'ಗಟ್ಟಿಮೇಳ' ನಟಿ, ಸಾಗರದ ಅನ್ವಿತಾ ಮೊದಲ ಬಾರಿ ಅಣ್ಣನೊಂದಿಗೆ ಭರ್ಜರಿ ಸ್ಟೆಪ್ಸ್

ಅನ್ವಿತಾ ಸಾಗರ್ ಈ ಹೆಸರು ನಿಮಗೆ ಕೊಂಚ ಪರಿಚಿತ ಇರಬೇಕು. ಆದರೆ ಆದ್ಯಾ ಪರಿಚಯ ನಿಮಗೆ ಇದೆಯಾ ಅಂತ ಕೇಳಿದರೆ ಓ ನಮ್ಮ ಆದ್ಯಾ ಅಲ್ವಾ ಎನ್ನುವುದಕ್ಕೆ ಶುರು ಮಾಡಿಬಿಡುತ್ತಾರೆ. 'ಗಟ್ಟಿಮೇಳ' ಧಾರಾವಾಹಿಯ ಆದ್ಯಾ ಪಾತ್ರ ಎಲ್ಲರನ್ನು ಅಷ್ಟು ಗಟ್ಟಿಯಾಗಿ ಹಿಡಿದಿಟ್ಟಿದೆ. ನಮ್ಮ ಮನೆಯಲ್ಲೂ ಇಂತಹ ಒಬ್ಬ ತಂಗಿ ಇರಬಾರದಾ ಎಂಬ ಪ್ರಶ್ನೆಯನ್ನು ಹುಟ್ಟುಹಾಕುವಷ್ಟು, ಇಂತಹ ಸೊಸೆಯಿರಬಾರದಾ ಎಂಬ ಹೊಟ್ಟೆಕಿಚ್ಚು ಹುಟ್ಟುಹಾಕುವಷ್ಟು ಆದ್ಯಾ ಎಲ್ಲರಿಗೂ ಇಷ್ಟವಾಗಿ ಬಿಡುತ್ತಾರೆ.

ಇದೇ ಆದ್ಯಾಳ ನಿಜವಾದ ಹೆಸರು ಅನ್ವಿತಾ ಸಾಗರ್. ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದವರು. ಆದರೆ ಇರುವುದು ಮಂಗಳೂರಿನಲ್ಲಿ. ಆದರೆ ಹುಟ್ಟೂರು ಬಿಡುವ ಪ್ರಶ್ನೆಯೇ ಇಲ್ಲ ಎಂಬ ಕಾರಣಕ್ಕೆ ಹೆಸರಿನ ಜೊತೆಗೆ ಸಾಗರ ಸೇರಿಸಿಕೊಂಡಿದ್ದಾರೆ. ಇದೀಗ ತಮ್ಮ ಸಂತೋಷವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಅಣ್ಣ ಎಂದರೆ ಅನ್ವಿತಾಗೆ ಇನ್ನಿಲ್ಲದ ಪ್ರೀತಿ

