Karimani Serial:'ಕರಿಮಣಿ' ಧಾರಾವಾಹಿಯ 'ಬ್ಲ್ಯಾಕ್ ರೋಜ್' ಯಾರು?: ರಹಸ್ಯ ಬಯಲಾಗೋದು ಯಾವಾಗ?
ಕಲರ್ಸ್ ಕನ್ನಡದಲ್ಲಿ ವೀಕ್ಷಕರನ್ನು ಕುತೂಹಲದ ಅಲೆಯಲ್ಲಿ ತೇಲಿಸುತ್ತಿರುವ ಧಾರಾವಾಹಿ 'ಕರಿಮಣಿ'. ಈ ಧಾರಾವಾಹಿಯಲ್ಲಿ 'ಬ್ಲ್ಯಾಕ್ ರೋಜ್' ಎನ್ನುವ ಪಾತ್ರ ವೀಕ್ಷಕರಿಗೆ ಅತ್ಯಂತ ಕುತೂಹಲ ಹುಟ್ಟಿಸಿದ ಪಾತ್ರ. ಈ ನೆಗೆಟಿವ್ ಪಾತ್ರ ಸಾದಾ ನಾಯಕ ಕರ್ಣನ ಹಿಂದೆ ಬಿದ್ದಿರುತ್ತೆ. ಆತನನ್ನು ನಾಶ ಮಾಡಲೇಬೇಕು ಅಂತ ಹಠ ಹಿಡಿದಿರುವ ಈ 'ಬ್ಲ್ಯಾಕ್ ರೋಜ್' ಯಾರು? ಎನ್ನುವುದೇ ಈಗ ಕುತೂಹಲ.
ಇಷ್ಟು ದಿನ 'ಕರಿಮಣಿ' ಧಾರಾವಾಹಿ ವೀಕ್ಷಿಸುವ ವೀಕ್ಷಕರ ನಿದ್ದೆ ಕೆಡಿಸಿದ್ದ 'ಬ್ಲ್ಯಾಕ್ ರೋಸ್' ಯಾರ? ಎನ್ನುವ ಆ ಯಕ್ಷಪ್ರಶ್ನೆಗೆ ಉತ್ತರ ಸಿಗುವ ಸಮಯ ಬಂದಿದೆ. ಮುಂದಿನ ವಾರ ಅಂದರೆ, ಮಾರ್ಚ್ 24 ರಂದು ಸೋಮವಾರ ಸಂಜೆ 6 ಕ್ಕೆ ಮುಹೂರ್ತ ಫಿಕ್ಸ್ ಆಗಿದೆ. 'ಕರಿಮಣಿ' ಧಾರಾವಾಹಿಯ 'ಬ್ಲ್ಯಾಕ್ ರೋಜ್' ಯಾರು ಎಂಬ ರಹಸ್ಯ ಬಟಾ ಬಯಲಾಗಲಿದೆ. ಅಷ್ಟಕ್ಕೂ ಈ 'ಬ್ಲ್ಯಾಕ್ ರೋಜ್' ಹಿನ್ನೆಲೆಯೇನು?

ಕರ್ಣನ ಕಾಡುತ್ತಿರುವ 'ಬ್ಲ್ಯಾಕ್ ರೋಜ್' ಯಾರು?
'ಕರಿಮಣಿ' ಧಾರಾವಾಹಿಯಲ್ಲಿ ಇಂಟ್ರೆಸ್ಟಿಂಗ್ ಪಾತ್ರಗಳು ಇವೆ. ಈ ವಿಶಿಷ್ಟ ಪಾತ್ರಗಳು ಸಾಮಾನ್ಯವಾಗಿ ಧಾರಾವಾಹಿಗಳಲ್ಲಿ ಬಂದು ಹೋಗುವಂತಹದ್ದಲ್ಲ. ನೋಡುವುದಕ್ಕೆ ವಿಚಿತ್ರ ಅಂತ ಅನಿಸಿದರೂ, ಮನರಂಜನೆಗೆ ಕೊರತೆಯಿಲ್ಲ. ವೀಕ್ಷಕರ ಗಮನ ಸೆಳೆದಿರುವ ಇಂತಹ ವಿಶಿಷ್ಟ ಪಾತ್ರಗಳಲ್ಲಿ ಒಂದು 'ಬ್ಲ್ಯಾಕ್ ರೋಜ್'. 'ಕರಿಮಣಿ' ಧಾರಾವಾಹಿ ಇತ್ತೀಚೆಗೆ ವೀಕ್ಷಕರಿಗೆ ತೀರಾ ಹತ್ತಿರವಾಗುತ್ತಿದೆ. ಸೋಮು ಹೊಯ್ಸಳ ಹೆಣೆಯುತ್ತಿರುವ ಈ ವಿಭಿನ್ನ ಕಥೆಯ ಧಾರಾವಾಹಿಗೆ ಮೆಚ್ಚುಗೆ ಸಿಕ್ಕಿದೆ.
