'ರಾಮಾಚಾರಿ' ನಟಿ ಮೌನ ಗುಡ್ಡೆಮನೆ 'ಕೃಷ್ಣಂ ಪ್ರಣಯ ಸಖಿ' ಸಿನಿಮಾ ಕೈ ಬಿಟ್ಟಿದ್ದೇಕೆ? ಗಣೇಶ್‌ಗೆ ಯಾಕೆ ಬೇಜಾರಾಯ್ತು?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಜನಪ್ರಿಯ ಧಾರಾವಾಹಿ 'ರಾಮಾಚಾರಿ'. ಈ ಸೀರಿಯಲ್‌ನಲ್ಲಿ ನಾಯಕಿಯಾಗಿ ನಟಿಸುತ್ತಿರುವ ಮೌನ ಗುಡ್ಡೆಮನೆ ವೀಕ್ಷಕರ ಫೇವರಿಟ್ ನಟಿ. ಕಿರುತೆರೆಯ ಸ್ಟಾರ್ ನಟಿಯಾಗಿ ಮಿಂಚಿದ ಬಳಿಕ ಮೌನ ಗುಡ್ಡೆಮನೆ ಸಿನಿಮಾದಲ್ಲಿಯೂ ನಟಿಸಿದ್ದಾರೆ. ಇತ್ತೀಚೆಗಷ್ಟೇ 'ಕುಲದಲ್ಲಿ ಕೀಳ್ಯಾವುದೋ' ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಈಗ ಕಿರುತೆರೆ ಹಾಗೂ ಸಿನಿಮಾ ಎರಡರಲ್ಲೂ ನಟಿಸುತ್ತಿದ್ದಾರೆ.
ಮೊದಲನೇ ಸಿನಿಮಾ 'ಕುಲದಲ್ಲಿ ಕೀಳ್ಯಾವುದೋ' ಇನ್ನೇನು ರಿಲೀಸ್ ಆಗ್ಬೇಕು ಎನ್ನುವಷ್ಟರಲ್ಲಿ ವಿವಾದಕ್ಕೆ ಸಿಕ್ಕಿಕೊಂಡಿತ್ತು. ಚೊಚ್ಚಲ ಸಿನಿಮಾ ಮೇಲೆ ನಂಬಿಕೆ ಇಟ್ಟುಕೊಂಡಿದ್ದ ಮೌನ ಗುಡ್ಡೆಮನೆಗೆ ಅಲ್ಲೂ ನಿರಾಸೆ ಆಗಿತ್ತು. ಈ ಸಿನಿಮಾದ ನಾಯಕ ಮಡೆನೂರು ಮನು ಕಾಂಟ್ರವರ್ಸಿಯಲ್ಲಿ ಸಿಕ್ಕಿಕೊಂಡಿದ್ದರು. ಸಿನಿಮಾದ ಜೊತೆಗೆ ಸೀರಿಯಲ್‌ನಲ್ಲೂ ಮೌನ ಗುಡ್ಡೆಮನೆ ಮುಂದುವರೆದಿದ್ದಾರೆ.

'ರಾಮಾಚಾರಿ' ಮೌನ ಗುಡ್ಡೆಮನೆಯವರ ಮೊದಲ ಸೀರಿಯಲ್. ಈ ಧಾರಾವಾಹಿನಲ್ಲಿ ನಟಿಸಿದ ಕೆಲವೇ ತಿಂಗಳುಗಳ ಬಳಿಕ ಅವರಿಗೆ ಸಿನಿಮಾಗಳಲ್ಲಿ ಆಫರ್ ಬರುವುದಕ್ಕೆ ಶುರುವಾಗಿತ್ತು. 'ಕುಲದಲ್ಲಿ ಕೀಳ್ಯಾವುದೋ' ಸಿನಿಮಾವನ್ನು ಒಪ್ಪಿಕೊಳ್ಳುವುದಕ್ಕೂ ಮುನ್ನ ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾ 'ಕೃಷ್ಣಂ ಪ್ರಣಯ ಸಖಿ' ಸಿನಿಮಾಗೆ ಆಫರ್ ಬಂದಿತ್ತು. ಆದರೆ, ಗಣೇಶ್ ಸಿನಿಮಾವನ್ನು ಕೈ ಬಿಟ್ಟರು. ಅದಕ್ಕೆ ಕಾರಣವನ್ನು ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್‌ನಲ್ಲಿ ರಿವೀಲ್ ಮಾಡಿದ್ದಾರೆ.
