BBK 12: ಬಿಗ್ ಬಾಸ್ ಕನ್ನಡ 12 ಮಿಡ್ ಸೀಸನ್ ಫಿನಾಲೆ ವಿನ್ನರ್ ಕಾಕ್ರೋಚ್ ಸುಧಿಗೆ ಸಿಕ್ಕಿದ್ದೇನು?
ಬಿಗ್ ಬಾಸ್ ಕನ್ನಡ ಸೀಸನ್ 12ರ ಮಿಡ್ ಸೀಸನ್ ಫಿನಾಲೆ ಮೊದಲ ದಿನ ಅಂತ್ಯವಾಗಿದೆ. ಎರಡನೇ ದಿನದ ಫಿನಾಲೆ ನಾಳೆ (ಅಕ್ಟೋಬರ್ 19) ನಡೆಯಲಿದೆ. ಈಗಾಗಲೇ ಇಬ್ಬರು ಸ್ಪರ್ಧಿಗಳು ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದಾರೆ. ಮಂಜು ಭಾಷಿಣಿ ಹಾಗೂ ಅಶ್ವಿನಿ ಎಲಿಮಿನೇಟ್ ಆಗಿದ್ದಾರೆ. ಹಾಗೇ ಈ ಸೀಸನ್‌ನ ಮೊದಲ ಫಿನಾಲೆಯಲ್ಲಿ ಕಾಕ್ರೋಚ್ ಸುಧಿ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.
ಬಿಗ್ ಬಾಸ್ ಮಿಡ್ ವೀಕ್ ಎಲಿಮಿನೇಷನ್‌ನಿಂದ ಅಶ್ವಿನಿ ಗೌಡ, ಜಾಹ್ನವಿ, ರಾಶಿಕಾ, ಮಾಳು, ಕಾಕ್ರೋಚ್ ಸುಧಿ ಪಾರಾಗಿದ್ದರು. ಅಲ್ಲದೇ ಇವರು ಬಿಗ್ ಬಾಸ್ ಮಿಡ್ ವೀಕ್ ಫಿನಾಲೆಗೆ ಅರ್ಹರು ಎಂದು ಘೋಷಿಸಲಾಗಿತ್ತು. ಈ ಐವರು ಮಂದಿಯಲ್ಲಿ ವಿನ್ನರ್ ಯಾರೆಂದು ಘೋಷಿಸುವುದಕ್ಕೆ ಒಂದು ಟಾಸ್ಕ್ ಅನ್ನು ಇಡಲಾಗಿತ್ತು. ಈ ಟಾಸ್ಕ್‌ನಲ್ಲಿ ಗೆದ್ದವರನ್ನೇ ವಿನ್ನರ್ ಎಂದು ಘೋಷಿಸುವುದಾಗಿ ಹೇಳಲಾಗಿತ್ತು.

ನೆನಪಿನ ಶಕ್ತಿ ಹಾಗೂ ಅಂಕಿ ಸಂಖ್ಯೆಗಳಿಗೆ ಸಂಬಂಧಿಸಿದ ಈ ಟಾಸ್ಕ್‌ನಲ್ಲಿ ಅಶ್ವಿನಿ ಗೌಡ, ರಾಶಿಕಾ ಹಾಗೂ ಕಾಕ್ರೋಚ್ ಸುಧಿ ಮಧ್ಯೆ ಪೈಪೋಟಿ ಇತ್ತು. ಮಾಳು ಈ ಟಾಸ್ಕ್‌ನಲ್ಲಿ ಎಡವಿದ್ದರಿಂದ ಹೊರಗೆ ಉಳಿದಿದ್ದರು. ಕೊನೆಗೆ ಐದು ಬಾರಿಯೂ ಸರಿಯಾಗಿ ಆಡಿದ ಕಾಕ್ರೋಚ್ ಸುಧಿಯನ್ನು ವಿನ್ನರ್ ಎಂದು ಕಿಚ್ಚ ಸುದೀಪ್ ಘೋಷಸಿದರು. ಈಗ ಮಿಡ್ ಸೀಸನ್ ವಿನ್ನರ್ ಕಾಕ್ರೋಚ್ ಸುಧಿಗೆ ಬಿಗ್ ಬಾಸ್ ಕೊಟ್ಟಿದೇನು?
ಕಾಕ್ರೋಚ್ ಸುಧಿಗೆ ಬಿಗ್ ಬಾಸ್ ಕೊಟ್ಟಿದ್ದೇನು?
