'ಸರಿಗಮಪ ಲಿಟಲ್ ಚಾಂಪ್ಸ್ ಮತ್ತೊಂದು ಸೀಸನ್ ಶುರುವಾಗೇ ಬಿಡ್ತು; ಈ ಬಾರಿ ಹೈಲೈಟ್ ಏನು?
ಒಂದು ಕಡೆ ಐಪಿಎಲ್ ಫಿವರ್ ಶುರುವಾಗಿದೆ. ಇನ್ನೊಂದು ಕಡೆ ಕಿರುತೆರೆಯಲ್ಲಿ ರಿಯಾಲಿಟಿ ಶೋಗಳು ಸಾಲು ಸಾಲಾಗಿ ಲಾಂಚ್ ಆಗುತ್ತಿವೆ. ಅದರಲ್ಲೂ ಕನ್ನಡ ಮನರಂಜನಾ ವಾಹಿನಿಗಳು ರಿಯಾಲಿಟಿ ಶೋಗಳನ್ನು ಶುರು ಮಾಡುತ್ತಿವೆ. ಅದರಲ್ಲಿ ಜೀ ಕನ್ನಡ ಕೂಡ ಒಂದು. ಇತ್ತೀಚೆಗಷ್ಟೇ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಶೋ ಅನ್ನು ಯಶಸ್ವಿಯಾಗಿ ಮುಗಿಸಿದೆ. ಈ ಯಶಸ್ಸಿನ ಬೆನ್ನಲ್ಲೇ ಮತ್ತೊಂದು ಶೋ ಅನ್ನು ಕಿರುತೆರೆ ವೀಕ್ಷಕರಿಗೆ ನೀಡುವುದಕ್ಕೆ ಮುಂದಾಗಿದೆ.
ಜೀ ಕನ್ನಡ ಮೋಸ್ಟ್ ಪಾಪುಲರ್ ಮ್ಯೂಸಿಕ್ ರಿಯಾಲಿಟಿ ಶೋ 'ಸರಿಗಮಪ ಲಿಟಲ್ ಚಾಂಪ್ಸ್' ಮತ್ತೆ ಆರಂಭ ಆಗುತ್ತಿದೆ. ವೀಕೆಂಡ್‌ನಲ್ಲಿಸ ಕಿರುತೆರೆ ವೀಕ್ಷಕರಿಗೆ ಮನರಂಜನೆಯ ಕಿಕ್ ಕೊಡುವುದಕ್ಕೆ ಸಜ್ಜಾಗಿದೆ. ವಾರಾಂತ್ಯದಲ್ಲಿ ಸಂಗೀತದ ಮಾಯಾಲೋಕವನ್ನು ಸೃಷ್ಟಿಸುವುದಕ್ಕೆ ಸಜ್ಜಾಗಿದೆ. ಮತ್ತೊಂದು ಸೀಸನ್ ಮೂಲಕ ಅಸಾಧಾರಣ ಪ್ರತಿಭೆಗಳನ್ನು ಗುರುತಿಸಿ ಬೆಳೆಸುವುದಕ್ಕೆ ಈ ಶೋ ರೆಡಿಯಾಗುತ್ತಿದೆ.

ಪುಟಾಣಿಗಳ ಸಂಗೀತ ಪ್ರತಿಭೆಗೆ ವೇದಿಕೆಯಾಗುವುದಕ್ಕೆ 'ಸರಿಗಮಪ ಲಿಟಲ್ ಚಾಂಪ್ಸ್' ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಪ್ರತಿ ಸೀಸನ್‌ನಂತತೆ ಈ ಸೀನ್‌ನಲ್ಲೂ 3 ರಿಂದ 15 ವರ್ಷದೊಳಗಿನ ಪುಟಾಣಿಗಳು ತಮ್ಮ ಪ್ರತಿಭೆಯನ್ನು ಹೊರ ಹಾಕುತ್ತಿದ್ದಾರೆ. ಕರ್ನಾಟಕದ ಮೂಲೆ ಮೂಲೆಯ ಕಿರಿಯರು ಅದ್ಭುತ ಗಾಯನದ ಮೂಲಕ ಪ್ರದರ್ಶನ ನೀಡಿ, ಮರೆಯಲಾಗದ ಸಂಗೀತದ ಕ್ಷಣಗಳಿಗೆ ಸಾಕ್ಷಿಯಾಗಲಿದ್ದಾರೆ.
ಜೀ ಕನ್ನಡದಲ್ಲಿ ಪ್ರಸಾರ ಆಗುವ ಸರಿಗಮಪ ಇರಲಿ, ಇಲ್ಲ 'ಸರಿಗಮಪ ಲಿಟಲ್ ಚಾಂಪ್ಸ್' ಇರಲಿ ವೀಕ್ಷಕರನ್ನು ರಂಜಿಸುವುದರಲ್ಲಿ ಇದೂವರೆಗೂ ಹಿಂದೆ ಬಿದ್ದಿಲ್ಲ. ಈ ಬಾರಿ ಕೂಡ ಅದೇ ಜೋಷ್‌ನಲ್ಲಿ ಇದೇ ವೀಕೆಂಡ್‌ನಲ್ಲಿ ವೀಕ್ಷಕರ ಮುಂದೆ ಬರುತ್ತಿದೆ. ಈ ಸೀಸನ್‌ನಲ್ಲಿ ಇನ್ನೇನು ವಿಶೇಷತೆಗಳನ್ನು ಹೊತ್ತು ಬರುತ್ತಿದೆ ಅನ್ನೋದು ಇನ್ನೇನು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.
'ಸರಿಗಮಪ ಲಿಟಲ್ ಚಾಂಪ್ಸ್' ಇದೇ ಏಪ್ರಿಲ್ 18 ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 7:30ಕ್ಕೆ ಪ್ರಸಾರವಾಗಲಿದೆ. ಈ ಸೀಸನ್‌ನಲ್ಲಿ ಪುಟ್ಟ ಗಾಯಕರು ತಮ್ಮ ಅಪ್ರತಿಮ ಪ್ರತಿಮ ಪ್ರತಿಭೆಯಿಂದ ಪ್ರೇಕ್ಷಕರನ್ನು ಮಂತ್ರ ಮುಗ್ಧಗೊಳಿಸಲಿದ್ದಾರೆ. ಸಂಗೀತ, ಮನರಂಜನೆ ಹಾಗೂ ಎಮೋಷನ್ಸ್ ಎಲ್ಲವೂ ಸೇರಿಸಿರುವ ಈ ಕಾರ್ಯಕ್ರಮವನ್ನು ವೀಕೆಂಡ್‌ನಲ್ಲಿ ಕಣ್ತುಂಬಿಕೊಳ್ಳುವುದಕ್ಕೆ ಸಜ್ಜಾಗಿದ್ದಾರೆ. ಉದಯೋನ್ಮುಖ ಗಾಯಕರಿಗೆ ಭವ್ಯ ವೇದಿಕೆಯನ್ನು ಕಲ್ಪಿಸಿಕೊಡುವುದರ ಜೊತೆಗೆ ಸಂಗೀತದ ಸಂಭ್ರಮ ಕೂಡ ನಡೆಯಲಿದೆ.

