ಆಟೋ ಓಡಿಸುತ್ತಾ ಕಿರುತೆರೆಗೆ ಕಮ್‌ ಬ್ಯಾಕ್ ಮಾಡಿದ ಮೌನ ಗುಡ್ಡೇಮನೆ; 'ಕೃಷ್ಣ ರುಕ್ಕು'ಯಲ್ಲಿ ಪಾತ್ರವೇನು?

ಕನ್ನಡ ಕಿರುತೆರೆಯಲ್ಲಿ ತಿಂಗಳಿಗೆ ಒಂದೊಂದು ಹೊಸ ಧಾರಾವಾಹಿಗಳು ಆರಂಭ ಆಗುತ್ತಲೇ ಇರುತ್ತವೆ. ತನ್ನ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುವುದಕ್ಕೆ ಹೊಸ ಹೊಸ ಕಥೆಗಳನ್ನು ವೀಕ್ಷಕರ ಮುಂದಿಡುತ್ತವೆ. ಇಂತಹ ಪ್ರಯತ್ನದಲ್ಲಿ ಜೀ ಕನ್ನಡ ಕೂಡ ಒಂದು. ಇದೇ ತಿಂಗಳು ಹೊಚ್ಚ ಹೊಸ ಧಾರಾವಾಹಿಯನ್ನು ಲಾಂಚ್ ಮಾಡುವುದಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಕಿರುತೆರೆಯಲ್ಲಿ ಸದಾ ಹೊಸತನದೊಂದಿಗೆ ಜೀ ಕನ್ನಡ ವೀಕ್ಷಕರನ್ನು ಸೆಳೆಯುತ್ತಿದೆ. ಈಗಾಗಲೇ ಪ್ರಸಾರ ಆಗುತ್ತಿರುವ ಧಾರಾವಾಹಿಗಳು ಕನ್ನಡಿಗರ ಮನ ಗೆದ್ದಿದೆ. ಅದರಲ್ಲೂ ಹೆಂಗಳೆಯರ ಮನಸ್ಸನ್ನು ಕದ್ದಿವೆ. ಈಗ ಮತ್ತೊಂದು ಧಾರಾವಾಹಿ ಮೂಲಕ ವೀಕ್ಷಕರ ಮನಸ್ಸು ಗೆಲ್ಲುವುದಕ್ಕೆ ಸಿದ್ಧವಾಗಿ ನಿಂತಿದೆ. ಮತ್ತೆ ನಂ 1 ಸ್ಥಾನಕ್ಕೆ ಮರಳಿರುವ 'ಕೃಷ್ಣ ರುಕ್ಕು' ವೀಕ್ಷಕರಿಗೆ ಸರ್ಪ್ರೈಸ್ ನೀಡುವುದಕ್ಕೆ ಹೊರಟಿದೆ.

Zee Kannada launching new serial Krishan Rukku from March 9th here is the details

ಅಂದ್ಹಾಗೆ 'ಕೃಷ್ಣ ರುಕ್ಕು' ಪ್ರೀತಿ, ಪ್ರತೀಕಾರ ಮತ್ತು ವಿಧಿಯಾಟದ ಸುತ್ತ ನಡೆಯುವ ಹೊಚ್ಚ ಹೊಸ ಧಾರಾವಾಹಿ. ಕುಟುಂಬದ ಒಗ್ಗಟ್ಟು, ಜವಾಬ್ದಾರಿ, ಪ್ರೀತಿ ಜೊತೆಗೆ ಅನಿರೀಕ್ಷಿತ ತಿರುವುಗಳು ಕೂಡ 'ಕೃಷ್ಣ-ರುಕ್ಕು' ಧಾರಾವಾಹಿಯಲ್ಲಿ ನೋಡುವುದಕ್ಕೆ ಸಿಗಲಿದೆ. ಇದೂ ಕೂಡ ಕೌಟುಂಬಿಕ ಧಾರಾವಾಹಿಯಾಗಿದ್ದು, ಮಹಿಳೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡೇ ಧಾರಾವಾಹಿಯನ್ನು ನಿರ್ಮಾಣ ಮಾಡಿದಂತೆ ಇದೆ.

ಅಣ್ಣನ ಅಕಾಲಿಕ ನಿಧನದ ಬಳಿಕ ತನ್ನ ಇಡೀ ಕುಟುಂಬದ ಜವಾಬ್ದಾರಿಯನ್ನು ರಕ್ಕು ಮೇಲೆ ಬಿದ್ದಿದೆ. ಕುಟುಂಬದ ಜವಾಬ್ದಾರಿಗಳನ್ನು ತನ್ನ ಹೆಗಲಮೇಲೆ ಹಾಕಿಕೊಂಡ ರುಕ್ಕು ಏನೆಲ್ಲಾ ಸವಾಲುಗಳನ್ನು ಎದುರಿಸುತ್ತಾಳೆ ಎಂಬುದನ್ನು ಈ ಧಾರಾವಾಹಿಯಲ್ಲಿ ನೋಡಬಹುದಾಗಿದೆ. ಹಾಗೇ ಪ್ರೀತಿ, ದ್ವೇಷ ಮತ್ತು ವಿಧಿಯಾಟದ ನಡುವೆ ಕೃಷ್ಣ-ರುಕ್ಕುವಿನ ಜೀವನ ಹೀಗೆ ಸಾಗಲಿದೆ ಎನ್ನುವುದು ಈ ಧಾರಾವಾಹಿಯ ಮತ್ತೊಂದು ಘಟ್ಟ.

