Exclusive: ವೀಕ್ಷಕರೇ ಇನ್ನು ನಾಲ್ಕೈದು ವರ್ಷ 'ವೀಕೆಂಡ್ ವಿತ್ ರಮೇಶ್' ಮರೆತುಬಿಡಿ.. ಜನಪ್ರಿಯ ಶೋಗೆ ಬ್ರೇಕ್ ಯಾಕೆ?

ಕಿರುತೆರೆಯ ಜನಪ್ರಿಯ ಶೋ 'ವೀಕೆಂಡ್ ವಿತ್ ರಮೇಶ್' ಸೀಸನ್ 5 ಇತ್ತೀಚೆಗಷ್ಟೇ ಮುಗಿದಿದೆ. 100 ಮಂದಿ ಸಾಧಕರನ್ನು ಕರೆತಂದು ಅವರ ಸಾಧನೆಯ ಪರಿಚಯ ಮಾಡಿಕೊಟ್ಟಿದೆ. ವೀಕೆಂಡ್‌ನಲ್ಲಿ ಕನ್ನಡಿಗರ ಸಾಧನೆಯನ್ನು ಕಿರುತೆರೆ ವೀಕ್ಷಕರು ಕಣ್ತುಂಬಿಕೊಂಡಿದ್ದಾರೆ.

ರಮೇಶ್ ಅರವಿಂದ್ ನಿರೂಪಣೆ, ಸಾಧಕರ ಸಾಧನೆ ಎಲ್ಲವೂ ಸೇರಿ ವೀಕೆಂಡ್‌ನಲ್ಲಿ ವೀಕ್ಷಕರಿಗೆ ವಿಶಿಷ್ಠವಾದ ಮನರಂಜನೆ ಸಿಗುತ್ತಿತ್ತು. ಈ ಬಾರಿ ಮೋಹಕತಾರೆ ರಮ್ಯಾರಿಂದ ಶೋ ಆರಂಭ ಮಾಡಲಾಗಿತ್ತು. ಪ್ರತಿವಾರ ಸಿನಿಮಾ, ಸಾಹಿತ್ಯ, ವೈದ್ಯಕೀಯ ಶಿಕ್ಷಣ ಸೇರಿದಂತೆ ಹಲವು ಕ್ಷೇತ್ರಗಳಿಂದ ಸಾಧಕರನ್ನು ಕರೆ ತರಲಾಗಿತ್ತು.

With D. K. Shivakumar Weekend with Ramesh season 5 ended

ರಮ್ಯಾರಿಂದ ಶುರುವಾಗಿದ್ದ ಶೋ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಮೂಲಕ ಕೊನೆ ಮಾಡಲಾಗಿತ್ತು. ಹೀಗಾಗಿ ವೀಕ್ಷಕರು 'ವೀಕೆಂಡ್‌ ವಿತ್ ರಮೇಶ್' ಸೀಸನ್ 6 ಯಾವಾಗ ಅನ್ನೋ ನಿರೀಕ್ಷೆಯಲ್ಲಿದ್ದಾರೆ. ಆದರೆ, ಅವರಿಗೊಂದು ಬೇಸರದ ಸಂಗತಿಯಿದೆ. ಸದ್ಯಕ್ಕೆ 'ವೀಕೆಂಡ್ ವಿತ್ ರಮೇಶ್' ಬರೋದಿಲ್ಲ. ಅದ್ಯಾಕೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

ನಾಲ್ಕೈದು ವರ್ಷ 'ವೀಕೆಂಡ್ ವಿತ್ ರಮೇಶ್' ಇಲ್ಲ

'ವೀಕೆಂಡ್ ವಿತ್ ರಮೇಶ್' ಇಡೀ ಮನೆ ಮಂದಿಯೇ ಕೂತು ನೋಡುವ ಕಾರ್ಯಕ್ರಮ. ಇದೂವರೆಗೂ ಸುಮಾರು 5 ಸೀಸನ್‌ಗಳು ಬಂದಿದ್ದು, ನೂರು ಮಂದಿ ಸಾಧಕರು ತಮ್ಮ ಸಾಧನೆಯನ್ನು ಅನಾವರಣ ಮಾಡಿದ್ದಾರೆ. ಆ ಎಲ್ಲಾ ಎಪಿಸೋಡ್‌ಗಳೂ ವೀಕ್ಷಕರಿಗೆ ಇಷ್ಟ ಆಗಿದೆ. ಹೀಗಿದ್ದೂ, ಇನ್ನೂ ನಾಲ್ಕೈದು ವರ್ಷ 'ವೀಕೆಂಡ್ ವಿತ್ ರಮೇಶ್' ಬೇಡ ಅನ್ನೋ ನಿರ್ಧಾರಕ್ಕೆ ಜೀ ಕನ್ನಡ ಬಂದಿದೆ.