ಇನ್ನು 'ಸರಿಗಮಪ ಲಿಟಲ್ ಚಾಂಪ್ಸ್'ನಲ್ಲಿ ಕನ್ನಡಿಗರ ನೆಚ್ಚಿನ ಗಾಯಕರಾದ ರಾಜೇಶ್ ಕೃಷ್ಣನ್, ಸಂಗೀತ ನಿರ್ದೇಶಕರಾದ ಅರ್ಜುನ್ ಜನ್ಯ ಹಾಗೂ ಫೇವರಿಟ್ ಗಾಯಕ ವಿಜಯ್ ಪ್ರಕಾಶ್ ತೀರ್ಪುಗಾರರಾಗಿ ಮುಂದುವರೆದಿದ್ದಾರೆ. ಈ ಬಾರಿ ಕೂಡ ಈ ಮೂವರು ದಿಗ್ಗಜರು ಸ್ಪರ್ಧಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ. ತಮ್ಮ ಅನುಭವವನ್ನು ಪುಟಾಣಿ ಪ್ರತಿಭೆಗಳಿಗೆ ಧಾರೆ ಎರೆಯಲಿದ್ದಾರೆ.
ಜನಪ್ರಿಯ ನಿರೂಪಕಿ ಅನುಶ್ರೀ ತಮ್ಮ ನಿರೂಪಣೆ ಮೂಲಕ 'ಸರಿಗಮಪ ಲಿಟಲ್ ಚಾಂಪ್ಸ್' ಮತ್ತಷ್ಟು ಮೆರುಗು ಮತ್ತು ಚೈತನ್ಯ ನೀಡಲಿದೆ. ಟೆಲಿವಿಷನ್ ಮಾತ್ರವಲ್ಲದೆ, ಜೀ ಕನ್ನಡದ ಸೋಶಿಯಲ್ ಮೀಡಿಯಾ ಮೂಲಕವೂ ವೀಕ್ಷಕರು ತೆರೆಯ ಹಿಂದಿನ ಕ್ಷಣಗಳನ್ನು ನೋಡಬಹುದು. ಸ್ಪರ್ಧಿಗಳ ಪಯಣ ಮತ್ತು ಹಾಸ್ಯ ಸನ್ನಿವೇಶಗಳ ತುಣುಕುಗಳನ್ನು ನೋಡಿ ಆನಂದಿಸಬಹುದು. ಪುಟಾಣಿಗಳ ಪ್ರಾಕ್ಟೀಸ್‌ನಿಂದ ಹಿಡಿದು ತೀರ್ಪುಗಾರರ ರಿಯಾಕ್ಷನ್ ಅನ್ನು ಒಳಗೊಂಡ ಈ ವಿಡಿಯೋಗಳು ನೋಡಿ ಎಂಜಾಯ್ ಮಾಡಬಹುದು. ಹೀಗಾಗಿ ಈ ಬಾರಿ ಸರಿಗಮಪ ಈ ರಿಯಾಲಿಟಿ ಶೋಗೆ ವೀಕ್ಷಕರಿಗೆ ಮತ್ತಷ್ಟು ಹತ್ತಿರವಾಗಲಿದೆ.
ಕರ್ನಾಟಕದ ಮುಂದಿನ ಸಿಂಗಿಂಗ್ ಸೂಪರ್ ಸ್ಟಾರ್ ಯಾರು ಅನ್ನೋದ ಕುತೂಹಲಕ್ಕೆ ವೀಕ್ಷಕರು ಇನ್ಮುಂದೆ ಸಾಕ್ಷಿಯಾಗುತ್ತಾ ಹೋಗಬಹುದು. ಸಂಗೀತ, ಪ್ರತಿಭೆ ಮತ್ತು ಕನಸುಗಳ ಈ ಸಂಭ್ರಮವು ಸಂಗೀತ ಪ್ರಿಯರಿಗೆ ಮರೆಯಲಾಗದ ನೆನಪುಗಳನ್ನು ಸೃಷ್ಟಿಸೋದಂತೂ ಗ್ಯಾರಂಟಿ.


Click it and Unblock the Notifications