'ಸರಿಗಮಪ' ಸೀಸನ್ 21 ಗೆದ್ದವರು ಯಾರು? ಈ ಆರು ಮಂದಿಯಲ್ಲಿ ಗೆದ್ದವರು ಯಾರು?
ಕನ್ನಡದ ಜನಪ್ರಿಯ ಸಿಂಗಿಂಗ್ ರಿಯಾಲಿಟಿ ಶೋ ಅಂದರೆ ಅದು 'ಸರಿಗಮಪ'. ಜೀ ಕನ್ನಡದ ಈ ಸಿಂಗಿಂಗ್ ರಿಯಾಲಿಟಿ ಶೋ ಕಿರುತೆರೆ ವೀಕ್ಷಕರ ಅಚ್ಚು ಮೆಚ್ಚಿನ ಸಂಗೀತ ಕಾರ್ಯಕ್ರಮ. ಅದಕ್ಕೆ 21 ಸೀಸನ್‌ಗಳೇ ಸಾಕ್ಷಿ. ಈಗ ಸರಿಗಮಪ ಸೀಸನ್ 21 ಗ್ರ್ಯಾಂಡ್ ಫಿನಾಲೆ ನಡೆದಿದೆ. ಈ ಕಾರ್ಯಕ್ರಮವನ್ನು ಇದೇ ಮೊದಲ ಬಾರಿಗೆ ಜೀ ಕನ್ನಡದಲ್ಲಿ ಪ್ರಸಾರ ಆಗುವುದಕ್ಕೂ ಮುನ್ನ ಜೀ 5 ಓಟಿಟಿ ವೇದಿಕೆಯಲ್ಲಿ ನೇರ ಪ್ರಸಾರ ಮಾಡಲಾಗಿದೆ.
ಕನ್ನಡ ಕಿರುತೆರೆಯ ಈ ಜನಪ್ರಿಯ ರಿಯಾಲಿಟಿ ಶೋನಲ್ಲಿ ಸುಮಾರು 6 ವರ್ಷದಿಂದ 60 ವರ್ಷವರೆಗಿನ ವಯೋಮಿತಿಯವರು ಸ್ಪರ್ಧಿಗಳಾಗಿ ಭಾಗವಹಿಸಿದ್ದರು. ಸರಿಗಮಪ ಸೀಸನ್ 21ರ ಕೊನೆ ಘಟ್ಟದಲ್ಲಿ ಆರು ಮಂದಿ ಸ್ಪರ್ಧಿಗಳು ಗೆಲುವಿಗಾಗಿ ಪೈಪೋಟಿ ನಡೆಸಿದ್ದರು. ಈ ಆರು ಮಂದಿ ಸ್ಪರ್ಧಿಗಳಲ್ಲಿ 'ಸರಿಗಮಪ' ಟೈಟಲ್ ಯಾರ ಮುಡಿಗೇರುತ್ತೆ ಎನ್ನುವ ಕೂತೂಹಲವಿತ್ತು. ಅದಕ್ಕಿಗ ತೆರೆಬಿದ್ದಿದೆ.

