ಇಲ್ಲೂ ರೊಮ್ಯಾಂಟಿಕ್.. ಅಲ್ಲೂ ರೊಮ್ಯಾಂಟಿಕ್.. ವೀಕ್ಷಕರು ಏನಂತಾರೋ?
ಕನ್ನಡದ ಧಾರಾವಾಹಿಗಳಿಗೆ ವೀಕ್ಷಕರ ಬಳಗ ದೊಡ್ಡದಿದೆ. ಮನರಂಜನಾ ವಾಹಿನಿಯಲ್ಲಿ ಬರುವ ಪ್ರತಿಯೊಂದು ಸೀರಿಯಲ್ ಬಗ್ಗೆನೂ ಅಪ್‌ಡೇಟ್ ಇಟ್ಟುಕೊಳ್ಳುವಷ್ಟೇ ಕ್ರೇಜ್ ಬೆಳೆದು ಬಿಟ್ಟಿದೆ. ಪ್ರತಿ ದಿನ ಜನಪ್ರಿಯ ಧಾರಾವಾಹಿಗಳ ಪಾತ್ರಗಳನ್ನು ಫಾಲೋ ಮಾಡುತ್ತಲೇ ಇರುತ್ತಾರೆ. ಅದರಲ್ಲಿ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮಿ ನಿವಾಸ' ಹಾಗೂ 'ಅಣ್ಣಯ್ಯ' ಎರಡು ಧಾರಾವಾಹಿಗಳು ಕೂಡ ಸೇರಿವೆ.
'ಲಕ್ಷ್ಮಿ ನಿವಾಸ' ಹಾಗೂ 'ಅಣ್ಣಯ್ಯ' ಎರಡು ಧಾರಾವಾಹಿಗಳಲ್ಲೀಗ ರೊಮ್ಯಾಂಟಿಕ್ ಜರ್ನಿ ಶುರುವಾಗಿದೆ. ಒಂದಿಷ್ಟು ದಿನ 'ಅಮೃತಧಾರೆ'ಯಲ್ಲಿ ಗೌತಮ್ ಹಾಗೂ ಭೂಮಿಕಾ ಮಧ್ಯೆ ಈ ಜರ್ನಿ ಶುರುವಾಗಿತ್ತು. ಈಗ 'ಲಕ್ಷ್ಮಿ ನಿವಾಸ'ದ ಸಿದ್ದೇಗೌಡರು ಹಾಗೂ ಭಾವನಾ ಮಧ್ಯೆ ಹಾಗೂ 'ಅಣ್ಣಯ್ಯ' ಧಾರಾವಾಹಿಯಲ್ಲಿ ಶಿವು ಹಾಗೂ ಪಾರು ಮಧ್ಯೆ ರೊಮ್ಯಾಂಟಿಕ್ ಜರ್ನಿ ನಡೆಯುತ್ತಿದೆ.

ಜೀ ಕನ್ನಡದ ಎರಡು ಜನಪ್ರಿಯ ಧಾರಾವಾಹಿಗಳಿವು. ಕೌಟುಂಬಿಕ ಸಮಸ್ಯೆಗಳು, ದ್ವೇಷ, ಪಿತೂರಿ, ಸೆಂಟಿಮೆಂಟ್ ಎಲ್ಲವನ್ನು ಈ ಧಾರಾವಾಹಿಯಲ್ಲಿ ನೋಡಬಹುದು. ಈ ಕಾರಣಕ್ಕೆ ಪ್ರೇಕ್ಷಕರು ಕೂಡ ಮೆಚ್ಚುಗೆ ಪಡುತ್ತಿದ್ದಾರೆ. ಇತ್ತೀಚೆಗೆ ಎರಡೂ ಧಾರಾವಾಹಿಯ ಜೋಡಿಗಳ ರೊಮ್ಯಾಂಟಿಕ್ ಜರ್ನಿ ಕೂಡ ಕಿರುತೆರೆ ವೀಕ್ಷಕರ ಇಷ್ಟವಾಗುತ್ತಿದೆ. ಪ್ರೋಮೊಗಳಿಗೆ ನೆಟ್ಟಿಗರು ಕೂಡ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಟ್ರ್ಯಾಕ್‌ಗೆ ಬಂತು ಸಿದ್ದೇ ಗೌಡ್ರು-ಭಾವನಾ ಜೋಡಿ
'ಲಕ್ಷ್ಮಿ ನಿವಾಸ' ಧಾರಾವಾಹಿ ಆರಂಭ ಆದಲ್ಲಿಂದ ಈ ಮನೆಯಲ್ಲಿರೋ ಒಬ್ಬೊಬ್ಬರದ್ದೂ ಒಂದೊಂದು ಟ್ರ್ಯಾಕ್ ಹಿಡಿದು ಮುಂದೆ ಸಾಗುತ್ತಿತ್ತು. ಅದರಲ್ಲಿ ಸಿದ್ದೇಗೌಡರು ಹಾಗೂ ಭಾವನಾ ಜೋಡಿ ಕೂಡ ಒಂದು. ಭಾವನಾಗೆ ಗೊತ್ತಿಲ್ಲದಂತೆ ತಾಳಿ ಕಟ್ಟಿ ಪೇಚಿಗೆ ಸಿಲುಕಿದ್ದ ಸಿದ್ದೇಗೌಡರು ತಮ್ಮ ಪ್ರೀತಿ ವ್ಯಕ್ತಪಡಿಸುವುದಕ್ಕೆ ಒದ್ದಾಡುತ್ತಲೇ ಇದ್ದರು. ವೀಕ್ಷಕರು ಕೂಡ ಇಬ್ಬರನ್ನು ಬೇಗ ಒಂದು ಮಾಡ್ರಪ್ಪ ಅಂತ ಕೇಳುತ್ತಲೇ ಇದ್ದರು. ವೀಕ್ಷಕರ ಇಚ್ಚೆಯಂತೆ ಸಿದ್ದೇಗೌಡರು ಹಾಗೂ ಭಾವನಾ ಮಧ್ಯೆ ಪ್ರೀತಿ ಮೂಡಿದೆ.