ಅಣ್ಣ ಎಂದರೆ ಅನ್ವಿತಾಗೆ ಇನ್ನಿಲ್ಲದ ಪ್ರೀತಿ

ಅಣ್ಣ- ತಂಗಿ ಇದ್ದ ಮನೆಯಲ್ಲಿ ಸುಮ್ಮ ಸುಮ್ಮನೆ ಜಗಳ ಆಗುವುದು ಸಾಮಾನ್ಯ. ಅಪ್ಪ ಮಗಳಿಗೆ ಸಪೋರ್ಟ್ ಮಾಡಿದರೆ, ಅಮ್ಮ ಮಗನಿಗೆ ಸಪೋರ್ಟ್ ಮಾಡುತ್ತಾರೆ. ಆದರೆ ಅಣ್ಣ ತಂಗಿ ಜಗಳ ಶುರು ಮಾಡಿದರೆ ಮುಗೀತು. ಆಮೇಲೆ ಇಬ್ಬರೇ ಒಂದಾಗಿ, ಖುಷಿಯಾಗಿ ಇದ್ದು ಬಿಡುತ್ತಾರೆ. ಆದರೆ ಅನ್ವಿತಾ ಸಾಗರ್ ಮತ್ತು ಅವರ ಅಣ್ಣನ ವಿಚಾರದಲ್ಲಿ ಹಾಗಲ್ಲ. ಇಬ್ಬರು ಮನೆಯಲ್ಲಿದ್ದರೆ ಖುಷಿ ಖುಷಿಯಾಗಿ ಇರುತ್ತಾರೆ. ಜಗಳ ಆಡುವ ಪ್ರಮೇಯವೇ ಬರುವುದಿಲ್ಲ. ಸದ್ಯ ಅನ್ವಿತಾ ಸಾಗರ್ ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿರುವ ವಿಡಿಯೋವೊಂದು ಅಣ್ಣನ ಮೇಲಿನ ಪ್ರೀತಿಯನ್ನು ಸಾರಿ ಸಾರಿ ಹೇಳುತ್ತಿದೆ. ದಕ್ಷಿಣ ಕನ್ನಡದ ನಮ್ಮ ಟಿವಿಯಲ್ಲಿ ನಡೆಯುವ ಶೋ ಒಂದರಲ್ಲಿ ಇಬ್ಬರು ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ಇದು ಅನ್ವಿತಾಗೆ ತುಂಬಾನೆ ಖುಷಿ ಕೊಟ್ಟಿದೆ. ಮೊದಲ ಬಾರಿಗೆ ಅಣ್ಣನ ಜೊತೆಗೆ ವೇದಿಕೆ ಮೇಲೆ ಹೆಜ್ಜೆ ಹಾಕಿರುವ ಸಂತಸ ಹಂಚಿಕೊಂಡಿದ್ದಾರೆ.

ನಟನೆ ಜೊತೆಗೆ ಡ್ಯಾನ್ಸ್ ಮೇಲೆ ಹೆಚ್ಚು ಒಲವು

ಅನ್ವಿತಾ ಸಾಗರ್ ಸದ್ಯ ಜೀ ಕನ್ನಡದ 'ಗಟ್ಟಿಮೇಳ'ದಲ್ಲಿ ಆದ್ಯಾ ಎನ್ನುವ ಪಾತ್ರ ನಿರ್ವಹಿಸುತ್ತಿದ್ದಾರೆ. ಅದು ಪೋಷಕ ನಟಿ ಪಾತ್ರ. ಈ ಮೊದಲು ತುಳುನಲ್ಲಿ ನಟಿಯಾಗಿ ಹೊರ ಹೊಮ್ಮಿದ್ದವರು. ಪಾತ್ರ ಸಾಕಷ್ಟು ತೂಕ ಹೊಂದಿರುವ ಕಾರಣ 'ಗಟ್ಟಿಮೇಳ'ದಲ್ಲಿ ಆದ್ಯಾಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ನಟನೆಗಿಂತ ಹೆಚ್ಚು ಇಷ್ಟಪಡುವುದು ಡ್ಯಾನ್ಸ್ ಅನ್ನು. ಈಗಾಗಲೇ ಡ್ಯಾನ್ಸ್ ಒಂದರ ರಿಯಾಲಿಟಿ ಶೋನಲ್ಲಿ ಕೂಡ ಭಾಗವಹಿಸಿದ್ದಾರೆ. ಆದರೆ ಡ್ಯಾನ್ಸ್ ಪ್ರಾಕ್ಟೀಸ್‌ಗೂ ಮುನ್ನ ಸಾಕಷ್ಟು ಹೊಡೆತಗಳನ್ನು ತಿಂದಿದ್ದಾರೆ. ಪ್ರಾಕ್ಟೀಸ್ ವೇಳೆ ಬಿದ್ದು ಮಾಡಿಕೊಂಡಿರುವ ಗಾಯಗಳೇ ಕಾಣುತ್ತಿವೆ.

