'ಕರಿಮಣಿ' ಸೀರಿಯಲ್‌ನಲ್ಲಿ 'ಬ್ಲಾಕ್ ರೋಜ್' ಅನ್ನೋದು ವೀಕ್ಷಕರಿಗೆ ಗೊತ್ತು, ಕರ್ಣ, ಸಾಹಿತ್ಯಾ ಗೊತ್ತಾ? ಏನಿದೆ ಟ್ವಿಸ್ಟ್?

ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿಗಳಲ್ಲಿ 'ಕರಿಮಣಿ' ಕೂಡ ಒಂದು. ಇಷ್ಟು ದಿನ ಈ ಧಾರಾವಾಹಿಯಲ್ಲಿ ಟ್ವಿಸ್ಟ್ ಅಂಡ್ ಟರ್ನ್‌ಗಳನ್ನಿಟ್ಟು ವೀಕ್ಷಕರ ತಲೆಗೆ ಹುಳ ಬಿಟ್ಟಿದ್ದರು. ಒಂದು ಸಸ್ಪೆನ್ಸ್ ಟ್ರ್ಯಾಕ್ ಸಾಗುತ್ತಿದ್ದರೆ, ಇನ್ನೊಂದು ಕಡೆ ಫ್ಯಾಮಿಲಿ ಟ್ರ್ಯಾಕ್ ನಡೆಯುತ್ತಿತ್ತು. ಪ್ರತಿ ದಿನ ಈ ಧಾರಾವಾಹಿಯಲ್ಲಿ ಸಿಗುವ ಟ್ವಿಸ್ಟ್ ಅಂಡ್ ಟರ್ನ್‌ಗಳನ್ನು ನೋಡಿ ವೀಕ್ಷಕರಂತೂ ತಲೆಕೆಡಿಸಿಕೊಂಡಿದ್ದರು. ಅದರಲ್ಲೂ 'ಬ್ಲಾಕ್ ರೋಜ್' ಯಾರು ಅಂತ ರಿವೀಲ್ ಆದರೆ, ಸಾಕು ಅಂತ ತುದಿಗಾಲಲ್ಲಿ ನಿಂತಿದ್ದರು.

'ಕರಿಮಣಿ' ಧಾರಾವಾಹಿಯ ಪ್ರಮುಖ ಪಾತ್ರಗಳಲ್ಲಿ 'ಬ್ಯಾಕ್ ರೋಸ್' ಕೂಡ ಒಂದಾಗಿತ್ತು. ಕರ್ಣ ಹಾಗೂ ಸಾಹಿತ್ಯಾ ವಿರುದ್ಧ ದ್ವೇಷದ ಕತ್ತಿ ಮಸೆಯುತ್ತಲೇ ಇತ್ತು. ವೀಕ್ಷಕರು ಪ್ರತಿ ದಿನ ಈ 'ಬ್ಲಾಕ್ ರೋಜ್' ಯಾರು ಅಂತ ಕಂಡು ಹಿಡಿಯುವುದಕ್ಕೆ ಧಾರಾವಾಹಿಯನ್ನು ನೋಡಿದ್ದು ಇದೆ. ಈಗ 'ಬ್ಲಾಕ್ ರೋಜ್' ಯಾರು ಅನ್ನೋದು ರಿವೀಲ್ ಆಗಿದೆ. ಆದರೆ, ಇಲ್ಲೂ ಒಂದು ಟ್ವಿಸ್ಟ್ ಇದೆ.

