Jodi No 1: 105 ದಿನಗಳು.. 10 ಜೋಡಿಗಳು.. ಯಾರಾಗ್ತಾರೆ 'ಜೋಡಿ ನಂ 1'?

ರಿಯಾಲಿಟಿ ಶೋಗಳು ವೀಕೆಂಡ್‌ನಲ್ಲಿ ವೀಕ್ಷಕರಿಗೆ ಭರಪೂರ ಮನರಂಜನೆ ನೀಡುತ್ತವೆ. ಕಿರುತೆರೆ ವಾಹಿನಿಗಳು ವೀಕ್ಷಕರನ್ನು ಸೆಳೆಯುವುದಕ್ಕೆ ವಿಭಿನ್ನ ರಿಯಾಲಿಟಿ ಶೋಗಳನ್ನು ಜನರ ಮುಂದೆ ಇಡುತ್ತಲೇ ಇರುತ್ತವೆ. ಜೀ ಕನ್ನಡ ವಾಹಿನಿ ವೀಕೆಂಡ್‌ನಲ್ಲಿ ವೀಕ್ಷಕರನ್ನು ರಂಜಿಸುವುದಕ್ಕೆ ರಿಯಾಲಿಟಿ ಶೋಗಳನ್ನು ಪ್ರಸಾರ ಮಾಡುತ್ತಲೇ ಇರುತ್ತೆ. ಅದರಲ್ಲಿ ಒಂದು ಕೌಟುಂಬಿಕ ಶೋ 'ಜೋಡಿ ನಂ 1'.

ಕಳೆದ ಮೂರು ತಿಂಗಳಿನಿಂದ ಈ ರಿಯಾಲಿಟಿ ಶೋ ವೀಕೆಂಡ್‌ನಲ್ಲಿ ಭರಪೂರ ಮನರಂಜನೆ ನೀಡಿತ್ತು. ಈಗ ಅಂತಿಮ ಹಂತಕ್ಕೆ ಬಂದು ನಿಂತಿದೆ. 'ಜೋಡಿ ನಂ. 1' ಕಳೆದ 14 ವಾರಗಳಿಂದ ಯಶಸ್ವಿಯಾಗಿ ಮನರಂಜನೆ ನೀಡುತ್ತಾ ಬಂದಿದೆ. ಇದೀಗ ಗ್ರ್ಯಾಂಡ್ ಫಿನಾಲೆಯ ಹಂತಕ್ಕೆ ಬಂದು ತಲುಪಿದೆ. ಕಿರುತೆರೆ ಹಾಗೂ ಸೋಶಿಯಲ್ ಮೀಡಿಯಾ ಲೋಕದಲ್ಲಿ ಸದ್ದು ಮಾಡಿರುವ ನವ ಜೋಡಿಗಳು ಈ ಶೋಗಳಲ್ಲಿ ಭಾಗವಹಿಸಿದ್ದವು.

Zee Kannada reality show Jodi No 1 Grand Finale date time and contestants details

'ಜೋಡಿ ನಂ 1' ಸುಮಾರು 14 ವಾರಗಳು, 105 ದಿನಗಳು, ಹತ್ತು ಸೆಲೆಬ್ರಿಟಿ ಜೋಡಿಗಳು, ಒಂದು ಚಾಂಪಿಯನ್ ಪಟ್ಟ ನಡೆದ ಶೋ. ಈ ಪಟ್ಟ ಯಾರ ಮುಡಿಗೆ ಸೇರುತ್ತೆ ಅನ್ನೋದು ಸದ್ಯಕ್ಕೆ ಕೆಲವೇ ಕ್ಷಣಗಳಲ್ಲಿ ರಿವೀಲ್ ಆಗಲಿದೆ. 'ಜೋಡಿ ನಂ.1' ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ ಶುರುವಾಗಿದ್ದು, ಅದರ ಹೈಲೈಟ್ ಇಲ್ಲಿದೆ.

'ಜೋಡಿ ನಂ 1' ರಿಯಾಲಿಟಿ ಶೋ ಗ್ರ್ಯಾಂಡ್ ಫಿನಾಲೆಯ ಹೈಲೈಟ್ಸ್

ದಾಂಪತ್ಯದ ಸುಂದರ ಪಯಣ

ಜೀ ಕನ್ನಡದ 'ಜೋಡಿ ನಂ 1' ರಿಯಾಲಿಟಿ ಶೋ ನಲ್ಲಿ 30 ವರ್ಷಗಳ ದಾಂಪತ್ಯದ ಅನುಭವಿರುವ ಹಿರಿಯ ಜೋಡಿಗಳಿಂದ ಹಿಡಿದು ಕೇವಲ 3 ತಿಂಗಳ ಹಿಂದಷ್ಟೇ ಮದುವೆಯಾದ ನವಜೋಡಿಗಳವರೆಗೆ ಭಾಗವಹಿಸಿದ್ದರು. ಒಟ್ಟು 10 ಸೆಲೆಬ್ರಿಟಿ ಜೋಡಿಗಳು ಶೋನಲ್ಲಿ ಭರಪೂರ ಮನರಂಜನೆ ನೀಡಿದ್ದರು. 3 ತಿಂಗಳ ಈ ಪಯಣದಲ್ಲಿ ಪ್ರೀತಿ, ಮುನಿಸು, ನಗು, ಅಳು, ಸವಾಲು ಹಾಗೂ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವ ಸುಂದರ ಬದುಕಿನ ಕ್ಷಣಗಳನ್ನು ವೀಕ್ಷಕರು ನೋಡಿದ್ದರು. ಕುಟುಂಬದ ಜೊತೆ ಕೂತು ಈ ರಿಯಾಲಿಟಿ ಶೋ ಅನ್ನು ನೋಡಿ ಎಂಜಾಯ್ ಮಾಡಿದ್ದರು.

