Serial-Reality Show TRP: ಈ ವಾರ ಜೀ ಕನ್ನಡ, ಕಲರ್ಸ್ ಕನ್ನಡ, ಸ್ಟಾರ್ ಸುವರ್ಣ ಟಿಆರ್‌ಪಿ? ಯಾವ ಧಾರಾವಾಹಿ ನಂ 1?
ಪ್ರತಿವಾರ ಕಿರುತೆರೆ ಶೊಗಳ ಹಣೆಬರಹ ಹೊರ ಬೀಳುತ್ತೆ. ಕಿರುತೆರೆಯ ಧಾರಾವಾಹಿ, ರಿಯಾಲಿಟಿ ಶೋಗಳ ಟಿಆರ್‌ಪಿ ರಿವೀಲ್ ಆಗುತ್ತೆ. ಗುರುವಾರ ಕನ್ನಡ ಕಿರುತೆರೆಯ ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳನ್ನು ಪ್ರೇಕ್ಷಕರು ಅದೆಷ್ಟು ಮೆಚ್ಚಿಕೊಂಡಿದ್ದಾರೆ ಅನ್ನೋದು ರಿವೀಲ್ ಆಗುತ್ತೆ. ಇದನ್ನು ನೋಡಿಕೊಂಡಿಯೇ ಕಿರುತೆರೆ ವಾಹಿನಿಗಳು ಮುಂದಿನ ವಾರಕ್ಕೆ ಸ್ಟ್ರಾಟಜಿ ಮಾಡುತ್ತವೆ.
ಇನ್ನು ಕನ್ನಡದ ನಾಲ್ಕು ಪ್ರಮುಖ ವಾಹಿನಿಗಳು ಜೀ ಕನ್ನಡ, ಕಲರ್ಸ್ ಕನ್ನಡ, ಸ್ಟಾರ್ ಸುವರ್ಣ ಹಾಗೂ ಉದಯ ಟಿವಿ ಟಿಆರ್‌ಪಿ ರಿವೀಲ್ ಆಗಿದೆ. ಮಾರ್ಚ್ 12ರಂದು ಹೊರ ಬಿದ್ದಿರೋ ಟಿಆರ್‌ಟಿ ಅಂಕಿ-ಅಂಶಗಳಲ್ಲಿ ವ್ಯತ್ಯಾಸಗಳು ಕಂಡು ಬಂದಿವೆ. ಈ ವಾರ ಕೂಡ ಜೀ ಕನ್ನಡ 510 ಜಿಆರ್‌ಪಿ ಅಂಕಗಳೊಂದಿಗೆ ನಂ 1 ಸ್ಥಾನದಲ್ಲಿದೆ.

ಇದರೊಂದಿಗೆ 370 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿ ಸ್ಟಾರ್ ಸುವರ್ಣ ಇದ್ದರೆ, ಕಲರ್ಸ್ ಕನ್ನಡ 3ನೇ ಸ್ಥಾನದಲ್ಲಿದೆ. ಉದಯ ಟಿವಿ 4ನೇ ಸ್ಥಾನದಲ್ಲಿದೆ. ಈ ನಾಲ್ಕೂ ವಾಹಿನಿಗಳ ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳ ಟಿಆರ್‌ಪಿ ಹೇಗಿದೆ? ಈ ವಾರ ಬಾರ್ಕ್ (BAARC) ರಿಲೀಸ್ ಮಾಡಿದ ರಿಪೋರ್ಟ್ ಕಾರ್ಡ್‌ನ ಟಿಆರ್‌ಪಿ ಹೈಲೈಟ್ ಏನು? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
ಜೀ ಕನ್ನಡ
ಜೀ ಕನ್ನಡ ಕಳೆದ ವಾರಕ್ಕೆ ಹೋಲಿಸಿದರೆ, 4 ಅಂಕಗಳು ಏರಿಕೆಯಾಗಿದೆ. ಹೀಗಾಗಿ ಜೀ ಕನ್ನಡದ ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳ ಅಂಕಿ ಅಂಶಗಳಲ್ಲಿ ಹೆಚ್ಚೇನು ವ್ಯತ್ಯಾಸ ಕಂಡು ಬಂದಿಲ್ಲ. ಕಳೆದ ವಾರಕ್ಕೂ ಈ ವಾರಕ್ಕೂ ಹೆಚ್ಚೇನೂ ವ್ಯತ್ಯಾಸವಿಲ್ಲ. ಈ ವಾರ ಜೀ ಕನ್ನಡದ ಕೆಲವು ಧಾರಾವಾಹಿಗಳ ಟಿಆರ್‌ಪಿಯಲ್ಲಿ ಇಳಿಕೆಯಾಗಿದೆ. ಇನ್ನು ಕೆಲವು ಧಾರಾವಾಹಿಗಳು ಏರಿಕೆಯಾಗಿದೆ. ಜೀ ಕನ್ನಡದ ಟಾಪ್ 4 ಧಾರಾವಾಹಿಗಳಾದ 'ಕರ್ಣ', 'ಅಣ್ಣಯ್ಯ' , 'ಲಕ್ಷ್ಮಿ ನಿವಾಸ' ಹಾಗೂ 'ನಾ ನಿನ್ನ ಬಿಡಲಾರೆ' ಧಾರಾವಾಹಿಗಳ ಟಿಆರ್‌ಪಿ ಹೀಗಿವೆ.
ಕರ್ಣ 6.7
ಲಕ್ಷ್ಮಿ ನಿವಾಸ 6.2
ಅಣ್ಣಯ್ಯ 5.9
ನಾ ನಿನ್ನ ಬಿಡಲಾರೆ 5.6
ಡಿಕೆಡಿ 5.3
ಕಲರ್ಸ್ ಕನ್ನಡ
ಇನ್ನು ಕಲರ್ಸ್ ಕನ್ನಡದ ಈ ವಾರದ ಟಿಆರ್‌ಪಿ ಸ್ವಲ್ಪ ಮಟ್ಟಿಗೆ ಏರಿಕೆ ಆಗಿದೆ. ಎರಡನೇ ಸ್ಥಾನದಿಂದ ಈ ವಾರ ಮೂರನೇ ಸ್ಥಾನಕ್ಕೆ ಹೋದರೂ, ಧಾರಾವಾಹಿಗಳ ರೇಟಿಂಗ್‌ನಲ್ಲಿ ಏರಿಕೆ ಕಂಡಿದೆ. ಕಲರ್ಸ್ ಕನ್ನಡದ ಟಾಪ್ 3 ಧಾರಾವಾಹಿಗಳಾದ 'ನಂದ ಗೋಕುಲ', 'ಮುದ್ದು ಸೊಸೆ', 'ಶ್ರೀಗಂಧದ ಗುಡಿ', 'ಗೌರಿ ಕಲ್ಯಾಣ' ಹಾಗೂ 'ಗಿಚ್ಚಿ ಗಿಲಿ ಗಿಲಿ ಜೂನಿಯರ್ಸ್' ಟಿಆರ್‌ಪಿಯಲ್ಲಿ ಏರಿಕೆ ಕಂಡಿದೆ. ಕಲರ್ಸ್ ಕನ್ನಡ ವಾಹಿನಿಯ ಟಾಪ್ 5 ಶೋಗಳ ಟಿಆರ್‌ಪಿ ಹೀಗಿದೆ.
ಮುದ್ದು ಸೊಸೆ 5.0
ನಂದ ಗೋಕುಲ 4.6
ಶ್ರೀಗಂಧದ ಗುಡಿ 4.0
ಗೌರಿ ಕಲ್ಯಾಣ 3.9
ಗಿಚ್ಚಿ ಗಿಲಿ ಗಿಲಿ ಜೂನಿಯರ್ಸ್ 3.8

