ದೇಶಾದ್ಯಂತ ಯುವ ಕಥೆಗಾರರ ಹುಡುಕಲು ಹೊರಟ ಜೀ ಸಂಸ್ಥೆ: ನೀವು ಕಥೆ ಬರಿತೀರಾ? ಹೀಗೆ ಮಾಡಿ

ಕಂಟೆಂಟ್ ಕಿಂಗ್ ಅನ್ನೋದು ಎಲ್ಲಾ ಮನರಂಜನಾ ಕ್ಷೇತ್ರಕ್ಕೂ ಚೆನ್ನಾಗಿ ಗೊತ್ತು. ಹೀಗಾಗಿ ಪ್ರತಿದಿನ ಹೊಸ ಹೊಸ ಕಥೆಗಳನ್ನು ಹುಡುಕುತ್ತಲೇ ಇರುತ್ತಾರೆ. ಸಿನಿಮಾ ಆಗಿರಬಹುದು, ಇಲ್ಲವೇ ಕಿರುತೆರೆಯಾಗಿರಬಹುದು. ಎಲ್ಲರಿಗೂ ಹೊಸ, ವಿಭಿನ್ನ ಕಥೆಗಳು ಬೇಕಾಗಿವೆ. ಇದನ್ನು ಅರಿತುಕೊಂಡಿರುವ ಜೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್ ('Z') ದೇಶಾದ್ಯಂತ ಯುವ ಕಥೆಗಾರರನ್ನು ಹುಡುಕುವುದಕ್ಕೆ ಹೊರಟಿದೆ.

ಜೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್ ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದೆ. ಜೀ ರೈಟರ್ಸ್ ರೂಮ್ ಎನ್ನುವ ಪರಿಕಲ್ಪನೆಯಲ್ಲಿ ಯುವ ಬರಹಗಾರರ ಹುಡುಕಾಟ ನಡೆಸುವುದಕ್ಕೆ ಹೊರಟಿದೆ. ಯುವ, ಉದಯೋನ್ಮುಖ ಚಿತ್ರಕಥೆ ಬರಹಗಾರರ ಪ್ರತಿಭೆಯನ್ನು ಪತ್ತೆ ಹಚ್ಚುವ ಗುರಿಯನ್ನು ಇಟ್ಟುಕೊಂಡಿದೆ. ಇದು ಸದ್ಯದ ಮಟ್ಟಿಗೆ ಹೊಸ ಪ್ರಯತ್ನ ಎಂದೇ ಹೇಳಬಹುದು.

Zee is looking for young storytellers through Zee Writers Room across India

ಜೀ ರೈಟರ್ಸ್ ರೂಮ್ ಅನ್ನೋದು ಕಂಪನಿಯ ಬ್ರಾಂಡ್ ಫಿಲಾಸಫಿಯಾದ ಯುವರ್ಸ್ ಟ್ರೂಲಿ ಝೀ ಒಂದು ಭಾಗವಾಗಿದೆ. ಈ ಮೂಲಕ ಜೀಗೆ ಕಂಟೆಂಟ್ ಕೊಡುಗೆ ನೀಡುವ ಪ್ಲಾಟ್‌ಫಾರ್ಮ್‌ಗಳಾಗಿ ಬೆಳೆಸುವ ಗುರಿಯನ್ನು ಇಟ್ಟುಕೊಂಡಿದೆ. ಇದೊಂದು ವಿಭಿನ್ನ ಪ್ರಯತ್ನ ಆಗಿದ್ದರಿಂದ ಎಲ್ಲರ ಗಮನ ಇತ್ತ ಇದೆ. ಅಲ್ಲದೆ ಯುವ ಬರಹಗಾರರಿಗೂ ಇದೊಂದು ವಿಭಿನ್ನ ಪ್ರಯತ್ನ ಎನ್ನಬಹುದು.

ಸಿನಿಮಾ ಆಗಲಿ, ಕಿರುತೆರೆಯಾಗಲಿ ಕಥೆಗಾರರಿಗೆ, ಸ್ಕ್ರೀನ್‌ಪ್ಲೇ ರೈಟರ್‌ಗಳಿಗೆ ಸರಿಯಾದ ವೇದಿಕೆ ಕಲ್ಪಿಸಿಲ್ಲ. ಅವರಿಗೆ ಉತ್ತಮ ಸಂಭಾವನೆ ನೀಡುತ್ತಿಲ್ಲ ಎಂಬ ಆರೋಪ ಇದ್ದೇ ಇದೆ. ಈಗ ಬದಲಾದ ಪರಿಸ್ಥಿತಿಯಲ್ಲಿ ರೈಟರ್ಸ್‌ಗೆ ವೇದಿಕೆಯನ್ನು ಕಲ್ಪಿಸಿಕೊಡುವುದಕ್ಕೆ ಮುಂದಾಗಿದೆ. ಆಯ್ಕೆ ಪ್ರಕ್ರಿಯೆಯಲ್ಲಿ ಸೆಲೆಕ್ಟ್ ಆದವರಿಗೆ ಜೀ ಸಂಸ್ಥೆಯ ಟಿವಿ, ಡಿಜಿಟಲ್ ಹಾಗೂ ಸಿನಿಮಾಗಳಲ್ಲಿ ಕಥೆಗಳನ್ನು ಬರೆಯುವುದಕ್ಕೆ ಅವಕಾಶವನ್ನು ನೀಡಲಾಗುತ್ತಿದೆ.

