Don't Miss!
- Finance
Economic Survey 2022-23: ಆರ್ಥಿಕ ಸಮೀಕ್ಷೆಯ ಪ್ರಮುಖಾಂಶ ಇಲ್ಲಿದೆ
- Technology
ಜಿಯೋ ಟ್ರೂ 5G ಸೇವೆ ಈಗ ಚಿತ್ರದುರ್ಗದಲ್ಲಿಯೂ ಲಭ್ಯ!..5G ರೀಚಾರ್ಜ್ ಬೆಲೆ ಎಷ್ಟು?
- Sports
WIPL 2023: ಮಹಿಳಾ ಐಪಿಎಲ್ನಲ್ಲಿ ಗುಜರಾತ್ ಜೈಂಟ್ಸ್ ತಂಡದ ಮೆಂಟರ್ ಆಗಿ ಮಿಥಾಲಿ ರಾಜ್ ನೇಮಕ
- Lifestyle
ಥೈರಾಯ್ಡ್ ನಿಯಂತ್ರಣಕ್ಕೆ ಕೊತ್ತಂಬರಿ ಹೇಗೆ ಸಹಕಾರಿ ನೋಡಿ
- News
Occupancy Certificate Fraud: ಆಂತರಿಕ ತನಿಖೆ ನಡೆಸಲು ಬಿಬಿಎಂಪಿ ಕಟ್ಟುನಿಟ್ಟಿನ ನಿರ್ದೇಶನ
- Automobiles
ಜನಪ್ರಿಯ ನಟನ ಮನೆಗೆ ಕಥೆ ಹೇಳಲು ಹೋಗಿ ಆತನ ದುಬಾರಿ ಕಾರ್ ಓಡಿಸಿಬಂದ ನಿರ್ದೇಶಕ...
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಡಿಸ್ಕವರಿ ಚಾನೆಲ್‌ನಲ್ಲಿ ಕನ್ನಡದಲ್ಲಿಯೇ ನೋಡಿ 'Wild Karnataka': ಸಮಯ ಮತ್ತು ದಿನಾಂಕದ ವಿವರ
ಭಾರತದ ಮೊಟ್ಟಮೊದಲ ವನ್ಯಜೀವಿ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ 'ವೈಲ್ಡ್ ಕರ್ನಾಟಕ' ಕೆಲವು ತಿಂಗಳ ಹಿಂದೆ ಚಿತ್ರಮಂದಿರಗಳಲ್ಲಿ ತೆರೆಕಂಡಿತ್ತು. ಕರ್ನಾಟಕ ಅರಣ್ಯ ಇಲಾಖೆಯ ಸಹಯೋಗದಲ್ಲಿ 'ಡಿಸ್ಕವರಿ ಚಾನೆಲ್'ಗಾಗಿ ನಿರ್ಮಾಣ ಮಾಡಲಾಗಿದ್ದ ಈ ಸಾಕ್ಷ್ಯಚಿತ್ರ ಶೀಘ್ರದಲ್ಲಿಯೇ ಕಿರುತೆರೆಯಲ್ಲಿ ಪ್ರಸಾರವಾಗಲಿದೆ. ಅದೂ ನಮ್ಮ ಭಾಷೆಯಲ್ಲಿಯೇ.
Recommended Video
ಅಮೋಘವರ್ಷ ಜೆ.ಎಸ್., ಕಲ್ಯಾಣ್ ವರ್ಮಾ, ಶರತ್ ಚಂಪಾತಿ, ವಿಜಯ್ ಮೋಹನ್ ರಾಜ್ ನಿರ್ದೇಶಿಸಿದ್ದ 'ವೈಲ್ಡ್ ಕರ್ನಾಟಕ'ಕ್ಕೆ ರಿಕ್ಕಿ ಕೇಜ್ ಸಂಗೀತ ನೀಡಿದ್ದರು. ಆಡಮ್ ಕಿರ್ಬಿ ಸಂಕಲನ ಮಾಡಿದ್ದ, ಸಾಕ್ಷ್ಯಚಿತ್ರ ಖ್ಯಾತ ನೈಸರ್ಗಿಕ ಇತಿಹಾಸಕಾರ ಸರ್ ಡೇವಿಡ್ ಅಟೆನ್‌ಬರೋ ನಿರೂಪಣೆ ಮಾಡಿದ್ದರು. ಸುಮಾರು 4-5 ವರ್ಷ ಕರ್ನಾಟಕದ ದಟ್ಟ ಅರಣ್ಯಗಳಲ್ಲಿ ಹೆಚ್ಚೂ ಕಡಿಮೆ 400 ಗಂಟೆಗಳಷ್ಟು ಕಾಲ ಚಿತ್ರೀಕರಣ ಮಾಡಲಾಗಿತ್ತು. ಪಿವಿಆರ್ ಸಿನಿಮಾಸ್‌ನಲ್ಲಿ ಚಿತ್ರವನ್ನು ಪ್ರದರ್ಶನ ಮಾಡಲಾಗಿತ್ತು. ಮುಂದೆ ಓದಿ...

