟಿದೆ. ಇದರೊಂದಿಗೆ ಕಾರ್ಯಕ್ರಮಕ್ಕೆ ಬರುವ ಗೆಸ್ಟ್‌ಗಳು ಪ್ರಭುದೇವ ಬಗ್ಗೆ ಎನೆಲ್ಲಾ ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಳ್ಳುತ್ತಾರೆ ಅನ್ನೋ ಕುತೂಹಲವಿದೆ.

"ನಾನು ಆಡೋದೇ ಇಲ್ಲ.. ನನ್ನ ಬಾಡಿನೇ ಆಡೋದು" ಅಂತ ಅವರ ಡ್ಯಾನ್ಸಿಂಗ್ ಸೀಕ್ರೆಟ್ ಬಗ್ಗೆ ಸುಳಿವನ್ನು ನೀಡಿದ್ದಾರೆ. ಸಿನಿಮಾ ಮತ್ತೊಂದು ಇಂಟ್ರೆಸ್ಟಿಂಗ್ ವಿಷಯ ಅಂದ್ರೆ, ನಿರ್ದೇಶಕ ಯೋಗರಾಜ್‌ ಭಟ್ ಕಾರ್ಯಕ್ರಮಕ್ಕೆ ಎಂಟ್ರಿ ಕೊಟ್ಟಿದ್ದು ಕಿಕ್ ಕೊಟ್ಟಿದೆ.

More from Filmibeat

English summary
Weekend With Ramesh Season 5 Prabhudeva Episode Promo Released By Zee Kannada. Prabhudeva shared some interesting stories about his life,know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X