Weekend With Ramesh 5: ಮೊದಲನೇ ಸಂಚಿಕೆಯ ಸಾಧಕರ ಸೀಟ್‌ನಲ್ಲಿ ಕೂರೋದು ಪ್ರಭುದೇವ ಅಲ್ಲ.. ಮೋಹಕತಾರೆ!

ಕನ್ನಡ ಕಿರುತೆರೆಯ ಜನಪ್ರಿಯ ಟಾಕ್ ಶೋ 'ವೀಕೆಂಡ್ ವಿತ್ ರಮೇಶ್'. ಸ್ಯಾಂಡಲ್‌ವುಡ್‌ನ ಸ್ಟಾರ್ ನಟ ರಮೇಶ್ ಅರವಿಂದ್ ನಡೆಸಿಕೊಡುವ ಈ ಕಾರ್ಯಕ್ರಮಕ್ಕೆ ಅಪಾರ ಪ್ರಮಾಣದಲ್ಲಿ ಅಭಿಮಾನಿಗಳು ಇದ್ದಾರೆ. ಈಗ ಸೀಸನ್ 5 ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ.

ಜೀ ಕನ್ನಡದಲ್ಲಿ ಪ್ರಸಾರ ಆಗಲಿರೋ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕಾಗಿ ಕಿರುತೆರೆ ವೀಕ್ಷಕರು ಕಾದು ಕೂತಿದ್ದಾರೆ. ಆದರೆ, ಕಳೆದ ಕೆಲವು ದಿನಗಳಿಂದ ಈ ಜನಪ್ರಿಯ ಕಾರ್ಯಕ್ರಮದ ಮೊದಲ ಅತಿಥಿ ಯಾರು ಅನ್ನುವ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಈಗಾಗಲೇ ಹಲವರ ಹೆಸರು ಕೇಳಿ ಬರುತ್ತಿದೆ.

Zee Kannada Telecasting Weekend With Ramesh Season 5 With Actress Ramya Aka Divya Spandana

ಈಗಾಗಲೇ 'ವೀಕೆಂಡ್ ವಿತ್ ರಮೇಶ್' ಸೀಸನ್‌ 5 ಗೆ ಅತಿಥಿಗಳ ಪಟ್ಟಿ ಅಂತಿಮಗೊಂಡಿದೆ. ಅಲ್ಲದೆ ಈಗಾಗಲೇ ಕೆಲವು ಅತಿಥಿಗಳ ಸಾಧನೆಯನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯಲಾಗಿದೆ. ಈಗ ಕಿರುತೆರೆ ಲೋಕದಲ್ಲಿ ಮೋಹಕತಾರೆ ರಮ್ಯಾ ವೀಕೆಂಡ್ ವಿತ್ ರಮೇಶ್ ಸೀಸನ್ 5ರಲ್ಲಿ ಕಾಣಿಸಿಕೊಳ್ಳುತ್ತಾರೆ ಅನ್ನೋ ಸುದ್ದಿ ಓಡಾಡುತ್ತಿದೆ.

ಮೊದಲ ಎಪಿಸೋಡ್ ಪ್ರಭುದೇವ ಅಲ್ಲ

'ವೀಕೆಂಡ್ ವಿತ್ ರಮೇಶ್' ಸೀಸನ್ 5 ಮೊದಲ ಅತಿಥಿ ಯಾರು ಅನ್ನೋ ಬಗ್ಗನೇ ಚರ್ಚ ಶುರುವಾಗಿತ್ತು. ಕಳೆದ ಕೆಲವು ದಿನಗಳಿಂದ ಭಾರತದ ಮೈಕಲ್ ಜಾಕ್ಸನ್ ಪ್ರಭುದೇವ 5ನೇ ಸೀಸನ್‌ನ ಮೊದಲ ಎಪಿಸೋಡ್ ಪ್ರಸಾರ ಆಗಲಿದೆ ಅನ್ನೋ ಸುದ್ದಿ ಓಡಾಡಿದ್ದವು.

ಅಂದ್ಹಾಗೆ, 'ವೀಕೆಂಡ್ ವಿತ್ ರಮೇಶ್' ಸೀಸನ್ 5 ಮೊದಲ ಎಪಿಸೋಡ್ ಪ್ರಭುದೇವದಲ್ಲ ಅನ್ನೋ ಸುದ್ದಿ ಕಿರುತೆರೆ ಲೋಕದಲ್ಲಿ ಹರಿದಾಡುತ್ತಿದೆ. ಜೀ ಕನ್ನಡ ಈ ಕಾರ್ಯಕ್ರಮಕ್ಕೆ ಕಿಕ್ ಸ್ಟಾರ್ಟ್ ಕೊಡುವುದಕ್ಕೆ ಮೋಹಕತಾರೆ ರಮ್ಯಾರನ್ನು ಕರೆದುಕೊಂಡು ಬರುತ್ತಿದ್ದಾರೆ. ರಮ್ಯಾ ಕೂಡ ಗ್ರೀನ್‌ ಸಿಗ್ನಲ್ ಕೊಟ್ಟಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ.