ಜಡ್ಜ್‌- ಆಂಕರ್ ಜುಗಲ್‌ಬಂದಿ

ಜಡ್ಜ್: 'ಜೋಡಿ ನಂ 1' ರಿಯಾಲಿಟಿ ಶೋನ ಪ್ರಮುಖ ಆಕರ್ಷಣೆ ಜಡ್ಜ್‌ಗಳು. ಕನ್ನಡಿಗರ ಮನೆಗಳಲ್ಲಿ 'ಬೀಗ್ರು' ಅಂತಾನೇ ಫೇಮಸ್ ಆಗಿದ್ದಾರೆ. ಹಿರಿಯ ನಟಿ ಮಾಳವಿಕಾ ಅವಿನಾಶ್, ನಟ ಲವ್ಲಿ ಸ್ಟಾರ್ ಪ್ರೇಮ್, 'ಅಮೃತಧಾರೆ' ಧಾರಾವಾಹಿಯ ರಾಜೇಶ್ ನಟರಂಗ ಹಾಗೂ ಛಾಯಾಸಿಂಗ್ ತೀರ್ಪುಗಾರರ ಜವಾಬ್ದಾರಿ ವಹಿಸಿಕೊಂಡಿದ್ದರು.

ನಿರೂಪಕರ ಕಚಗುಳಿ: ಈ ರಿಯಾಲಿಟಿ ಶೋಗೆ ನಿರೂಪಕರು ಕೂಡ ಹೈಲೈಟ್. ಹಾಸ್ಯ ನಟ ಕುರಿ ಪ್ರತಾಪ್ ಹಾಗೂ ಶ್ವೇತಾ ಚೆಂಗಪ್ಪ ನಿರೂಪಣೆಗೆ ಮನ ಸೋತಿದ್ದರು. ತಮ್ಮ ಹಾಸ್ಯ ಮಿಶ್ರಿತ ನಿರೂಪಣೆ ಹಾಗೂ ಲವಲವಿಕೆಯಿಂದ ಕಿರುತೆರೆ ವೀಕ್ಷಕರಿಗೆ ಕಚಗುಳಿ ಇಟ್ಟಿದ್ದರು.

ಚಾಂಪಿಯನ್ ಪಟ್ಟಕ್ಕಾಗಿ ಫೈಟ್

ಜೀ ಕನ್ನಡದ ಜನಪ್ರಿಯ ರಿಯಾಲಿಟಿ ಶೋ 'ಜೋಡಿ ನಂ. 1' ಗ್ರ್ಯಾಂಡ್ ಫಿನಾಲೆ ಗೆದ್ದು, ಚಾಂಪಿಯನ್ ಪಟ್ಟಕ್ಕಾಗಿ 10 ಜೋಡಿಗಳು ಪೈಪೋಟಿ ನಡೆಸಲಿವೆ. ಆ 10 ಜೋಡಿಗಳ ಲಿಸ್ಟ್ ಇಲ್ಲಿದೆ.

ಅಭಿಲಾಷ್ - ಅಪೂರ್ವ

ಕೋಟೆ ಪ್ರಭಾಕರ್ - ಮಾಲತಿ

ಗೀತಾ ಭಾರತಿ ಭಟ್ - ರಾಜಾರಾಮ್ ಭಟ್

ರಜಿನಿ - ಅರುಣ್

ರುದ್ರ ಮಾಸ್ಟರ್ - ನಿರೀಕ್ಷಾ

ಮಿಮಿಕ್ರಿ ಗೋಪಿ - ಉಷಾರಾಣಿ

ಧನರಾಜ್ - ಪ್ರಜ್ಞಾ

ಜಗಪ್ಪ - ಸುಶ್ಮಿತಾ

ಬಾಳು ಬೆಳಗುಂದಿ - ಮಾಲಾಶ್ರೀ

ನಯನ - ಸುಹಾಸ್

ಯಾವಾಗ ಫಿನಾಲೆ?

ರೋಮಾಂಚಕ ಟಾಸ್ಕ್‌ಗಳು, ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಗಿದ್ದ 'ಜೋಡಿ ನಂ 1' ಗ್ರ್ಯಾಂಡ್ ಫಿನಾಲೆಯಲ್ಲೂ ಡಬಲ್ ಮನರಂಜನೆ ಸಿಗೋದು ಗ್ರ್ಯಾರಂಟಿ. ಅದ್ದೂರಿ ಮನರಂಜನೆಯ ಮಹಾ ಹೂರಣವಾಗಿರುವ 'ಜೋಡಿ ನಂ. 1' ಗ್ರ್ಯಾಂಡ್ ಫಿನಾಲೆ ಜುಲೈ 11 ಮತ್ತು 12ರ ರಾತ್ರಿ 9:00 ಗಂಟೆಗೆ ಜೀ ಕನ್ನಡದಲ್ಲಿ ಪ್ರಸಾರ ಆಗಲಿದೆ.

English summary
Zee Kannada reality show Jodi No 1 Grand Finale date, time and contestants details.
Read more about: reality show tv show zee kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X