'ಕೃಷ್ಣ ರುಕ್ಕು' ಸುಂದರ ಕಥೆ ಭರ್ಜರಿ ರೆಸ್ಪಾನ್ಸ್; ಮತ್ತೆ ಗೆದ್ದ ಮೌನ ಗುಡ್ಡೆಮನೆ
ಜೀ ಕನ್ನಡ ವಾಹಿನಿ ತನ್ನ ವೀಕ್ಷಕರಿಗೆ ಅಂತ ಹೊಚ್ಚ ಹೊಸ ಧಾರಾವಾಹಿಗಳನ್ನು ಲಾಂಚ್ ಮಾಡುತ್ತಲೇ ಇರುತ್ತೆ. ಹೀಗೆ ಇತ್ತೀಚೆಗೂ ಹೊಚ್ಚ ಹೊಸ ಧಾರಾವಾಹಿಯನ್ನು ಪ್ರಸಾರ ಮಾಡುತ್ತಿದೆ. ಅದುವೇ 'ಕೃಷ್ಣ ರುಕ್ಕು'. ಈ ಧಾರಾವಾಹಿ ಆರಂಭ ಆಗಿ ಕೆಲವೇ ದಿನಗಳು ಆಗಿವೆ. ಆಗಲೇ ಕಿರುತೆರೆ ವೀಕ್ಷಕರ ಮನಗೆದ್ದಿದೆ. ಇದೊಂದು ಕೌಟುಂಬಿಕ ಧಾರಾವಾಹಿ ಆಗಿದ್ದರಿಂದ ಕನ್ನಡಿಗರಿಗೆ ಇಷ್ಟ ಆಗುತ್ತಿದೆ.
ಇತ್ತೀಚೆಗೆ ಧಾರಾವಾಹಿಯಲ್ಲಿ ಪ್ರಮುಖವಾದ ಎಪಿಸೋಡ್ ನಡೆಯುತ್ತಿದೆ. ಕಲ್ಯಾಣಿ ಹಾಗೂ ವಿನಯ್ ಅವರ ಕಲ್ಯಾಣೋತ್ಸವ ನಡೆಯುತ್ತಿದೆ. ಅದಕ್ಕೆ ಧಾರಾವಾಹಿಯ ನಾಯಕ-ನಾಯಕಿ ಸೇರಿದಂತೆ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವವರು ಭರ್ಜರಿ ಪ್ರಚಾರ ಮಾಡಿದ್ದರು. ವೀಕ್ಷಕರ ಮನೆಗಳಿಗೆ ತೆರಳಿ ಕಲ್ಯಾಣೋತ್ಸವವನ್ನು ವೀಕ್ಷಣೆ ಮಾಡುವಂತೆ ಮನವಿ ಮಾಡಿಕೊಂಡಿದ್ದರು.

ಮದುವೆಯ ಆಮಂತ್ರಣ ಪತ್ರಿಕೆಯನ್ನು ಹಿಡಿದು ದೇವಸ್ಥಾನಗಳಿಗೆ ತೆರಳಿದ್ದರು. ಅಲ್ಲಿ ನೆರೆದಿದ್ದ ಜನರು ಕೊಟ್ಟು ಆಹ್ವಾನ ನೀಡಲಾಗಿತ್ತು. ಸಹೋದರನ ಮದುವೆಗೆ ಬರುವಂತೆ ಮದುವೆ ಕಾರ್ಡ್ಕ ಕೊಟ್ಟಿದ್ದರು. ದೊಡ್ಡ ತಾರಾಗಣವಿರುವ ಈ ಧಾರಾವಾಹಿ ಈಗ ವೀಕ್ಷಕರಿಗೆ ಟ್ವಿಸ್ಟ್ ಅಂಡ್ ಟರ್ನ್ ಕೊಟ್ಟು ರಂಜಿಸುತ್ತಿದೆ. ಹೀಗಾಗಿ ವೀಕ್ಷಕರಿಂದ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ.
'ಕೃಷ್ಣ ರುಕ್ಕು' ಕರ್ನಾಟಕದ ಜನ ಮನ ಗೆದ್ದ ಸುಂದರ ಕಥೆಯಾಗಿ ಹೊರಹೊಮ್ಮಿದೆ. ಪ್ರತಿದಿನ ಸಂಜೆ ಜೀ ಕನ್ನಡದಲ್ಲಿ 6.30ಕ್ಕೆ ಪ್ರಸಾರ ಆಗುತ್ತಿದೆ. ಪ್ರೈಮ್ ಟೈಮ್ ಶುರುವಾಗುವ ಸಮಯದಲ್ಲಿ 'ಕೃಷ್ಣ ರುಕ್ಕು' ಕನ್ನಡಿಗರ ಮನೆಗಳಿಗೆ ಎಂಟ್ರಿ ಕೊಡುತ್ತಿದ್ದಾರೆ. ಹೀಗಾಗಿ ಈ ಧಾರಾವಾಹಿ ಕಡಿಮೆ ಸಮಯದಲ್ಲಿ ಹೆಚ್ಚು ಪ್ರೀತಿ ಗಳಿಸಿ ಮುನ್ನುಗ್ಗುತ್ತಿದೆ. ಅಂದ್ಹಾಗೆ ಈ ಧಾರಾವಾಹಿಯ ಪ್ರಮುಖ ಪಾತ್ರದಲ್ಲಿ ಅಕ್ಷಯ್ ನಾಯಕ್ ಹಾಗೂ ಮೌನ ಗುಡ್ಡೆಮನೆ ನಟಿಸುತ್ತಿದ್ದಾರೆ.
