ಜೀ಼ ಕನ್ನಡದ ಹೊಸ ಅಧ್ಯಾಯ ಆರಂಭ; ಲೋಗೊ ಬದಲಾಗಿದ್ದು ಯಾಕೆ?

ಕನ್ನಡ ಕಿರುತೆರೆಯಲ್ಲಿ ವಿಭಿನ್ನ ಧಾರಾವಾಹಿ ಹಾಗೂ ರಿಯಾಲಿಟಿ ಶೋ ಮೂಲಕ ವೀಕ್ಷಕರನ್ನು ಸೆಳೆಯುತ್ತಿರುವ ಮನರಂಜನಾ ವಾಹಿನಿ ಜೀ ಕನ್ನಡ. ತನ್ನ ವೀಕ್ಷಕರನ್ನು ರಂಜಿಸುವುದಕ್ಕೆ ಆಗಾಗ ಸರ್ಪ್ರೈಸ್‌ಗಳನ್ನು ನೀಡುತ್ತಿರುವ ಜೀ ಕನ್ನಡ ಸದ್ಯ ರೂಪವನ್ನು ಪಡೆದುಕೊಂಡಿದೆ. ಹಾಗಂತ ಇದು ಮೊದಲ ಬಾರಿಯೇನಲ್ಲ. ಈ ಹಿಂದೆ ಕೂಡ ಜೀ ಕನ್ನಡ ತನ್ನ ಲೋಗೋವನ್ನು ಬದಲಿಸಿತ್ತು. ಆದರೆ, ಈ ಬಾರಿ ಲೋಗೋ ಬದಲಿಸಿದ್ದೇಕೆ? ಎನ್ನುವ ಕುತೂಹಲ ಕೂಡ ಹುಟ್ಟಿಕೊಂಡಿದೆ.

ಜೀ ಕನ್ನಡವೇ ಹೇಳಿಕೊಂಡಿರುವ ಹಾಗೇ ಜೀ಼ ಕನ್ನಡ ವಾಹಿನಿ ಒಂದು ತಿಂಗಳಲ್ಲಿ ಸುಮಾರು 12.2 ಮಿಲಿಯನ್ ಮನೆಗಳಿಂದ 45 ಮಿಲಿಯನ್‌ಗೂ ಅಧಿಕ ವೀಕ್ಷಕರವರೆಗೂ ತಲುಪಿದೆ. ಇದೇ ಖುಷಿಯಲ್ಲಿಯೇ ಹೊಸ ಲೋಗೋದೊಂದಿಗೆ ಕನ್ನಡಿಗರ ಮನೆಗಳಿಗೆ ಪ್ರವೇಶ ಮಾಡುತ್ತಿದೆ. ಹಾಗಂತ ಇದು ಜೀ ಕನ್ನಡ ಮಾತ್ರವಲ್ಲ. ಜೀ ನೆಟ್‌ವರ್ಕ್‌ನ ಎಲ್ಲಾ ಪ್ಲಾಟ್‌ಫಾರ್ಮ್‌ಗಳ ಲೋಗೊ ಬದಲಾಗಿದ್ದು, ಈಗ "ಸದಾ ನಿಮ್ಮೊಂದಿಗೆ" ಎಂಬ ಬ್ರಾಂಡ್ ಟ್ಯಾಗ್ ಲೈನ್ ಮೂಲಕ ರಿ ಬ್ರ್ಯಾಂಡಿಂಗ್ ಮಾಡಲಾಗಿದೆ.

