Puttakkana Makkalu: ಪೊಲೀಸ್ ಹೇಳಿಕೆಯಿಂದ ತಣ್ಣಗಾಗುತ್ತಾ ವೀಕ್ಷಕರ ಮನಸ್ಸು?

ಇದು ಧಾರಾವಾಹಿಗಳ ಕಾಲ ಅನ್ನೋದು ಸಪರೇಟ್ ಆಗಿ ಹೇಳಬೇಕಿಲ್ಲ. ಸದ್ಯದ ಧಾರಾವಾಹಿಗಳನ್ನು ನೋಡುತ್ತಾ ಇದ್ದರೆ ಯಾವ ಸಿನಿಮಾ ರೇಂಜಿಗೂ ಕಡಿಮೆ ಇಲ್ಲ ಅನ್ನೋದು ಈಗಾಗಲೇ ಪ್ರೂವ್ ಆಗಿದೆ. ಧಾರಾವಾಹಿ ನೋಡದವರು ಈಗ ಸೀರಿಯಲ್ ನೋಡುವುದಕ್ಕೆ ಶುರು ಮಾಡಿದ್ದಾರೆ. ಅದರಲ್ಲೂ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಎಲ್ಲರ ಅಚ್ಚುಮೆಚ್ಚಿನ ಸೀರಿಯಲ್ ಆಗಿದೆ.

'ಪುಟ್ಟಕ್ಕನ ಮಕ್ಕಳು' ಸೀರಿಯಲ್ ಟಿಆರ್‌ಪಿಯಲ್ಲೂ ಮೊದಲಿನಿಂದ ನಂಬರ್ ಸ್ಥಾನವನ್ನೇ ಉಳಿಸಿಕೊಂಡು ಬಂದಿದೆ. ಪ್ರತಿದಿನ ಎಲ್ಲಿಯೂ ಬೋರ್ ಆಗದ ರೀತಿಯಲ್ಲಿ ಕಥೆ ಸಾಗುತ್ತಾ ಇದೆ. ಆದರೆ ಕಳೆದ ಒಂದು ವಾರದಿಂದ ಪುಟ್ಟಕ್ಕನ ಮಕ್ಕಳನ್ನು ಕಂಡು ವೀಕ್ಷಕರ ಮನಸ್ಸು ವಿಲವಿಲ ಅಂತ ಒದ್ದಾಡುತ್ತಿದೆ. ಕಾರಣ ಪುಟ್ಟಕ್ಕನಿಗೆ ಬಂದಿರೊ ಹಲವು ಸಂಕಷ್ಟಗಳು. ಇನ್ನೇನು ಮನೆ, ಮೆಸ್ಸು ಕಳೆದುಕೊಂಡ ಪುಟ್ಟಕ್ಕ ಬೀದಿಗೆ ಬಂದು ಬಿಡುತ್ತಾರಾ..? ಮುಂದೆ ಏನು ಅನ್ನೋ ರೇಂಜಿಗೆ ವೀಕ್ಷಕರೇ ಟೆನ್ಶನ್ ಆಗಿದ್ದಾರೆ.

ಪುಟ್ಟಕ್ಕನ ಸ್ಥಿತಿಗೆ ವೀಕ್ಷಕರೇ ಫುಲ್ ಟೆನ್ಸನ್

ಯಾಕೆಂದರೆ ಪುಟ್ಟಕ್ಕನ ಗಂಡನ ಎರಡನೇ ಹೆಂಡತಿ ರಾಜೇಶ್ವರಿಗೆ ಪುಟ್ಟಕ್ಕನ ಮೇಲೆ ಸಹಿಸಲಾರದ ಹಗೆತನ. ಒಟ್ಟಾರೆ ಪುಟ್ಟಕ್ಕನ ರಾಜೇಶ್ವರಿ ಕಾಲಿಗೆ ಬಿದ್ದು ತಪ್ಪಾಯ್ತು ಅಂತ ಕ್ಷಮೆ ಕೇಳಬೇಕು. ಆದರೆ ಪುಟ್ಟಕ್ಕ ಅಷ್ಟು ಸ್ವಾಭಿಮಾನ ಬಿಟ್ಟುಕೊಡೋದಕ್ಕೆ ಪ್ರೇಕ್ಷಕರು ಕೂಡ ಒಪ್ಪಲ್ಲ. ಆ ಹಠ ಇದೀಗ ಪಂಚಾಯತಿ ಕಟ್ಟೆ ತನಕ ಬಂದು ನಿಂತಿದೆ. ಬಂಗಾರಮ್ಮ ಈ ಪಂಚಾಯತಿ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಬಂಗಾರಮ್ಮನಿಗೂ ಗೊತ್ತು ಪುಟ್ಟಕ್ಕ ಅದೆಷ್ಟು ಮುಗ್ಧೆ ಅಂತ. ಆದರೆ, ಬಂಗಾರಮ್ಮನ ಪ್ರಶ್ನೆಗಳಿಗೆ ಪುಟ್ಟಕ್ಕನ ಬಳಿ ಸಮಂಜಸವಾದ ಉತ್ತರಗಳು ಸಿಗುತ್ತಿಲ್ಲ.

