DKD Finale: 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಗ್ರ್ಯಾಂಡ್ ಫಿನಾಲೆ.. ಯಾವಾಗ? ಫಿನಾಲೆಗೆ ಬಂದವರು ಯಾರು?
ಜೀ ಕನ್ನಡದ ಜನಪ್ರಿಯ ರಿಯಾಲಿಟಿ ಶೋ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್'ಗೆ ಬಿಗ್ ಫಾಲೋವರ್ಸ್ ಇದ್ದಾರೆ. ಕಿರುತೆರೆ ನಟರು ಹಾಗೂ ಅವರೊಂದಿಗೆ ಹೆಜ್ಜೆ ಹಾಕಿದ ಸ್ಪರ್ಧಿಗಳು ವೀಕ್ಷಕರನ್ನು ಇದೂವರೆಗೂ ರಂಜಿಸುತ್ತಾ ಬಂದಿದ್ದಾರೆ. ಈ ಶೋನಲ್ಲಿ ಡ್ಯಾನ್ಸ್‌ನ ವಿವಿಧ ಪ್ರಕಾರಗಳು, ಥೀಮ್‌ಗಳಲ್ಲಿ ಸೆಲೆಬ್ರೆಟಿಗಳ ಜೊತೆ ಡ್ಯಾನ್ಸರ್‌ಗಳು ಹೆಜ್ಜೆ ಹಾಕಿದ್ದಾರೆ. ವೀಕೆಂಡ್‌ನಲ್ಲಿ ಪ್ರೇಕ್ಷಕರನ್ನು ರಂಜಿಸುತ್ತಿದ್ದ ಈ ಶೋ ಈಗ ಅಂತಿಮ ಹಂತಕ್ಕೆ ಬಂದಿದೆ.
'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ರಿಯಾಲಿಟಿ ಶೋನ ಪ್ರಮುಖ ಆಕರ್ಷಣೆ ಜಡ್ಜ್‌ಗಳು. ಶಿವರಾಜ್‌ಕುಮಾರ್, ರಚಿತಾ ರಾಮ್, ಅರ್ಜುನ್ ಜನ್ಯ ಹಾಗೂ ವಿಜಯ್ ರಾಘವೇಂದ್ರ ಈ ಶೋನ ಜಡ್ಜ್‌ಗಳಾಗಿದ್ದಾರೆ. ಇದೂವರೆಗೂ ಸ್ಪರ್ಧಿಗಳ ಜೊತೆಗೆ ಜಡ್ಜ್‌ಗಳು ಕೂಡ ಕಿರುತೆರೆ ವೀಕ್ಷಕರನ್ನು ರಂಜಿಸಿದ್ದಾರೆ. ಈಗ ಈ ಶೋ ಅಂತಿಮ ಘಟ್ಟಕ್ಕೆ ಬಂದು ತಲುಪಿದೆ.

'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ರಿಯಾಲಿಟಿ ಶೋನ ನಿರೂಪಣೆ ಕೂಡ ಅಷ್ಟೇ ಹೈಲೈಟ್. ಮಾತಿನ ಮಲ್ಲಿ ಅನುಶ್ರೀ ಮಾತಿಗೆ ಇಳಿದರೆ, ವೀಕ್ಷಕರು ಈ ಶೋ ಅನ್ನು ತಪ್ಪಿಸಿಕೊಳ್ಳುವ ಮಾತೇ ಇಲ್ಲ. ವೀಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತಾ ನಿರೂಪಣೆ ಮಾಡುವ ಅನುಶ್ರೀ ಈ ಶೋನ ಸಕ್ಸಸ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಇನ್ನು 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಶೋ ಗ್ರ್ಯಾಂಡ್ ಫಿನಾಲೆ ಯಾವಾಗ? ಯಾರೆಲ್ಲ ಫಿನಾಲೆಗೆ ಬಂದಿದ್ದಾರೆ? ತಿಳಿಯುವುದಕ್ಕೆ ಮುಂದೆ ಓದಿ.
ಈ ಸೀಸನ್‌ನಲ್ಲಿ ತೀರ್ಪುಗಾರರಾದ ಶಿವರಾಜ್‌ಕುಮಾರ್, ರಚಿತಾ ರಾಮ್, ಅರ್ಜುನ್ ಜನ್ಯ ಹಾಗೂ ವಿಜಯ್ ರಾಘವೇಂದ್ರ ಈ ನಾಲ್ಕೂ ಮಂದಿ ಸ್ಪರ್ಧಿಗಳ ಪರ್ಫಾಮನ್ಸ್, ಹಾವ-ಭಾವ, ಕೋ ಆರ್ಡಿನೇಷನ್, ಓವರ್ ಆಲ್ ಪ್ರೆಸೆಂಟೇಷನ್‌ಗಳನ್ನು ನೋಡಿ ತಮ್ಮ ತೀರ್ಪನ್ನು ನೀಡಿದ್ದಾರೆ. ಇದು ಈ ರಿಯಾಲಿಟಿ ಶೋನಲ್ಲಿ ಭಾಗವಹಿಸುವ ಸ್ಪರ್ಧಿಗಳ ತಮ್ಮ ಪರ್ಫಾಮೆನ್ಸ್ ಅನ್ನು ಉತ್ತಮ ಪಡಿಸಿಕೊಳ್ಳುವುದಕ್ಕೆ ಅನುಕೂಲವಾಗಿದೆ.
