Kannada TV TRP: ಜೀ ಕನ್ನಡ, ಕಲರ್ಸ್, ಸ್ಟಾರ್ ಸುವರ್ಣ, ಉದಯ; ಟಾಪ್ 5 ಶೋಗಳ್ಯಾವುವು?

ಗುರುವಾರ ಬಂತು ಅಂದರೆ, ಕನ್ನಡ ಕಿರುತೆರೆಯಲ್ಲಿ ಸಂಚಲನ ಸೃಷ್ಟಿಯಾಗುತ್ತೆ. ಅದಕ್ಕೆ ಕಾರಣ ಟಿಆರ್‌ಪಿ. ಕಳೆದ ಒಂದು ವಾರದಿಂದ ಅವರ ಪ್ರಸಾರ ಮಾಡಿದ ಶೋಗಳ ಹಣೆಬರಹ ಈ ಟಿಆರ್‌ಪಿ ವರದಿಯಲ್ಲಿ ಸಿಗುತ್ತೆ. ಯಾವ ಧಾರಾವಾಹಿ ಯಾವ ಸ್ಥಾನದಲ್ಲಿದೆ? ನಂ 1 ಧಾರಾವಾಹಿ ಯಾವುದು? ರಿಯಾಲಿಟಿ ಶೋಗೆ ಎಷ್ಟಿದೆ ಟಿಆರ್‌ಪಿ ಅನ್ನೋದು ಈ ವರದಿಯಲ್ಲಿ ಗೊತ್ತಾಗುತ್ತೆ. ಹೀಗಾಗಿ ಮನರಂಜನಾ ವಾಹಿನಿಗಳಿಗೆ ಗುರುವಾರ ಟಿಆರ್‌ಪಿ ದಿನವಾಗಿರುತ್ತೆ.

ತಾವು ಕಳೆದ ವಾರ ಪ್ರಸಾರ ಮಾಡಿದ ಧಾರಾವಾಹಿಗಳು ಹಾಗೂ ರಿಯಾಲಿಟಿ ಶೋಗಳನ್ನು ಇಟ್ಟುಕೊಂಡು ಕನ್ನಡದ ನಾಲ್ಕು ಪ್ರಮುಖ ಮನರಂಜನಾ ವಾಹಿನಿಗಳು ಟಿಆರ್‌ಪಿಗಾಗಿ ಪೈಪೋಟಿಗೆ ಬೀಳುತ್ತವೆ. ಕನ್ನಡದಲ್ಲಿ ಪ್ರಮುಖವಾಗಿರುವ ಜೀ ಕನ್ನಡ, ಕಲರ್ಸ್ ಕನ್ನಡ, ಸ್ಟಾರ್ ಸುವರ್ಣ ಹಾಗೂ ಉದಯ ಟಿವಿ ಈ ನಾಲ್ಕು ವಾಹಿನಿಗಳು ವೀಕ್ಷಕರನ್ನು ತನ್ನೆಡೆಗೆ ಸೆಳೆಯುವುದಕ್ಕೆ ನೂರೆಂಟು ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತಾರೆ.

Zee Kannada Colors Kannada Star Suvarna Udaya TV Kannada GEC Feb 12th BAARC report

ಕಳೆದ ವಾರ ಮತ್ತೆ ನಂ 1 ಪಟ್ಟಕ್ಕೇರಿರುವ ಜೀ ಕನ್ನಡ ಈ ವಾರ ಕೂಡ ತನ್ನ ಸ್ಥಾನವನ್ನು ಕಾಯ್ದಿರಿಸಿಕೊಂಡಿದೆ. ಇನ್ನು ಕೆಲವು ಧಾರಾವಾಹಿಗಳ ಟಿಆರ್‌ಪಿಯಲ್ಲಿ ಏರಿಳಿತಗಳಾಗಿವೆ. ಕೆಲವು ಸೀರಿಯಲ್‌ಗಳ ಟಿಆರ್‌ಪಿ ಹೆಚ್ಚಾಗಿದೆ. ಕೆಲ ರಿಯಾಲಿಟಿ ಶೋಗಳ ರೇಟಿಂಗ್‌ನಲ್ಲೂ ಏರಿಕೆಯಾಗಿದೆ. ಈ ವಾರ ಬಾರ್ಕ್ (BAARC) ರಿಲೀಸ್ ಮಾಡಿದ ರಿಪೋರ್ಟ್ ಕಾರ್ಡ್‌ನಲ್ಲಿ ಜೀ ಕನ್ನಡ, ಕಲರ್ಸ್ ಕನ್ನಡ, ಸ್ಟಾರ್ ಸುವರ್ಣ ಹಾಗೂ ಉದಯ ಟಿವಿ ಶೋಗಳ ಟಿಆರ್‌ಪಿ ರಿಪೋರ್ಟ್ ಹೀಗಿದೆ.

ಜೀ ಕನ್ನಡ

ಜೀ ಕನ್ನಡ ಓವರ್‌ ಆಲ್‌ ಟಿಆರ್‌ಪಿ ಅಂಕಗಳಲ್ಲಿ ಕೊಂಚ ಮಟ್ಟಿಗೆ ಇಳಿಕೆಯಾಗಿದೆ. ಕಳೆದ ವಾರ ರಿಷಬ್ ಶೆಟ್ಟಿಯ 'ಕಾಂತಾರ ಚಾಪ್ಟರ್ 1' ಒಳ್ಳೆ ರೇಟಿಂಗ್ ಕೊಟ್ಟಿತ್ತು. ಹೀಗಿದ್ದೂ ಈ ವಾರ ಕೆಲವು ಧಾರಾವಾಹಿಗಳ ಟಿಆರ್‌ಪಿಯಲ್ಲಿ ಇಳಿಕೆ ಕಂಡಿದೆ. ಜೀ ಕನ್ನಡದ ಟಾಪ್ 3 ಧಾರಾವಾಹಿಗಳಾದ 'ಕರ್ಣ', 'ಅಣ್ಣಯ್ಯ' ಹಾಗೂ ಲಕ್ಷ್ಮಿ ನಿವಾಸ ಧಾರಾವಾಹಿಗಳ ಅಂಕಗಳಲ್ಲಿ ಇಳಿಕೆ ಕಂಡಿದೆ. ಜೀ ಕನ್ನಡ ಟಾಪ್ 5 ಶೋಗಳು ಹೀಗಿವೆ.

ಕರ್ಣ 6.9
ಅಣ್ಣಯ್ಯ 6.5
ಲಕ್ಷ್ಮಿ ನಿವಾಸ 6.4
ಡಿಕೆಡಿ/ಕಿಲಾಡಿ ಜೂನಿಯರ್ಸ 6.2
ಅಮೃತಧಾರೆ 5.5


ಕಲರ್ಸ್ ಕನ್ನಡ

ಕಲರ್ಸ್‌ ಕನ್ನಡ ಎರಡನೇ ಸ್ಥಾನದಿಂದ ಈ ವಾರ ಮೂರನೇ ಸ್ಥಾನಕ್ಕೆ ಕುಸಿದಿದೆ. ಜೀ ಕನ್ನಡದಂತೆ ಕಲರ್ಸ್ ಕನ್ನಡದ ಟಾಪ್ 3 ಧಾರಾವಾಹಿಗಳಾದ 'ನಂದ ಗೋಕುಲ', 'ಮುದ್ದು ಸೊಸೆ' ಹಾಗೂ 'ಪ್ರೇಮ ಕಾವ್ಯ' ಧಾರಾವಾಹಿಗಳ ಟಿಆರ್‌ಪಿ ಕುಸಿದಿದೆ. ಈ ವಾಹಿನಿಯ ಟಾಪ್ 5 ಸೀರಿಯಲ್‌ಗಳ ಟಿಆರ್‌ಪಿ ಹೀಗಿದೆ.