ಮೊದಲ ಸೀರಿಯಲ್ ಶುರುವಾಗಿದ ಕೆಲವೇ ದಿನಗಳಲ್ಲಿ ಸಿನಿಮಾದಲ್ಲೂ ಆಫರ್ ಬರುತ್ತಿತ್ತು. ಆ ಸಮಯದಲ್ಲಿ ಅವರು ಒಪ್ಪಿಕೊಂಡಿರಲಿಲ್ಲ. ಅದ್ಯಾಕೆ ಅನ್ನೋದನ್ನು ಹೇಳಿಕೊಂಡಿದ್ದಾರೆ. "ರಾಮಾಚಾರಿ ಶುರುವಾದ ಸ್ವಲ್ಪ ಸಮಯದಲ್ಲಿ ಅಂದರೆ, ಒಂದು ವರ್ಷನೂ ಅಲ್ಲ ಆರೇಳು ತಿಂಗಳಿಗೆ ಸಿನಿಮಾಗಳಿಗೆ ಆಫರ್ ಬರುವುದಕ್ಕೆ ಶುರುವಾಗಿತ್ತು. ಆದರೆ ನನಗೆ ಅದರ ಬಗ್ಗೆ ಜ್ಞಾನ ಇರಲಿಲ್ಲ. ನನಗೆ ರಾಮಾಚಾರಿಯಲ್ಲಿ ಸಿನಿಮಾಗೆ ರೆಡಿಯಾಗುವ ಹಾಗೆ ತುಂಬಾನೇ ತಯಾರಿಗಳನ್ನು ಕೊಟ್ಟಿದ್ದಾರೆ. ಅದಕ್ಕೆ ರಾಮ್ ಜಿ ಸರ್ ಥ್ಯಾಂಕ್ಸ್ ಹೇಳಲೇಬೇಕು. ಸೀರಿಯಲ್‌ನವರು ಸೀನ್ ಅನ್ನು ಎಳೆಯುತ್ತಾರೆ. ಎಮೋಷನ್ ಅನ್ನು ಎಳೆಯುತ್ತಾರೆ ಅಂತಾರೆ. ಆದರೆ, ನನಗೆ ಅದ್ಯಾವತ್ತೂ ಫೀಲ್ ಆಗಲಿಲ್ಲ." ಎಂದು ನಟಿ ಮೌನ ಗುಡ್ಡೆಮನೆ ಹೇಳಿದ್ದಾರೆ.
'ಕೃಷ್ಣಂ ಪ್ರಣಯ ಸಖಿ' ಕೈ ಬಿಟ್ಟಿದ್ದೇಕೆ?
'ರಾಮಾಚಾರಿ' ಧಾರಾವಾಹಿಯಲ್ಲಿ ಮೌನ ಗುಡ್ಡೆಮನೆಯ ಪಾತ್ರಕ್ಕೆ ಸಿನಿಮಾ ಮಂದಿಯ ಗಮನ ಸೆಳೆದಿತ್ತು. ಆಗ ಸಿಕ್ಕಿದ್ದೇ 'ಕೃಷ್ಣಂ ಪ್ರಣಯ ಸಖಿ'. ಆದರೆ, ಆ ಸಿನಿಮಾವನ್ನು ಕೈ ಬಿಟ್ಟರು. "ರಾಮಾಚಾರಿಯಲ್ಲಿ ನನ್ನ ಪಾತ್ರ ನೋಡಿದರೆ, ಸಿನಿಮಾದವರು ಅವರೇ ಆಫರ್ ಕೊಡಬೇಕು ಹಾಗೆ ರೆಡಿ ಮಾಡಿದ್ದಾರೆ. ಹಾಗಾಗಿ ನನಗೆ ತುಂಬಾನೇ ಆಫರ್‌ಗಳು ಬಂದವು. ಅದರಲ್ಲಿ ಕೃಷ್ಣಂ ಪ್ರಣಯ ಸಖಿ ನನ್ನ ಫೇವರಿಟ್. ಗಣೇಶ್ ಅವರ ಜೊತೆ ಸಿನಿಮಾ ಮಾಡಬೇಕಿತ್ತು. ಆದರೆ, ಆ ಸಿನಿಮಾವನ್ನು ಮಾಡುವುದಕ್ಕೆ ಆಗಲಿಲ್ಲ." ಎಂದಿದ್ದಾರೆ.

