ರಕ್ಷಕ್‌ಗೆ ಕಿಚ್ಚ ಸುದೀಪ್ ಕೊಟ್ಟ ಸನ್‌ಗ್ಲಾಸ್ ಬೆಲೆ ಎಷ್ಟು? ಬ್ರ್ಯಾಂಡ್ ಯಾವುದು ಗೊತ್ತೇ?

ಬಿಗ್‌ಬಾಸ್ ಕನ್ನಡ ಸೀಸನ್ 10ಕ್ಕೆ ಅದ್ಧೂರಿಯಾಗಿ ತೆರೆ ಬಿದ್ದಿದೆ. ಈ ಹಿಂದೆ ಬಂದಿದ್ದ 9 ಸೀಸನ್‌ಗಿಂತಲೂ 10ನೇ ಸೀಸನ್ ವಿಭಿನ್ನತೆಯಿಂದ ಕೂಡಿತ್ತು. ಕಿಚ್ಚ ಸುದೀಪ್ ನಿರೂಪಣೆ ಕೂಡ ಅಷ್ಟೇ ಡಿಫ್ರೆಂಟ್ ಆಗಿತ್ತು. ಸೀಸನ್ 10ಕ್ಕೆ ಆಯ್ಕೆ ಮಾಡಿಕೊಂಡಿದ್ದ ಸ್ಪರ್ಧಿಗಳು ಕೂಡ ಅಷ್ಟೇ ಆಕ್ಟಿವ್ ಆಗಿ ಭಾಗವಹಿಸಿ ಈ ರಿಯಾಲಿಟಿ ಶೋ ಅನ್ನು ಯಶಸ್ಸುಗೊಳಿಸಿದ್ದಾರೆ.

ಆದರೆ, ಬಿಗ್‌ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿಗಳಲ್ಲಿ ಕೆಲವರು ಈ ಶೋ ಬಗ್ಗೆ ನೆಗೆಟಿವ್ ಆಗಿ ಮಾತಾಡಿದ್ದರು. ಅದರಲ್ಲೂ ರಕ್ಷಕ್ ಬುಲೆಟ್ ಇತ್ತೀಚೆಗೆ ನೀಡಿದ ಸಂದರ್ಶವೊಂದರಲ್ಲಿ ಕಿಚ್ಚ ಸುದೀಪ್ ಬಗ್ಗೆ ನೆಗೆಟಿವ್ ಆಗಿ ಮಾತಾಡಿದ್ದರು. ಇದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗಿತ್ತು. ಜೊತೆಗೆ ನೆಟ್ಟಿಗರು ಕೂಡ ರಕ್ಷಕ್‌ ವಿರುದ್ಧ ತಿರುಗಿಬಿದ್ದಿದ್ದರು.

What is the price of expensive sunglass given by Kiccha Sudeep to Bigg Boss Rakshak?

ಈ ಬೆನ್ನಲ್ಲೇ ರಕ್ಷಕ್ ಬುಲೆಟ್ ವಿಡಿಯೋ ಒಂದನ್ನು ಮಾಡಿ ಕಿಚ್ಚ ಸುದೀಪ್ ಕ್ಷಮೆ ಕೇಳಿ, ಕಣ್ಣೀರು ಹಾಕಿದ್ದರು. ಬಳಿಕ ಬಿಗ್‌ಬಾಸ್ ಗ್ರ್ಯಾಂಡ್ ಫಿನಾಲೆಗೆ ಎಂಟ್ರಿ ಕೊಟ್ಟಿದ್ದ ರಕ್ಷಕ್‌ಗೆ ವೇದಿಕೆ ಮೇಲೆ ಕಿಚ್ಚ ಸುದೀಪ್ ತಮ್ಮದೇ ಸ್ಟೈಲ್‌ನಲ್ಲಿ ಬುದ್ದಿವಾದ ಹೇಳಿದ್ದರು. ಇಷ್ಟೇ ಅಲ್ಲದೆ ತಮ್ಮ ದುಬಾರಿ ಸನ್‌ಗ್ಲಾಸ್ ಅನ್ನು ಗಿಫ್ಟ್ ಆಗಿ ನೀಡಿದ್ದಾರೆ. ಇದರ ಬೆಲೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.

ಕಿಚ್ಚ ಈ ಹಿಂದೆ ಬಿಗ್‌ಬಾಸ್ ಸೀಸನ್‌ನಲ್ಲಿ ಈ ಸನ್‌ಗ್ಲಾಸ್ ಅನ್ನು ಬಳಸಿದ್ದರು. ಒಂದು ವಾರ ಕಿಚ್ಚ ಸುದೀಪ್ ಮನೆಯೊಳಗಿರುವ ಸದಸ್ಯರಿಗೆ ತಮ್ಮ ಕೈಯಾರೆ ಅಡುಗೆ ಮಾಡಿದ್ದರು. ಈ ವೇಳೆ ಅವರು ತೊಟ್ಟಿದ್ದ ಗ್ಲಾಸ್ ಅನ್ನು ಬಿಗ್‌ಬಾಸ್ ಸ್ಪರ್ಧಿ ರಕ್ಷಕ್ ಬುಲೆಟ್‌ಗೆ ಉಡುಗೊರೆಯಾಗಿ ಕೊಟ್ಟಿದ್ದಾರೆ. ಅಷ್ಟೇ ಅಲ್ಲ ಕೆಲವು ಹೊತ್ತು ರಕ್ಷಕ್‌ಗೆ ಹೇಗೆ ನಡೆದುಕೊಳ್ಳಬೇಕು ಅಂತ ಸಲಹೆಯನ್ನೂ ನೀಡಿದ್ದಾರೆ.