Zee Kannada Famous serial Umashree acted Kannada serial puttakkana makkalu March 17th episode

ಸಾಲ ತೆಗೆದುಕೊಳ್ಳಲು ಬಂದು ಯಾಕೆ ತೆಗೆದುಕೊಂಡಿಲ್ಲ ಅನ್ನೋ ಪ್ರಶ್ನೆಗೂ ಧೈರ್ಯವಾಗಿ ಪುಟ್ಟಕ್ಕ ಉತ್ತರ ಹೇಳಲಾಗುತ್ತಿಲ್ಲ. ಇತ್ತ ಇನ್ನೇನು ಪುಟ್ಟಕ್ಕನ ವಿರುದ್ಧ ತೀರ್ಪು ಹೊರ ಬೀಳುವ ಸಾಧ್ಯತೆ ಇದೆ. ಅತ್ತ ಕಂಠಿ ತಮ್ಮ ಅತ್ತೆಗೂ ಅಮ್ಮನಿಗೂ ಯಾವುದೇ ಅನ್ಯಾಯವಾಗಬಾರದು ಎಂಬ ಉದ್ದೇಶಕ್ಕೆ ಪೊಲೀಸಪ್ಪನ ಹುಡುಕಾಟದಲ್ಲಿದ್ದಾರೆ. ಇತ್ತ ರಾತ್ರಿ ಸಿಕ್ಕಾತ ಬೆಳಗ್ಗೆ ನಾಪತ್ತೆಯಾಗಿದ್ದಾನೆ.

ಪುಟ್ಟಕ್ಕನಿಗೆ ನ್ಯಾಯ ಸಿಗಲು ಇರುವ ದಾರಿ ಏನು?

ಪುಟ್ಟಕ್ಕನಿಗೆ ನ್ಯಾಯ ಸಿಗಬೇಕು ಎಂದರೆ ಎರಡೇ ದಾರಿ ಇರುವುದು. ಒಂದು ಪೊಲೀಸಪ್ಪ ಬಂದು ನಿಜ ಹೇಳಬೇಕು. ಇಲ್ಲ ಹೇಗಾದರೂ ಮಾಡಿ ಆ ಹತ್ತು ಲಕ್ಷ ಹಣವನ್ನ ಪುಟ್ಟಕ್ಕ ರಾಜೇಶ್ವರಿಗೆ ವಾಪಾಸ್ ಕೊಡಬೇಕು. ಎರಡನೇಯದಂತು ಸಾಧ್ಯವೇ ಇಲ್ಲ. ಯಾಕಂದ್ರೆ ಕೊನೆ ಮಗಳು ಸುಮ ಕಾಲೇಜು ಫೀಸ್ ಕಟ್ಟೋದಕ್ಕೆ ಪುಟ್ಟಕ್ಕನ ಪುಟ್ಟ ಬ್ಯಾಂಕ್ ಹೊಡೆದಾಗಿತ್ತು. ಇನ್ನು ಹತ್ತು ಲಕ್ಷ ಎಲ್ಲಿಂದ ತರಬೇಕು. ಇನ್ನು ಸ್ನೇಹ ಇದ್ದಿದ್ದರೆ ಈ ಸಮಸ್ಯೆ ಇಷ್ಟು ದೊಡ್ಡದಾಗುತ್ತಿರಲಿಲ್ಲ. ಸಮಸ್ಯೆ ಮತ್ತಷ್ಟು ಉಲ್ಬಣಿಸಬಾರದು ಎಂಬ ಕಾರಣಕ್ಕೆ ಪುಟ್ಟಕ್ಕ ಸ್ನೇಹಾಳನ್ನ ಮೈಸೂರಿಗೆ ಕಳುಹಿಸಿ ಆಗಿದೆ. ಸುಮ ಮತ್ತು ಪುರ್ಷಿ ಸಾಕಷ್ಟು ಶ್ರಮ ಹಾಕುತ್ತಿದ್ದಾರೆ. ಇಷ್ಟೆಲ್ಲ ಟೆನ್ಶನ್‌ಗಳ ನಡುವೆ ಒಂದು ಸಮಾಧಾನ ಅಂದರೆ, ಪೊಲೀಸಪ್ಪ ಪ್ರತ್ಯಕ್ಷ ಆಗಿರೋದು.

Zee Kannada Famous serial Umashree acted Kannada serial puttakkana makkalu March 17th episode

ಪುಟ್ಟಕ್ಕ ದೂರು ನೀಡಲು ಹೋದಾಗ ಇದೇ ಪೊಲೀಸಪ್ಪ ತೆಗೆದುಕೊಂಡಿರಲಿಲ್ಲ. ಆಗ ಗೋಪಾಲ-ರಾಜೇಶ್ವರಿ ಕಡೆಗೆ ಇದ್ದ. ಇದೀಗ ಕಂಠಿ ತನ್ನ ಕೈ ರುಚಿ ತೋರಿಸಿ ಪಂಚಾಯತಿಗೆ ನ್ಯಾಯ ಹೇಳೋದಕ್ಕೆ ಕಳುಹಿಸಿದ್ದಾನೆ. ಜೊತೆಗೆ ರಾಜೇಶ್ವರಿ ತಮ್ಮ ಅದೇ ಹಣ ಕಿತ್ತುಕೊಂಡು ಹೋದವನನ್ನು ಪೊಲೀಸರು ಎಳೆದು ತಂದಿದ್ದಾರೆ. ಈ ಎಪಿಸೋಡ್ ಪ್ರೇಕ್ಷಕರಿಗೆ ಎಕ್ಸೈಟ್‌ಮೆಂಟ್ ಉಂಟು ಮಾಡಿರೋದಂತು ಸತ್ಯ.

More from Filmibeat

English summary
Zee Kannada Famous serial Kannada serial puttakkana makkalu March 17th episode. Here is more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X