ಅನುಶ್ರೀಯನ್ನು ಗಂಡನ ಮನೆಗೆ ಕಳುಹಿಸುವಾಗ 'ಸು ಫ್ರಮ್ ಸೋ' ನಿರ್ಮಾಪಕ ಹುಡುಗನ ಮನೆಯವರಿಗೆ ಹೇಳಿದ್ದೇನು?
ಕರುನಾಡಿನ ಮಾತಿನ ಮಲ್ಲಿ ಅನುಶ್ರೀ ಇಂದು (ಆಗಸ್ಟ್ 28) ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹುಕಾಲದ ಗೆಳೆಯ ರೋಷನ್ ಅವರೊಂದಿಗೆ ತುಳುನಾಡಿನ ಸಂಪ್ರದಾಯದಂತೆ ವಿವಾಹವಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ವಿವಾಹ ಸಂಭ್ರಮದಲ್ಲಿ ಮುಳುಗಿದ್ದ ಅನುಶ್ರೀ ಮುಖದಲ್ಲಿ ಮದುವೆಯ ಕಳೆ ಎದ್ದು ಕಾಣುತ್ತಿತ್ತು. ತಾನು ಮೆಚ್ಚಿದ ಹುಡುಗನನ್ನೇ ಮದುವೆ ಆಗಿ ಹೊಸ ಜೀವನಕ್ಕೆ ಅನುಶ್ರೀ ಕಾಲಿಟ್ಟಿದ್ದಾರೆ.
ಆಂಕರ್ ಅನುಶ್ರೀ ಮಂತ್ರ ಮಾಂಗಲ್ಯದಂತೆ ಮದುವೆ ಆಗಬೇಕು ಎಂದು ಬಯಸಿದ್ದರು. ಆದರೆ, ಅದು ಸಾಧ್ಯವಾಗಲಿಲ್ಲ. ಅನುಶ್ರೀ ಕುಟುಂಬ ಹಾಗೂ ಆತ್ಮೀಯರ ಬಳಗ ತುಂಬಾನೇ ದೊಡ್ಡದಿದೆ. ಹೀಗಾಗಿ ಸ್ವಲ್ಪ ಅದ್ಧೂರಿಯಾಗಿ ರೋಷನ್ ಅವರೊಂದಿಗೆ ಮದುವೆ ಆಗಿದ್ದಾರೆ. ರೋಷನ್ ಕೊಡಗಿನವರಾಗಿದ್ದರೂ, ತುಳುನಾಡಿನ ಸಂಪ್ರದಾಯದಂತೆ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಅನುಶ್ರೀ ಮದುವೆಯಲ್ಲಿ ಒಂದು ಭಾವನಾತ್ಮಕ ಸಂಗತಿ ಕೂಡ ನಡೆದಿದೆ. ಅನುಶ್ರೀಯನ್ನು ಗಂಡನ ಮನೆಗೆ ಕಳುಹಿಸಿಕೊಡುವಾಗ ಇವರಿಗೆ ಆತ್ಮೀಯರಾಗಿರುವ ಹಾಗೂ 'ಸು ಫ್ರಮ್ ಸೋ' ನಿರ್ಮಾಪಕರೊಬ್ಬರಾಗಿರುವ ರವಿ ರೈ ಕಳಸ ಹುಡುಗ ಮನೆಯವರಿಗೆ ಕೆಲವು ಉಪದೇಶಗಳನ್ನು ಮಾಡಿದ್ದಾರೆ. ಈ ವೇಳೆ ಅನುಶ್ರೀ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಅನುಶ್ರೀ ಗಂಡನ ಮನೆಯವರಿಗೆ 'ಸು ಫ್ರಮ್ ಸೋ' ನಿರ್ಮಾಪಕ ರವಿ ರೈ ಕಳಸ ಏನು ಹೇಳಿದ್ರು? ತಿಳಿಯುವುದಕ್ಕೆ ಮುಂದೆ ಓದಿ.
ಪುನೀತ್ ರಾಜ್‌ಕುಮಾರ್ ನೆನೆದ ಅನುಶ್ರೀ
ಅನುಶ್ರೀ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಅಪ್ಪ ಅಭಿಮಾನಿ. ಅವರು ಏನೇ ಕೆಲಸಗಳು ಶುರು ಮಾಡಿದರೂ, ಅಪ್ಪು ನೆನೆಪಿಸಿಕೊಳ್ಳದೆ ಇರುವುದಿಲ್ಲ. ಇಂದು ಮದುವೆ ಆಗಿರುವ ಅನುಶ್ರೀ ಮಂಟಪದಲ್ಲಿಯೂ ಪುನೀತ್ ರಾಜ್‌ಕುಮಾರ್ ಫೋಟೊವನ್ನು ಇರಿಸಿದ್ದರು. ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತಾಡುವಾ "ಅಪ್ಪು ಸರ್ ಅವರೇ ನಮ್ಮನ್ನು ಸೇರಿಸಿದ್ದಾರೆ" ಎಂದು ಹೇಳಿದ್ದಾರೆ.
"ಇವರು ಅಪ್ಪು ಸರ್ ಅವರನ್ನು ಬಹಳ ಇಷ್ಟ ಪಡುತ್ತಿದ್ದರು. ಅಪ್ಪು ಸರ್ ಅವರ ಕಾರ್ಯಕ್ರಮದ ಮೂಲಕವೇ ನಾವು ಭೇಟಿ ಮಾಡಿದ್ವಿ. ಒಂದು ಲೆಕ್ಕದಲ್ಲಿ ಅಪ್ಪು ಸರ್ ಅವರೇ ನಮ್ಮನ್ನು ಸೇರಿಸಿದ್ದಾರೆ ಎಂದು ಹೇಳಬಹುದು." ಎಂದು ಪುನೀತ್ ರಾಜ್‌ಕುಮಾರ್ ಅವರ ಬಗ್ಗೆ ಹೇಳಿದ್ದಾರೆ.