'ಸರಿಗಮಪ' ಸೀಸನ್ 21 ಗ್ರ್ಯಾಂಡ್ ಫಿನಾಲೆ ಈಗಾಗಲೇ ಮುಗಿದಿದೆ. ಜೀ 5ನಲ್ಲಿ ನಿನ್ನೆ (ಜೂನ್ 5) ಈ ಸಿಂಗಿಂಗ್ ರಿಯಾಲಿಟಿ ಶೋ ಅನ್ನು ನೇರ ಪ್ರಸಾರ ಮಾಡಲಾಗಿದೆ. ಫಿನಾಲೆಯಲ್ಲಿ ಬಾಳು ಬೆಳಗುಂದಿ, ಶಿವಾನಿ, ಆರಾಧ್ಯ ರಾವ್, ರಶ್ಮಿ, ಅಮೋಘ ವರ್ಷ ಹಾಗೂ ದ್ಯಾಮೇಶ ಅಂತಿಮ ಆರು ಸ್ಪರ್ಧಿಗಳಾಗಿದ್ದರು. ಇವರಲ್ಲಿ ವಿನ್ನರ್ ಯಾರಿಗೆ ಎಂಬ ಕುತೂಹಲ ಕಿರುತೆರೆ ವೀಕ್ಷಕರಲ್ಲಿ ಇತ್ತು. ಈಗ ವಿನ್ನರ್ ಯಾರು ಅನ್ನೋ ವಿಷಯ ಹೊರ ಬಿದ್ದಿದೆ.
ಜೀ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಸರಿಗಮಪ ಸೀಸನ್ 21 ಜೂನ್ 5 ರಂದು ನಡೆದಿದೆ. ಈ ಶೋ ಜೀ 5 ಓಟಿಟಿಯಲ್ಲಿ ನೇರ ಪ್ರಸಾರ ಆಗಿದ್ದರೂ, ಟಿವಿಯಲ್ಲಿ ಈ ವೀಕೆಂಡ್‌ನಲ್ಲಿ ಪ್ರಸಾರ ಆಗುತ್ತಿದೆ. ಒಟಿಟಿಯಲ್ಲಿ ಮಿಸ್ ಮಾಡಿಕೊಂಡವರು ಕಿರುತೆರೆಯಲ್ಲಿ ಈ ಶೋ ಅನ್ನು ನೋಡಬಹುದು. ಸಿಂಗಿಂಗ್ ಜೊತೆಗೆ ಮನರಂಜನೆಯ ಮಹಾಪೂರವೇ ಈ ಶೋನಲ್ಲಿ ನೋಡುವುದಕ್ಕೆ ಸಿಗುತ್ತೆ. ಅನುಶ್ರೀ ನಿರೂಪಣೆ, ತೀರ್ಪುಗಾರರಾದ ವಿಜಯ ಪ್ರಕಾಶ್, ರಾಜೇಶ್ ಕೃಷ್ಣನ್ ಮತ್ತು ಅರ್ಜುನ್ ಜನ್ಯ ಪ್ರಮುಖ ಆಕರ್ಷಣೆಯಾಗಿದ್ದಾರೆ.
ಇನ್ನು ಸರಿಗಮಪ ಸೀಸನ್ 21 ರಿಯಾಲಿಟಿ ಶೋನಲ್ಲಿ ಅಂತಿಮ ಹಂತದಲ್ಲಿ ಆರು ಮಂದಿ ಆಯ್ಕೆ ಆಗಿದ್ದರು. ಗ್ರ್ಯಾಂಡ್ ಫಿನಾಲೆಯಲ್ಲಿ ಆರು ಮಂದಿ ಟೈಟಲ್‌ಗಾಗಿ ಪೈಪೋಟಿಗೆ ಇಳಿದಿದ್ದರು. ದ್ಯಾಮೇಶ, ಬಾಳು ಬೆಳಗುಂದಿ, ರಶ್ಮಿ ಡಿ, ಅಮೋಘ ವರ್ಷ, ಶಿವಾನಿ ಮತ್ತು ಆರಾಧ್ಯ ರಾವ್ ನಡುವೆ ಹಣಾಹಣಿ ಇತ್ತು. ಆರಾಧ್ಯಾ ರಾವ್ ಹಾಗೂ ಶಿವಾನಿ ಇಬ್ಬರೂ ನೇರವಾಗಿ ಫಿನಾಲೆಗೆ ಟಿಕೆಟ್ ಪಡೆದುಕೊಂಡಿದ್ದರು.

ಈ ಆರು ಮಂದಿ ಸ್ಪರ್ಧಿಗಳಲ್ಲಿ ಶಿವಾನಿ, ರಶ್ಮಿ ಹಾಗೂ ಆರಾಧ್ಯ ರಾವ್ ಮಧ್ಯೆ ಪೈಪೋಟಿ ನಡೆದಿತ್ತು. ಕೊನೆಯ ಸೆಣೆಸಾಟದಲ್ಲಿ ಶಿವಾನಿ ಸರಿಗಮಪ ಸೀಸನ್ 21ರ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಹಾಗೇ ಮೊದಲ ರನ್ನರ್ ಅಪ್ ಆಗಿ ಆರಾಧ್ಯಾ ರಾವ್ ಆಗಿದ್ದರೆ, ರಶ್ಮಿ ಎರಡನೇ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಸರಿಗಮಪ ವಿನ್ನರ್ ಯಾರಾಗುತ್ತಾರೆಂಬ ವೀಕ್ಷಕರ ಕುತೂಹಲಕ್ಕೆ ತೆರೆ ಬಿದ್ದಿದೆ.
'ಸರಿಗಮಪ' ಫಿನಾಲೆಯ ಸಂಭ್ರಮದ ಕ್ಷಣಗಳನ್ನು ಜೀ 5ನಲ್ಲಿ ಮಿಸ್ ಮಾಡಿಕೊಂಡವರು ಜೀ ಕನ್ನಡದಲ್ಲಿ ವೀಕ್ಷಣೆ ಮಾಡಬಹುದು. ಜೂನ್ 7ರಂದು ಸಂಜೆ ಆರು ಗಂಟೆಯಿಂದ ಸರಿಗಮಪ ಗ್ರ್ಯಾಂಡ್ ಫಿನಾಲೆ ಪ್ರಸಾರ ಆಗುತ್ತಿದೆ. ಈ ವೀಕೆಂಡ್‌ನಲ್ಲಿ ಆರು ಸ್ಪರ್ಧಿಗಳ ಗಾಯನದ ಜೊತೆ ಜೊತೆಗೆ ಭರ್ಜರಿ ಮನರಂಜನೆಯನ್ನು ವೀಕ್ಷಿಸ ಬಹುದು.


Click it and Unblock the Notifications











