Kannada TV TRP: ಈ ವಾರ ಹೇಗಿದೆ ಟಿಆರ್‌ಪಿ? ಯಾವ ಧಾರಾವಾಹಿ ಟಾಪ್‌?

ಮತ್ತೊಂದು ಗುರುವಾರ ಬಂದಿದೆ. ಕನ್ನಡ ಕಿರುತೆರೆಯ ಧಾರಾವಾಹಿ, ರಿಯಾಲಿಟಿ ಶೋಗಳ ಒಂದು ವಾರದ ಪರ್ಫಾಮೆನ್ಸ್ ಕೂಡ ಹೊರ ಬಿದ್ದಿದೆ. ಟಿಆರ್‌ಪಿ ಬಂತು ಅಂದರೆ, ಕಿರುತೆರೆ ವಾಹಿನಿಗಳಿಗೆ ಟೆನ್ಷನ್ ಶುರುವಾಗುತ್ತೆ. ಕಳೆದ ವಾರ ವೀಕ್ಷಕರನ್ನು ಮೆಚ್ಚಿಸುವುದರಲ್ಲಿ ಯಶಸ್ವಿ ಆಗಿದ್ದೇವೋ ಇಲ್ವೋ ಅಂತ ಫಲಿತಾಂಶಕ್ಕೆ ಕಾಯುವ ದಿನ. ಈ ವಾರ ಕೂಡ ಧಾರಾವಾಹಿಗಳ ಅಂಕಗಳಲ್ಲಿ ಸಿಕ್ಕಾಪಟ್ಟೆ ವ್ಯತ್ಯಾಸ ಆಗಿದೆ.

ಈ ವಾರ ಕೂಡ ಜೀ ಕನ್ನಡ ನಂ 1 ಸ್ಥಾನದಲ್ಲಿದೆ. ಆದರೆ, ಒಟ್ಟು ಟಿಆರ್‌ಪಿಯಲ್ಲಿ ಕುಸಿತ ಕಂಡಿದೆ. ಹಾಗಂತ ಜೀ ಕನ್ನಡ ಒಂದೇ ಅಲ್ಲ. ಸ್ಟಾರ್ ಸುವರ್ಣ, ಕಲರ್ಸ್ ಕನ್ನಡ ಎಲ್ಲವೂ ಮನರಂಜನಾ ವಾಹಿನಿಗಳು ಕುಸಿತ ಕಂಡಿವೆ. ಟಿ20 ವರ್ಲ್ಡ್ ಕಪ್ ಇರೋದ್ರಿಂದ ಈ ಕುಸಿತ ಕಂಡಿರಬಹುದು. ಇನ್ನು ಧಾರಾವಾಹಿಯಿಂದ ಹಿಡಿದು ರಿಯಾಲಿಟಿ ಶೋ ಎಷ್ಟೆಷ್ಟು ಟಿಆರ್‌ಪಿಯನ್ನು ಪಡೆದುಕೊಂಡಿದೆ? ಈ ವಾರ ಬಾರ್ಕ್ (BAARC) ರಿಲೀಸ್ ಮಾಡಿದ ರಿಪೋರ್ಟ್ ಕಾರ್ಡ್‌ನಲ್ಲಿ ಜೀ ಕನ್ನಡ, ಕಲರ್ಸ್ ಕನ್ನಡ, ಸ್ಟಾರ್ ಸುವರ್ಣ ಹಾಗೂ ಉದಯ ಟಿವಿ ಶೋಗಳ ಟಿಆರ್‌ಪಿ ರಿಪೋರ್ಟ್ ಹೀಗಿದೆ.

Zee Kannada Colors Kannada Star Suvarna Udaya TV Kannada GEC Feb 19th BAARC report

ಜೀ ಕನ್ನಡ

ಜೀ ಕನ್ನಡ ಈ ವಾರವೂ ನಂ 1 ಸ್ಥಾನದಲ್ಲಿದೆ. ಒಟ್ಟು ಟಿಆರ್‌ಪಯಲ್ಲಿ ಇಳಿಕೆ ಕಂಡಿದೆ. ಕಳೆದ ವಾರೂ ಕೂಡ ಸ್ವಲ್ಪ ಅಂಕಗಳು ಕಡಿಮೆ ಆಗಿದ್ದವು. ಹೀಗಿದ್ದೂ ಈ ವಾರ ನಂ 1 ಸ್ಥಾನದಲ್ಲಿದೆ. ಹಾಗೇ ಈ ವಾರ ಕೂಡ ಕೆಲವು ಧಾರಾವಾಹಿಗಳ ಟಿಆರ್‌ಪಿಯಲ್ಲಿ ಇಳಿಕೆ ಕಂಡಿದೆ. ಜೀ ಕನ್ನಡದ ಟಾಪ್ 3 ಧಾರಾವಾಹಿಗಳಲ್ಲಿ ಮೇಲೆ ಕೆಳಗೆ ಆಗಿದೆ. 'ಕರ್ಣ', 'ಅಣ್ಣಯ್ಯ' ಹಾಗೂ 'ಲಕ್ಷ್ಮಿ ನಿವಾಸ' ಧಾರಾವಾಹಿಗಳ ಅಂಕಗಳಲ್ಲಿ ವ್ಯತ್ಯಾಸ ಆಗಿದೆ. ಜೀ ಕನ್ನಡ ಟಾಪ್ 5 ಶೋಗಳು ಹೀಗಿವೆ.