ಅನ್ವಿತಾ ವಾಡ್ ರೂಬ್‌ನಲ್ಲಿ ತುಂಬಿವೆ ಸೀರೆಗಳು

ಅನ್ವಿತಾ ವಾಡ್ ರೂಬ್‌ನಲ್ಲಿ ತುಂಬಿವೆ ಸೀರೆಗಳು

ಒಮ್ಮೆ ಅನ್ವಿತಾ ಸಾಗರ್ ಸೋಶಿಯಲ್ ಮೀಡಿಯಾಗೆ ಇಣುಕು ಹಾಕಿ ನೋಡಿದರೆ ಅವರ ಸ್ಟೈಲ್, ಲೈಫ್ ಸ್ಟೈಲ್ ಗೊತ್ತಾಗುತ್ತೆ. ಸಿಕ್ಕಾಪಟ್ಟೆ ಮಾಡರ್ನ್ ಆಗಿ ಕಾಣಿಸಿಕೊಂಡಿರುವ ನಟಿ. ಆದರೆ 'ಗಟ್ಟಿಮೇಳ' ಧಾರಾವಾಹಿಯಲ್ಲಿ ಯಾವಾಗಲೂ ಸೀರೆಯಲ್ಲಿಯೇ ಕಾಣಿಸಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಅನ್ವಿತಾ, ನಂಗೆ ಇತ್ತೀಚೆಗೆ ಸೀರೆ ಉಡುವುದೇ ತುಂಬಾ ಇಷ್ಟವಾಗಿದೆ. ಎಲ್ಲಿಯೇ ಹೋದರೂ ಹೆಚ್ಚು ಸೀರೆಯಲ್ಲಿಯೇ ಹೋಗುತ್ತೇನೆ. ಅಷ್ಟೇ ಅಲ್ಲ. ನನ್ನ ವಾಡ್ ರೂಬ್ ನೋಡಿದರೂ ಸೀರೆಯಿಂದಲೇ ತುಂಬಿ ಹೋಗಿದೆ. ಸೀರೆಯಲ್ಲಿ ಐ ಆಮ್ ಕಂಫರ್ಟಬಲ್ ಎಂದಿದ್ದಾರೆ.

ಸಿಕ್ಕಾಪಟ್ಟೆ ಫೋಟೊಶೂಟ್ ಮಾಡಿಸುವ ಅನ್ವಿತಾ

ಸಿಕ್ಕಾಪಟ್ಟೆ ಫೋಟೊಶೂಟ್ ಮಾಡಿಸುವ ಅನ್ವಿತಾ

ಅನ್ವಿತಾ ಸಾಗರ್ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುತ್ತಾರೆ. ಶೂಟಿಂಗ್ ಟೈಮ್‌ನಲ್ಲಿ ಗ್ಯಾಪ್ ಸಿಕ್ಕಿದರೆ ಸಾಕು ರೀಲ್ಸ್ ಮಾಡುತ್ತಾ, ಎಂಜಾಯ್ ಮಾಡುವ ಅನ್ವಿತಾ ಸಾಗರ್, ಹೆಚ್ಚು ಫೋಟೊಶೂಟ್‌ಗೂ ಒತ್ತು ಕೊಡುತ್ತಾರೆ. ಮಾಡರ್ನ್ ಡ್ರೆಸ್, ಟ್ರೆಡಿಷನಲ್ ಡ್ರೆಸ್ ಹೀಗೆ ಎಲ್ಲಾ ರೀತಿಯ ಡ್ರೆಸ್‌ಗಳಲ್ಲೂ ಫೋಟೊಶೂಟ್ ಮಾಡಿಸುತ್ತಿರುತ್ತಾರೆ. ಧಾರಾವಾಹಿಯಲ್ಲಿ ನೋಡಿದ ಆದ್ಯಾಗೂ ಸೋಶಿಯಲ್ ಮೀಡಿಯಾದಲ್ಲಿನ ಅನ್ವಿತಾ ಸಾಗರ್‌ಗೂ ಸಾಕಷ್ಟು ವ್ಯತ್ಯಾಸವಿದೆ.

More from Filmibeat

English summary
Zee Kannada Serial Gattimela Actress Anvitha Sagar Dance Video Goes VIral. Here is the details about Anvitha Sagar her brother.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X