ಜೀ ಕನ್ನಡದ 'ಗೋಲ್ಡನ್ ಗ್ಯಾಂಗ್' ಕಾರ್ಯಕ್ರಮಕ್ಕೆ ಎಂಟ್ರಿ ಕೊಡ್ತಾರಾ ಮೋಹಕ ತಾರೆ ರಮ್ಯಾ?

ಮೋಹಕ ತಾರೆ ರಮ್ಯಾ ಸಿನಿಮಾದಲ್ಲಿ ನಟಿಸಬೇಕು. ರಾಜಕೀಯಕ್ಕಿಂತ ಹೆಚ್ಚಾಗಿ ಸಿನಿಮಾದಲ್ಲಿಯೇ ಕಾಣಿಸಿಕೊಳ್ಳಬೇಕು ಎಂಬುದು ಅವರ ಅಭಿಮಾನಿಗಳ ಆಸೆಯಾಗಿತ್ತು. ಆದರೆ, ರಮ್ಯಾ ಮಾತ್ರ ರಾಜಕೀಯದಲ್ಲಿ ಸಕ್ರಿಯರಾಗುವ ಉದ್ದೇಶದಿಂದ ಚಿತ್ರರಂಗಕ್ಕೆ ಗುಡ್‌ಬೈ ಹೇಳಿದ್ದರು. ಅಲ್ಲಿಂದ ಮತ್ತೆಂದು ಸಿನಿಮಾದಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ಕನ್ನಡ ಚಿತ್ರರಂಗಕ್ಕೆ ರಮ್ಯಾ ಗುಡ್‌ಬೈ ಹೇಳಿ ಆರೇಳು ವರ್ಷಗಳಾದ ಬಳಿಕ ಮತ್ತೆ ಅಭಿಮಾನಿಗಳ ಮುಂದೆ ಬರುವುದಕ್ಕೆ ವೇದಿಕೆಯೊಂದು ಸಜ್ಜಾಗಿದೆ.

ರಮ್ಯಾ ಇತ್ತೀಚೆಗೆ ರಾಜಕೀಯದಲ್ಲೂ ಸಕ್ರಿಯರಾಗಿಲ್ಲ. ಕಳೆದ ಬಾರಿ ಚುನಾವಣೆಗೂ ಸ್ಪರ್ಧಿಸಿಲ್ಲ. ಹೀಗಾಗಿ ಮತ್ತೆ ಸಿನಿಮಾರಂಗಕ್ಕೆ ಮರಳುತ್ತಾರೆ ಎನ್ನುವ ಸುದ್ದಿ ಕೆಲವು ದಿನಗಳಿಂದ ಹರಿದಾಡುತ್ತಲೇ ಇದೆ. ರಮ್ಯಾ ಸಿನಿಮಾದಲ್ಲಿ ನಟಿಸುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ಮತ್ತೆ ಅಭಿಮಾನಿಗಳ ಮುಂದೆ ಬರುತ್ತಾರೆ ಎನ್ನುವ ಮಾತು ಬಲವಾಗಿ ಕೇಳಿಬರುತ್ತಿದೆ.

'ಗೋಲ್ಡನ್ ಗ್ಯಾಂಗ್' ಕಾರ್ಯಕ್ರಮದಲ್ಲಿ ರಮ್ಯಾ?

'ಗೋಲ್ಡನ್ ಗ್ಯಾಂಗ್' ಕಾರ್ಯಕ್ರಮದಲ್ಲಿ ರಮ್ಯಾ?