With D. K. Shivakumar Weekend with Ramesh season 5 ended

ಹೌದು, ಜನಪ್ರಿಯ ಕಾರ್ಯಕ್ರಮ 'ವೀಕೆಂಡ್ ವಿತ್ ರಮೇಶ್' ಇನ್ನು ನಾಲ್ಕೈದು ವರ್ಷ ಬರೋದು ಡೌಟು ಎನ್ನುತ್ತಿವೆ ಜೀ ಕನ್ನಡದ ಮೂಲಗಳು. ಸೀಸನ್ 5 ಮುಗಿಸಿ ನಿರಾಳವಾಗಿರುವ ಜೀ ಕನ್ನಡ ಬೇರೆ ಬೇರೆ ಕಾರ್ಯಕ್ರಮಗಳ ಕಡೆಗೆ ಗಮನ ಹರಿಸಲಿದೆ. ಹೊಸ ಹೊಸ ರಿಯಾಲಿಟಿ ಶೋಗಳನ್ನು ಪರಿಚಯ ಮಾಡಲು ನಿರ್ಧರಿಸಿದೆ ಎನ್ನಲಾಗಿದೆ.

ಇಷ್ಟೊಂದು ಗ್ಯಾಪ್ ಯಾಕೆ?

'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ಪ್ರತ್ಯೇಕವಾದ ಅಭಿಮಾನಿಗಳ ವರ್ಗವಿದೆ. ಮಕ್ಕಳು, ದೊಡ್ಡವರು, ಚಿಕ್ಕವರು, ಸಾಮಾನ್ಯರು, ಬುದ್ದಿಜೀವಿಗಳು ಎಲ್ಲರೂ ತಕರಾರು ಇಲ್ಲದೆ ನೋಡುವ ಏಕೈಕ ಕಾರ್ಯಕ್ರಮವಿದೆ. ಇಷ್ಟು ಜನಪ್ರಿಯತೆ ಪಡೆದ ಬಳಿಕವೂ ನಾಲ್ಕೈದು ವರ್ಷ ಗ್ಯಾಪ್ ಕೊಡುವುದು ಯಾಕೆ? ಅನ್ನೋ ಪ್ರಶ್ನೆ ಸಹಜ.

ಮೂಲಗಳ ಪ್ರಕಾರ, 'ವೀಕೆಂಡ್ ವಿತ್ ರಮೇಶ್' ಸೀಸನ್ 5ಗೆ ಸಾಧಕರು ಸಿಕ್ಕಿರಲಿಲ್ಲ. ಕಾರ್ಯಕ್ರಮಕ್ಕೆ ಅತಿಥಿಗಳನ್ನು ಹುಡುಕುವುದೇ ದೊಡ್ಡ ತಲೆನೋವಾಗಿತ್ತು. ಅಲ್ಲದೆ, ಸೀಸನ್‌ 5ಗೆ ಬರಬೇಕಿದ್ದ ಕೆಲ ಸಾಧಕರೇ ಬರಲಿಲ್ಲ. ಹೀಗಾಗಿ 100ನೇ ಸಂಚಿಕೆ ಮೂಲವೇ ಈ ಸೀಸನ್‌ ಅನ್ನು ಮುಕ್ತಾಯ ಮಾಡಲಾಗಿದೆ. ಇದೊಂದೇ ಕಾರಣಕ್ಕೆ ನಾಲ್ಕೈದು ವರ್ಷ ಬ್ರೇಕ್ ಕೊಟ್ಟು ಮತ್ತೊಂದಿಷ್ಟು ರಿಸರ್ಚ್ ಮಾಡಿ ಹೊಸ ರೂಪದೊಂದಿಗೆ ಮರಳುವ ಸಾಧ್ಯತೆಯಿದೆ.

ಹೊಸ ಕಾರ್ಯಕ್ರಮಗಳ ಅನಾವರಣ

'ವೀಕೆಂಡ್ ವಿತ್ ರಮೇಶ್' ಬಳಿಕ ಜೀ ಕನ್ನಡ ಹೊಸ ಹೊಸ ಕಾರ್ಯಕ್ರಮಗಳನ್ನು ಲಾಂಚ್ ಮಾಡುತ್ತಿದೆ. ಈಗಾಗಲೇ 'ಭರ್ಜರಿ ಬ್ಯಾಚುಲರ್' ರಿಯಾಲಿಟಿ ಶೋವನ್ನು ಪರಿಚಯ ಮಾಡುತ್ತಿದೆ. ಇದು ಹೊಚ್ಚ ಹೊಸ ರಿಯಾಲಿಟಿ ಶೋ.

ಇದರೊಂದಿಗೆ ಎವರ್‌ಗ್ರೀನ್ 'ಸರಿಗಮಪ', 'ಲಿಟಲ್ ಚಾಂಪ್ಸ್', 'ಕಾಮಿಡಿ ಕಿಲಾಡಿಗಳು', 'ಡ್ರಾಮ ಜೂನಿಯರ್ಸ್' ಸೇರಿದಂತೆ ಹಲವು ಕಾರ್ಯಕ್ರಮಗಳು ರೆಗ್ಯೂಲರ್‌ ಆಗಿರುತ್ತೆ. ಇದರೊಂದಿಗೆ ಹೊಚ್ಚ ಹೊಸ ಕಾರ್ಯಕ್ರಮಗಳನ್ನು ಇಂಟ್ರುಡ್ಯೂಸ್ ಮಾಡುವ ಸಾಧ್ಯತೆಗಳಿವೆ. ಆದರೆ, ನಾಲ್ಕೈದು ವರ್ಷ 'ವೀಕೆಂಡ್ ವಿತ್ ರಮೇಶ್' ಸೀಸನ್ 6 ಬರೋದು ಮಾತ್ರ ಅನುಮಾನ.

More from Filmibeat

English summary
With D. K. Shivakumar Weekend with Ramesh season 5 ended. Here are the details about season 6, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X