Bharjari Bachelors:ಬ್ಯೂಟಿ ಪಾರ್ಲರ್‌ನಲ್ಲಿ ಹನುಮಂತನ ಶರ್ಟ್ ಬಿಚ್ಚಿಸಲು ಆಸಿಯಾ ಬೇಗಂ ಹರಸಾಹಸ!

ಜೀ ಕನ್ನಡದಲ್ಲಿ ವೀಕೆಂಡ್ ಎಂಜಾಯ್‌ಮೆಂಟ್‌ಗಾಗಿ ಈಗ ಭರ್ಜರಿ ಬ್ಯಾಚುಲರ್‌ಗಳ ಆಟ ಶುರುವಾಗಿದೆ. ಬ್ಯಾಚುಲರ್ಸ್‌ಗೆ ಜೋಡಿಯೇನೋ ಸಿಕ್ಕಿದೆ. ಆದರೆ ಅದು ತಾತ್ಕಾಲಿಕ ಮಾತ್ರ. ಆ ಜೋಡಿಗಳನ್ನೇ ಪರ್ಮನೆಂಟ್ ಮಾಡಿಕೊಳ್ಳಬೇಕು ಅಂದ್ರೆ, ನಮ್ಮ ಬ್ಯಾಚುಲರ್ಸ್ ಬಾಯ್ಸ್ ಸಾಹಸವನ್ನೇ ಮಾಡಬೇಕಾಗಿದೆ.

ಸದ್ಯ ಯಾರ್ಯಾರಿಗೆ ಯಾರು ಜೋಡಿ ಅನ್ನೋದು ಈಗಾಗಲೇ ಫಿಕ್ಸ್ ಆಗಿದೆ. ಫಿಕ್ಸ್ ಆಗಿರುವ ಜೋಡಿ ಜೊತೆಗೇ ಮನರಂಜನೆ ನೀಡಲು ಶುರುವಾಗಿದೆ. ಭರ್ಜರಿ ಬ್ಯಾಚುಲರ್ಸ್ ಅನ್ನು ಅಕುಲ್ ಬಾಲಾಜಿ ನಡೆಸಿಕೊಡುತ್ತಿದ್ದರೆ. ರವಿಚಂದ್ರನ್ ಹಾಗೂ ರಚಿತಾ ರಾಮ್ ಜಡ್ಜ್‌ಗಳಾಗಿದ್ದಾರೆ.

 Zee Kannada reality show Bharjari Bachelors Written Update on July 2nd. Here is the details about Bharjari Bachelors in beauty parlour.

ಬ್ಯೂಟಿಪಾರ್ಲರ್‌ಗೆ ಹೊರಟ ಭರ್ಜರಿ ಬ್ಯಾಚುಲರ್ಸ್

ಭರ್ಜರಿ ಬ್ಯಾಚುಲರ್ಸ್ ಹುಡುಗಿಯರೆಲ್ಲ ಮುದ್ದು ಮುದ್ದಾಗಿ ಕಾಣಿಸುತ್ತಿದ್ದಾರೆ. ಹಾಗೆ ಪಾರ್ಟ್‌ನರ್ಸ್ ಹೇಗಿರಬೇಕು ಅನ್ನೋದು ಅವರ ಆಯ್ಕೆಗೆ ಬಿಟ್ಟಿದ್ದು. ರವಿಚಂದ್ರನ್, ನಿಮ್ಗೆ ಯಾವ ಜೋಡಿ ಬೇಕೋ ಅವ್ರನ್ನ ಆಯ್ಕೆ ಮಾಡಿಕೊಳ್ಳಿ ಅಂತ ಬಿಟ್ಟಿದ್ದರು. ಆದರೆ, ಹುಡುಗರು ಹೇಗೆಲ್ಲಾ ಇರಬೇಕು ಅನ್ನೋದು ಹುಡುಗಿಯರ ಆಯ್ಕೆಗೆ ಬಿಟ್ಟ ವಿಚಾರ. ಹೀಗಾಗಿ ಹುಡುಗಿಯರೆಲ್ಲಾ ಪ್ಲ್ಯಾನ್ ಮಾಡಿ, ಬಾಯ್ಸ್ ನೆಲ್ಲಾ ಪಾರ್ಲರ್‌ಗೆ ಕರೆದುಕೊಂಡು ಹೋಗಿದ್ದಾರೆ.

ವ್ಯಾಕ್ಸ್ ಮಾಡಿಸಿಕೊಳ್ಳಲು ಮನೋಹರ್ ಗೋಳಾಟ

ಪಾರ್ಲರ್‌ನಲ್ಲಿ ಒಬ್ಬೊಬ್ಬರದ್ದು ಒಂದೊಂದು ಅವತಾರ. ಎಲ್ಲರೂ ಅವರವರ ಪಾರ್ಟ್‌ನರ್ಗಳನ್ನು ಕರೆದುಕೊಂಡು ಒಂದೊಂದು ಪಾರ್ಲರ್‌ಗೆ ಹೋಗಿದ್ದಾರೆ. ಅದರಲ್ಲಿ ಮನೋಹರನ ಪಾಡು ನೋಡೋದಕ್ಕೆ ಆಗ್ತಿಲ್ಲ. ಮನೋಹರ್ ಪಾರ್ಟ್‌ನರ್ ಸಂಜನಾ ತಮ್ಮ ಕನಸಿಗ ಹುಡುಗ ಹೇಗೆಲ್ಲಾ ಇರಬೇಕು ಎಂಬ ಕನಸು ಕಂಡಿದ್ದಾರೆ. ಹೀಗಾಗಿ ತನ್ನ ಕನಸಿನ ಹುಡುಗನ ರೀತಿ ರೆಡಿ ಮಾಡೋದಕ್ಕೆ ಪಾರ್ಲರ್‌ಗೆ ಕರೆದುಕೊಂಡು ಹೋಗಿದ್ದು, ಫುಲ್ ಬಾಡಿ ವ್ಯಾಕ್ಸ್ ಮಾಡಿಸಿದ್ದಾರೆ. ವ್ಯಾಕ್ಸ್ ಮಾಡುತ್ತಿದ್ದ ರೀತಿಗೆ ಮನೋಹರ್ ಗೋಳಾಡಿದ್ದಾರೆ.