ಸ್ಟಾರ್ ಸುವರ್ಣ
ಸ್ಟಾರ್ ಸುವರ್ಣ 2ನೇ ಸ್ಥಾನದಲ್ಲಿ ಮುಂದುವರೆದಿದೆ. ಆದರೆ, ಈ ವಾರ ಸುಮಾರು ಅಂಕಗಳ ಕುಸಿತ ಕಂಡಿದೆ. ಹೀಗಾಗಿ ಟಾಪ್‌ನಲ್ಲಿದ್ದ ಧಾರಾವಾಹಿಗಳ ಪ್ರಸಾರ ಕೂಡ ಕುಸಿದಿವೆ. ಟಾಪ್ 5 ಧಾರಾವಾಹಿಗಳಾದ 'ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ' ಈ ವಾರ ಡ್ರಾಪ್ ಆಗಿದೆ. 'ನಿನ್ನ ಜೊತೆ ನನ್ನ ಕಥೆ' ಟಾಪ್‌ಗೆ ಬಂದಿದೆ. ಹಾಗೇ 'ಶಾರದೆ', 'ಆಸೆ' ಹಾಗೂ 'ವಸುದೇವ ಕುಟುಂಬ' ಧಾರಾವಾಹಿಯ ಟಿಆರ್‌ಪಿಯಲ್ಲಿ ಬದಲಾವಣೆಯಾಗಿದೆ. ಸ್ಟಾರ್ ಸುವರ್ಣದ ಟಾಪ್ 5 ಸೀರಿಯಲ್‌ಗಳು ಹೀಗಿವೆ.
ಶಾರದೆ 3.6
ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ 3.6
ನಿನ್ನ ಜೊತೆ ನನ್ನ ಕಥೆ 3.5
ಆಸೆ 3.5
ನೀ ಇರಲು ಜೊತೆಯಲ್ಲಿ 3.4
ಉದಯ ಟಿವಿ
ಇನ್ನು ಈ ವಾರ ಉದಯ ಟಿವಿ ಟಿಆರ್‌ಪಿಯಲ್ಲಿ ಏರಿಕೆಯಾಗಿದೆ. ಹೀಗಾಗಿ ಈ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಧಾರಾವಾಹಿಗಳ ಅಂಕಿ-ಅಂಶಗಳಲ್ಲೂ ಏರಿಕೆಯಾಗಿದೆ. 'ಶಾಂಭವಿ' , 'ಶಾಂತಿ ನಿವಾಸ' , 'ಸಿಂಧು ಭೈರವಿ', 'ಮೈನಾ', 'ಕೃಷ್ಣ ವಂಶಿ' ಧಾರಾವಾಹಿಗಳ ಟಿಆರ್‌ಪಿ ಹೀಗಿದೆ.
ಶಾಂಭವಿ 2.4
ಶಾಂತಿ ನಿವಾಸ 2.2
ಸಿಂಧು ಭೈರವಿ 2.2
ಮೈನಾ 2.2
ಕೃಷ್ಣ ವಂಶಿ 2.2


Click it and Unblock the Notifications











