ಮನರಂಜನೆಯ ಹೊಸ ಯುಗ ಜೀ಼ 'ವಾಟ್ಸ್ ನೆಕ್ಸ್ಟ್' ಆರಂಭ; ಹೊಸತೊಂದು ಮನರಂಜನೆ, ಹೊಸ ಆವಿಷ್ಕಾರ

ಕಿರುತೆರೆ ಲೋಕದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿರುವ ಜೀ಼ ತನ್ನ ಹೊಸ ಪ್ರಯತ್ನಕ್ಕೆ ಮುಂದಾಗಿದೆ. ತನ್ನ 'ನಿಮ್ಮ ನಂಬಿಕೆಯ Z' ಎನ್ನುವ ಟ್ಯಾಗ್‌ಲೈನ್ ಮೂಲಕ ವೀಕ್ಷಕರಿಗೆ ಇನ್ನಷ್ಟು ಹತ್ತಿರವಾಗುವುದಕ್ಕೆ ಹೊರಟಿದೆ. ಜೀ ಸಂಸ್ಥೆ 208 ಮಿಲಿಯನ್ ಮನೆಗಳನ್ನು 854 ಮಿಲಿಯನ್ ವೀಕ್ಷಕರ ಮೂಲಕ ತಲುಪುತ್ತಿದ್ದು, ಜೀ಼, ಈಗ 'Z What's Next'ಎಂಬ ಹೊಸ ಪ್ರಯತ್ನಕ್ಕೆ ಮುಂದಾಗಿದೆ.

'ಜೀ ವಾಟ್‌ ನೆಕ್ಸ್ಟ್‌' ಎಂಬುದು ಭಾರತೀಯ ಮನರಂಜನಾ ಕ್ಷೇತ್ರದಲ್ಲಿಯೇ ವಿಶಿಷ್ಟದ ಕಲ್ಪನೆ ಎನ್ನಲಾಗಿದೆ. ಜೀ಼ ತನ್ನ ಪಾರ್ಟ್ನರ್‌ಗಳೊಂದಿಗೆ ಸೇರಿ ಮನರಂಜನೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವುದಕ್ಕೆ ಹೊರಟಿದೆ. ಈ ಪ್ಲಾಟ್‌ಫಾರ್ಮ್ ಮೂಲಕ, ಜೀ಼ ತನ್ನ ವಿಶಿಷ್ಠವಾದ ಕಂಟೆಂಟ್‌ಗಳನ್ನು ಎಲ್ಲಾ ಡಿವೈಸ್‌ಗಳು ಹಾಗೂ ಪ್ಲಾಟ್‌ಫಾರ್ಮ್‌ಗಳಲ್ಲಿ ನಿರಾಯಾಸವಾಗಿ ತಲುಪಿಸುವುದಕ್ಕೆ ಮುಂದಾಗಿದೆ.

Zee Introduces Z Whats Next and Two New Hybrid Channels

ಜೀ ಸಂಸ್ಥೆಯ ಈ ಪರಿಕಲ್ಪನೆ ಮಾರ್ಕೆಟಿಂಗ್‌ ಕ್ಷೇತ್ರಕ್ಕೆ ಒಂದೊಳ್ಳೆ ಅವಕಾಶವಾಗಿದೆ. ಇದು 30 ಸೆಕೆಂಡ್‌ಗಳ ಜಾಹೀರಾತನ್ನು ಪಾತ್ರಗಳಾಗಿ ರೂಪಾಂತರಗೊಳ್ಳುತ್ತವೆ. ಹಾಗೇ ಜೀ ಪರಿವರ್ತನೆಯನ್ನು ವಿಶಿಷ್ಠವಾಗಿ ವಿನ್ಯಾಸಗೊಳಿಸುತ್ತೆ ಎಂಬ ನಂಬಿಕೆಯಲ್ಲಿದೆ. ಈ ಮೂಲಕ ತನ್ನ ಪಾರ್ಟ್ನರ್‌ಗಳ ಜೊತೆಗೂಡಿ ಭಾರತೀಯ ಮನರಂಜನೆಯ ಕ್ಷೇತ್ರದಲ್ಲಿ ಹೊಸ ಹೆಜ್ಜೆಯನ್ನು ಇಡುವುದಕ್ಕೆ ಮುಂದಾಗಿದೆ.

ಜೀ ಸಂಸ್ಥೆ ತನ್ನಲ್ಲಿ ಪ್ರಸಾರ ಆಗುವ ಕಂಟೆಂಟ್‌ ಕಡೆಗೆ ಹೆಚ್ಚು ಗಮನವನ್ನು ನೀಡುತ್ತಿದೆ. ಇದು ಇಂದಿನ ಡಿಜಿಟಲ್ ಯುಗಕ್ಕೆ ಅನುಕೂಲವಾಗುವಂತೆ ಪ್ರಡ್ಯೂಸ್ ಮಾಡುತ್ತಿದೆ. ಅಂದರೆ, ತನ್ನ ಕಂಟೆಂಟ್ ಟಿವಿ, ಓಟಿಟಿ ಹಾಗೂ ಸೋಶಿಯಲ್ ಮೀಡಿಯಾದ ಎಲ್ಲಾ ಪ್ಲಾಟ್‌ಫಾರ್ಮ್‌ಗಳಿಗೂ ಸೂಟ್ ಆಗುವಂತೆ ಮಾಡುತ್ತಿದೆ. ಈ ಪ್ರಯತ್ನಕ್ಕೆ ಮತ್ತೆರಡು ಚಾನೆಲ್‌ಗಳು ಸೇರ್ಪಡೆ ಮಾಡಿದೆ. 'ಜೀ ವಾಟ್‌ ನೆಕ್ಸ್ಟ್‌' ಮೂಲಕ ಮತ್ತೆ ಎರಡು ಚಾನೆಲ್‌ಗಳು ಆರಂಭ ಆಗುತ್ತಿವೆ. ಅದುವೇ 'ಜೀ ಪವರ್' ಹಾಗೂ 'ಜೀ ಸೋನಾರ್ ಬಾಂಗ್ಲಾ'.