ಸುಮಾರು 80 ನಗರಗಳು ಹಾಗೂ 32 ಇವೆಂಟ್ ಸೆಂಟರ್‌ಗಳಲ್ಲಿ ಈ ಅಭಿಯಾನವನ್ನು ನಡೆಸಲಾಗುತ್ತಿದೆ. ದೇಶಾದ್ಯಂತ ಕಥೆಗಾರರನ್ನು ಹುಡುಕುವ ಕಾರ್ಯಕ್ರಮದಲ್ಲಿ ಅತ್ಯುತ್ತಮ ರೈಟರ್‌ಗಳನ್ನು ಹುಡುಕುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ಹಿಂದಿ, ಮರಾಠಿ, ಬಂಗಾಳಿ, ತಮಿಳು, ತೆಲುಗು, ಕನ್ನಡ ಹಾಗೂ ಮಲಯಾಳಂ ಭಾಷೆಯಲ್ಲಿ ಈ ಪ್ರಯೋಗ ನಡೆಯುತ್ತಿದೆ. ಈ ಮೂಲಕ ಎಲ್ಲಾ ಭಾಷೆಗಳಲ್ಲೂ ಒಳ್ಳೊಳ್ಳೆ ಕಥೆಗಳನ್ನು ಸಿಗುವ ಸಾಧ್ಯತೆ ಹೆಚ್ಚಿದೆ.

ಉದಾಹರಣೆ ಕನ್ನಡ ಭಾಷೆಯಲ್ಲಿ ಕಥೆಗಾರ ಅತ್ಯುತ್ತಮ ಕಥೆಯನ್ನು ಕೊಟ್ಟರೆ, ಅದು ದೇಶದ ಬೇರೆ ಬೇರೆ ಭಾಷೆಗೂ ವಿಸ್ತರಣೆಯಾಗಬಹುದು. ಬೇರೆ ಬೇರೆ ಭಾಷೆಯಿಂದ ಕನ್ನಡಕ್ಕೂ ಬರಬಹುದು. ಹೀಗೆ ಕಂಟೆಂಟ್ ಎಕ್ಸ್‌ಚೇಂಜ್ ಆಗುತ್ತೆ. ಈ ಪರಿಕಲ್ಪನೆಯ ಬಗ್ಗೆ ಜೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್‌ನ ಚೀಫ್ ಕ್ರಿಯೇಟಿವ್ ಆಫೀಸರ್ ರಾಘವೇಂದ್ರ ಹುಣಸೂರು ಪ್ರತಿಕ್ರಿಯೆ ನೀಡಿದ್ದಾರೆ.

"ಭಾರತದ ಅತಿದೊಡ್ಡ ಕಥೆಗಾರರಲ್ಲಿ ಒಬ್ಬರಾಗಿ, ಇದು ಕೇವಲ ನಮ್ಮ ಅವಕಾಶ ಮಾತ್ರವಲ್ಲದೇ, ಮುಂದಿನ ಪೀಳಿಗೆಯ ಬರವಣಿಗೆಯ ಪ್ರತಿಭೆಯನ್ನು ಪೋಷಿಸುವುದು ನಮ್ಮ ಕರ್ತವ್ಯ ಕೂಡ ಆಗಿದೆ. ಜೀ ರೈಟರ್ಸ್ ರೂಮ್‌ನೊಂದಿಗೆ, ನಾವು ಹೊಸ ವಾಯ್ಸ್, ಹಿಂದೆಂದೂ ಕೇಳಿರದ ವಿಚಾರಗಳು ಹಾಗೂ ಭಾವನೆಗಳನ್ನು ಸೇರಿ ಒಂದು ರೂಪ ತಾಳುವಂತೆ ಮಾಡುತ್ತೇವೆ. ಇದು ಒಂದು ಸ್ಪರ್ಧೆಯಲ್ಲ - ಇದು ಒಂದು ಬದ್ಧತೆ. ನಾವು ಕ್ರಿಯೇಟರ್‌ಗಳನ್ನು ಗುರುತಿಸಿ ಅವರಿಗೆ ಕೌಶಲ್ಯ, ಧೈರ್ಯದ ಜೊತೆಗೆ ಅವಕಾಶವನ್ನೂ ನೀಡಲಾಗುತ್ತೆ. ಏಕೆಂದರೆ ಕಥೆ ಹೇಳುವುದರ ಭವಿಷ್ಯವು ನಾವು ಏನು ಮಾಡುತ್ತೇವೋ ಅದು ಮಾತ್ರವಾಗಿರದೇ - ನಾವು ಅದನ್ನು ಯಾರೊಂದಿಗೆ ಮಾಡುತ್ತಿದ್ದೇವೆ ಎಂಬುದು ಕೂಡ ಮುಖ್ಯವಾಗಿರುತ್ತೆ" ಎಂದಿದ್ದಾರೆ.