ರಕ್ಷಕ್ ಬುಲೆಟ್ ಈ ವಿಷಯವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆ ಬಳಿಕ ಕಿಚ್ಚ ಸುದೀಪ್ ಉಡುಗೊರೆಯಾಗಿ ಕೊಟ್ಟ ದುಬಾರಿ ಗಿಫ್ಟ್‌ನ ಬೆಲೆ ಎಷ್ಟು? ಬ್ರ್ಯಾಂಡ್ ಯಾವುದು? ಅಂತ ಹುಡುಕಿ ತೆಗೆದಿದ್ದಾರೆ. ಕಿಚ್ಚ ಕೊಟ್ಟ ಈ ಸನ್‌ಗ್ಲಾಸ್ ಬ್ರ್ಯಾಂಡ್ ಬರ್ಬರಿ (Burberry). ಇಟಲಿ ಮೂಲದ ಈ ದುಬಾರಿ ಬ್ರ್ಯಾಂಡ್‌ನ ಬೆಲೆ ಬರೋಬ್ಬರು 16,700 ರೂಪಾಯಿಗಳು. ಈ ಬೆಲೆ ಬರ್ಬರಿ (Burberry) ಬ್ರ್ಯಾಂಡ್‌ನ ಈ ಸನ್‌ಗ್ಲಾಸ್ ಬೆಲೆಯನ್ನು ಶಾಪಿಂಗ್ ಸೈಟ್‌ವೊಂದರಲ್ಲಿ ತೋರಿಸುತ್ತಿದೆ. ಕಿಚ್ಚನ ಈ ನಡೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

What is the price of expensive sunglass given by Kiccha Sudeep to Bigg Boss Rakshak?

ಬಿಗ್‌ಬಾಸ್ ಮನೆಯಿಂದ ಹೊರಬಂದ ರಕ್ಷಕ್ ಬುಲೆಟ್ ಸಂದರ್ಶನವೊಂದರಲ್ಲಿ ಕಿಚ್ಚನ ಬಗ್ಗೆ ನೆಗೆಟಿವ್ ಆಗಿ ಮಾತಾಡಿದ್ದರು. "ನನಗೆ ದೊಡ್ಡ ಡ್ರಾಮ ಅನಿಸಿದ್ದು ಅಂದ್ರೆ, ನಾವು ಕಳಪೆ ಉತ್ತಮ ಅನ್ನೋದನ್ನು ಕೊಡುತ್ತೇವೆ. ನನಗೆ ಇಷ್ಟ ಬಂದಂಗೆ ಕೊಟ್ಟಿದ್ದೇನೆ ಅನ್ನೋ ಲೆವೆಲ್‌ನಲ್ಲೇ ಇರುತ್ತಾರೆ. ಸುದೀಪಣ್ಣ ಬಂದ ಕೂಡಲೇ ಹೆಂಗೆ ಆಗ್ಬಿಡ್ತಾರೆ ಅಂದ್ರೆ, ಅವರು ಹೆಂಗೆ ಹೇಳ್ತಾರೆ ಹಂಗೆ ಕೇಳ್ಬೇಕು. ಅವರು ದೇವರು, ನಾವು ಭಕ್ತಾಧಿಗಳು ಅಂತ ಅಂದ್ಕೊಳ್ತಾರೆ." ಎಂದು ಸ್ಪರ್ಧಿಗಳು ನಿರ್ಧಾರ ಬದಲಿಸುವ ಬಗ್ಗೆ ರಕ್ಷಕ್ ಮಾತಾಡಿದ್ದರು.

ಇದಕ್ಕೆ ಕಿಚ್ಚನ ಅಭಿಮಾನಿಗಳು ಹಾಗೂ ನೆಟ್ಟಿಗರು ಕಿಡಿಕಾರಿದ್ದರು. ಹಾಗೇ ಬಿಗ್‌ಬಾಸ್ ಫಿನಾಲೆ ವೇದಿಕೆಗೆ ಬಂದ ರಕ್ಷಕ್‌ಗೆ ಕಿಚ್ಚ ಕ್ಲಾಸ್ ತೆಗೆದುಕೊಂಡಿದ್ದರು. "ಸಂದರ್ಶನದಲ್ಲಿ ಇದ್ದ ವಾಯ್ಸ್ ಈಗೇಕೆ ಇಲ್ಲ. ನಿಮಗೆ ಯಾರ ಬಗ್ಗೆ ಬೇಕಾದರೂ ಮಾತಾಡುವ ಅಧಿಕಾರವಿದೆ. ಅದರಲ್ಲೇನು ಸಮಸ್ಯೆಯಿಲ್ಲ. ಆದರೆ, ಇನ್ನೊಬ್ಬರಿಗೆ ನೋವು ಕೊಡುವ ಅಧಿಕಾರವಿಲ್ಲ." ಎಂದು ಕಿಚ್ಚ ಸುದೀಪ್ ಹೇಳಿದ್ದರು.

More from Filmibeat

English summary
Kichcha Sudeep gave expensive sunglass to Bigg Boss Rakshak
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X