'ಕೃಷ್ಣ ರುಕ್ಕು' ಧಾರಾವಾಹಿಯ ಪ್ರಮುಖ ಪಾತ್ರದಲ್ಲಿ ಮೌನ ಗುಡ್ಡೇಮನೆ ಕಾಣಿಸಿಕೊಳ್ಳುತ್ತಾರೆ. ರುಕ್ಕು ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇವರೊಂದಿಗೆ ಅಕ್ಷಯ್ ನಾಯಕ್ ಕೃಷ್ಣನ ಪಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. ಮೌನ ಗುಡ್ಡೇಮನೆ ಹಾಗೂ ಅಕ್ಷಯ್ ನಾಯಕ್ ನಾಯಕಿ-ನಾಯಕನಾಗಿ ನಟಿಸುತ್ತಿದ್ದರೆ, ಇವರೊಂದಿಗೆ ಸಿನಿಮಾ ಹಾಗೂ ಕಿರುತೆರೆಯ ನಿರ್ದೇಶಕ, ನಿರ್ಮಾಪಕ , ಬರಹಗಾರ , ನಟ, ಕಲಾ ಸಾಮ್ರಾಟ್ ಎಸ್.ನಾರಾಯಣ್ ಸೂರ್ಯ ಪ್ರಕಾಶ್ ಎಂಬ ಮತ್ತೊಂದು ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.

ಈ ಧಾರಾವಾಹಿಯ ಮತ್ತೊಂದು ವಿಶೇಷ ಅಂದರೆ, ಹಲವು ವರ್ಷಗಳ ನಂತರ ಕನ್ನಡ ಕಿರುತೆರೆಗೆ ಖ್ಯಾತ ನಟಿ ಸುಚಿತ್ರ ಮತ್ತೆ ಕಮ್ ಬ್ಯಾಕ್ ಮಾಡಿದ್ದಾರೆ. ಹಾಗೇ ಗಾಯಕ ನವೀನ ಸಜ್ಜು ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇಂತಹ ಜನಪ್ರಿಯ ನಟರು ಈ ಧಾರಾವಾಹಿಯಲ್ಲಿ ನಟಿಸಿರುವುದು ಅವರ ತೂಕವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಧೃತಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಟ ಹಾಗೂ ನಿರ್ಮಾಪಕ ದಿಲೀಪ್ ರಾಜ್ ಹಾಗೂ ಶ್ರೀ ವಿದ್ಯಾ 'ಕೃಷ್ಣ ರುಕ್ಕು' ಧಾರಾವಾಹಿಯನ್ನು ನಿರ್ವಹಿಸುತ್ತಿದ್ದಾರೆ. ಮನಸೆಳೆಯುವ ಕಥೆ ಮತ್ತು ಭಾವನಾತ್ಮಕ ಸನ್ನಿವೇಶಗಳು ವೀಕ್ಷಕರನ್ನು ಸೆಳೆಯಲಿವೆ.

'ಕೃಷ್ಣ-ರುಕ್ಕು' ಧಾರಾವಾಹಿ ಬಗ್ಗೆ ಜೀ಼ ಕನ್ನಡ ವಾಹಿನಿಯ ಚೀಫ್ ಚಾನೆಲ್ ಆಫೀಸರ್ ದೀಪಕ್ ಶ್ರೀರಾಮುಲು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. " ಜೀ ಕನ್ನಡ ವಾಹಿನಿ ಯಾವಾಗಲೂ ವೀಕ್ಷಕರ ಮನಸ್ಸಿಗೆ ಹತ್ತಿರವಾಗುವ ನೈಜ ಭಾವನೆಗಳು ಮತ್ತು ಕೌಟುಂಬಿಕ ಮೌಲ್ಯಗಳನ್ನೊಳಗೊಂಡ ಕಥೆಗಳನ್ನು ವೀಕ್ಷಕರಿಗೆ ತಲುಪಿಸಲು ಇಚ್ಚಿಸುತ್ತದೆ. 'ಕೃಷ್ಣ ರುಕ್ಕು' ಧಾರಾವಾಹಿಯು ಪ್ರೀತಿ, ಜವಾಬ್ದಾರಿ ಮತ್ತು ವಿಧಿಯಾಟದ ಸುತ್ತ ನಡೆಯುವ ಒಂದು ಸುಂದರವಾದ ಕಥೆಯಾಗಿದೆ. ಈ ಧಾರಾವಾಹಿಯಲ್ಲಿನ ವೈವಿಧ್ಯಮಯ ಪಾತ್ರಗಳು ಮತ್ತು ಕುತೂಹಲಕಾರಿ ಕಥೆಯು ವೀಕ್ಷಕರ ಮನಸ್ಸನ್ನು ಗೆಲ್ಲುವುದಲ್ಲದೆ, ನಮ್ಮ ಕಾರ್ಯಕ್ರಮಗಳನ್ನು ಇನ್ನಷ್ಟು ಬಲಪಡಿಸಲಿದೆ ಎಂಬ ನಂಬಿಕೆ ನಮಗಿದೆ" ಎನ್ನುತ್ತಾರೆ. ಪ್ರೀತಿ, ಸೇಡು ಮತ್ತು ವಿಧಿ, ಗೆಲುವು ಯಾವುದಕ್ಕೆ? ಇದೇ ಮಾರ್ಚ್ 9 ರಿಂದ ಸಂಜೆ 6:30 ಕ್ಕೆ, ಜೀ಼ ಕನ್ನಡ ವಾಹಿನಿಯಲ್ಲಿ 'ಕೃಷ್ಣ ರುಕ್ಕು' ಪ್ರಸಾರ ಆಗುತ್ತಿದೆ.

More from Filmibeat

English summary
Zee Kannada launching new serial Krishan Rukku from March 9th here is the details.
Read more about: serial tv show zee kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X