BBK 11: ಬಿಗ್ ಬಾಸ್‌ನಲ್ಲಿ ಅತೀ ಕಡಿಮೆ ಸಂಭಾವನೆ ಪಡೆದ ಸಿಕ್ಕಿದ್ದು ಯಾವ ಸ್ಪರ್ಧಿಗೆ? ಎಷ್ಟು?
ಬಿಗ್‌ಬಾಸ್ ಕನ್ನಡ ಸೀಸನ್ 11 8ನೇ ವಾರ ಯಶಸ್ವಿಯಾಗಿ ಮುಗಿಸಿ 9ನೇ ವಾರಕ್ಕೆ ಕಾಲಿಡುತ್ತಿದೆ. ಯಮುನಾ, ರಂಜಿತ್, ಲಾಯರ್ ಜಗದೀಶ್, ಮಾನಸ, ಅನುಷಾ ರೈ ಈಗಾಗಲೇ ಹೊರ ಬಂದಿದ್ದಾರೆ. ಇನ್ನು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮೂವರು ಸ್ಪರ್ಧಿಗಳು ಒಳಗೆ ಹೋಗಿದ್ದಾರೆ. ಸರಿಗಮಪ ಹನುಮಂತು, ಶೋಭಾ ಶೆಟ್ಟಿ ಹಾಗೂ ರಜತ್ ಬಿಗ್ ಬಾಸ್ ಮನೆಗೆ ಪ್ರವೇಶ ಮಾಡಿದ್ದಾರೆ.
ಬಿಗ್ ಬಾಸ್ ಹೋಗಬೇಕು ಅನ್ನೋದು ಹಲವು ಜನರು ಕನಸು. ಒಮ್ಮೆ ಬಿಗ್ ಬಾಸ್ ಮನೆಗೆ ಹೋಗಿ ಬಂದರೆ ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿತ್ತೆ. ಹೊಸ ಆಫರ್‌ಗಳು ಬರುತ್ತವೆ. ಈ ಕಾರಣಕ್ಕೆ ಬಿಗ್ ಬಾಸ್ ಮನೆಗೆ ಹೋಗುವ ಅವಕಾಶ ಸಿಗಲಿ ಅಂತ ಬಯಸುತ್ತಾರೆ. ಹಾಗಂತ ಇಲ್ಲಿಗೆ ಹೋದವರಿಗೆ ಕೇವಲ ಜನಪ್ರಿಯತೆ ಅಷ್ಟೇ ಸಿಗುವುದಿಲ್ಲ. ಮನೆಯೊಳಗೆ ಇದ್ದಿದ್ದಕ್ಕೆ ಹಣ ಕೂಡ ಸಿಗುತ್ತೆ.

ಬಿಗ್ ಬಾಸ್ ಗೆದ್ದರೆ 50 ಲಕ್ಷ ರೂಪಾಯಿ ಹಣದ ಜೊತೆಗೆ ಪ್ರತಿವಾರಕ್ಕೆ ಇಂತಿಷ್ಟು ಸಂಭಾವನೆ ಸಿಗುತ್ತೆ. ಮೊದಲೇ ಚರ್ಚೆ ಮಾಡಿದಷ್ಟು ಹಣವನ್ನು ಅವರು ಎಷ್ಟು ವಾರ ಮನೆಯೊಳಗೆ ಇರುತ್ತಾರೋ ಅಷ್ಟು ದಿನವೂ ಸಂಭಾವನೆ ಸಿಗುತ್ತೆ. ಸದ್ಯ ಬಿಗ್‌ಬಾಸ್‌ನಲ್ಲಿ ಅತೀ ಕಡಿಮೆ ಹಣ ಸಿಕ್ಕಿದ ಸ್ಪರ್ಧಿ ಯಾರು? ಅನ್ನುವುದು ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿದೆ. ಹಾಗಿದ್ದರೆ, ಆ ಸ್ಪರ್ಧಿ ಯಾರು?
ಬಿಗ್ ಬಾಸ್ ಮನೆಯೊಳಗೆ ಸುಮಾರು 17 ಮಂದಿ ಪ್ರವೇಶ ಮಾಡಿದ್ದರು. ಅವರಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಸಂಭಾವನೆಯನ್ನು ಫಿಕ್ಸ್ ಮಾಡಿರುತ್ತೆ. 17 ಮಂದಿನೂ ಅವರವರ ಜನಪ್ರಿಯತೆಯನ್ನು ಗಮನದಲ್ಲಿಟ್ಟುಕೊಂಡು ವಾರಕ್ಕಿಷ್ಟು ಸಂಭಾವನೆ ಎಂದು ಆಫರ್ ಕೊಡಲಾಗುತ್ತೆ. ಆ ಹಂತದಲ್ಲಿ ಚಾನೆಲ್ ಜೊತೆ ಸ್ಪರ್ಧಿಗಳು ಒಪ್ಪಂದ ಮಾಡಿಕೊಂಡಿ ಸಂಭಾವನೆಯನ್ನು ಪಡೆಯಬಹುದು.
ಈ ಬಾರಿ ಅತೀ ಹೆಚ್ಚು ಸಂಭಾವನೆಯನ್ನು 'ಸತ್ಯ' ಧಾರಾವಾಹಿ ಖ್ಯಾತಿಯ ಗೌತಮಿ ಜಾದವ್ ಅವರಿಗೆ ನೀಡಲಾಗಿದೆ ಎಂಬ ಸುದ್ದಿ ಹರಿದಾಡಿತ್ತು. ಈಗ ಅತೀ ಕಡಿಮೆ ಸಂಭಾವನೆ ಯಾರಿಗೆ ಸಿಕ್ಕಿದೆ ಅನ್ನುವುದು ಚರ್ಚೆಯಾಗುತ್ತಿದೆ. ಈಗ ಮನೆಯೊಳಗೆ ಇರುವ ಸ್ಪರ್ಧಿಗಳ ಪೈಕಿ ಯೂಟ್ಯೂಬರ್ ಹಾಗೂ ಕಾಮಿಡಿಯನ್ ಧನರಾಜ್‌ಗೆ ಕಡಿಮೆ ಸಂಭಾವನೆ ಸಿಕ್ಕಿದೆ ಎನ್ನಲಾಗುತ್ತಿದೆ. ಎಂಟು ವಾರ ಬಿಗ್ ಬಾಸ್ ಮನೆಯಲ್ಲಿ ಯಶಸ್ವಿಯಾಗಿ ಪೂರೈಸಿರುವ ಧನರಾಜ್‌ಗೆ ಸಾವಿರ ಲೆಕ್ಕದಲ್ಲಿ ಸಂಭಾವನೆ ಪಡೆಯುತ್ತಿದ್ದಾರೆ ಎಂದು ಚರ್ಚೆಯಾಗುತ್ತಿದೆ.