ಈ ಎರಡು ಹೈಬ್ರಿಡ್ ಚಾನೆಲ್‌ಗಳಲ್ಲಿ ಜೀ ಪವರ್‌ ಕನ್ನಡ ಭಾಷೆಯ ಚಾನೆಲ್‌. ಈ ಹಿಂದೆ ಪ್ರಸಾರ ಆಗುತ್ತಿದ್ದ ಜೀ ಪಿಕ್ಚರ್‌ ಬದಲು ಜೀ ಪವರ್ ಅನ್ನು ಆರಂಭ ಮಾಡುತ್ತಿದೆ. ಈ ಮೂಲಕ ಕರ್ನಾಟಕದ ಯುವ ಪೀಳಿಗೆಯನ್ನು ಸೆಳೆಯುವುದಕ್ಕೆ ಈ ಚಾನೆಲ್‌ ಅನ್ನು ಆರಂಭ ಮಾಡುತ್ತಿದೆ. ಯುವ ಸಮುದಾಯ ಇಷ್ಟ ಪಡುವಂತಹ ಕಥೆಗಳನ್ನು ತಲುಪಿಸಿ ಅವರ ಮನ ಗೆಲ್ಲುವುದಕ್ಕೆ ಮುಂದಾಗಿದೆ. ಇದು ಆಗಸ್ಟ್ 2025 ರಲ್ಲಿ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಮಲ್ಟಿಮೀಡಿಯಾ ಅಭಿಯಾನದೊಂದಿಗೆ ಅಧಿಕೃತವಾಗಿ ಶುಭಾರಂಭ ಮಾಡುತ್ತಿದೆ. ಜೀ ಪವರ್‌ನಲ್ಲಿ 5 ಹೊಸ ಧಾರಾವಾಹಿಗಳು, 1 ದಿನ ನಿತ್ಯ ಪ್ರಸಾರ ಆಗುವ ರಿಯಾಲಿಟಿ ಶೋ, ಜೊತೆಗೆ ದಿನವೂ ಸಿನಿಮಾ ಪ್ರಸಾರ ಆಗಲಿದೆ.

"ಕರ್ನಾಟಕದಲ್ಲಿ ಕನ್ನಡಿಗರ ಅಭಿರುಚಿಯನ್ನು ಅರಿತು ಅದಕ್ಕೆ ತಕ್ಕಂತೆ, ಕನ್ನಡದ ಸಂಸ್ಕೃತಿಗೆ ಹೊಂದುವಂತೆ ಕಥೆಗಳನ್ನು ಮಾಡಿದ್ದು, ಜೀ಼ ಕನ್ನಡ ಕಿರುತೆರೆಯ ಲೀಡರ್ ಆಗಿ ಹೊರಹೊಮ್ಮಿದೆ. ಕನ್ನಡಿಗರು ಎಲ್ಲಾ ತರಹದ ಕಂಟೆಂಟ್‌ಗಳನ್ನೂ ಹೃದಯ ಪೂರ್ವಕವಾಗಿ ಸ್ವಾಗತಿಸುತ್ತಾರೆ. ಹೀಗಾಗಿ ನಮಗೆ ಮತ್ತಷ್ಟು ಹೊಸ ಪ್ರಯತ್ನಕ್ಕೆ ಕೈಹಾಕಲು ಹುಮ್ಮಸ್ಸು ಬರುತ್ತೆ. ವೀಕ್ಷಕರ ಆಸಕ್ತಿಯನ್ನು ಗಮನದಲ್ಲಿ ಇಟ್ಟುಕೊಂಡು ನಾವು ಡ್ಯುಯಲ್-ಚಾನೆಲ್ ಸ್ಟ್ರಾಟೆಜಿ ಮಾಡಿದ್ದು, ಜೀ಼ ಕನ್ನಡ ಕೌಟುಂಬಿಕ ವೀಕ್ಷಕರನ್ನು ಮನರಂಜಿಸುವುದನ್ನು ಮುಂದುವರೆಸಲಿದೆ. ಹಾಗೇ ಜೀ಼ ಪವರ್, ಪವರ್ ಫುಲ್ ಕಥೆಗಳ ಮೂಲಕ ಕೌಟುಂಬಿಕ ಪ್ರೇಕ್ಷಕರ ಜೊತೆಗೆ ಯುವ ಪೀಳಿಗೆಯನ್ನು ಸೆಳೆಯಲಿದೆ" ಎಂದು ZEELನ ದಕ್ಷಿಣ ಮತ್ತು ಪಶ್ಚಿಮ ವಿಭಾಗದ ಮುಖ್ಯ ಕ್ಲಸ್ಟರ್ ಹೆಡ್ ಸಿಜು ಪ್ರಭಾಕರನ್ ಹೇಳಿದ್ದಾರೆ. ಕರ್ನಾಟಕದಲ್ಲಿ ಜೀ ಕನ್ನಡದ ಜೊತೆ ಜೀ ಪವರ್ ಕಿರುತೆರೆ ವೀಕ್ಷಕರನ್ನು ಸೆಳೆದಿಡಲು ಸಜ್ಜಾಗಿದೆ.

More from Filmibeat

Read more about: tv show serials zee kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X