ನವಾಜ್ ಹೇರ್ ಸ್ಟೈಲ್ ಚೇಂಜ್

ನವಾಜ್ ಸ್ವಲ್ಪ ಬಚಾವ್ ಆಗಿದ್ದಾರೆ. ಅವರ ಜೋಡಿ ಅಮೂಲ್ಯ ತುಂಬಾ ದೊಡ್ಡಮಟ್ಟದ ನಿರೀಕ್ಷೆಯನ್ನೇನು ಇಟ್ಟುಕೊಂಡಿಲ್ಲ. ಅಮೂಲ್ಯಾಗೆ ನವಾಜ್ ಹೇರ್ ಸ್ಟೈಲ್ ಮೇಲಷ್ಟೇ ಕಣ್ಣು. ಅದಕ್ಕೆ ಪಾರ್ಲರ್‌ಗೆ ಕರೆದುಕೊಂಡು ಬಂದು, ಹೇರ್ ಬಾತ್ ಮಾಡಿಸಿ, ಸಖತ್ ಆಗಿ ಕಾಣುವಂತೆ ಹೇರ್ ಸ್ಟೈಲ್ ಮಾಡಿಸಿದ್ದಾರೆ. ಆದರೆ, ಸೂರಜ್ ಡ್ರೀಮ್ ಗರ್ಲ್ ಹಾಗಲ್ಲ. ಐಶ್ವರ್ಯಾ, ಸೂರಜ್‌ನ ಅವತಾರವನ್ನೇ ಚೇಂಜ್ ಮಾಡೋದಕ್ಕೆ ನೋಡಿದ್ದಾರೆ. ಅದರಲ್ಲೂ ಹೊಟ್ಟೆ ಕರಗಿಸುವ ಪ್ಲ್ಯಾನ್ ಇದ್ದರು ಇರಬಹುದು. ಮಸಾಜ್ ಪಾರ್ಲರ್‌ಗೆ ಕರೆದುಕೊಂಡು ಬಂದು, ಫುಲ್ ಬಾಡಿ ಮಸಾಜ್ ಮಾಡಿಸಿದ್ದಾರೆ. ಆದ್ರೆ, ಉಮೇಶ್ ಕಿನ್ನಾಳ ಹಾಗೂ ರಶ್ಮಿ ನಡುವೆ ದೊಡ್ಡ ಯುದ್ಧವೇ ನಡೆದು ಹೋಗಿದೆ. ಹೇರ್ ಕಟ್ ಮಾಡಿಸಲ್ಲ ಎಂಬ ಕಾರಣಕ್ಕೆ ಪಾರ್ಲರ್‌ನಲ್ಲೇ ಜಗಳವಾಗಿದೆ‌.

Bharjari Bachelors in beauty parlour

ಆಸಿಯಾ ಬೇಗಂ ಮಾಡಿದ್ದು ನೋಡಿ

ಸಿಂಗರ್ ಹನುಮಂತ ಎಷ್ಟು ನಾಚಿಕೆ ಸ್ವಭಾವ ಅನ್ನೋದು ಎಲ್ಲರಿಗೂ ಗೊತ್ತು. ಈಗ ಜೋಡಿ ಜೊತೆಗೆ ಸೇರಿರುವ ಹನುಮಂತ, ಪಾರ್ಲರ್‌ನಲ್ಲೂ ನುಲಿಯುತ್ತಿದ್ದಾರೆ. ಬಾಡಿ ಸ್ಟೀಮ್ ಮಾಡಿಸುವುದಕ್ಕೆ ಹನುಮಂತು ಜೋಡಿ ಆಸಿಯಾ ಬೇಗಂ ಹೊರಟಿದ್ದರು. ಆದರೆ, ಹನುಮಂತು ಶರ್ಟ್ ಬಿಚ್ಚೋಕೂ ನಾಚಿಕೆ ಪಟ್ಟುಕೊಂಡರು. ಆಸಿಯಾ ಬೇಗಂ ಅಂತು ಹನುಮಂತು ಬಾಡಿ ಸ್ಟೀಮ್ ಕೊಡಿಸೋಕೆ ಪಟ್ಟ ಸಾಹಸ ಅಷ್ಟಿಷ್ಟಲ್ಲ. ಶರ್ಟ್ ಬಿಚ್ಚೋದನ್ನು ಯಾರು ನೋಡಬಾರದು, ಸ್ಟೀಮ್ ಕೊಡುವಾಗಲೂ ಟವೆಲ್ ತೆಗೆಯಬಾರದು ಎಂಬ ಕಂಡೀಷನ್ ಹಾಕಿದ್ದಾರೆ.

More from Filmibeat

English summary
Zee Kannada reality show Bharjari Bachelors Written Update on July 2nd. Here is the details about Bharjari Bachelors in beauty parlour.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X