ಜೀ ಕನ್ನಡ ಕುಟುಂಬ ಅವಾರ್ಡ್ಸ್-2025: ರಿಷಬ್ ಶೆಟ್ಟಿ, ಶಿವಣ್ಣ, ಉಪೇಂದ್ರ ಮಹಾ ಸಂಗಮ
ಕನ್ನಡ ಕಿರುತೆರೆಯ ಪ್ರಶಸ್ತಿ ಸಮಾರಂಭದ ಸೀಸನ್ ಆರಂಭ ಆಗಿದೆ. ಸಿನಿಮಾ ಅಷ್ಟೇ ಅಲ್ಲ, ಕಿರುತೆರೆಯಲ್ಲಿ ಅವಾರ್ಡ್ ಕಾರ್ಯಕ್ರಮಗಳು ಕೂಡ ಅದ್ಧೂರಿಯಾಗಿ ಆರಂಭ ಆಗುತ್ತವೆ. ಅದರಲ್ಲಿ ಜೀ ಕನ್ನಡದ ಕುಟುಂಬ ಅವಾರ್ಡ್ಸ್ ಕೂಡ ಒಂದು. ಇಲ್ಲಿ ಸಿನಿಮಾ ಹಾಗೂ ಕಿರುತೆರೆಯ ಸ್ಟಾರ್‌ಗಳ ಮಹಾ ಸಂಗಮ ಆಗುತ್ತೆ. ಪ್ರಶಸ್ತಿಗಳು, ಮನರಂಜನಾ ಕಾರ್ಯಕ್ರಮಗಳು, ಕಾಮಿಡಿ ಎಲ್ಲವೂ ಇರುತ್ತೆ.
2025ರ ಜೀ ಕನ್ನಡದ ಕುಟುಂಬ ಅವಾರ್ಡ್ಸ್ ಬಂದೇ ಬಿಟ್ಟಿದೆ. ಇದೇ ವೀಕೆಂಡ್‌ನಲ್ಲಿ ಅದ್ಧೂರಿಯಾಗಿ ಪ್ರಶಸ್ತಿ ಸಮಾರಂಭ ನಡೆಯಲಿದೆ. ಜೀ ಕನ್ನಡ ವಾಹಿನಿಯಲ್ಲಿ ಸಾಧನೆ ಮಾಡಿದ ತಾರೆಗಳಿಗೆ, ತಂತ್ರಜ್ಞರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. ಕಿರುತೆರೆ ವೀಕ್ಷಕರು ಕಾತುರದಿಂದ ಕಾಯುತ್ತಿರುವ ಈ ಸಮಾರಂಭದಲ್ಲಿ ಎಂಟರ್ಟೈನ್ಮೆಂಟ್‌ನ ಮಹಾಪರ್ವವೇ ಇರುತ್ತೆ ಅನ್ನೋದು ಜೀ ಕನ್ನಡ ಬಿಡುಗಡೆ ಮಾಡಿದ ಪ್ರೋಮೊಗಳೇ ಸಾಕ್ಷಿ.

2025ರ 'ಜೀ಼ ಕನ್ನಡ ಕುಟುಂಬ ಅವಾರ್ಡ್ಸ್‌ನಲ್ಲಿ ಆರು ಪ್ರಮುಖ ಕೆಟಗರಿಯಲ್ಲಿ ಪ್ರಶಸ್ತಿಯನ್ನು ನೀಡಲಾಗುತ್ತೆ. ಫೇವರಿಟ್ ನಟ, ಫೇವರಿಟ್ ನಟಿ, ಫೇವರಿಟ್ ಜೋಡಿ, ಫೇವರಿಟ್ ಸೀರಿಯಲ್, ಫೇವರಿಟ್ ರಿಯಾಲಿಟಿ ಶೋ ಮತ್ತು ಫೇವರಿಟ್ ನಿರೂಪಕ/ನಿರೂಪಕಿ ಅಂತ ಪ್ರಶಸ್ತಿಗಳನ್ನು ನೀಡಲಾಗುತ್ತೆ. ಈ ಆರು ಪ್ರಮುಖ ಕೆಟಗರಿ ಜೊತೆಗೆ ಇನ್ನೂ ಅನೇಕ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಹೀಗಾಗಿ ಈ ವೀಕೆಂಡ್‌ನಲ್ಲಿ ಮನರಂಜನೆ ಜೊತೆಗೆ ಪ್ರಶಸ್ತಿ ಸಮಾರಂಭ ಮಸ್ತ್ ಆಗಿರುತ್ತೆ.