ರೊಮ್ಯಾಂಟಿಕ್ ಮೂಡ್‌ನಲ್ಲಿ ಜೋಡಿ
ಜೀ ಕನ್ನಡ 'ಲಕ್ಷ್ಮಿ ನಿವಾಸ' ಧಾರಾವಾಹಿಯ ಹೊಸ ಪ್ರೋಮೊವನ್ನು ರಿಲೀಸ್ ಮಾಡಿದೆ. ಸದಾ ಗೋಳು, ಅಸೂಯೆ ನೋಡಿ ಪಾತ್ರಗಳಿಗೆ ಬೈಯ್ಯುತ್ತಿದ್ದ ವೀಕ್ಷಕರು ರಿಲ್ಯಾಕ್ಸ್ ಆಗಿದ್ದಾರೆ. ಸಿದ್ದೇ ಗೌಡರು ಜೊತೆ ಭಾವನಾ ಮುನಿಸು ಮರೆತು ರೊಮ್ಯಾಂಟಿಕ್ ಮೂಡಿಗೆ ಜಾರಿದ್ದಾರೆ. ಟವೆಲ್ ಮರೆತು ಬಾತ್ ರೂಮ್‌ಗೆ ಹೋಗಿದ್ದ ಸಿದ್ದೇಗೌಡರು ಪೇಚಿಗೆ ಸಿಕ್ಕೊಕೊಂಡಿದ್ದಾರೆ. ಧೈರ್ಯ ಮಾಡಿ ಭಾವನಾಗೆ ಟವಲ್ ಕೊಡುವಂತೆ ಬೇಡಿಕೊಂಡಿದ್ದಾರೆ. ಭಾವನಾ ಟವೆಲ್ ಕೊಡುವುದಕ್ಕೆ ಆಟ ಆಡಿಸುತ್ತಿರುವ ದೃಶ್ಯಗಳು ಪ್ರೋಮೊದಲ್ಲಿ ಇವೆ.
ನೆಟ್ಟಿಗರು ಫುಲ್ ಖುಷ್
ಈ ಪ್ರೋಮೊ ನೋಡುತ್ತಿದ್ದಂತೆ ನೆಟ್ಟಿಗರು ಕಮೆಂಟ್ ಮಾಡುವುದಕ್ಕೆ ಶುರು ಮಾಡಿದ್ದಾರೆ. "ಅಂತೂ ಇಂತೂ ಇಬ್ಬರ ನಡುವೆ ಮುನಿಸು ದೂರ ಆಗಿ, ಪ್ರೀತಿಯ ರಾಜ್ಯಭಾರ ಶುರು ಆಗಿದೆ. ನಡಿಲಿ.. ನಡಿಲಿ.." ಅಂತ ಒಬ್ಬರು ಕಮೆಂಟ್ ಮಾಡಿದ್ದರೆ, ಇನ್ನೊಬ್ಬರು " ಸಿದ್ದೇಗೌಡರು ಹಾಗೂ ಭಾವನಾ ಅವರು ಫುಲ್ ರೊಮ್ಯಾಂಟಿಕ್ ಆಗಿದ್ದಾರೆ" ಅಂತ ಕಮೆಂಟ್ ಮಾಡಿದ್ದಾರೆ. ಅದೇ ಮತ್ತೊಬ್ಬರು "ಕಥೆ ಈಗ ಶುರು ಆಗ್ತಿದೆ" ಎಂದು ಹೇಳಿದ್ದಾರೆ.
ಶಿವು-ಪಾರುನೂ ರೊಮ್ಯಾಂಟಿಕ್
'ಲಕ್ಷ್ಮಿ ನಿವಾಸ'ದ ಜೊತೆ 'ಅಣ್ಣಯ್ಯ' ಧಾರಾವಾಹಿಯಲ್ಲಿಯೂ ಶಿವು ಹಾಗೂ ಪಾರು ರೊಮ್ಯಾಂಟಿಕ್ ಜರ್ನಿ ಶುರುವಾಗಿ ಕೆಲವು ದಿನಗಳೇ ಆಗಿವೆ. ಪಾರು ಎದುರು ಮಾತಾಡುವುದಕ್ಕೂ ಹೆದರುತ್ತಿದ್ದ ಶಿವು ಈಗ ಪಾರು ಕೆನ್ನೆ ಹಿಡಿಯುವವರೆಗೂ ಬಂದಿದ್ದಾನೆ. ಅಂತೂ ಅಣ್ಣ ರೊಮ್ಯಾಂಟಿಕ್ ಮೂಡಿಗೆ ಬಂದ ಅಂತ ನೆಟ್ಟಿಗರು ಕಮೆಂಟ್ ಮಾಡುವುದಕ್ಕೆ ಶುರು ಮಾಡಿದ್ದಾರೆ. 'ಅಣ್ಣಯ್ಯ' ಪ್ರೋಮೊ ನೋಡಿ ನೆಟ್ಟಿಗರ ಕಮೆಂಟ್‌ಗಳನ್ನು ಶುರು ಮಾಡಿದ್ದಾರೆ. ಸದ್ಯ ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಈ ಧಾರಾವಾಹಿಗೆ ವೀಕ್ಷಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.


Click it and Unblock the Notifications