Zee Kannada Telecasting Weekend With Ramesh Season 5 With Actress Ramya Aka Divya Spandana

ಮೊದಲ ಎಪಿಸೋಡ್‌ನಲ್ಲಿ ರಮ್ಯಾ

'ವೀಕೆಂಡ್ ವಿತ್ ರಮೇಶ್' ಸೀಸನ್ 5ರ ಮೊದಲ ಎಪಿಸೋಡ್‌ನಲ್ಲಿ ಮೋಹಕತಾರೆ ರಮ್ಯಾ ಬರೋದು ಬಹುತೇಕ ಕನ್ಫರ್ಮ್ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ, ಇನ್ನೂ ಮೋಹಕತಾರೆ ರಮ್ಯಾ ಎಪಿಸೋಡ್ ಅನ್ನೂ ಶೂಟ್ ಮಾಡಿಲ್ಲ. ಇದೇ ತಿಂಗಳು 21ರಂದು ರಮ್ಯಾ ಎಪಿಸೋಡ್‌ನ ಶೂಟಿಂಗ್ ನಡೆಯಲಿದೆ ಎನ್ನಲಾಗಿದೆ.

ಕಳೆದ 5 ಸೀಸನ್‌ನಿಂದಲೂ ಮೋಹಕತಾರೆ ರಮ್ಯಾರನ್ನು ಕರೆಸುವಂತೆ ಒತ್ತಡಗಳು ಬರುತ್ತಿದ್ದವು. ಆದರೆ, ಅದು ಸಾಧ್ಯವಾಗಿರಲಿಲ್ಲ. ರಮ್ಯಾ ರಾಜಕೀಯ ಕ್ಷೇತ್ರದಲ್ಲಿ ಬ್ಯುಸಿ ಇದ್ದಿದ್ದರಿಂದ ಇದು ಸಾಧ್ಯವಾಗಿರಲಿಲ್ಲ. ಕೊನೆಗೂ ರಮ್ಯಾ ಸಿಕ್ಕಿದ್ದು, ಈ ಬಾರಿಯ ವೀಕೆಂಡ್ ವಿತ್ ರಮೇಶ್ ಮೊದಲ ಸಂಚಿಕೆಯನ್ನು ಇವರೊಂದಿಗೆ ಆರಂಭಿಸಲು ನಿರ್ಧರಿಸಲಾಗಿದೆ.

ರಿಷಬ್ ಶೆಟ್ಟಿ ಹೆಸರೂ ಕೇಳಿಬಂದಿತ್ತು

'ಕಾಂತಾರ' ಸಿನಿಮಾ ಮೂಲಕ ನ್ಯಾಷನಲ್‌ ಲೆವೆಲ್ ಸ್ಟಾರ್ ಆಗಿರೋ ರಿಷಬ್ ಶೆಟ್ಟಿಯನ್ನು ಕರೆಸುವ ಪ್ಲ್ಯಾನ್ ಇತ್ತು. ಆದರೆ, ರಿಷಬ್ ಶೆಟ್ಟಿ ಸದ್ಯ ಬ್ಯುಸಿ ಇರೋದ್ರಿಂದ ಇದು ಸಾಧ್ಯವಾಗಿಲ್ಲ ಎನ್ನಲಾಗಿದೆ. ಅಲ್ಲದೆ ಸೀಸನ್ 5ನಲ್ಲಿ ರಿಷಬ್ ಶೆಟ್ಟಿ ಕಾಣಿಸಿಕೊಳ್ಳುತ್ತಾರೋ ಇಲ್ಲವೋ ಅನ್ನೋ ಅನುಮಾನವೂ ಇದೆ.

ಇದೂವರೆಗೂ ಬಂದ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಆಗಮಿಸಿದ್ದಾರೆ. ಪುನೀತ್ ರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಸುದೀಪ್, ಸುಧಾರಾಣಿ, ಉಪೇಂದ್ರ, ಗಾಯಕ ವಿಜಯ್ ಪ್ರಕಾಶ್, ನಾರಾಯಣಮೂರ್ತಿ, ಸುಧಾಮೂರ್ತಿ, ಸಿದ್ಧರಾಮಯ್ಯ ಸೇರಿದಂತೆ ಹಲವು ಗಣ್ಯರು ಬಂದಿದ್ದರು. ಈ ಬಾರಿ ಯವ್ಯಾವ ಕ್ಷೇತ್ರದ ಸಾಧಕರು ಬರುತ್ತಾರೆ? ಅನ್ನೋ ಕುತೂಹಲವಿದೆ. ಮೊದಲು ಲಕ್ಕಿ ಕ್ವೀನ್‌ ರಮ್ಯಾರಿಂದ ಕಾರ್ಯಕ್ರಮ ಆರಂಭ ಆಗುತ್ತೆ ಎನ್ನಲಾಗಿದ್ದು, ಮಾರ್ಚ್ 25ರಂದು ತೆರೆಬೀಳಲಿದೆ.

More from Filmibeat

English summary
Zee Kannada Telecasting Weekend With Ramesh Season 5 With Actress Ramya Aka Divya Spandana, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X