ಜೀ ಕನ್ನಡ ಕುಟುಂಬ ಅವಾರ್ಡ್ಸ್-2025ಗೆ ಕಿರುತೆರೆ ತಾರೆಯರಿಗೆ ಪ್ರಶಸ್ತಿ ನೀಡುವುದರ ಜೊತೆಗೆ ಮನರಂಜನೆಗೂ ಪ್ರಾಮುಖ್ಯತೆ ಇರುತ್ತೆ. ಈ ಸಮಾರಂಭದಲ್ಲಿ ಸ್ಯಾಂಡಲ್‌ವುಡ್‌ನ ಸ್ಟಾರ್‌ಗಳು, ಕಿರುತೆರೆ ಕಲಾವಿದರು ಜೊತೆಯಾಗಿ ಸೇರಿ ಸಂಭ್ರಮಿಸಿರೋದು ಈ ಪ್ರಶಸ್ತಿ ಸಮಾರಂಭದ ಪ್ರಮುಖ ಆಕರ್ಷಣೆ. ನೆಚ್ಚಿನ ಸ್ಟಾರ್‌ಗಳು ತಮ್ಮ ಅವಿಸ್ಮರಣೀಯ ಕ್ಷಣಗಳು ಸುಂದರ ಮತ್ತು ನೋವಿನ ಕ್ಷಣಗಳನ್ನು ಮೆಲುಕು ಹಾಕುತ್ತಾ ವೀಕ್ಷಕರಿಗೆ ಇನ್ನಷ್ಟು ಹತ್ತಿರವಾಗುವದರಲ್ಲಿ ಎರಡು ಮಾತಿಲ್ಲ.
ಈ ವರ್ಷದ ಜೀ ಕನ್ನಡ ಅವಾರ್ಡ್ಸ್‌ನಲ್ಲಿ 'ಕಾಂತಾರ ಚಾಪ್ಟರ್ 1' ನಿರ್ದೇಶಕ ರಿಷಬ್ ಶೆಟ್ಟಿ, ನಟಿ ರುಕ್ಮಿಣಿ ವಸಂತ್ ಹಾಗೂ ಮೈಸೂರಿನ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆಗಮಿಸಿದ್ದಾರೆ. ಈ ವೇಳೆ ವಿಶೇಷವಾಗಿ 'ವೀಕೆಂಡ್ ವಿತ್ ರಮೇಶ್ ಮಿನಿಯೇಚರ್' ಕೂಡ ನಡೆದಿದೆ.'ಕಾಂತಾರ ಚಾಪ್ಟರ್ 1' ಮೂಲಕ ಸದ್ದು ಮಾಡುತ್ತಿರುವ ರಿಷಬ್ ಶೆಟ್ಟಿ ಹಾಗೂ ಅವರೊಂದಿಗೆ ಹಿರಿಯ ನಟ ರಮೇಶ್ ಅರವಿಂದ್ ಅವರ ನಡುವಿನ ಮಾತುಕತೆ ಈ ಕಾರ್ಯಕ್ರಮದ ಹೈಲೈಟ್ ಆಗಿತ್ತು.
