'ಮಜಾಭಾರತ'ಕ್ಕೆ ಎಂಟ್ರಿ ಕೊಟ್ಟಿದ್ದ ಜೂನಿಯರ್ ಡಿಬಾಸ್ ಎಲ್ಲಿ? ಮತ್ತೆ ನೀವೆಲ್ಲಿ ನೋಡಬಹುದು?
ಯಾವುದೇ ಚಿತ್ರರಂಗದ ಸೂಪರ್‌ಸ್ಟಾರ್‌ಗಳಿಗೆ ಒಬ್ಬ ಡ್ಯೂಪ್ಲಿಕೇಟ್ ಇದೇ ಇರುತ್ತಾರೆ. ಅದರಲ್ಲೂ ಕನ್ನಡದ ದಿಗ್ಗಜರನ್ನೂ ಹೋಲುವ ಜೂನಿಯರ್‌ಗಳು ಇದ್ದರು. ಥೇಟ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನೇ ಹೋಲುವ ಒಬ್ಬ ಜೂನಿಯರ್ ದರ್ಶನ್ ಕೂಡ ಇದ್ದಾರೆ. ಕನ್ನಡ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟು ಕೆಲವು ವರ್ಷಗಳ ಹಿಂದೆ ಸದ್ದು ಮಾಡಿದ್ದರು.
ಕಲರ್ಸ್ ಸೂಪರ್‌ನಲ್ಲಿ ಪ್ರಸಾರ ಆಗುತ್ತಿದ್ದ 'ಮಜಾಭಾರತ' ರಿಯಾಲಿಟಿ ಶೋನಲ್ಲಿ ಮೊದಲ ಬಾರಿಗೆ ಎಂಟ್ರಿ ಕೊಟ್ಟದಾಗ ಕರ್ನಾಟಕದ ಜನರಿಗೆ ತಲೆ ಕೆಟ್ಟು ಹೋಗಿತ್ತು. ಹತ್ತಿಪ್ಪತ್ತು ವರ್ಷಗಳ ಹಿಂದೆ ದರ್ಶನ್ ಹೇಗಿದ್ದರೋ ಅದೇ ಲುಕ್‌ನಲ್ಲಿ ಜೂನಿಯರ್ ದರ್ಶನ್ ಕಾಣಿಸಿಕೊಂಡಿದ್ದರು. ಅಲ್ಲಿಂದ ಈ ಜೂನಿಯರ್ ಡಿ ಬಾಸ್ ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು.

'ಮಜಾಭಾರತ'ದಲ್ಲಿ ಅದೇ ಮೊದಲ ಬಾರಿಗೆ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟಿದ್ದ ಜೂನಿಯರ್ ದರ್ಶನ್ ನೋಡಿ ಸ್ವತ: ರಚಿತಾ ರಾಮ್ ಶಾಕ್ ಆಗಿದ್ದರು. ವೇದಿಕೆ ಮೇಲೆ ಥೇಟ್ ದರ್ಶನ್‌ರಂತೆಯೇ ಹೆಜ್ಜೆ ಹಾಕುತ್ತಾ, ಅದೇ ಮ್ಯಾನರಿಸಂನಲ್ಲಿ ಎಂಟ್ರಿ ಕೊಟ್ಟಿದ್ದ ಈ ಜೂನಿಯರ್ ಡಿ ಬಾಸ್ ಒಂದು ಸಿನಿಮಾ ಮಾಡುವಷ್ಟು ಫೇಮಸ್ ಆಗಿದ್ದರು. ಅವರೇ ಜೂನಿಯರ್ ಡಿ ಬಾಸ್ ಅವಿನಾಶ್.
'ಮಜಾ ಭಾರತ' ಕಾಮಿಡಿ ಶೋನಲ್ಲಿ ಜೂನಿಯರ್ ದರ್ಶನ್ ಅಂತಲೇ ಫೇಮಸ್ ಆಗಿದ್ದವರು. ಚಿಕ್ಕಮಗಳೂರು ಮೂಲದವರಾದ ಅವಿನಾಶ್ ಮೊದಲು ಆಟೋ ಚಾಲಕರಾಗಿ ಕೆಲಸ ಮಾಡಿದ್ದರು. ಇವರ ಸ್ನೇಹಿತರೆಲ್ಲರೂ ದರ್ಶನ ಕಾಣುತ್ತಿದ್ದಂತೆ ಇದ್ದೀಯಾ ಅಂತ ಹೇಳುತ್ತಿದ್ದರು. ಇದೇ ಸಮಯದಲ್ಲಿ ಟಿಕ್‌ಟಾಕ್, ರೀಲ್ಸ್ ಮಾಡುತ್ತಿದ್ದರು. ಅದನ್ನು ನೋಡಿ ಮಜಾ ಭಾರತ ರಿಯಾಲಿಟಿ ಶೋಗೆ ಆಹ್ವಾನ ನೀಡಲಾಗಿತ್ತು.
'ಮಜಾಭಾರತ'ಕ್ಕೆ ಎಂಟ್ರಿ ಕೊಡುತ್ತಿದ್ದಂತೆ ಮೊದಲು ಶಾಕ್ ಆಗಿದ್ದು ಇದೇ ಡಿಂಪಲ್ ಕ್ವೀನ್ ರಚಿತಾ ರಾಮ್. ಜೂನಿಯರ್ ದರ್ಶನ್‌ರನ್ನು ನೋಡಿ ಹೌಹಾರಿದ್ದರು. ಅದೇ ಲುಕ್, ಅದೇ ಮ್ಯಾನರಿಸಂ, ಅದೇ ನಡಿಗೆಯನ್ನು ಕಂಡು ಶಾಕ್ ಆಗಿದ್ದರು. ಅಷ್ಟೇ ಅಲ್ಲದೆ, ಅವಿನಾಶ್ ಕಣ್ಣುಗಳನ್ನು ನೋಡುವುದಕ್ಕೆ ಆಗುವುದಿಲ್ಲ ಎಂದು ಬೇರೊಂದು ಕಾರ್ಯಕ್ರಮದಲ್ಲಿ ಹೇಳಿದ್ದರು. ದರ್ಶನ್ ಬಿಟ್ಟರೆ ಅವರಂತೆ ಕಾಣುವ ಮತ್ತೊಬ್ಬ ವ್ಯಕ್ತಿ ಅವಿನಾಶ್ (ಜೂನಿಯರ್ ದರ್ಶನ್) ಅಂತ ಹೇಳಿದ್ದರು. ಆ ಮಟ್ಟಿಗೆ ಜೂನಿಯರ್ ಡಿ ಬಾಸ್ ಫೇಮಸ್ ಆಗಿದ್ದರು.