Will Karna and Sahithya identify Black Rose this week in Karimani Kannada serial

ಈ ಧಾರಾವಾಹಿಯಲ್ಲಿ 'ಬ್ಲಾಕ್ ರೋಜ್' ಯಾರು ಅನ್ನೋದು ವೀಕ್ಷಕರಿಗೆ ಮಾತ್ರ ಗೊತ್ತು. ಆದರೆ, ಕರಿಮಣಿ ಸೀರಿಯಲ್‌ನಲ್ಲಿ ನಟಿಸುತ್ತಿರುವ ಪ್ರಮುಖ ಪಾತ್ರಗಳಿಗೆ ಗೊತ್ತಿಲ್ಲ. ಇನ್ನೂ 'ಬ್ಲಾಕ್ ರೋಜ್' ಅನ್ನು ಕಂಡು ಹಿಡಿಯುವುದರಲ್ಲಿ ನಿರತರಾಗಿದ್ದಾರೆ. ಒಂದಿಷ್ಟು ದಿನ ವೀಕ್ಷಕರ ತಲೆಗೆ ಹುಳ ಬಿಟ್ಟು ಆ ಸೀಕ್ರೆಟ್ ಕ್ಯಾರೆಕ್ಟರ್ ಯಾರು ಅನ್ನೋದನ್ನು ರಿವೀಲ್ ಮಾಡಲಾಗಿತ್ತು. ಈಗ ಪ್ರಮುಖ ಪಾತ್ರಗಳಿಗೆ, ಅಂದರೆ, ಕರ್ಣ ಹಾಗೂ ಸಾಹಿತ್ಯಾಗೂ ರಿವೀಲ್ ಆಗುತ್ತಾ? ಸದ್ಯಕ್ಕೊಂದು ಸುಳಿವು ಸಿಕ್ಕಿದೆ.

'ಕರಿಮಣಿ' ಸೀರಿಯಲ್ ಈಗಾಗಲೇ ವೀಕ್ಷಕರ ಮನ ಗೆದ್ದಿದೆ. ಕುಟುಂಬದ ಸದಸ್ಯರು ಈ ಧಾರಾವಾಹಿಯನ್ನು ತಪ್ಪದೆ ವೀಕ್ಷಿಸುತ್ತಿದ್ದಾರೆ. ಅದಕ್ಕೆ ಕಾರಣ ಟ್ವಿಸ್ಟ್‌ಗಳು. ಅಂದ್ಹಾಗೆ, ಕರ್ಣನ ತಾಯಿ ಅರುಂಧತಿಯೇ ಬ್ಲಾಕ್ ರೋಜ್ ಎನ್ನುವುದು ಈಗಾಗಲೇ ವೀಕ್ಷಕರಿಗೆ ಗೊತ್ತಾಗಿದೆ. ಆದರೆ, ಸಾಹಿತ್ಯಾಗೆ ಇದರ ಸುಳಿವು ಇಲ್ಲ. ಆಕೆಗೆ ಬ್ಲಾಕ್ ರೋಸ್ ಯಾರು ಅನ್ನೋದು ಗೊತ್ತಾಗುತ್ತಾ? ಯಾವಾಗ ಗೊತ್ತಾಗುತ್ತೆ? ಅನ್ನೋದು ಈ ವಾರ ವೀಕ್ಷಕರಿಗೆ ಸುಳಿವು ಸಿಗುತ್ತಾ ಹೋಗುತ್ತೆ.

Will Karna and Sahithya identify Black Rose this week in Karimani Kannada serial

ಸದ್ಯ ಸಾಹಿತ್ಯಾಗೆ ತನ್ನ ಕುಟುಂಬದ ಸದಸ್ಯರಲ್ಲಿ ಯಾರೋ ಒಬ್ಬರು 'ಬ್ಲಾಕ್ ರೋಜ್' ಎನ್ನುವ ಸತ್ಯ ಗೊತ್ತಾಗಲಿದೆ. ಕರ್ಣನಿಗೂ ಗೊತ್ತಾಗುವುದಕ್ಕಿಂತ ಮುನ್ನ ಸಾಹಿತ್ಯಾಗೆ 'ಬ್ಲಾಕ್ ರೋಜ್' ಯಾರು ಎನ್ನುವುದು ಗೊತ್ತಾಗುತ್ತಾ? ಇದರಿಂದ ಕರ್ಣ ಮತ್ತು ಸಾಹಿತ್ಯಾ ಜೀವನ ಬದಲಾಗುತ್ತಾ? ಸಂಬಂಧಗಳಲ್ಲಿ ಏನೆಲ್ಲಾ ಬದಲಾವಣೆಗಳು ಆಗುತ್ತೆ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. 'ಕರಿಮಣಿ' ಸೀರಿಯಲ್ ಈಗ ವೀಕ್ಷಕರನ್ನು ಮತ್ತಷ್ಟು ಸೆಳೆಯುವುದಕ್ಕೆ ಶುರು ಮಾಡಿದೆ.

