Kannada Top 5 Serials: ಈ ವಾರದ ಟಿಆರ್‌ಪಿ ಲಿಸ್ಟ್‌ನಲ್ಲಿರುವ ಟಾಪ್ 5 ಸೀರಿಯಲ್‌ಗಳು ಇವೇನೆ!
ಚಿತ್ರರಂಗದಷ್ಟೇ ಕಿರುತೆರೆ ಲೋಕ ಕೂಡ ಅಷ್ಟೇ ವೇಗವಾಗಿ ಬೆಳೆಯುತ್ತಿದೆ. ಇತ್ತೀಚೆಗೆ ಧಾರಾವಾಹಿಗಳು ಕೂಡ ಸಿನಿಮಾ ರೇಂಜ್‌ನಲ್ಲಿಯೇ ನಿರ್ಮಾಣ ಆಗುತ್ತಿದೆ. ಕನ್ನಡದ ಮನರಂಜನಾ ವಾಹಿನಿಗಳು ಕಾಂಪಿಟೇಷನ್‌ಗೆ ಬಿದ್ದು ಸೀರಿಯಲ್‌ಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಅದರಲ್ಲೂ ಟಾಪ್ 3 ಎಂಟರ್‌ಟೈನ್ಮೆಂಟ್ ಚಾನೆಲ್‌ಗಳ ಸೀರಿಯಲ್‌ಗಳು ಕಿರುತೆರೆ ವೀಕ್ಷಕರ ಮನಸ್ಸನ್ನು ಸೆಳೆಯುತ್ತಿವೆ.
ಜೀ ಕನ್ನಡ, ಕಲರ್ಸ್ ಕನ್ನಡ, ಸ್ಟಾರ್ ಸುವರ್ಣದ ಕೆಲವು ಧಾರಾವಾಹಿಗಳು ವೀಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿವೆ. ಪ್ರತಿ ವಾರ ಸಿಗುವ ಟಿಆರ್‌ಪಿ ಪಟ್ಟಿಯಲ್ಲಿ ