BAARC Report: ಕೈ ಹಿಡಿದ 'ಕಾಂತಾರ'.. ಜೀ ಕನ್ನಡ ಮತ್ತೆ ನಂ 1; ಟಾಪ್ 5 ಟಿವಿ ಶೋಗಳು ಇವೇನೆ!

ಕನ್ನಡ ಕಿರುತೆರೆಯಲ್ಲಿ ಮನರಂಜನಾ ವಾಹಿನಿಗಳು ರಿಯಾಲಿಟಿ ಶೋ ಹಾಗೂ ಧಾರಾವಾಹಿಗಳ ಮೂಲಕ ಪ್ರೇಕ್ಷಕರನ್ನು ಸೆಳೆಯುತ್ತಿವೆ. ಕನ್ನಡದ ನಾಲ್ಕು ಪ್ರಮುಖ ಮನರಂಜನಾ ವಾಹಿನಿಗಳು ಪ್ರತಿವಾರದ ಟಿಆರ್‌ಪಿಗಾಗಿ ಪೈಪೋಟಿಗೆ ಬೀಳುತ್ತವೆ. ಜೀ ಕನ್ನಡ, ಕಲರ್ಸ್ ಕನ್ನಡ, ಸ್ಟಾರ್ ಸುವರ್ಣ ಹಾಗೂ ಉದಯ ಟಿವಿ ಸೀರಿಯಲ್ ಹಾಗೂ ರಿಯಾಲಿಟಿ ಶೋ ಮೂಲಕ ವೀಕ್ಷಕರನ್ನು ತನ್ನ ಸೆಳೆಯುತ್ತಲೇ ಇರುತ್ತವೆ.

ಬಿಗ್ ಬಾಸ್ ಕನ್ನಡ ಸೀಸನ್ 12 ಮುಗಿದ ಬಳಿಕ ಕಿರುತೆರೆಯ ಲೋಕದಲ್ಲಿ ಮತ್ತೆ ಅಲ್ಲೋಲ ಕಲ್ಲೋಲ ಆಗಿದೆ. ನಂ 1 ಪಟ್ಟಕ್ಕೇರಿದ್ದ ಕಲರ್ಸ್ ಕನ್ನಡ 2ನೇ ಸ್ಥಾನಕ್ಕೆ ಇಳಿದಿದೆ. ಮತ್ತೆ ಜೀ ಕನ್ನಡ ನಂ 1 ಪಟ್ಟಕ್ಕೆ ಬಂದಿದೆ. ಜೀ ಕನ್ನಡದ ಧಾರಾವಾಹಿಗಳು ಅದ್ಭುತವಾಗಿ ಪರ್ಫಾಮೆನ್ಸ್ ಮಾಡುತ್ತಿದೆ. ಕಲರ್ಸ್ ಕನ್ನಡ ಕೂಡ ಧಾರಾವಾಹಿಗಳ ರೇಟಿಂಗ್ ಹಾಗೇ ಉಳಿಸಿಕೊಂಡಿದೆ. ಅನುಬಂಧ ಅವಾರ್ಡ್ ಕೈ ಹಿಡಿದಿದೆ.

Zee Kannada Colors Kannada Star Suvarna Udaya TV Kannada GEC BAARC report Feb 5th

ಇನ್ನು ಸ್ಟಾರ್ ಸುವರ್ಣ ಹಾಗೂ ಕಲರ್ಸ್ ಕನ್ನಡಕ್ಕೆ ಕೆಲವೇ ಅಂಕಗಳ ಅಂತರವಿದೆ. ಇತ್ತ ಉದಯ ಟಿವಿ ರೇಟಿಂಗ್‌ನಲ್ಲೂ ಚೇತರಿಕೆ ಕಂಡಿದೆ. ಈ ವಾರ ಬಾರ್ಕ್ (BAARC) ರಿಲೀಸ್ ಮಾಡಿದ ರಿಪೋರ್ಟ್ ಕಾರ್ಡ್‌ನಲ್ಲಿ ಜೀ ಕನ್ನಡ, ಕಲರ್ಸ್ ಕನ್ನಡ, ಸ್ಟಾರ್ ಸುವರ್ಣ ಹಾಗೂ ಉದಯ ಟಿವಿ ವಾಹಿನಿಗಳ ಶೋಗಳ ರೇಟಿಂಗ್ ಹೀಗಿದೆ.

ಜೀ ಕನ್ನಡ

ಕಳೆದ ವಾರಕ್ಕೆ ಹೋಲಿಸಿದರೆ, ಜೀ ಕನ್ನಡ ಈ ವಾರ ಸುಮಾರು 93 ಅಂಕಗಳನ್ನು ಹೆಚ್ಚಿಸಿಕೊಂಡಿದ್ದು, 561 ಅಂಕಗಳಿಂದ ನಂ 1 ಸ್ಥಾನದಲ್ಲಿದೆ. ಅದರಲ್ಲಿ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿದ 'ಕಾಂತಾರ ಚಾಪ್ಟರ್ 1' ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್‌ ಕಂಡಿದ್ದು, ಅದು ಅತೀ ಹೆಚ್ಚು ರೇಟಿಂಗ್ ಅನ್ನು ಪಡೆದುಕೊಂಡಿದೆ. ಜೀ ಕನ್ನಡದ ಟಾಪ್ 5 ಶೋಗಳು ಹೀಗಿವೆ. 15 ವರ್ಷದಿಂದ 50 ವರ್ಷದವರೆಗಿನ ಅರ್ಬನ್‌ನ ಅಂಕಿ ಅಂಶಗಳನ್ನು ತೆಗೆದುಕೊಳ್ಳಲಾಗಿದೆ.

