For Quick Alerts
  ALLOW NOTIFICATIONS  
  For Daily Alerts

  ರಮ್ಯಾ ಏನು ಪ್ರೈಮ್ ಮಿನಿಸ್ಟರಾ,ಭೂಲೋಕ ಸುಂದರಿನಾ?

  |
  ಜೀ ಕನ್ನಡದಲ್ಲಿ ಪ್ರಸಾರವಾಗುವ 'ರಗಳೆ ವಿದ್ ರಿಷಿಕಾ' ಟಾಕ್ ಶೋ ಕಾರ್ಯಕ್ರಮ ನೋಡಲು ಮರೆಯದಿರಿ. ಅದೂ ಇಂದಿನ (ಸೆ 22) ಮತ್ತು ನಾಳಿನ (ಸೆ 23) ಎಪಿಸೋಡ್ ನೋಡಲು.

  ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಒನ್ ಅಂಡ್ ಓನ್ಲಿ ರಾಗಿಣಿ ದ್ವಿವೇದಿ ಲಕ್ಕಿ ಸ್ಟಾರ್ ರಮ್ಯಾರನ್ನು ಯದ್ವಾತದ್ವ ಬೈದಿದ್ದಾರೆ.

  ರಮ್ಯಾ ಏನು ಭೂಲೋಕ ಸುಂದರಿನಾ ? ಅವಳೇನು ಬಾಲಿವುಡ್ ಸ್ಟಾರಾ? ಅವಳೇನು ಪ್ರೈಮ್ ಮಿನಿಸ್ಟರಾ? ನಮ್ಮ ಹಾಗೆ ಸಾಮಾನ್ಯ ನಟಿ ಮೈಂಡ್ ಇಟ್..

  ಈ ರೀತಿ ರಾಗಿಣಿ ಕಾರ್ಯಕ್ರಮದಲ್ಲಿ ರಿಷಿಕಾ ಮುಖಾಂತರ ನಟಿ ರಮ್ಯಾಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

  ನಟ ಯೋಗೀಶ್ ಜೊತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಗಿಣಿಗೆ ಕಾರ್ಯಕ್ರಮದ ಮಧ್ಯೆ ರಮ್ಯಾ ಬಗ್ಗೆ ಕೇಳಿದಾಗ ಇದ್ದಕ್ಕಿದ್ದಂತೆ ಸಿಟ್ಟಾಗಿ ಪಟಪಟನೆ ರಮ್ಯಾಳನ್ನು ಬೈದು ಹಾಕಿದ್ದಾರೆ.

  ಅದೇಕೆ ನಿಮಗೆ ರಮ್ಯಾ ಮೇಲೆ ಅಷ್ಟೊಂದು ಸಿಟ್ಟು ಎಂದು ಕೇಳಿದಾಗ ರಾಗಿಣಿ ಕಡೆಯಿಂದ ನೋ ಆನ್ಸರ್.

  ಜೀ ಕನ್ನಡ ವಾಹಿನಿಯಲ್ಲಿ ಸೆಪ್ಟೆಂಬರ್ 8ರಿಂದ ಪ್ರಾರಂಭವಾಗಿರುವ 'ರಗಳೆ ವಿಥ್ ರಿಷಿಕಾ' 'ಟಾಕ್ ಶೋನ' ಮೊದಲ ಎಪಿಸೋಡ್ ನಲ್ಲಿ ಸ್ಯಾಂಡಲ್ ವುಡ್ ಹೆಸರಾಂತ ಗಾಸಿಪ್ ಜೋಡಿ ದಿಗಂತ್ ಹಾಗೂ ಐಂದ್ರಿತಾ ರೇ ಭಾಗವಹಿಸಿದ್ದರು.

  ಈ ಕಾರ್ಯಕ್ರಮದ ಪ್ರಸಾರದ ಸಮಯ ಶನಿವಾರ ಮತ್ತು ಭಾನುವಾರ ರಾತ್ರಿ 8ಗಂಟೆಗೆ.

  English summary
  Don't miss to watch today (Sep 22) and tomorrow (Sep 23) Ragale with Rishika episode in Zee Kannada at 8PM
  Saturday, September 22, 2012, 21:04
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X