ಟಿವಿಯಲ್ಲಿ 'ಕೆಜಿಎಫ್ 2' ಪ್ರಸಾರ: 80 ಅಡಿ ಬ್ಯಾನರ್ ಬಿಟ್ಟು ಭರ್ಜರಿ ಪ್ರಚಾರ!

'ಕೆಜಿಎಫ್ ಚಾಪ್ಟರ್ 2' ರಿಲೀಸ್ ಆಗಿದ್ದೂ ಆಗಿದೆ. ಬಾಕ್ಸಾಫೀಸ್‌ನಲ್ಲಿ ಲೂಟಿ ಮಾಡಿದ್ದೂ ಆಗಿದೆ. ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ವಿಶ್ವ ಮಟ್ಟದಲ್ಲಿ ಸದ್ದು ಮಾಡಿದ್ದೂ ಆಗಿದೆ. ಈಗ ಕಿರುತೆರೆಯಲ್ಲಿ ಸೌಂಡ್ ಮಾಡುವುದಕ್ಕೆ ಸಜ್ಜಾಗಿದೆ.

ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ 'ಕೆಜಿಎಫ್ 2' ರಿಲೀಸ್ ಆದಂತೆ ಕಿರುತೆರೆಯಲ್ಲೂ ಬಿಡುಗಡೆಯಾಗುವುದಕ್ಕೆ ಸಜ್ಜಾಗಿ ನಿಂತಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಕೆಜಿಎಫ್ 2 ಏಕಕಾಲಕ್ಕೆ ವರ್ಲ್ಡ್ ಪ್ರೀಮಿಯರ್ ಆಗಿದೆ. ಈ ಮೆಗಾ ಈವೆಂಟ್‌ಗಾಗಿ ಜೀ ಟಿವಿ ಈಗಾಗಲೇ ಭರ್ಜರಿ ಪ್ರಚಾರ ಆರಂಭಿಸಿದೆ.

'ಕೆಜಿಎಫ್ 2' ಸಿನಿಮಾವನ್ನು ಟಿವಿಯಲ್ಲಿ ಪ್ರಸಾರ ಮಾಡುವುದಕ್ಕೆ ಜೀ ತೆಲುಗು ಭರ್ಜರಿ ಪ್ರಚಾರ ಆರಂಭಿಸಿದೆ. ಇನ್ನು ಥಿಯೇಟರ್‌ನಲ್ಲಿ 'ಕೆಜಿಎಫ್ 2' ವೈಲೆನ್ಸ್‌ಗೆ ದಾಖಲೆಗಳೆಲ್ಲಾ ಧೂಳೀಪಟ ಆಗಿದ್ದವು. ಈಗ ಟಿವಿಯಲ್ಲಿ ಏನೇನು ದಾಖಲೆಗಳನ್ನು ಬರೆಯುತ್ತೋ ನೋಡಬೇಕಿದೆ.

ಟಿವಿಯಲ್ಲಿ 'ಕೆಜಿಎಫ್ 2'

ಟಿವಿಯಲ್ಲಿ 'ಕೆಜಿಎಫ್ 2'

'ಕೆಜಿಎಫ್ 2' ಸಿನಿಮಾದ ಸ್ಯಾಟಲೈಟ್ ರೈಟ್ಸ್ ಅನ್ನು ಜೀ ಸಂಸ್ಥೆ ಪಡೆದುಕೊಂಡಿತ್ತು. ಹೀಗಾಗಿ ಒಪ್ಪಂದದಂತೆಯೇ ದಕ್ಷಿಣದ ನಾಲ್ಕು ಭಾಷೆಯಲ್ಲೂ ಪ್ರಸಾರ ಮಾಡುವ ಹಕ್ಕು ಜೀ ಸಂಸ್ಥೆ ಸಿಕ್ಕಿದೆ. ಹೀಗಾಗಿ ಅತೀ ಶೀಘ್ರದಲ್ಲಿಯೇ 'ಕೆಜಿಎಫ್ 2' ಸಿನಿಮಾವನ್ನು ನಾಲ್ಕು ಭಾಷೆಗಳಲ್ಲಿ ಪ್ರಸಾರ ಮಾಡಲಿದೆ. "ಪ್ರಪಂಚದಲ್ಲಿರುವ ಬಂಗಾರವನ್ನೆಲ್ಲ ಅಮ್ಮನಿಗೆ ತಂದುಕೊಡೋ ಧೀರ ಸುಲ್ತಾನ ನಿಮ್ಮನೆ ಪರದೆಯಲ್ಲೂ ಬರ್ತಿದ್ದಾನೆ. 'ಕೆಜಿಎಫ್ ಚಾಪ್ಟರ್ 2' ಸಿನಿಮಾ ಅತೀ ಶೀಘ್ರದಲ್ಲಿ." ಎಂದು ಜೀ ಕನ್ನಡ ವಾಹಿನಿ ತನ್ನ ಅಧಿಕೃತ ಇನ್ಸ್ಟಾಗ್ರಾಂ ಪೇಜ್‌ನಲ್ಲಿ ಶೇರ್ ಮಾಡಿಕೊಂಡಿತ್ತು. ಈಗ ತೆಲುಗು ಹಾಗೂ ತಮಿಳಿನ ಜೀನಲ್ಲೂ ಈಗಾಗಲೇ ಪ್ರಸಾರ ಮಾಡಲು ಸಜ್ಜಾಗಿದೆ.