ಕರ್ಣ 6.2
ಲಕ್ಷ್ಮಿ ನಿವಾಸ 6.1
ಅಣ್ಣಯ್ಯ 5.8
ಡಿಕೆಡಿ 5.6
ನಾ ನಿನ್ನ ಬಿಡಲಾರೆ 4.9

ಕಲರ್ಸ್ ಕನ್ನಡ

ಕಲರ್ಸ್‌ ಕನ್ನಡ ಬಿಗ್ ಬಾಸ್ ರಿಯಾಲಿಟಿ ಶೋ ಮುಗಿದ ಬಳಿಕ ಟಿಆರ್‌ಪಿ ಸ್ವಲ್ಪ ಮಟ್ಟಿಗೆ ಡ್ರಾಪ್ ಆಗಿದೆ. ಎರಡನೇ ಸ್ಥಾನದಿಂದ ಈ ವಾರ ಮೂರನೇ ಸ್ಥಾನಕ್ಕೆ ಹೋದ್ಮೇಲೆ ಟಾಪ್ 3 ಧಾರಾವಾಹಿಗಳಾದ 'ನಂದ ಗೋಕುಲ', 'ಮುದ್ದು ಸೊಸೆ' ಹಾಗೂ 'ಪ್ರೇಮ ಕಾವ್ಯ' ಧಾರಾವಾಹಿಗಳ ಟಿಆರ್‌ಪಿಯಲ್ಲಿ ಈ ವಾರ ಬದಲಾವಣೆಯಾಗಿದೆ. ಕಲರ್ಸ್ ಕನ್ನಡ ವಾಹಿನಿಯ ಟಾಪ್ 5 ಸೀರಿಯಲ್‌ಗಳ ಟಿಆರ್‌ಪಿ ಹೀಗಿದೆ.

Zee Kannada Colors Kannada Star Suvarna Udaya TV Kannada GEC Feb 19th BAARC report

ನಂದ ಗೋಕುಲ 4.2
ಮುದ್ದು ಸೊಸೆ 4.0
ಪ್ರೇಮ ಕಾವ್ಯ 3.7
ಗಿಚ್ಚಿ ಗಿಲಿ ಗಿಲಿ 3.5
ಭಾಗ್ಯಲಕ್ಷ್ಮಿ 3.3

ಸ್ಟಾರ್ ಸುವರ್ಣ

ಸ್ಟಾರ್ ಸುವರ್ಣ 2ನೇ ಸ್ಥಾನಕ್ಕೇನೋ ಏರಿದೆ. ಆದರೆ, ಈ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಧಾರಾವಾಹಿಗಳು ಕೂಡ ಕುಸಿದಿದೆ. ಟಾಪ್ 5 ಧಾರಾವಾಹಿಗಳಾದ 'ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ' ಈ ವಾರ ಡ್ರಾಪ್ ಆಗಿದೆ. 'ನಿನ್ನ ಜೊತೆ ನನ್ನ ಕಥೆ' ಟಾಪ್‌ಗೆ ಬಂದಿದೆ. ಹಾಗೇ 'ಶಾರದೆ', 'ಆಸೆ' ಹಾಗೂ 'ವಸುದೇವ ಕುಟುಂಬ' ಧಾರಾವಾಹಿಯ ಟಿಆರ್‌ಪಿಯಲ್ಲಿ ಬದಲಾವಣೆಯಾಗಿದೆ. ಸ್ಟಾರ್ ಸುವರ್ಣದ ಟಾಪ್‌ 5 ಸೀರಿಯಲ್‌ಗಳು ಹೀಗಿವೆ.

ನಿನ್ನ ಜೊತೆ ನನ್ನ ಕಥೆ 3.8
ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ 3.6
ಶಾರದೆ 3.3
ವಸುದೇವ ಕುಟುಂಬ 3.2
ಆಸೆ 3.2

ಉದಯ ಟಿವಿ

ಇನ್ನು ಈ ವಾರ ಉದಯ ಟಿವಿಯ ಟಿಆರ್‌ಪಿ ಕೂಡ ಕುಸಿದಿದೆ. ಟಾಪ್‌ನಲ್ಲಿ 'ಶಾಂಭವಿ' ಧಾರಾವಾಹಿ ಮತ್ತೆ ಟಾಪ್‌ಗೆ ಬಂದಿದೆ. 2ನೇ ಸ್ಥಾನಕ್ಕೆ ಕುಸಿದಿದ್ದು, 'ಶಾಂತಿ ನಿವಾಸ' ಕುಸಿದಿದೆ. ಇನ್ನು 'ಸೂರ್ಯವಂಶ', 'ಮೈನಾ' ಧಾರಾವಾಹಿಯ ಟಿಆರ್‌ಪಿಯಲ್ಲೂ ವ್ಯತ್ಯಾಸ ಆಗಿದೆ. ಉದಯ ಟಿವಿಯ ಟಾಪ್ 5 ಧಾರಾವಾಹಿ ಹಾಗೂ ಟಿಆರ್‌ಪಿ ಹೀಗಿವೆ.

ಶಾಂಭವಿ 2.5
ಶಾಂತಿ ನಿವಾಸ 2.3
ಸೂರ್ಯವಂಶ 2.2
ಮೈನಾ 2.1
ರಾಜಕುಮಾರ 2.0

More from Filmibeat

English summary
Zee Kannada, Colors Kannada, Star Suvarna, Udaya TV Kannada entertainment channel Feb 19th BAARC report;
Read more about: tv show serial trp
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X