ಹುಡುಗರ ಮನೆಗೆ ರವಿ ರೈ ಕಳಸ ಹೇಳಿದ್ದೇನು?
ಮದುವೆ ಮುಗಿದ ಬಳಿಕ ವರನ ಮನೆಗೆ ಮಧುವನ್ನು ಕಳುಹಿಸಿ ಕೊಡುವ ಶಾಸ್ತ್ರವಿರುತ್ತೆ. ತುಳುನಾಡಿನ ಸಂಪ್ರದಾಯದಂತೆ ರವಿ ರೈ ಕಳಸ ಅನುಶ್ರೀಯನ್ನು ಗಂಡನ ಮನೆಗೆ ಕಳುಹಿಸಿಕೊಡುವಾಗ ವೇಳೆ ಹೇಳಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
"ಎಲ್ಲವನ್ನು ಸರಿ ಮಾಡಿಕೊಂಡು ಹೋಗುವ ಜವಾಬ್ದಾರಿ ನಿಮ್ಮದೂ ಇದೆ. ಅವಳದ್ದೂ ಇದೆ. ಇವರ ಹೆಣ್ಣು ಮಗಳನ್ನು ನಿಮ್ಮ ಕೈಗೆ ಕೊಡುತ್ತಿದ್ದೇವೆ. ಈ ಹೆಣ್ಣು ಮಗಳನ್ನು ನಿಮ್ಮ ಮಗಳಾಗಿ ನೋಡಬೇಕು. ಅಷ್ಟು ಮಾತ್ರ ನಿಮ್ಮ ಜವಾಬ್ದಾರಿ ಅಲ್ಲ. ತಮ್ಮನನ್ನು, ತಾಯಿಯನ್ನು ನೋಡಿಕೊಳ್ಳಬೇಕಾದ ದೊಡ್ಡ ಜವಾಬ್ದಾರಿ ಇದೆ. ತಮ್ಮನನ್ನು ತಾಯಿಗಿಂತ ಹೆಚ್ಚಾಗಿ ನೋಡಿಕೊಂಡಿದ್ದಾಳೆ. ನಾವು ಅವಳ ಆತ್ಮೀಯ ಬಳಗದಲ್ಲಿ ಇದ್ದೇವೆ ಅಂದರೆ, ಅವಳು ನಮ್ಮೆಲ್ಲರನ್ನೂ ಅಷ್ಟು ಪ್ರೀತಿ ಮಾಡಿದ್ದಾಳೆ. ನಮ್ಮ ಮಗಳನ್ನು ನಿಮ್ಮ ಮನೆಗೆ ಕಳುಹಿಸಿಕೊಡುತ್ತಿದ್ದೇವೆ. ನಮ್ಮ ಮಗಳನ್ನು ಇವತ್ತು ನಿಮ್ಮ ಮಡಿಲಿಗೆ ಹಾಕುತ್ತಿದ್ದೇವೆ. ಚೆನ್ನಾಗಿ ನೋಡಿಕೊಳ್ಳಿ." ಎಂದು ಅನುಶ್ರೀ ಕುಟುಂಬದ ಪರವಾಗಿ ಹೇಳಿದ್ದಾರೆ. ಈ ವೇಳೆ ಗಂಡನ ಮನೆಗೆ ಹೊರಡುವಾಗ ಅನುಶ್ರೀ ಕಣ್ಣೀರು ಹಾಕಿದ್ದರು.
ಮಂತ್ರ ಮಾಂಗಲ್ಯ ಮಾಡಿಕೊಳ್ಳುವ ಆಸೆಯಿತ್ತು
"ನನಗೆ ಮಂತ್ರ ಮಾಂಗಲ್ಯ ಆಗಬೇಕು ಅಂತ ಬಹಳ ಆಸೆಯಿತ್ತು. ನಾವು ಜಾಗವನ್ನೆಲ್ಲ ನೋಡಿಕೊಂಡು ಬಂದಿದ್ವಿ. ಇಷ್ಟೇ ಜನರ ಜೊತೆ ಮಾಡಬೇಕು ಅಂತ ಅವರದ್ದು ಕೆಲವು ರೂಲ್ಸ್ ಇದೆ. ನಮ್ಮ ಫ್ಯಾಮಿಲಿಯನ್ನು ಸೇರಿಸಿದಾಗ ಸ್ವಲ್ಪ ಜನ ಜಾಸ್ತಿ ಆದರು. ಅವರ ರೂಲ್ಸ್ ಬ್ರೇಕ್ ಮಾಡುವುದಕ್ಕೆ ಇಷ್ಟವಿರಲಿಲ್ಲ. ಇದೊಂತರ ಮಂತ್ರ ಮಾಂಗಲ್ಯ ತರಾನೇ. ನಮ್ಮ ತುಳುನಾಡು ಸ್ಟೈಲ್‌ನಲ್ಲಿ ಮದುವೆ ಆಗಿದ್ದೇವೆ." ಎಂದು ಮಂತ್ರ ಮಾಂಗಲ್ಯ ಯಾಕೆ ಆಗಿಲ್ಲವೆಂದು ಅನುಶ್ರೀ ಹೇಳಿದ್ದಾರೆ.


Click it and Unblock the Notifications