'ಕೆಜಿಎಫ್ 2' ಭರ್ಜರಿ ಪ್ರಸಾರ ಸಿದ್ಧತೆ

ತೆಲುಗು ಜೀ ನಲ್ಲಿಯೂ 'ಕೆಜಿಎಫ್ ಚಾಪ್ಟರ್ 2' ಪ್ರಸಾರಕ್ಕೆ ಭರ್ಜರಿ ಸಿದ್ಧತೆಗಳನ್ನು ಮಾಡಿಕೊಂಡಿದೆ. ಸುಮಾರು 80 ಅಡಿ ಎತ್ತರ ಬೃಹತ್ ಬ್ಯಾನರ್ ಅನ್ನು ಅನಾವರಣ ಮಾಡಲಾಗಿದೆ. ಇದೇ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕೆಜಿಎಫ್ 2 ಕನ್ನಡದಲ್ಲಷ್ಟೇ ಅಲ್ಲ. ತೆಲುಗಿನಲ್ಲೂ ಭರ್ಜರಿ ಕ್ರೇಜ್ ಇದೆ ಅನ್ನೋದು ಈ ವಿಡಿಯೋ ರಿವೀಲ್ ಮಾಡಿದೆ. ಹೀಗಾಗಿ ಟಿವಿಯಲ್ಲಿ ಪ್ರಸಾರ ಆದರೆ, ಏನೇನು ದಾಖಲೆ ಬರೆಯಬಹುದೆಂಬ ಲೆಕ್ಕಾಚಾರ ಶುರುವಾಗಿದೆ.

ಓಟಿಟಿಯಲ್ಲೂ ರಿಲೀಸ್ ಆಗಿದೆ 'ಕೆಜಿಎಫ್ 2'

ಓಟಿಟಿಯಲ್ಲೂ ರಿಲೀಸ್ ಆಗಿದೆ 'ಕೆಜಿಎಫ್ 2'

ರಾಕಿ ಬಾಯ್‌ಯನ್ನು ಭಾರತದ ರಾಕಿಂಗ್ ಸ್ಟಾರ್ ಮಾಡಿದ 'ಕೆಜಿಎಫ್ ಚಾಪ್ಟರ್ 2' ಥಿಯೇಟರ್‌ನಲ್ಲಿ 50 ದಿನ ಪೂರೈಸಿದ ಬಳಿಕ ಓಟಿಟಿಯಲ್ಲೂ ರಿಲೀಸ್ ಆಗಿದೆ. ಅಲ್ಲೂ ಸಿನಿಮಾ ಉತ್ತಮ ಪ್ರಶಂಸೆ ವ್ಯಕ್ತವಾಗಿತ್ತು. ಅಮೆಜಾನ್ ಪ್ರೈಂನಲ್ಲಿ 'ಕೆಜಿಎಫ್ 2' ರಿಲೀಸ್ ಆಗಿದ್ದು, ಈಗ ಟಿವಿಯಲ್ಲಿ ಬಿಡುಗಡೆ ಸಜ್ಜಾಗಿದೆ. ಆದರೆ, ಜೀ ಸಂಸ್ಥೆ 'ಕೆಜಿಎಫ್ 2' ಸಿನಿಮಾವನ್ನು ಯಾವಾಗ ಟಿವಿಯಲ್ಲಿ ಪ್ರಸಾರ ಆಗುತ್ತೆ ಅನ್ನೋ ಡೆಟ್ ಅನ್ನು ಇನ್ನೂ ರಿಲೀಸ್ ಮಾಡಿಲ್ಲ.

ಕೆಜಿಎಫ್ 2 ಬಾಕ್ಸಾಫೀಸ್‌ನಲ್ಲಿ ಚಿಂದಿ

ಕೆಜಿಎಫ್ 2 ಬಾಕ್ಸಾಫೀಸ್‌ನಲ್ಲಿ ಚಿಂದಿ

'ಕೆಜಿಎಫ್ 2' ವಿಶ್ವದಾದ್ಯಂತ ಸುಮಾರು 4 ಸಾವಿರಕ್ಕೂ ಅಧಿಕ ಥಿಯೇಟರ್‌ಗಳಲ್ಲಿ ರಿಲೀಸ್ ಆಗಿತ್ತು. ಮೊದಲ ದಿನವೇ ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆದಿತ್ತು. ಸಿನಿಮಾ ಬಿಡುಗಡೆಯಾದ ಕೇವಲ ನಾಲ್ಕು ವಾರಗಳಲ್ಲಿ ಸಿನಿಮಾ ದಾಖಲೆ ಗಳಿಕೆ ಮಾಡಿತ್ತು. ಇದೂವರೆಗೂ 'ಕೆಜಿಎಫ್ 2' ಸುಮಾರು 1250 ಕೋಟಿ ರೂ. ಕಲೆ ಹಾಕಿದೆ ಎನ್ನಲಾಗಿದೆ. ಅಲ್ಲದೆ ಇದು ಅತೀ ಹೆಚ್ಚು ಗಳಿಕೆ ಕಂಡ ಭಾರತದ ಮೂರನೇ ಸಿನಿಮಾ ಎಂಬ ಹೆಗ್ಗಳಿಕೆ ಕಂಡಿದೆ.

More from Filmibeat

English summary
Yash Starrer KGF Chapter 2 80 feet Banner For Zee Telugu Worldwide Premiere Launch, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X