ಜೀ ಕನ್ನಡದ ವಿನೂತನ ಕಾರ್ಯಕ್ರಮ 'ಗೋಲ್ಡನ್ ಗ್ಯಾಂಗ್'. ಗೋಲ್ಡನ್ ಸ್ಟಾರ್ ಗಣೇಶ್ ನಡೆಸಿಕೊಡುತ್ತಿರುವ ಈ ಶೋನಲ್ಲಿ ಚಿತ್ರರಂಗದ ಗಣ್ಯರು ಆಗಮಿಸಿದ್ದು, ಈಗಾಗಲೇ ಎರಡು ವಾರ ಪ್ರಸಾರಗೊಂಡಿದೆ. ಈ ಹೊಸ ಸುದ್ದಿ ಏನಪ್ಪಾ ಅಂದರೆ, ಮೋಹಕ ತಾರೆ ರಮ್ಯಾರನ್ನು ಈ ಕಾರ್ಯಕ್ರಮಕ್ಕೆ ಕರೆದುಕೊಂಡು ಬರಲು ಶತಪ್ರಯತ್ನ ನಡೆಯುತ್ತಿದೆಯಂತೆ. ಕಾರ್ಯಕ್ರಮದ ಆರಂಭದಲ್ಲಿಯೇ ಮೋಹಕತಾರೆ ರಮ್ಯಾ ಹಾಗೂ ಅವರ ಸ್ನೇಹಿತರ ಗ್ಯಾಂಗ್ ಅನ್ನು ಕರೆದುಕೊಂಡು ಬರಲು ಸ್ಕೆಚ್ ಹಾಕಲಾಗಿತ್ತು. ಅದಂತೆ ರಮ್ಯಾಗಾಗಿ ಜೀ ಕನ್ನಡ ಬಲೆ ಬೀಸಿದೆ ಎನ್ನುವ ಮಾತು ಕೇಳಿಬರುತ್ತಿದೆ.

ರಮ್ಯಾ ಕರ್ಕೊಂಡು ಬರುತ್ತಾ ಜೀ ಕನ್ನಡ

ರಮ್ಯಾ ಕರ್ಕೊಂಡು ಬರುತ್ತಾ ಜೀ ಕನ್ನಡ

ನಟಿ, ರಾಜಕಾರಣಿ ರಮ್ಯಾ ಈಗ ಕೇವಲ ಕರ್ನಾಟಕಕ್ಕಷ್ಟೇ ಸೀಮಿತವಲ್ಲ. ರಾಜಕೀಯಕ್ಕೆ ಎಂಟ್ರಿ ಕೊಟ್ಟ ಮೇಲೆ ಇಡೀ ದೇಶಕ್ಕೆ ಚಿರಪರಿಚಿತ. ಒಂದು ವೇಳೆ ಒಪ್ಪಿಕೊಂಡು ರಮ್ಯಾ ಈ ಕಾರ್ಯಕ್ರಮಕ್ಕೆ ಬಂದರೆ, ಅವರು ಗೆಳೆಯ-ಗೆಳತಿಯರ ಪರಿಚಯಿಸುವ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ವೀಕ್ಷಕರು ಕಾಯುತ್ತಿದ್ದಾರೆ. ರಮ್ಯಾ ಕೇವಲ ಸಿನಿಮಾರಂಗದ ಸ್ನೇಹಿತರನ್ನೇ ಪರಿಚಯಿಸುತ್ತಾರಾ? ಇಲ್ಲಾ ರಾಜಕೀಯ ಕ್ಷೇತ್ರದ ಸ್ನೇಹಿತರ ಪರಿಚಯ ಕೂಡ ಆಗುತ್ತಾ? ಅನ್ನುವ ಪ್ರಶ್ನೆ ಕೂಡ ಎದುರಾಗಿದೆ. ಸದ್ಯಕ್ಕೆ ರಮ್ಯಾ ಅವರನ್ನು ಗೋಲ್ಡನ್ ಗ್ಯಾಂಗ್‌ಗೆ ಅಪ್ರೋಚ್ ಮಾಡಿದೆ ಎನ್ನುವುದು ಒಳಗಿನ ವಿಷಯ. ಆದರೆ, ಪ್ರತಿಕ್ರಿಯೆ ಹೇಗಿದೆ? ಅವರು ಕಾರ್ಯಕ್ರಮಕ್ಕೆ ಒಪ್ಪಿದ್ದಾರಾ? ಎನ್ನುವುದು ಇನ್ನೂ ತಿಳಿದು ಬಂದಿಲ್ಲ.