ಈ ಜೀ ಕನ್ನಡ ಕುಟುಂಬ ಅವಾರ್ಡ್ ಬಗ್ಗೆ ಜೀ ಕನ್ನಡ ಹಾಗೂ ಜೀ5 ಕನ್ನಡದ ಬಿಸಿನೆಸ್ ಹೆಡ್ ದೀಪಕ್ ಶ್ರೀರಾಮುಲು ಹೀಗಂತಾರೆ. "ಕನ್ನಡ ಟೆಲಿವಿಷನ್ ಕುಟುಂಬದ ಪ್ರತಿಭೆ, ಸೃಜನಶೀಲತೆ ಮತ್ತು ಅದ್ಭುತ ಆತ್ಮಸ್ಫೂರ್ತಿಯ ಆಚರಣೆಯೇ ಕುಟುಂಬ ಅವಾರ್ಡ್ಸ್. ಇನ್ನು ಜೀ಼ ಕನ್ನಡ 20 ವರುಷ ಪೂರೈಸಿದ ಈ ಶುಭ ಸಂದರ್ಭದಲ್ಲಿ ವೀಕ್ಷಕರಿಗೆ ಇನ್ನಷ್ಟು ಮನರಂಜನೆ ಕೊಡೋದು ನಮ್ಮ ಮುಖ್ಯ ಗುರಿ ಆಗಿತ್ತು. ಅದಕ್ಕೆ ಬದ್ಧವಾಗಿ ನಾವು ಈ ವರುಷ 'ನಾ ನಿನ್ನ ಬಿಡಲಾರೆ', 'ಕರ್ಣ' ಮತ್ತು 'ಶ್ರೀ ರಾಘವೇಂದ್ರ ಮಹಾತ್ಮೆ' ಎಂಬ ಪ್ರಸಿದ್ಧ ಧಾರಾವಾಹಿಗಳ ಜೊತೆಗೆ 'ನಾವು ನಮ್ಮವರು' ಎಂಬ ವಿಭಿನ್ನ ರಿಯಾಲಿಟಿ ಶೋ ವನ್ನು ಜನರ ಮುಂದಿಟ್ಟಿದ್ದೇವೆ. ಇನ್ನು ನಮ್ಮ ವೀಕ್ಷಕರು ಈ ಎಲ್ಲಾ ಕಾರ್ಯಕ್ರಮಗಳನ್ನು ಮನಸಾರೆ ಮೆಚ್ಚಿದ್ದು, ನಮ್ಮ ಹುರುಪನ್ನು ಮತ್ತಷ್ಟು ಹೆಚ್ಚಿಸಿದೆ. ಟೆಲಿವಿಷನ್ ಜೊತೆಗೆ OTT ಪ್ಲಾಟ್‌ಫಾರ್ಮ್ ಕನ್ನಡ ZEE5 'ನಮ್ಮ ಭಾಷೆ, ನಮ್ಮ ಕಥೆಗಳು' ಮೂಲಕ ಕನ್ನಡದ ಕಥೆಗಳಿಗೆ ಜೀವ ತುಂಬುವ ಕೆಲಸವನ್ನು ಮುಂದುವರೆಸಿದೆ. ಮತ್ತೊಂದೆಡೆ ಮೈಕ್ರೋ-ಸರಣಿ ಅಪ್ಲಿಕೇಶನ್ ಬುಲೆಟ್ ಇಂದಿನ ಪೀಳಿಗೆಗಳಿಗೆ ಕಥೆ ಹೇಳುವ ಕಲೆಗೆ ಹೊಸ ಅರ್ಥ ನೀಡುತ್ತಿದೆ" ಎಂದು ಹೇಳಿದ್ದಾರೆ.
ಈ ಕಾರ್ಯಕ್ರಮವನ್ನು ಕರ್ನಾಟಕದ ಹೆಸರಾಂತ ನಿರೂಪಕ ಅಕುಲ್ ಬಾಲಾಜಿ ಮತ್ತು ನಿರೂಪಕಿ ಅನುಶ್ರೀ ಅವರು ನಡೆಸಿಕೊಡಲಿದ್ದಾರೆ. ಜೀ ಕನ್ನಡ ಕುಟುಂಬ ಅವಾರ್ಡ್ಸ್-2025ನಲ್ಲಿ ಯಾರು ಯಾವ ಪ್ರಶಸ್ತಿಗೆ ಗೆದ್ದರು? ಯಾರು ಯಾವ ಹಾಡಿಗೆ ಹೆಜ್ಜೆ ಹಾಕಿದರು? ಯಾರು ಯಾವ ಉಡುಗೆಯಲ್ಲಿ ಮಿಂಚಿದರು ಅನ್ನೋದನ್ನು ತಿಳಿದುಕೊಳ್ಳಲು ಇದೇ 17, 18 ಮತ್ತು 19 ರಂದು ಸಂಜೆ 6:30 ರಿಂದ ಪ್ರಸಾರ ಆಗುತ್ತಿದೆ.


Click it and Unblock the Notifications