ಕನ್ನಡದ ಮನರಂಜನಾ ವಾಹಿನಿಗಳಲ್ಲಿ ಜೂನಿಯರ್ ದರ್ಶನ್ ಎಂಟ್ರಿನೇ ಕೊಡುತ್ತಾ ಬ್ಯುಸಿಯಾಗಿದ್ದರು. ಇದೇ ವೇಳೆ ಜನಪ್ರಿಯತೆ ಹೆಚ್ಚಾಗುತ್ತಿದ್ದಂತೆ ಅವರಿಗೆ ಸಿನಿಮಾಗಳಲ್ಲಿ ನಟಿಸುವ ಅವಕಾಶ ಕೂಡ ಸಿಕ್ಕಿತ್ತು. 'ರಣವ್ಯೂಹ' ಹಾಗೂ 'ದಂಡ ತೀರ್ಥ' ಅನ್ನುವ ಸಿನಿಮಾಗಳು ಅನೌನ್ಸ್ ಆಗಿದ್ದವು. ಆದರೆ, ಈ ಸಿನಿಮಾಗಳ ಗತಿ ಏನಾಯ್ತು? ಅನ್ನೋದು ಕೂಡ ಗೊತ್ತಾಗಿಲ್ಲ. ದರ್ಶನ್ 'ಕ್ರಾಂತಿ' ಸೆಟ್ಟೇರಿದ ಸಮಯದಿಂದ ಜೂನಿಯರ್ ದರ್ಶನ್ ಕೂಡ ಅಪರೂಪಕ್ಕೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದರು ಅಷ್ಟೇ.
ಇಷ್ಟೆಲ್ಲ ಸದ್ದು ಮಾಡಿದ್ದ ಜೂನಿಯರ್ ದರ್ಶನ್ ಎಲ್ಲಿಗೆ ಹೋದರು? ಯಾಕೆ ಸೈಲೆಂಟ್ ಆಗಿದ್ದಾರೆ? ಯಾವುದೇ ರಿಯಾಲಿಟಿ ಶೋಗಳಲ್ಲಿ ಯಾಕೆ ಕಾಣಿಸಿಕೊಳ್ಳುತ್ತಿಲ್ಲ? ಮತ್ತೆ ಈಗ ಯಾಕೆ ಸುದ್ದಿಯಲ್ಲಿ ಇದ್ದಾರೆ? ಅನ್ನೋ ಪ್ರಶ್ನೆಗೆ ಉತ್ತರ ಇಲ್ಲಿದೆ. ಬಿಗ್‌ಬಾಸ್ ಕನ್ನಡ ಸೀಸನ್ 11 ಶುರುವಾಗುತ್ತಿದೆ. ಈ ಬೆನ್ನಲ್ಲೇ ಹಲವು ಹೆಸರು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಈ ಬೆನ್ನಲ್ಲೇ ಜೂನಿಯರ್ ದರ್ಶನ್ ಹೆಸರು ಕೂಡ ಓಡಾಡುತ್ತಿದೆ. ಅಸಲಿಗೆ ಜೂನಿಯರ್ ದರ್ಶನ್‌ರನ್ನು ಮುಂದೆ ಸಿನಿಮಾದಲ್ಲಿ ನೋಡುತ್ತೇವೋ ಅಥವಾ ಬಿಗ್‌ಬಾಸ್ ರಿಯಾಲಿಟಿ ಶೋನಲ್ಲಿ ನೋಡುತ್ತೇವೋ ಅನ್ನೋ ದರ್ಶನ್ ಅಭಿಮಾನಿಗಳಿಗೆ ಕುತೂಹಲ.


Click it and Unblock the Notifications