ಜೀ ರೈಟರ್ಸ್ ರೂಮ್ ಮೂಲಕ ಇಂಡಸ್ಟ್ರಿಗೆ ಪ್ರವೇಶಿಸದೆ ಇರುವಂತಹ ಪ್ರತಿಭೆಗಳನ್ನು ಇಲ್ಲಿ ಸ್ವಾಗತಿಸಲಾಗುತ್ತಿದೆ. ಸುಮಾರು 70 ಹೊಸ ರೈಟರ್ಸ್ ಹಾಗೂ 30 ಯುವ ಪ್ರತಿಭೆಗಳನ್ನು ರೂಪಿಸುವ ವ್ಯವಸ್ಥೆಯನ್ನು ನಿರ್ಮಿಸಲು ಯೋಚಿಸಲಾಗಿದೆ. ಜೀ ಟಿವಿ, ಓಟಿಟಿ ಮತ್ತು ಸಿನಿಮಾ ಕಂಟೆಂಟ್‍ಗಳಿಗೆ ಅವರು ವಿಭಿನ್ನ ಕಥೆಗಳನ್ನು ನೀಡಲಿದ್ದಾರೆ.

ಹಾಗಿದ್ದರೆ, ಜೀ ರೈಟರ್ಸ್ ರೂಮ್ ಸೇರಿಕೊಳ್ಳುವುದು ಹೇಗೆ?
ನೋಂದಾಯಿಸಲು (www.zeewritersroom.com)ಗೆ ಭೇಟಿ ನೀಡಿ. ಈ ಅಂಶಗಳನ್ನು ಗಮನಿಸಿ
•ಲಿಖಿತ ಪರೀಕ್ಷೆ: ಭಾಗವಹಿಸುವವರು ಸೆಲೆಕ್ಷನ್ ಈವೆಂಟ್‌ಗೆ ಹಾಜರಾಗಬೇಕು ಮತ್ತು ಪರೀಕ್ಷೆಯನ್ನು ನೀಡಬೇಕು.
•ಸಲ್ಲಿಕೆಯ ಮೌಲ್ಯಮಾಪನ: ಒಂದು ಓದುವ ಸಮಿತಿಯು ಬರವಣಿಗೆಯ ಅರ್ಹತೆಯ ಆಧಾರದ ಮೇಲೆ ಅಗ್ರ 10% ಅನ್ನು ಶಾರ್ಟ್‌ಲಿಸ್ಟ್ ಮಾಡುತ್ತದೆ.
•ಸಂದರ್ಶನ ಪ್ರಕ್ರಿಯೆ: ಫೈನಲಿಸ್ಟ್‌ಗಳನ್ನು ಇಂಡಸ್ಟ್ರಿ ಪ್ಯಾನೆಲ್ ಮೂಲಕ ಮೌಲ್ಯಮಾಪನ ಮಾಡಲಾಗುತ್ತದೆ.
•ಜೀ಼ ರೈಟರ್ಸ್ ರೂಮ್‌ಗೆ ಸೇರ್ಪಡೆ: ಅಗ್ರ 100 ಜನರನ್ನು ಜೀ಼ ರೈಟರ್ಸ್ ರೂಮ್‌ಗೆ ಸೇರಿಸಲಾಗುತ್ತದೆ. ಅಲ್ಲಿ ಅವರು ಪರಿಣಿತರ ಮಾರ್ಗದರ್ಶನದಲ್ಲಿ ಕಥೆಯ ಕಲ್ಪನೆಗಳನ್ನು ಅಭಿವೃದ್ಧಿಪಡಿಸಿಕೊಳ್ಳುತ್ತಾರೆ.

More from Filmibeat

English summary
Zee is looking for young storytellers through Zee Writers Room across India.
Read more about: tv show serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X