ನಾಯಕ-ನಾಯಕಿಯ ಮಧ್ಯೆ ಎಂಟ್ರಿ ಕೊಟ್ಟಿರುವ ಈ ಪಾತ್ರ ಅವರಷ್ಟೇ ಸದ್ದು ಮಾಡುತ್ತಿದೆ. ಬ್ಲ್ಯಾಕ್ ರೋಜ್ ಪಾತ್ರ ಕರ್ಣನ ಕನಸುಗಳನ್ನು ನಾಶ ಮಾಡುವುದಕ್ಕೆ ಅಂತಲೇ ಎಂಟ್ರಿ ಕೊಟ್ಟಿದೆ. ಅಂದ್ಮೇಲೆ ಅದು ವಿಲನ್ ರೋಲ್ ಅಂತ ಪ್ರತ್ತೇಕವಾಗಿ ಹೇಳಬೇಕಿಲ್ಲ. ಇನ್ನೇನು ರಿವೀಲ್ ಆಗುವ ಸಮಯಕ್ಕೆ ಇದು ಬ್ಲ್ಯಾಕ್ ರೋಜ್ ಪಾತ್ರ ಗಂಡೋ ಹೆಣ್ಣೋ ಅನ್ನೋದೇ ಸಸ್ಪೆನ್ಸ್. ಅದ್ಹೇಗೆ 'ಬ್ಲ್ಯಾಕ್ ರೋಸ್' ಯಾವಾಗಲೂ ಗಂಡಿನ ಸ್ವರದಲ್ಲಿಯೇ ಮಾತನಾಡುತ್ತೆ. ಅಂದ್ಮೇಲೆ ಹೆಣ್ಣು ಆಗಿರುವುದಕ್ಕೆ ಹೇಗೆ ಸಾಧ್ಯ? ಎನ್ನಬಹುದು. ಆದರೆ, ಮಹಿಳೆಯರಯ 'ಬ್ಲ್ಯಾಕ್ ರೋಜ್' ಹೆಣ್ಣಾಗಿರಬಾರದು ಏಕೆ? ವಾದ ಮಂಡಿಸುತ್ತಿವೆ.
ಅಷ್ಟಕ್ಕೂ ಈ 'ಬ್ಲ್ಯಾಕ್ ರೋಜ್' ಇಷ್ಟೊಂದು ಕುತೂಹಲ ಸೃಷ್ಟಿಸಿರುವುದು ಯಾಕೆ ಅಂದರೆ, ಸದಾ ಕಪ್ಪು ಬಣ್ಣದ ದಿರಿಸಿನಲ್ಲಿ ಮುಖವನ್ನು ತೋರಿಸದ ಪಾತ್ರವಿದು. ಇದೂವರೆಗೂ 'ಬ್ಲ್ಯಾಕ್ ರೋಜ್' ಮುಖ ಜನರಿಗೆ ರಿವೀಲ್ ಆಗಿಯೇ ಇಲ್ಲ. ನೀಲಿ ಕಣ್ಣುಗಳು ಮಾತ್ರ ಗೊತ್ತಷ್ಟೇ. ಇಷ್ಟು ದಿನ ಈ ಸೀರಿಯಲ್ ನೋಡಿಕೊಂಡು ಬಂದವರಿಗೆ ಕರ್ಣನ ಕುಟುಂಬದಲ್ಲಿಯೇ ಯಾರೋ ಒಬ್ಬರು ಬ್ಲಾಕ್ ರೋಜ್ ಇರಬಹುದು ಅನ್ನೋ ಅನುಮಾನ ಮೂಡಿದೆ. ಅವರು ಯಾರು ಅಂತ ನೋಡುವುದಾರೇ, ಕರ್ಣನನ್ನು ಕಂಡರೆ ಜಗ್ಗದ ವನಜನಾ? ನಳಿನಿನಾ ? ಇಲ್ಲವೇ ವೆಂಕಟೇಶ್ ಇರಬಹುದಾ ಎಂದು ಊಹೆ ಮಾಡುತ್ತಲೇ ಇದ್ದಾರೆ. ಕೊನೆಗೂ ವೀಕ್ಷಕರಿಗೆ ಮುಂದಿನ ವಾರ ಉತ್ತರ ಸಿಗಲಿದೆ.