ಕೆಲವೇ ದಿನಗಳ ಹಿಂದಷ್ಟೇ 'ಕರಿಮಣಿ' ಧಾರಾವಾಹಿಯಲ್ಲಿ ತನ್ನ ಸ್ವಾರ್ಥಕ್ಕೆ ಸವತಿ ಮಗನ ಹತ್ಯೆ ಅರುಂಧತಿ ಮುಂಗಿದ್ದರು. ಇನ್ನೇನು ಕರ್ಣನ ಕಥೆ ಮುಗಿಸೇ ಬಿಟ್ಟೆ ಎನ್ನುವ ಖುಷಿಯಲ್ಲಿದ್ದರು. ಕರ್ಣನಿಗೆ ಇದ್ದ ಅಧಿಕಾರವೆಲ್ಲ ನನ್ನ ಮಗ ಭರತ್‌ಗೆ ಬಂದೇ ಬಿಡ್ತು ಎನ್ನುವಷ್ಟು ಹಿರಿ ಹಿರಿ ಹಿಗ್ಗಿದ್ದರು. ಆದರೆ, ಆಕೆಯ ಲೆಕ್ಕಾಚಾರವೆಲ್ಲ ಉಲ್ಟಾ ಆಗಿತ್ತು. ಕರ್ಣ ಆರಾಮಾಗಿ ಮನೆಗೆ ಬಂದಿದ್ದ. ಇದನ್ನು ನೋಡಿ ಅರುಂಧತಿಗೆ ಶಾಕ್ ಆಗಿತ್ತು. ತನ್ನೆಲ್ಲ ಪ್ಲ್ಯಾನ್ ಉಲ್ಟಾ ಆಯ್ತಲ್ಲ ಅಂತ ಗಾಬರಿ ಬಿದ್ದಿದ್ದರು.

ಈಗ ಕರ್ಣನ ಮುಂದೆ ಪ್ರಸನ್ನನ ಮೋಸದಾಟ ಬಯಲಾಗುತ್ತಾ? ಎನ್ನುವ ಪ್ರಶ್ನೆ ಎದ್ದಿದೆ. ಪ್ರೋಮೊ ನೋಡಿ ನೆಟ್ಟಿಗರು ಕಮೆಂಟ್‌ ಮೂಲಕ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. "ಕರ್ಣ, ಸಾಹಿತ್ಯಾ ಇಬ್ಬರೂ ಸೇರಿ ಪತ್ತೆ ಹಚ್ಚಿ. ಸ್ವಲ್ಪನಾದರು ಗೊತ್ತಾಗುತ್ತೆ ಅಲ್ವಾ" ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು "ಗೊತ್ತಾಗುತ್ತೆ ಕರ್ಣಗೆ, ಆದ್ರೆ ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು. ಕರ್ಣ ಪತ್ತೆ ಹಚ್ಚು" ಎಂದು ಹೇಳಿದ್ದಾರೆ. "ಅರುಂಧತಿ ಸಾಹಿತ್ಯಾಳ ಬಾಡಿಗಾರ್ಡ್ 24 ಘಂಟೆ ಸಾಹಿತ್ಯಾ ಹಿಂದೆ ಇರುತ್ತಾಳೆ" ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಕಲರ್ಸ್ ಕನ್ನಡದಲ್ಲಿ ಈ ಧಾರಾವಾಹಿ ವಾರದ ಏಳೂ ದಿನವೂ ಪ್ರತಿ ಸಂಜೆ 6ಕ್ಕೆ ಪ್ರಸಾರಗುತ್ತಿದೆ.

More from Filmibeat

English summary
Will Karna and Sahithya identify Black Rose this week in Karimani Kannada serial?
Read more about: serial tv show
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X