'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಈ ರಿಯಾಲಿಟಿ ಶೋನಲ್ಲಿ ನೃತ್ಯದ ಮೂಲಕ ಕಥೆ ಹೇಳುವುದಕ್ಕೆ ಹೆಚ್ಚು ಒತ್ತು ನೀಡಲಾಗಿತ್ತು. ಇಲ್ಲಿ ಶಾಸ್ತ್ರೀಯ, ಜಾನಪದ ಹಾಗೂ ಸಿನಿಮಾ ಶೈಲಿಯ ನೃತ್ಯ, ಇಲ್ಲವೇ ಕಥೆಯ ಆಧಾರದ ಮೇಲೆ ಪ್ರದರ್ಶನ ನಡೆಸಲಾಯಿತು. ಹೀಗಾಗಿ ಈ ಶೋ ಭಾವನಾತ್ಮಕವಾಗಿ ವೀಕ್ಷಕರಿಗೆ ಮತ್ತಷ್ಟು ಹತ್ತಿರವಾಗಿದೆ. ಜೊತೆಗೆ ವೀಕ್ಷಕರ ಮನರಂಜನೆಗೂ ಏನೂ ಸಮಸ್ಯೆ ಇರಲಿಲ್ಲ.
ಇನ್ನೂ ಫಿನಾಲೆಗೆ ಬಂದ ಸ್ಪರ್ಧಿಗಳ ಲಿಸ್ಟ್ ಇಲ್ಲಿದೆ. ಪೂಜಾ ಹಾಗೂ ಅನೂಪ್, ಸಿದ್ದೇಗೌಡ್ರು ಹಾಗೂ ದೀಶಲ್, ಮೋಹಿತ್ ಹಾಗೂ ಅನನ್ಯಾ, ಹರ್ಷ ಹಾಗೂ ನಂದು ಜೊತೆಗೆ ಶಿಕ್ಷಿತ್ ತಾಪಾ ಮತ್ತು ಸಂಜನಾ ಫೈನಲಿಸ್ಟ್‌ಗಳಾಗಿ ಹೊರ ಹೊಮ್ಮಿದ್ದಾರೆ. ಒಟ್ಟು ಐದು ಜೋಡಿಗಳು ಗ್ರ್ಯಾಂಡ್ ಫಿನಾಲೆಯಲ್ಲಿ ಪೈಪೋಟಿ ಗೆಲುವಿಗಾಗಿ ಪೈಪೋಟಿ ನಡೆಸಲಿವೆ. ವಿಭಿನ್ನ ಶೈಲಿಯ ನೃತ್ಯಗಳನ್ನು ಅದ್ಭುತವಾಗಿ ಪ್ರದರ್ಶಿಸಿದ ಎಲ್ಲಾ ಜೋಡಿಗಳು ಈಗ ಅಂತಿಮ ಸುತ್ತನ್ನು ತಲುಪಿದ್ದಾರೆ.
ಇನ್ನು ಫಿನಾಲೆಯಲ್ಲಿ ಈ ಐದೂ ಜೋಡಿಗಳ ಪರ್ಫಾಮೆನ್ಸ್ ನಡೆಯಲಿದೆ. ಅವರ ಪರ್ಫಾಮೆನ್ಸ್ ಬಳಿಕ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಶೋಗ ವಿಜೇತರು ಯಾರು? ಎಂದು ಘೋಷಣೆಯಾಗಲಿದೆ. ಅಂತಿಮ ಹಂತಕ್ಕೆ ಬಂದಿರೋ ಈ ಡ್ಯಾನ್ಸ್ ಶೋ
ಇದೆ ಏಪ್ರಿಲ್ 11 ಶನಿವಾರ ಸಂಜೆ 7 ಗಂಟೆಯಿಂದ 9 ಗಂಟೆಯವರೆಗೆ ಮತ್ತು ಏಪ್ರಿಲ್ 12 ಭಾನುವಾರದಂದು ಸಂಜೆ 7 ಗಂಟೆಯಿಂದ 9:30 ರವರೆಗೆ ಪ್ರಸಾರ ಆಗಲಿದೆ. ಸೆಲೆಬ್ರಿಟಿ ಸ್ಪರ್ಧಿಗಳು ಮತ್ತು ಡ್ಯಾನ್ಸರ್ ಗಳು ಜೋಡಿಯಾಗಿ ಪರ್ಫಾರ್ಮೆನ್ಸ್ ನೀಡಿದ ಈ ಶೋನಲ್ಲಿ ವಿವಿಧ ಬಗೆಯ ನೃತ್ಯ ಪ್ರಕಾರಗಳು ಮತ್ತು ಥೀಮ್ ಗಳಿದ್ದಿದ್ದು ಮಾತ್ರವಲ್ಲದೆ ಈ ಕಾರ್ಯಕ್ರಮ ಕಳೆದ ಕೆಲವು ವಾರಗಳಿಂದ ಚಾನೆಲ್‌ನ ವೀಕೆಂಡ್ ಕಾರ್ಯಕ್ರಮಗಳ ಪ್ರಮುಖ ಭಾಗವಾಗಿತ್ತು.


Click it and Unblock the Notifications