ಒಂದು ವಾರಕ್ಕೆ ಧನರಾಜ್ ಮೂವತ್ತು ಸಾವಿರ ರೂಪಾಯಿ ಸಂಭಾವನೆ ಸಿಗುತ್ತಿದ್ದು, ಈಗಾಗಲೇ ಎಂಟು ವಾರಗಳನ್ನು ಪೂರೈಸಿದ್ದಾರೆ. ಹೀಗಾಗಿ ಅವರಿಗೆ ವಾರಕ್ಕೆ 30 ಸಾವಿರದಂತೆ ಎಂಟು ವಾರಗಳಲ್ಲಿ 2 ಲಕ್ಷದ 40 ಸಾವಿರ ರೂಪಾಯಿ ಸಿಗಬಹುದು ಎಂದು ಅಂದಾಜು ಮಾಡಲಾಗಿದೆ. ಈ ಬಗ್ಗೆ ಕಲರ್ಸ್ ಕನ್ನಡ ಚಾನೆಲ್ ಆಗಲಿ, ಧನರಾಜ್ ಕುಟುಂಬ ಆಗಲಿ ಬಹಿರಂಗ ಪಡಿಸಿಲ್ಲ. ಇದು ಕಿರುತೆರೆ ವಲಯದಲ್ಲಿ ಆಗುತ್ತಿರುವ ಚರ್ಚೆ. ಜೊತೆಗೆ ಸೋಶಿಯಲ್ ಮೀಡಿಯಾದಲ್ಲೂ ಇಂತಹದ್ದೊಂದು ಚರ್ಚೆ ಆಗುತ್ತಿದೆ.
ಸದ್ಯ ಧನರಾಜ್ ಆಚಾರ್ ಬಿಗ್ ಬಾಸ್ ಮನೆಯಲ್ಲಿ ಎಲ್ಲರನ್ನೂ ರಂಜಿಸುತ್ತಿದ್ದಾರೆ. ಧನರಾಜ್ ಹಾಗೂ ಹನುಮಂತ ಜೋಡಿ ವೀಕ್ಷಕರಿಗೆ ಮನರಂಜನೆಯನ್ನು ನೀಡುತ್ತಿದೆ. ಆರಂಭದ ದಿನಗಳಲ್ಲಿ ಬಿಗ್‌ಬಾಸ್ ಮನೆಯಲ್ಲಿ ಹೊಂದಿಕೊಳ್ಳುವುದಕ್ಕೆ ಕಷ್ಟ ಪಡುತ್ತಿದ್ದರು. ಆದ್ರೀಗ ಹನುಮಂತನ ಜೊತೆ ಸೇರಿ ಮನರಂಜನೆಯನ್ನು ನೀಡುತ್ತಿದ್ದಾರೆ. ಇನ್ನೂ ಕೆಲವು ವಾರ ಬಿಗ್‌ಬಾಸ್ ಮನೆಯೊಳಗೆ ಇರುತ್ತಾರೆ ಅಂತ ವೀಕ್ಷಕರು ಭವಿಷ್ಯ ನುಡಿದಿದ್ದಾರೆ.


Click it and Unblock the Notifications