ಜೂನ್ 5ರಂದು ಪ್ರಸಾರ
ಈಗ ಕರ್ನಾಟಕದ ಹೆಮ್ಮೆ ಎಂದೇ ಪರಿಗಣಿಸಲಾಗಿರುವ ರಾಜ್ಯದ ಅಮೂಲ್ಯ ಅರಣ್ಯ ಮತ್ತು ವನ್ಯಜೀವಿ ಸಂಪತ್ತನ್ನು ಜಗತ್ತಿಗೆ ತಿಳಿಸುವ 'ವೈಲ್ಡ್ ಕರ್ನಾಟಕ' ಸಾಕ್ಷ್ಯಚಿತ್ರ ಜೂನ್ 5ರ ರಾತ್ರಿ 8 ಗಂಟೆಗೆ ಡಿಸ್ಕವರಿ ಚಾನೆಲ್ ಮತ್ತು ಅನಿಮಲ್ ಪ್ಲಾನೆಟ್ ವಾಹಿನಿಗಳ ಮೂಲಕ ನಿಮ್ಮ ಮನೆ ಬಾಗಿಲಿಗೆ ಬರುತ್ತಿದೆ.
ವೈಲ್ಡ್ ಕರ್ನಾಟಕ ಕಿರುಚಿತ್ರ ನೋಡಿದ ಯಡಿಯೂರಪ್ಪ

ಕನ್ನಡದಲ್ಲಿ ರಿಷಬ್ ಶೆಟ್ಟಿ ಧ್ವನಿ
ಡಿಸ್ಕವರಿ ಚಾನೆಲ್ ಇತ್ತೀಚೆಗೆ ಕನ್ನಡದಲ್ಲಿಯೂ ತನ್ನ ಪ್ರಸಾರವನ್ನು ಆರಂಭಿಸಿತ್ತು. ಇಂಗ್ಲಿಷ್ ಭಾಷೆಯ ಕಾರ್ಯಕ್ರಮಗಳನ್ನು ಕನ್ನಡಕ್ಕೆ ಭಾಷಾಂತರಿಸಿ ನಿರೂಪಣೆ ಮಾಡಲಾಗುತ್ತಿತ್ತು. ಆದರೆ 'ವೈಲ್ಡ್ ಕರ್ನಾಟಕ' ಮತ್ತಷ್ಟು ವಿಶೇಷವಾಗಿ ವೀಕ್ಷಕರಿಗೆ ತಲುಪಲಿದೆ. ಖ್ಯಾತ ನಿರ್ದೇಶಕ, ನಟ ರಿಷಬ್ ಶೆಟ್ಟಿ ಅವರ ನಿರೂಪಣೆಯಲ್ಲಿ ಕನ್ನಡಿಗರಿಗೆ ಇದು ಸಿಗಲಿದೆ.
|
ಹೆಮ್ಮೆಯೆನಿಸುತ್ತಿದೆ- ರಿಷಬ್
'ನಗರಗಳ ಅಭಿವೃದ್ಧಿ ಮತ್ತು ಹೆಚ್ಚುತ್ತಿರುವ ಜನಸಂಖ್ಯೆಯ ನಡುವೆಯೂ ನಮ್ಮ ವನ್ಯಜೀವಿ ಸಂಪತ್ತನ್ನು ಉಳಿಸಲು ಕರ್ನಾಟಕ ಅರಣ್ಯ ಇಲಾಖೆ ಮಹತ್ತರ ಪ್ರಯತ್ನ ನಡೆಸುತ್ತಿದೆ. ನಮ್ಮ ತಾಯ್ನುಡಿ ಕನ್ನಡದಲ್ಲಿ ನಿರೂಪಣೆ ಮಾಡಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ' ಎಂದು ರಿಷಬ್ ಶೆಟ್ಟಿ ಹೇಳಿಕೊಂಡಿದ್ದಾರೆ.
ಜನವರಿ 17 ರಿಂದ ಚಿತ್ರಮಂದಿರಗಳಲ್ಲಿ ತೆರೆದುಕೊಳ್ಳಲಿದೆ Wild Karnataka!
|
ತಮಿಳು-ತೆಲುಗಿನಲ್ಲಿ ಪ್ರಕಾಶ್ ರೈ
ತೆಲುಗು ಮತ್ತು ತಮಿಳಿನಲ್ಲಿ ಪ್ರಕಾಶ್ ರೈ ಅವರ ನಿರೂಪಣೆಯಲ್ಲಿ ಸಾಕ್ಷ್ಯಚಿತ್ರ ಪ್ರಸಾರವಾಗಲಿದೆ. 'ನಿಸರ್ಗದ ಧ್ವನಿಯಾಗುವುದರಲ್ಲಿ ಒಂದು ಅರ್ಥಪೂರ್ಣ ಪ್ರಯಾಣ' ಎಂದು ಪ್ರಕಾಶ್ ರೈ ಹೇಳಿದ್ದಾರೆ. ಹಿಂದಿಯಲ್ಲಿ ಖ್ಯಾತ ನಟ ರಾಜ್ ಕುಮಾರ್ ರಾವ್ ಹಿನ್ನೆಲೆ ಧ್ವನಿ ನೀಡಿದ್ದಾರೆ. ಇಂಗ್ಲಿಷ್‌ನಲ್ಲಿ ಡೇವಿಡ್ ಅಟೆನ್‌ಬರೊ ಅವರ ಧ್ವನಿಯಲ್ಲಿಯೇ ಪ್ರಸಾರವಾಗಲಿದೆ.