ರಮ್ಯಾ-ಗಣೇಶ್ ಜೋಡಿ 'ಬೊಂಬಾಟ್'

ರಮ್ಯಾ-ಗಣೇಶ್ ಜೋಡಿ 'ಬೊಂಬಾಟ್'

2008ರಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ರಮ್ಯಾ ಕಾಂಬಿನೇಷನ್‌ನಲ್ಲಿ 'ಬೊಂಬಾಟ್' ತೆರೆಕಂಡಿತ್ತು. ಸಿನಿಮಾದ ಹಾಡುಗಳು ಬೊಂಬಾಟ್ ಆಗಿಯೇ ಹಿಟ್ ಆಗಿತ್ತು. ಸುಮಾರು 14 ವರ್ಷಗಳ ಬಳಿಕ ಮತ್ತೆ ರಮ್ಯಾ ಹಾಗೂ ಗಣೇಶ್ ಮತ್ತೆ ಒಟ್ಟಿಗೆ ಕಾಣಿಸಿಕೊಳ್ಳುವ ಸಾಧ್ಯತೆಗಳು ತುಂಬಾನೇ ಇವೆ. ಸಿನಿಮಾದಿಂದ, ರಾಜಕೀಯ ಕ್ಷೇತ್ರದಿಂದ ದೂರಾನೇ ಇರುವ ಮೋಹಕ ತಾರೆ ಮತ್ತೆ ಗಣೇಶ್ ಜೊತೆ ವೇದಿಕೆ ಮೇಲೆ ಕಾಣಿಸಿಕೊಂಡರೇ ವೀಕ್ಷಕರು ಖುಷಿ ಪಡುವುದರಲ್ಲಿ ಅನುಮಾನವೇ ಇಲ್ಲ.

ರಮ್ಯಾ ಕೊನೆ ಸಿನಿಮಾ 'ದಿಲ್ ಕಾ ರಾಜ'

ರಮ್ಯಾ ಕೊನೆ ಸಿನಿಮಾ 'ದಿಲ್ ಕಾ ರಾಜ'

ಮೋಹಕತಾರೆ ರಮ್ಯಾ ನಟಿಸಿ, ಬಿಡುಗಡೆಗೊಂಡ ಕೊನೆಯ ಸಿನಿಮಾ 'ನಾಗರಹಾವು'. ಈ ಸಿನಿಮಾ ಬಳಿಕ ಮತ್ತೆ ಕನ್ನಡ ಚಿತ್ರರಂಗದ ಕಡೆ ಮೂಖ ಕೂಡ ಹಾಕಿಲ್ಲ. ಆದರೆ, ರಮ್ಯಾ ನಟಿಸಿದ ಸಿನಿಮಾ 'ದಿಲ್ ಕಾ ರಾಜ' ಶೂಟಿಂಗ್ ಅರ್ಧಕ್ಕೆ ನಿಂತಿದೆ. ಡೈನಾಮಿಕ್ ಪ್ರಿನ್ಸ್ ದೇವರಾಜ್ ಅಭಿನಯದಲ್ಲಿ ಸೋಮ್‌ನಾಥ್ ನಿರ್ದೇಶನದ ಈ ಸಿನಿಮಾ ಕಾರಣಾಂತರಗಳಿಂದ ಅಂದುಕೊಂಡ ಸಮಯಕ್ಕೆ ಶೂಟಿಂಗ್ ನಡೆದಿರಲಿಲ್ಲ. ರಮ್ಯಾ ಈ ಸಿನಿಮಾವನ್ನು ಪೂರ್ಣಗೊಳಿಸುವ ಬಗ್ಗೆ ಅನುಮಾನವಿದೆ. ಮತ್ತೆ ಸಿನಿಮಾಗಳಲ್ಲಿ ನಟಿಸಬಹುದು ಅನ್ನುವುದೂ ಡೌಟು. ಆದರೆ, 'ಗೋಲ್ಡನ್ ಗ್ಯಾಂಗ್' ಕಾರ್ಯಕ್ರಮಕ್ಕೆ ಬರಬಹುದು ಅನ್ನುವುದನ್ನು ತಳ್ಳಿ ಹಾಕುವಂತಿಲ್ಲ.

More from Filmibeat

English summary
Zee Kannada New Show Golden Gang team approaching Kannada actress and Politician Ramya. Report is that she is in contact with zee tv, showing interest.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X