Zee Kannada Unveils New Logo says new chapter begins

ರಿ ಬ್ರ್ಯಾಂಡಿಂಗ್ ಮೂಲಕ ಕರುನಾಡಿನ ಸಂಸ್ಕೃತಿ ಮತ್ತು ಒಗ್ಗಟ್ಟನ್ನು ಬಿಂಬಿಸುವುದಕ್ಕೆ ಜೀ ಕನ್ನಡ ಮುಂದಾಗಿದೆ. "ಕೂಡಿ ಬಾಳಿದರೆ ಸ್ವರ್ಗ ಸುಖ" ಎಂಬ ಆಶಯವನ್ನು ಇಟ್ಟುಕೊಂಡು ಈ ಅಭಿಯಾನವನ್ನು ಆರಂಭ ಮಾಡಲಾಗಿದೆ. ಎಲ್ಲರೂ ಜೊತೆಯಾಗಿ ಬೆಳೆಯೋಣ, ಜೊತೆಯಾಗಿ ಸಂಭ್ರಮಿಸೋಣ, ಜೊತೆಯಾಗಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುವುದು ಇದರ ಉದ್ದೇಶ. ಒಗ್ಗಟ್ಟಿನಲ್ಲಿ ಇರುವ ಪ್ರತಿಯೊಂದು ಕ್ಷಣವೂ ಹೊಸ ಭರವಸೆಯನ್ನು ನೀಡುತ್ತೆ. ಬೆಂಬಲವನ್ನು ಸೂಚಿಸುತ್ತೆ. ಇದರೊಂದಿಗೆ ನಮ್ಮ ಶಕ್ತಿಯನ್ನು ಹೆಚ್ಚಿಸುವುದಲ್ಲದೆ, ಎಂತಹದ್ದೇ ಸವಾಲುಗಳನ್ನು ಎದುರಿಸಬಹುದೆಂದು ಸಾರಿ ಹೇಳುತ್ತೆ.

ಜೀ಼ ಕನ್ನಡದ ರಿ ಬ್ರಾಂಡಿಂಗ್‌ ಆದ ಬೆನ್ನಲ್ಲೇ ಈ ಒಗ್ಗಟ್ಟಿನ ಅಂಶವನ್ನು ಸಾರುವ ಪ್ರೋಮೋವನ್ನು ರಿಲೀಸ್ ಮಾಡಿದೆ. ಕನ್ನಡಿಗರ ವಿಶ್ವಾಸ, ಪ್ರೀತಿ, ಒಗ್ಗಟ್ಟು ಹಾಗೂ ಶ್ರೇಷ್ಠವಾದ ಪರಂಪರೆಯನ್ನು ಈ ಪ್ರೋಮೊದಲ್ಲಿ ತೋರಿಸಲಾಗಿದೆ. ಈ ಪ್ರೋಮೋವನ್ನು ಮಂಡ್ಯದ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ಭಾರತದ ಯೋಧನ ಮಗಳ ಮದುವೆಗೆ ಒಟ್ಟಾಗುವ ಥೀಮ್ ಇದೆ. ಕರ್ನಾಟಕದ ಸಾಂಪ್ರದಾಯಿಕ ಮದುವೆಯನ್ನು ಪ್ರತಿಬಿಂಬಿಸಲಾಗಿದೆ. ಪುರಾತನ ದೇವಸ್ಥಾನ , ರಂಗುರಂಗಾದ ರಂಗೋಲಿ, ಚಪ್ಪರ, ಅರಶಿನ ಶಾಸ್ತ್ರವನ್ನು ಬಿಂಬಿಸಲಾಗಿದೆ. ಈ ಮೂಲಕ ಕನ್ನಡಿಗರಿಗೆ ತಮ್ಮ ಮುಂದಿನ ಕಂಟೆಂಟ್‌ಗಳು ಹೇಗಿರುತ್ತವೆ ಎಂಬುವುದರ ಸುಳಿವನ್ನು ನೀಡಿದೆ.