ಮೌನ ಗುಡ್ಡೆಮನೆ ಈಗಾಗಲೇ ಕಿರುತೆರೆ ವೀಕ್ಷಕರ ಫೇವರಿಟ್ ನಟಿಯಾಗಿದ್ದಾರೆ. ಸ್ಮಾಲ್ ಸ್ಕ್ರೀನ್‌ನ ಈ ಜನಪ್ರಿಯ ಫೇಸ್ ಮತ್ತೆ ರಂಜಿಸುತ್ತಿದ್ದಾರೆ. ಇವರೊಂದಿಗೆ ಕಲಾ ಸಾಮ್ರಾಟ್ ಎಸ್. ನಾರಾಯಣ್ ಕೂಡ ಮತ್ತೊಂದು ಪವರ್‌ಫುಲ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಸುಚಿತ್ರಾ ಸೇರಿದಂತೆ ಅನುಪ್ರಭಾಕರ್ ಕೂಡ ನಟಿಸುತ್ತಿದ್ದಾರೆ. ಹೀಗಾಗಿ ಅದ್ಧೂರಿ ತಾರಾಗಣವೇ ಈ ಸೀರಿಯಲ್‌ನಲ್ಲಿ ಇದೆ. ಅನು ಪ್ರಭಾಕರ್ ಕಿರಿತೆರೆ ಎಂಟ್ರಿ ವೀಕ್ಷಕರಿಗಂತೂ ಸಖತ್ ಕಿಕ್ ಕೊಟ್ಟಿದೆ.
ಇನ್ನು 'ಕೃಷ್ಣ ರುಕ್ಕು ಧಾರಾವಾಹಿಯ ನಾಯಕ, ಅಂದರೆ ಕೃಷ್ಣನ ಪಾತ್ರದಲ್ಲಿ ಅಕ್ಷಯ್ ನಾಯಕ್ ನಟಿಸುತ್ತಿದ್ದಾರೆ. ಸದ್ಯ ಧಾರಾವಾಹಿಯಲ್ಲಿ 'ಕೃಷ್ಣ ರುಕ್ಕು' ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಕಲ್ಯಾಣಿ ಹಾಗೂ ವಿನಯ್ ಅವರ ಕಲ್ಯಾಣೋತ್ಸವ ನಡೆಯುತ್ತಿದೆ. ಹೇಗಾದರೂ ಮಾಡಿ ಕೃಷ್ಣ ಹಾಗೂ ರುಕ್ಕು ಇಬ್ಬರೂ ಜೊತೆ ಸೇರಿಕೊಂಡು ಕಲ್ಯಾಣಿ-ವಿನಯ್ ಮದುವೆಯನ್ನು ಯಶಸ್ಸುಗೊಳಿಸುವುದಕ್ಕೆ ಪಣ ತೊಟ್ಟಿದ್ದಾರೆ.
ಈ ಹಾದಿಯಲ್ಲಿ ಕೃಷ್ಣ ರುಕ್ಕು ಹತ್ತಿರವಾಗ್ತಾರಾ? ಇಬ್ಬರಲ್ಲೂ ಆತ್ಮೀಯತೆ ಮೂಡುತ್ತಾ ಅನ್ನೋ ಮುಂದಿನ ಸಂಚಿಕೆಗಳಲ್ಲಿ ಗೊತ್ತಾಗಲಿದೆ. ಈ ವಿಶೇಷ ಸಂಚಿಕೆಗಳಲ್ಲಿ ಎಲ್ಲರ ಗಮನ ಸೆಳೆದಿರುವುದು ಸ್ಯಾಂಡಲ್‌ವುಡ್‌ನ ನಗು ಮೊಗದ ಚೆಲುವೆ ಅನು ಪ್ರಭಾಕರ್. ವಿಶೇಷ ಸಂಚಿಕೆಗಳಲ್ಲಿ ಕಾಣಿಸಿಕೊಂಡಿರುವ ಇವರು ಈ ಧಾರಾವಾಹಿಯ ಮುಂದಿನ ಸಂಚಿಕೆಗಳಲ್ಲೂ ಮುಂದುವರೆಯಲಿದ್ದಾರಾ? ಅನ್ನೋದು ಕೂಡ ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ.
ಈಗ ಸದ್ಯಕ್ಕೆ ಕಲ್ಯಾಣೋತ್ಸವದ ಮಧ್ಯೆ ಹಲವು ವಿಘ್ನಗಳು ಎದುರಾಗುತ್ತಿವೆ. ಮೊದಲು ಧಾರಾವಾಹಿಯ ನಾಯಕಿ ಕೃಷ್ಣನೇ ಮದುವೆ ಮನೆಯಿಂದ ಗಡಿಪಾರಾಗಿದ್ದಾನೆ. ಈ ಗಡಿ ದಾಟಿ ಬರೋದು ಹೇಗೆ? ಸಮಸ್ಯೆಗಳನ್ನೆಲ್ಲಾ ಕೃಷ್ಣ ರುಕ್ಕು ಜೊತೆಯಾಗಿ ಸರಿ ಪಡಿಸುತ್ತಾರಾ? ಎಂಬುದು ಸದ್ಯ ಧಾರಾವಾಹಿಯಲ್ಲಿ ಕುತೂಹಲ ಮೂಡಿಸಿದೆ.


Click it and Unblock the Notifications
