ಕೋಟೆ ನಾಡು ಚಿತ್ರದುರ್ಗದಲ್ಲಿ 'ಲಕ್ಷ್ಮಿ ನಿವಾಸ' ತಂಡದಿಂದ 'ಜೀ಼ ಗಣೇಶ ಉತ್ಸವ'; ಅಲ್ಲಿನ ಜನರೊಂದಿಗೆ ಸಂಭ್ರಮ
ಗಣೇಶ್ ಹಬ್ಬ ಹತ್ತಿರ ಬರುತ್ತಿದ್ದಂತೆ ಕಿರುತೆರೆಯಲ್ಲಿ ವಿಭಿನ್ನ ಕಾರ್ಯಕ್ರಮಗಳನ್ನು ಪ್ಲಾನ್ ಮಾಡಲಾಗುತ್ತಿದೆ. ಮನರಂಜನಾ ಕಾರ್ಯಕ್ರಮಗಳು, ರಿಯಾಲಿಟಿ ಶೋಗಳನ್ನು ಗಣೇಶ್ ಚತುರ್ಥಿಯ ಥೀಮ್‌ನಲ್ಲಿಯೇ ವಿಶೇಷವಾಗಿ ಚಿತ್ರೀಕರಣ ಮಾಡುತ್ತಿದ್ದಾರೆ. ಜೀ ಕನ್ನಡ ವಾಹಿನಿ ಕೂಡ ಒಂದು ವಾರಕ್ಕೂ ಮುನ್ನವೇ ಈ ಸಂಭ್ರಮದಲ್ಲಿ ತೊಡಗಿದೆ. ತಂಡದೊಂದಿಗೆ ಕೋಟೆ ನಾಡು ಚಿತ್ರದುರ್ಗಕ್ಕೆ ಪಯಣ ಬೆಳೆಸುವುದಕ್ಕೆ ಮುಂದಾಗಿದೆ.
ಜೀ ಕನ್ನಡ ತನ್ನ ವಾಹಿಯನ್ನು ವೀಕ್ಷಿಸುತ್ತಿರುವವರಿಗೆ ಧನ್ಯವಾದಗಳನ್ನು ಅರ್ಪಿಸುವುದಕ್ಕೆ ವಿನೂತನ ಪ್ರಯತ್ನಕ್ಕೆ ಮುಂದಾಗಿದೆ. ತಮ್ಮ ವೀಕ್ಷಕರೊಂದಿಗೆ ಗಣೇಶ್ ಚತುರ್ಥಿಯನ್ನು ಆವರಿಸುವುದಕ್ಕೆ ಮುಂದಾಗಿದೆ. ಈ ಸಂಬಂಧ ಈ ಬಾರಿ ಹಬ್ಬವನ್ನು ಕೋಟೆ ನಾಡು ಚಿತ್ರದುರ್ಗದ ಜನರೊಂದಿಗೆ ಆಚರಣೆ ಮಾಡುವುದಕ್ಕೆ ಮುಂದಾಗಿದೆ. ಜೀ ಕನ್ನಡದ ಜನಪ್ರಿಯ ಧಾರಾವಾಹಿ 'ಲಕ್ಷ್ಮಿ ನಿವಾಸ'ದ ತಂಡದೊಂದಿಗೆ ಅಲ್ಲಿನ ಜನತೆ ಹಬ್ಬವನ್ನು ಆಚರಿಸಬಹುದು.