Zee Kannada Colors Kannada Star Suvarna Udaya TV Kannada GEC BAARC report Feb 5th

ಕಾಂತಾರ ಚಾಪ್ಟರ್ 1 9.3
ಅಣ್ಣಯ್ಯ ಮಹಾಸಂಚಿಕೆ 7.6
ಕರ್ಣ 7.3
ಅಣ್ಣಯ್ಯ 7.2
ಲಕ್ಷ್ಮಿ ನಿವಾಸ 7.0

ಕಲರ್ಸ್ ಕನ್ನಡ

ಬಿಗ್ ಬಾಸ್ ಕನ್ನಡ ಸೀಸನ್ 12ರ ಬಳಿಕ ಕಲರ್ಸ್ ಕನ್ನಡ ಸುಮಾರು 231 ಅಂಕಗಳನ್ನು ಕಳೆದುಕೊಂಡಿದೆ. ಈ ಮೂಲಕ 334 ಅಂಕಗಳನ್ನು ಪಡೆದುಕೊಂಡು 2ನೇ ಸ್ಥಾನಕ್ಕೆ ಕುಸಿದಿದೆ. ಕಲರ್ಸ್ ಕನ್ನಡದಲ್ಲಿ ಅನುಬಂಧ ಅವಾರ್ಡ್ಸ್ 3.4 ಅಂಕಗಳನ್ನು ಪಡೆದುಕೊಂಡಿದ್ದು, ಮುದ್ದು ಸೊಸೆ 4.6 ಮೂಲಕ ಟಾಪ್‌ನಲ್ಲಿದೆ.

ನಂದಗೋಕುಲ 4.6
ಮುದ್ದು ಸೊಸೆ 4.3
ಪ್ರೇಮಕಾವ್ಯ 3.7
ಅನುಬಂಧ ಅವಾರ್ಡ್ಸ್ 3.4
ಭಾಗ್ಯಲಕ್ಷ್ಮಿ 3.3

ಸ್ಟಾರ್ ಸುವರ್ಣ

ಸ್ಟಾರ್ ಸುವರ್ಣ ಶೋಗಳಲ್ಲಿ ಕೊಂಚ ಮಟ್ಟಿಗೆ ಇಳಿಕೆ ಕಂಡಿದೆ. ಅದು ಬಿಟ್ಟರೆ, ಮತ್ತೆ ತಮ್ಮದೇ ಸಂಸ್ಥೆಯಾಗಿರುವ ಕಲರ್ಸ್ ಕನ್ನಡಕ್ಕೆ ಪೈಪೋಟಿ ನೀಡುತ್ತಿದೆ. ಕಳೆದ ವಾರಕ್ಕೆ ಹೋಲಿಸಿದರೆ, 4 ಅಂಕಗಳನ್ನು ಕಳೆದುಕೊಂಡು 3ನೇ ಸ್ಥಾನದಲ್ಲಿದೆ. ಈ ವಾಹಿನಿಯ ಮೊದಲ ಸ್ಥಾನದಲ್ಲಿ 3.5 ಅಂಕಗಳ ಮೂಲಕ ಪೌರಾಣಿಕ ಕಥೆ 'ಉಧೋ ಉಧೋ ಶ್ರೀರೇಣುಕಾ ಯಲ್ಲಮ್ಮ' ಇದೆ.

ಉಧೋ ಉಧೋ ಶ್ರೀರೇಣುಕಾ ಯಲ್ಲಮ್ಮ 3.5
ನಿನ್ನ ಜೊತೆ ನನ್ನ ಕಥೆ 3.5
ಶಾರದೆ 3.3
ಗೌರಿ ಶಂಕರ 3.2
ಆಸೆ 3.2

ಉದಯ ಟಿವಿ

ಕಳೆದ ವಾರಕ್ಕೆ ಹೋಲಿಸಿದರೆ, ಉದಯ ಟಿವಿಯ ರೇಟಿಂಗ್‌ನಲ್ಲಿ ಏರಿಕೆಯಾಗಿದೆ. ಕಳೆದ ವಾರಕ್ಕಿಂತ ಈ ವಾರ ಸುಮಾರು 24 ಅಂಕಗಳನ್ನು ಹೆಚ್ಚಿಸಿಕೊಂಡಿದೆ. ಉದಯ ಟಿವಿಯ ಟಾಪ್‌ 5 ಧಾರಾವಾಹಿಗಳ ರೇಟಿಂಗ್ ಕೂಡ ಏರಿಕೆಯಾಗಿದೆ. ಉದಯ ಟಿವಿಯಲ್ಲಿ ಶಾಂಭವಿ 2.5 ಅಂಕಗಳೊಂದಿಗೆ ನಂ 1 ಸ್ಥಾನದಲ್ಲಿದೆ.

ಶಾಂಭವಿ 2.5
ಶಾಂತಿ ನಿವಾಸ 2.3
ಸೂರ್ಯವಂಶ 2.2
ಸಿಂಧು ಭೈರವಿ 2.2
ಮಾಂಗಲ್ಯ 2.1

More from Filmibeat

English summary
Zee Kannada, Colors Kannada, Star Suvarna, Udaya TV Kannada GEC BAARC report Feb 5th;
Read more about: tv show serial trp
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X