ಬ್ಲ್ಯಾಕ್ ರೋಜ್ ಹಿನ್ನೆಲೆಯೇನು?
'ಕರಿಮಣಿ' ಧಾರಾವಾಹಿಯಲ್ಲಿ ಕಪ್ಪು ಗುಲಾಬಿಯೊಂದು ಕರ್ಣನ ಕೈ ಸೇರುತ್ತೆ. ಇಲ್ಲಿಂದ ಕರ್ಣ ಹಾಗೂ ಸಾಹಿತ್ಯ ಬಾಳಲ್ಲಿ ಬ್ಲಾಕ್ ರೋಜ್ ಕಣ್ಣಾಮುಚ್ಚಾಲೆ ಆಟ ಶುರುವಾಗಿದೆ. ರೆಡ್ ಹ್ಯಾಂಡ್ ಆಗಿ ಹಿಡಿಯುವುದಕ್ಕೆ ಅದೆಷ್ಟೇ ಪ್ರಯತ್ನ ಮಾಡಿದರೂ ಬ್ಲ್ಯಾಕ್ ರೋಜ್ ಹಿಡಿಯುವುದಕ್ಕೆ ಆಗದೇ ನಾಯಕ ಹಾಗೂ ನಾಯಕಿ ಇಬ್ಬರೂ ಸುಸ್ತಾಗಿದ್ದಾರೆ. ನಾಯಕನಿಗೆ ಸವಾಲು ಎಸೆಯುತ್ತಿರುವ ಬ್ಯಾಕ್ ರೋಜ್‌ನಿಂದ ಸಾಹಿತ್ಯ ಕೂಡ ಸಂಕಷ್ಟಕ್ಕೆ ಸಿಲುಕಿದ್ದು ಇದೆ.
ಇನ್ನು ಕರ್ಣನೊಂದಿಗಿನ ಸಂಬಂಧ ಮುರಿದುಕೊಂಡು ಸಾಹಿತ್ಯಾ ಮದುವೆ ರಿಷಿ ಜೊತೆ ಆಗಬೇಕು ಎಂದು ಸಂಚು ರೂಪಿಸಿದ್ದು ಇದೇ 'ಬ್ಲ್ಯಾಕ್ ರೋಜ್'. ಆದರೆ, ಅದನ್ನು ವಿಫಲಗೊಳಿಸುವಲ್ಲಿ ಯಶಸ್ವಿಯಾಗಿದ್ದ ಕರ್ಣ ಸಾಹಿತ್ಯಾಳನ್ನು ಮದುವೆಯಾಗುತ್ತಾನೆ. ಆದರೂ ಬಿಡದೇ 'ಬ್ಲ್ಯಾಕ್ ರೋಜ್' ಇವರಿಬ್ಬರ ಹಿಂದೆ ಬಿದ್ದಿದೆ. ಈ ವಾರ ಬ್ಲ್ಯಾಕ್ ರೋಜ್ ಯಾರು ಅನ್ನೋದನ್ನು ನಾಯಕ ಕರ್ಣ ಪತ್ತೆ ಮಾಡುತ್ತಾನಾ? ಇಲ್ಲಾ ಸಾಹಿತ್ಯಾ ಪತ್ತೆ ಹಚ್ಚುತ್ತಾಳಾ? ಈ ವಾರದ ಸಂಚಿಕೆಯಲ್ಲಿ ಇದಕ್ಕೆ ಉತ್ತರ ಸಿಗಲಿದೆ.


Click it and Unblock the Notifications