ಹೌದು, ಚಿತ್ರದುರ್ಗದಲ್ಲಿ ಇದೇ ಸೆಪ್ಟೆಂಬರ್ 1 ರಂದು ಭಾನುವಾರ ಮಧ್ಯಾಹ್ನ 3 ಗಂಟೆಗೆ 'ಲಕ್ಷ್ಮೀ ನಿವಾಸ' ತಂಡದ ಜೊತೆ 'ಜೀ ಗಣೇಶ ಉತ್ಸವ' ಕಾರ್ಯಕ್ರಮವನ್ನು ಜೀ ಕನ್ನಡ ಆಯೋಜಿಸಿದೆ. 'ಲಕ್ಷ್ಮೀ ನಿವಾಸ' ಧಾರಾವಾಹಿ ಶುರುವಾದ ದಿನದಿಂದಲೂ ವೀಕ್ಷಕರ ಮನಗೆದ್ದಿದೆ. ಕನ್ನಡಿಗರ ಮನೆ ಮನಗಳಲ್ಲಿ ಈ ಧಾರಾವಾಹಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮಧ್ಯಮ ವರ್ಗದ ಕುಟುಂಬದ ಜನರ ಕಷ್ಟ, ಸುಖ, ಬಾಂಧವ್ಯ, ಸಮಸ್ಯೆಯನ್ನು ಕಿರುತೆರೆ ವೀಕ್ಷಕರ ಮುಂದೆ ಇಡುತ್ತಿದೆ.
'ಲಕ್ಷ್ಮಿ ನಿವಾಸ' ಧಾರಾವಾಹಿಯ ಕಥೆಯಲ್ಲಿ ಹಲವು ಆಯಾಮಗಳಿವೆ. ಪ್ರತಿ ದಿನ ವೀಕ್ಷಕರಲ್ಲಿ ಈ ಧಾರಾವಾಹಿ ಕುತೂಹಲ ಹೆಚ್ಚಿಸುತ್ತಿದ್ದು, ವೀಕ್ಷಕರ ಸಂಖ್ಯೆಯನ್ನು ಹೆಚ್ಚಿಸಿಕೊಂಡು ಮುನ್ನುಗ್ಗುತ್ತಲೇ ಇದೆ. ಇದೇ ಧಾರಾವಾಹಿ ತಂಡದ ಕಲಾವಿದರೊಂದಿಗೆ ಜೀ಼ ಕನ್ನಡ ವಾಹಿನಿಯು 'ಗಣೇಶ ಉತ್ಸವ'ವನ್ನು ಚಿತ್ರದುರ್ಗದಲ್ಲಿ ಆಚರಿಸುತ್ತಿದೆ. ಅಲ್ಲಿನ ಜನತೆಯನ್ನು ಸೇರಿಸಿಕೊಂಡು ಕಾರ್ಯಕ್ರಮಕ್ಕೆ ಹೊಸ ಮೆರುಗು ನೀಡುವುದಕ್ಕೆ ಮುಂದಾಗಿದೆ. ಈ ಕಾರ್ಯಕ್ರಮವನ್ನು ಮಾಸ್ಟರ್ ಆನಂದ್ ನಡೆಸಿಕೊಡುತ್ತಿದ್ದಾರೆ.

ಇಷ್ಟೇ ಅಲ್ಲ. ಈ ಧಾರಾವಾಹಿಯ ನಟ-ನಟಿಯರೊಂದಿಗೆ ನೇರವಾಗಿ ಮಾತನಾಡುವ ಅವಕಾವನ್ನು ಕಲ್ಪಿಸಿಕೊಡಲಾಗಿದೆ. ಜೀ ಕನ್ನಡದ ಈ ಮನರಂಜನೆಯ ಮಹಾ ಉತ್ಸವದಲ್ಲಿ ಇಡೀ 'ಲಕ್ಷೀ ನಿವಾಸ' ಧಾರಾವಾಹಿ ಭಾಗವಹಿಸುತ್ತಿದೆ. ಚಿತ್ರದುರ್ಗದ ಕಿರುತೆರೆ ವೀಕ್ಷಕರನ್ನು ನೇರವಾಗಿ ಭೇಟಿ ಇವರೆಲ್ಲರೂ ಭೇಟಿ ಮಾಡಲಿದ್ದಾರೆ.
ಸೆಪ್ಟೆಂಬರ್ 1 ರಂದು ಭಾನುವಾರ 'ಲಕ್ಷ್ಮೀ ನಿವಾಸ' ತಂಡ ಚಿತ್ರದುರ್ಗದ ಅನುಭವ ಮಂಟಪ, ಮುರುಘಮಠ ಆವರಣ, ಚಿತ್ರದುರ್ಗದಲ್ಲಿ ಮಧ್ಯಾಹ್ನ 3:00 ಗಂಟೆಗೆ
'ಜೀ ಗಣೇಶ ಉತ್ಸವ' ಕಾರ್ಯಕ್ರಮವನ್ನು ಆಚರಿಸುತ್ತಿದೆ. ಚಿತ್ರದುರ್ಗದ ಜನತೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಈ ಕಾರ್ಯಕ್ರಮದ ಪರಿಸರದ ಬಗ್ಗೆ ಜಾಗೃತಿಯನ್ನು ಮೂಡಿಸುತ್ತೆ. ಪರಿಸರ ಸ್ನೇಹಿ ಗಣೇಶನನ್ನು ಉಪಯೋಗಿಸುವಂತೆ ಜಾಗೃತಿಯನ್ನು ಮೂಡಿಸಲಿದೆ.


Click it and Unblock the Notifications