ನಂದ ಗೋಕುಲ 4.4
ಮುದ್ದು ಸೊಸೆ 4.2
ಪ್ರೇಮ ಕಾವ್ಯ 3.6
ಭಾಗ್ಯಲಕ್ಷ್ಮಿ 3.4
ಗಿಚ್ಚಿ ಗಿಲಿ ಗಿಲಿ 3.2

Zee Kannada Colors Kannada Star Suvarna Udaya TV Kannada GEC Feb 12th BAARC report
ಸ್ಟಾರ್ ಸುವರ್ಣ

ಸ್ಟಾರ್ ಸುವರ್ಣ ಮತ್ತೆ 2ನೇ ಸ್ಥಾನಕ್ಕೇರಿದೆ. ಈ ಧಾರಾವಾಹಿಯಲ್ಲಿ ಪ್ರಸಾರ ಆಗುತ್ತಿರುವ ಟಾಪ್ 5 ಧಾರಾವಾಹಿಗಳಾದ 'ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ', 'ನಿನ್ನ ಜೊತೆ ನನ್ನ ಕಥೆ', 'ಶಾರದೆ', 'ಆಸೆ' ಹಾಗೂ 'ವಸುದೇವ ಕುಟುಂಬ' ಧಾರಾವಾಹಿಯ ಟಿಆರ್‌ಪಿಯಲ್ಲಿ ಏರಿಕೆಯಾಗಿದೆ. ಸ್ಟಾರ್ ಸುವರ್ಣದ ಟಾಪ್‌ 5 ಸೀರಿಯಲ್‌ಗಳು ಹೀಗಿವೆ.

ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ 3.9
ನಿನ್ನ ಜೊತೆ ನನ್ನ ಕಥೆ 3.6
ಶಾರದೆ 3.6
ಆಸೆ 3.4
ವಸುದೇವ ಕುಟುಂಬ 3.2

ಉದಯ ಟಿವಿ

ಇನ್ನು ಈ ವಾರ ಉದಯ ಟಿವಿಯ ಎರಡು ಅಂಕಗಳು ಕುಸಿದಿವೆ. ಟಾಪ್‌ನಲ್ಲಿ 'ಶಾಂಭವಿ' ಧಾರಾವಾಹಿ 2ನೇ ಸ್ಥಾನಕ್ಕೆ ಕುಸಿದಿದ್ದು, 'ಶಾಂತಿ ನಿವಾಸ' ಮೊದಲನೇ ಸ್ಥಾನಕ್ಕೇರಿದೆ. ಇನ್ನು 'ಸೂರ್ಯವಂಶ', 'ಮೈನಾ' ಧಾರಾವಾಹಿ ಒಂದು ಅಂಕ ಏರಿಕೆಯಾಗಿದೆ. ಹಾಗೇ ಪುನೀತ್ ರಾಜ್‌ಕುಮಾರ್ ನಟನೆಯ 'ರಾಜಕುಮಾರ' ಸಿನಿಮಾ ಕೂಡ ಒಳ್ಳೆಯ ಟಿಆರ್‌ಪಿ ಪಡೆದುಕೊಂಡಿದೆ. ಉದಯ ಟಿವಿಯ ಟಾಪ್ 5 ಧಾರಾವಾಹಿ ಹಾಗೂ ಟಿಆರ್‌ಪಿ ಹೀಗಿವೆ.

ಶಾಂತಿ ನಿವಾಸ 2.5
ಶಾಂಭವಿ 2.4
ಸೂರ್ಯವಂಶ 2.4
ಮೈನಾ 2.1
ರಾಜಕುಮಾರ 2.1

More from Filmibeat

English summary
Zee Kannada, Colors Kannada, Star Suvarna, Udaya TV Kannada GEC Feb 12th BAARC report.
Read more about: tv show serial trp
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X