Comedy Khiladigalu Premier League: ಹೊಸ ಸ್ಟೈಲ್‌ನಲ್ಲಿ ಜೀ ಕನ್ನಡದ ಕಾಮಿಡಿ ಶೋ; ವಿಶೇಷತೆಗಳೇನು?

By ಅನಿತಾ ಬನಾರಿ

ಕನ್ನಡ ಬಹಳ ಫೇಮಸ್ ರಿಯಾಲಿಟಿ ಶೋ 'ಕಾಮಿಡಿ ಕಿಲಾಡಿಗಳು' ಇದೀಗ ಹೊಸ ಮುಖವನ್ನು ಇಟ್ಟುಕೊಂಡು ಹೊರ ಬರುತ್ತಿದೆ. ಹೌದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ 'ಕಾಮಿಡಿ ಕಿಲಾಡಿಗಳು' ರಿಯಾಲಿಟಿ ಶೋ ಇದೀಗ 'ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್' ಎಂಬ ಹೊಸ ಟೈಟಲ್ ಇಟ್ಟುಕೊಂಡು ಹೊರಬರಲಿದೆ.

ಅಂದ ಹಾಗೆ ಇತ್ತೀಚೆಗಷ್ಟೇ ಜೀ ಕನ್ನಡ ವಾಹಿನಿ ಹೊರ ಬಿಟ್ಟಿರುವ ಪ್ರೋಮೊ 'ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್'ನ ವಿಶೇಷ ಆಯಾಮಗಳನ್ನು ಹೊರಹಾಕಿದೆ. ಕಿರುತೆರೆಯ ಈ ಹೊಸ ಪ್ರಯತ್ನ ನೋಡುವುದಕ್ಕೆ ವೀಕ್ಷಕರು ಫಿದಾ ಆಗಿದ್ದಾರೆ.

Comedy Khiladigalu Premier League

ಹೌದು, ನವರಸ ನಾಯಕ ಜಗ್ಗೇಶ್ ಪ್ರಮುಖವಾಗಿ ಕಾಣಿಸಿಕೊಂಡಿದ್ದು, ನಿರೂಪಕರಾದ ಅನುಶ್ರೀ, ಅಕುಲ್ ಬಾಲಾಜಿ, ಮಾಸ್ಟರ್ ಆನಂದ್, ಶ್ವೇತಾ ಹಾಗೂ ಕುರಿ ಪ್ರತಾಪ್ ಆಡಿಷನ್ ಕೊಡಲು ನಟ ಜಗ್ಗೇಶ್ ಅವರ ಬಳಿ ಹೋಗುತ್ತಾರೆ. ಆಗ ನೀವ್ಯಾರು ಈ ಶೋನಲ್ಲಿ ನಿರೂಪಕರಾಗಿ ಇರುವುದಿಲ್ಲ ಎಂದು ಜಗ್ಗೇಶ್ ಹೇಳುತ್ತಾರೆ. ಇದೇನಪ್ಪ ಹೀಗಾಯ್ತು ಎನ್ನುವಾಗಲೇ ಜಡ್ಜಸ್ ನಿರೂಪಣೆ ಮಾಡುವುದುಂಟೇ?! ಎಂಬ ಪ್ರಶ್ನೆ ಬರುತ್ತದೆ. ಅಂದರೆ, ಈ ಎಲ್ಲಾ ನಿರೂಪಕರು ಈ ಬಾರಿ ಜಡ್ಜಸ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ರೀತಿಯಾಗಿ ಕಾಮಿಡಿ ಕಿಲಾಡಿಗಳು ಶೋ ಕಾಮಿಡಿ ಪ್ರಿಮಿಯರ್ ಲೀಗ್ ಆಗಿ ಹಾಗೆ ನಿರೂಪಕರೆಲ್ಲರೂ ಜಡ್ಜಸ್ ಆಗಿ ಮೊದಲ ಬಾರಿಗೆ ಕಾಣಿಸಿಕೊಳ್ಳಲಿದ್ದಾರೆ. ಹಾಗಾದರೆ ಈ ಕಾಮಿಡಿ ಶೋ ಅನ್ನು ನಿರೂಪಿಸುವವರು ಯಾರು ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮನೆ ಮಾಡಿದೆ.

ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಕನ್ನಡದ ಕಿರುತೆರೆ ನಟ ತಾರಕ್ ಪೊನ್ನಪ್ಪ; ಯಾವುದದು?
ಆದರೆ ಈ ಕುತೂಹಲಕ್ಕೆ ಉತ್ತರ ಮಾತ್ರ ಸದ್ಯದಲ್ಲೇ ಸಿಗಲಿದೆ. ಒಟ್ಟಿನಲ್ಲಿ ಹೊಸ ರೀತಿಯಲ್ಲಿ ಶುರುವಾಗುತ್ತಿರುವ ಈ ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಯಾವ ರೀತಿ ಜನರನ್ನು ರಂಜಿಸಲು ಸಜ್ಜಾಗಿದೆ ಎಂಬುದನ್ನು ಕಾದು ನೋಡಬೇಕಿದೆ.

ಪ್ರೋಮೋ ಬಿಡುಗಡೆಯಾದಾಗಿನಿಂದ ಜನರಲ್ಲಿ ಬಹಳಷ್ಟು ಕುತೂಹಲ ಮೂಡಿದ್ದು, ಪ್ರೋಮೊ ಕೂಡ ಬಹಳ ಎಂಟರ್ಟೈನಿಂಗ್ ಆಗಿ ಕಾಣಿಸಿದೆ. ರಿಯಾಲಿಟಿ ಶೋನಲ್ಲಿ ಭಾಗವಹಿಸುವ ಸ್ಪರ್ಧಿಗಳಲ್ಲೂ ಒಂದು ವಿಭಿನ್ನತೆ ಇದೆ. ವೃತ್ತಿಪರ ಕಾಮಿಡಿಯನ್ಸ್ ಜೊತೆಗೆ ಹೊಸ ಕಾಮಿಡಿಯನ್ಸ್ ನ ಸಮ್ಮಿಶ್ರಣ ಇದಾಗಲಿದೆ ಎನ್ನುವುದು ಮತ್ತಷ್ಟು ಆಸಕ್ತಿದಾಯಕವಾಗಿ ಕಾಣುತ್ತಿದೆ.

More from Filmibeat

English summary
Zee Kannada is all set to entertain the viewers with Comedy Khiladigalu Premier League
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X