ಬಿಗ್ ಬಾಸ್ ಕನ್ನಡ 12ನೇ ಸೀಸನ್‌ನ ಮೊದಲ ಫಿನಾಲೆಯಲ್ಲಿ ಕಾಕ್ರೋಚ್ ಸುಧಿ ವಿನ್ನರ್ ಆಗಿದ್ದೇನೋ ಸರಿ. ಆದರೆ, ಈ ಫಿನಾಲೆ ಗೆದ್ದವರಿಗೆ ಬಿಗ್ ಬಾಸ್ ಏನು ಕೊಡುತ್ತೆ ಅನ್ನೋ ಕುತೂಹಲವಿತ್ತು. ಬಹುಮಾನವನ್ನು ಹಣದ ರೂಪದಲ್ಲಿ ನೀಡುತ್ತಾ? ಇಲ್ಲಾ ಬೇರೆ ಏನನ್ನಾದರೂ ನೀಡುತ್ತಾ? ಎಂಬ ಕುತೂಹಲವಿತ್ತು. ಕೊನೆಗೂ ಅದಕ್ಕೀಗ ತೆರೆಬಿದ್ದಿದೆ. ಬಿಗ್ ಬಾಸ್ ವಿಶೇಷ ಅಧಿಕಾರವೊಂದನ್ನು ಕೊಟ್ಟಿದೆ.
ಕಾಕ್ರೋಚ್ ಸುಧಿಗೆ ಲೈಫ್ ಲೈನ್
ಬಿಗ್ ಬಾಸ್ ಕನ್ನಡ 12ರ ಮಿಡ್ ಸೀಸನ್ ಫಿನಾಲೆ ಗೆದ್ದಿರೋ ಕಾಕ್ರೋಚ್ ಸುಧಿಗೆ ಹಣವೇನು ಕೊಟ್ಟಿಲ್ಲ. ಆದರೆ, ಒಂದು ಲೈಫ್ ಲೈನ್ ಅನ್ನು ಕೊಟ್ಟಿದೆ. ಒಂದು ವೇಳೆ ಯಾವುದೋ ಒಂದು ವಾರ ಪರ್ಫಾಮೆನ್ಸ್ ಚೆನ್ನಾಗಿ ಕೊಟ್ಟಿಲ್ಲ. ಆ ವಾರ ಎಲಿಮಿನೇಟ್ ಆಗೋದು ಗ್ಯಾರಂಟಿ ಎಂದಾದರೆ, ಆ ವೇಳೆ ಅವರು ಲೈಫ್ ಲೈನ್ ಅನ್ನು ಬಳಸಿಕೊಳ್ಳಬಹುದು. ಇಲ್ಲವೇ ಯಾರನ್ನಾದರೂ ಬಚಾವ್ ಮಾಡಬಹುದು. ಈ ವಿಶೇಷ ಪವರ್ ಕಾಕ್ರೋಚ್ ಸುಧಿಗೆ ಸಿಕ್ಕಿದೆ.
ಇನ್ನೂ ಫಿನಾಲೆ ಇರುತ್ತಾ?
ಮಿಡ್ ಸೀಸನ್ ಫಿನಾಲೆಯನ್ನು ಮೊದಲನೇ ಫಿನಾಲೆ ಎಂದು ಕರೆಯಲಾಗಿದೆ. ಹಾಗಾಗಿ ಇದು ಕೇವಲ ಇದೊಂದೇ ಫಿನಾಲೆ ಅಲ್ಲ ಅನ್ನೋ ಸುಳಿವು ಸಿಕ್ಕಿದೆ. ಮುಂದಿನ ವಾರಗಳಲ್ಲಿ ಇನ್ನೊಂದು ಫಿನಾಲೆ ನಡೆದರೂ ನಡೆಯಬಹುದು. ಇಲ್ಲವೇ ಮೂರು ವಾರಕ್ಕೊಮ್ಮೆ ಒಂದೊಂದು ಫಿನಾಲೆ ನಡೆದರೂ ಅಚ್ಚರಿ ಪಡಬೇಕಿಲ್ಲ. ಮೊದಲ ಫಿನಾಲೆ ಕಾಕ್ರೋಚ್ ಸುಧಿಯದ್ದಾಗಿದ್ದರೆ, ಎರಡನೇ ಇನ್ಯಾರದ್ದೋ ಆಗಬಹುದು.


Click it and Unblock the Notifications