ಹಾಗೇ ಆ ಪ್ರಾಜೆಕ್ಟ್ ಕೈ ಬಿಟ್ಟಿದ್ದೇಕೆ ಅನ್ನೋದನ್ನು ಹೇಳಿದ್ದಾರೆ. "ಆ ಟೈಮ್‌ನಲ್ಲಿ ನಾನು ಫ್ಯಾಮಿಲಿ ಸಮಸ್ಯೆಯಿಂದ ತುಂಬಾನೇ ಡಿಸ್ಟರ್ಬ್ ಆಗಿದ್ದೆ. ಆ ಸಮಯದಲ್ಲಿ ನಾನು ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುವುದಕ್ಕೆ ಆಗುತ್ತಿರಲಿಲ್ಲ. ನಾನು ತುಂಬಾ ಯೋಚನೆ ಮಾಡುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಅವರ ಕಾಲ್ ಪಿಕ್ ಮಾಡುತ್ತಿರಲಿಲ್ಲ. ಹೀಗೆ ತುಂಬಾನೇ ತಾತ್ಸಾರ ಮಾಡಿದೆ. ಆ ಟೈಮ್‌ನಲ್ಲಿ ತುಂಬಾನೇ ತಪ್ಪಾಯ್ತು. ನಾನು ಯಾರು ಕಾಲ್ ಮಾಡಿದ್ರೋ ಅವರು ಸಿಕ್ಕಾಗ ತುಂಬಾನೇ ಬೇಜಾರ ಮಾಡಿಕೊಂಡಿದ್ದರು. ನನಗೆ ತುಂಬಾನೇ ಬೇಜಾರಾಗಿದೆ. ಗಣೇಶ್ ಸರ್ ಕೂಡ ಬೇಜಾರಾಗಿದ್ದರು. ಈ ಹುಡುಗಿ ಕಾಲ್ ಪಿಕ್ ಮಾಡಲ್ಲ. ಇನ್ನು ಸಿನಿಮಾ ಹೇಗೆ ಮಾಡುತ್ತಾಳೆ ಅಂತ ಹೇಳಿದ್ರು ಅಂದರು." ಎಂದು ಮೌನ ಗುಡ್ಡೆ ಆ ಸಂದರ್ಭವನ್ನು ನೆನಪಿಸಿಕೊಂಡಿದ್ದಾರೆ.
ಫ್ಯಾಮಿಲಿ ಸಮಸ್ಯೆಯೇ ಕಾರಣ
"ಆ ಸಮಯದಲ್ಲಿ ನನ್ನ ಫ್ಯಾಮಿಲಿ ವಿಷಯ ತುಂಬಾನೇ ಮುಖ್ಯ ಆಗಿತ್ತು. ನಿರ್ಧಾರ ತೆಗೆದುಕೊಳ್ಳುವುದೋ? ಕಾಲ್ ಪಿಕ್ ಮಾಡುವುದೋ? ಯಾವುದೋ ಒಂದು ತಪ್ಪಿನಲ್ಲಿ ಕೃಷ್ಣಂ ಪ್ರಣಯ ಸಖಿ ಸಿನಿಮಾ ಮಿಸ್ ಆಯ್ತು. ಅಪ್ಪ ಅಮ್ಮನ ಜಗಳ ನಡೀತಿತ್ತು. ಅಂದರೆ, ಅಪ್ಪ ಅಮ್ಮನ ಜೊತೆ ಚೆನ್ನಾಗಿದ್ದಾರೆ. ಆದರೆ, ನಮ್ಮ ಜೊತೆ ಅಷ್ಟು ಚೆನ್ನಾಗಿಲ್ಲ. ಆ ಟೈಮ್‌ನಲ್ಲಿ ನನಗೆ ತುಂಬಾನೇ ಕಷ್ಟ ಆಯ್ತು. ನಾನು ಬೆಂಗಳೂರಿಗೆ ಶಿಫ್ಟ್ ಆದಲ್ಲಿಂದ ನಮ್ಮ ಅಪ್ಪ ನನಗೆ ಒಂದು ರೂಪಾಯಿಯನ್ನು ಖರ್ಚು ಮಾಡಿಲ್ಲ. ನನ್ನ ಮಗಳು ಹೇಗಿದ್ದಾಳೆ ಅಂತಾನೂ ಕೇಳಲಿಲ್ಲ." ಎಂದು ಹೇಳಿದ್ದಾರೆ.


Click it and Unblock the Notifications