ಅಷ್ಟಕ್ಕೂ ಪ್ರೋಮೋದಲ್ಲಿ ಏನಿದೆ ಎಂದು ನೋಡುವುದಾರೇ, ಮಗಳ ಮದುವೆಯ ಹಿಂದಿನ ದಿನವೇ ಯೋಧನಿಗೆ ಕರ್ತವ್ಯದ ಕರೆ ಬರುತ್ತೆ. ಮತ್ತೆ ಸೈನ್ಯಕ್ಕೆ ಸೇರಿಕೊಳ್ಳಲು ಮುಂದಾಗುವ ಅಪ್ಪನ ಪಾತ್ರವನ್ನು ಭಾವನಾತ್ಮಕವಾಗಿ ಬಿಂಬಿಸಲಾಗಿದೆ. ತಂದೆ ಸೈನ್ಯಕ್ಕೆ ಮರಳುತ್ತಿದ್ದಂತೆ ಇಡೀ ಗ್ರಾಮವೇ ತಾಯಿಯ ಬೆಂಬಲಕ್ಕೆ ನಿಲ್ಲುವ ಸನ್ನಿವೇಶದ ಮೂಲಕ ಒಗ್ಗಟ್ಟಿನ ಮಂತ್ರವನ್ನು ಪಠಿಸಲಾಗಿದೆ. ಊರಿನ ಪ್ರತಿಯೊಬ್ಬರು ಒಂದೊಂದು ಜವಾಬ್ದಾರಿಯನ್ನು ಹೊತ್ತುಕೊಳ್ಳುವು ಎಂತಹವರಿಗೂ ಸ್ಪೂರ್ತಿ. ಸೈನಿಕ ವಾಪಾಸಾದಾಗ ಆತನ ಹೆಂಡತಿ "ಇಷ್ಟು ದೊಡ್ಡ ಕುಟುಂಬವೇ ನಮ್ಮ ಜೊತೆ ಇದ್ದ ಮೇಲೆ, ನಮಗೇನು ಚಿಂತೆ" ಎನ್ನುವುದು "ಕೂಡಿ ಬಾಳಿದರೆ ಸ್ವರ್ಗ ಸುಖ" ಎಂಬುದು ಈ ಅಭಿಯಾನದ ಮುಖ್ಯ ಅಂಶ.

ಇನ್ನು ಲೋಗೋ ಬದಲಾಯಿಸಿ ರಿ ಬ್ರ್ಯಾಂಡಿಂಗ್‌ಗೆ ಮುಂದಾಗಿದ್ದಕ್ಕೆ ಜೀ಼ ಕನ್ನಡದ ಬಿಸಿನೆಸ್ ಹೆಡ್ ದೀಪಕ್ ಶ್ರೀರಾಮುಲು ಪ್ರತಿಕ್ರಿಯಿಸಿದ್ದಾರೆ. "ಸದಾ ನಿಮ್ಮೊಂದಿಗೆ ನಿಮ್ಮ ಜೀ಼ ಕನ್ನಡ ಅಭಿಯಾನವು, ನಾವು ನಮ್ಮ ವೀಕ್ಷಕರ ಜೊತೆಗೆ ಹೊಂದಿರುವ ಭಾವನೆಗಳ ಸಂಭ್ರಮಾಚರಣೆ ತೋರಿಸುವುದಾಗಿದೆ. ಜೀ಼ ಕನ್ನಡದ ಬ್ರಾಂಡ್ ಫಿಲಂ ಕರ್ನಾಟಕದ ಪರಂಪರೆ, ಸಂಸ್ಕೃತಿ ಮತ್ತು ಮೌಲ್ಯಗಳನ್ನು ಬಿಂಬಿಸುತ್ತದೆ. ಇದು ಬರೀ ರಿಬ್ರ್ಯಾಂಡಿಂಗ್ ಆಗಿರದೆ ವೀಕ್ಷಕರ ಜೊತೆಗೆ ನಮ್ಮ ಸಂಬಂಧವನ್ನು ಮತ್ತಷ್ಟು ಗಟ್ಟಿಮಾಡಲಿದೆ" ಎಂದು ಹೇಳಿದ್ದಾರೆ.

ಇದೇ ವೇಳೆ ಜೀ಼ ಕನ್ನಡದ 'ಸದಾ ನಿಮ್ಮೊಂದಿಗೆ ನಿಮ್ಮ ಜೀ಼ ಕನ್ನಡ' ಅಭಿಯಾನದ ಮೂಲಕ ಧಾರಾವಾಹಿಗಳು, ನಾನ್ ಫಿಕ್ಷನ್ ಶೋಗಳಲ್ಲಿಯೂ ಮುಖ್ಯ ಧ್ಯೇಯವನ್ನು ಬಿಂಬಿಸಲಾಗುತ್ತೆ. ಕಥೆ, ಸ್ಕಿಟ್‌ಗಳ ಮೂಲಕ ವೀಕ್ಷಕರಿಗೆ ಮತ್ತಷ್ಟು ತಲುಪುವ ಪ್ರಯತ್ನ ಮಾಡಲಾಗಿದೆ.

More from Filmibeat

English summary
Zee Kannada Unveils New Logo says new chapter begins.
Read more about: tv show serial actors
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X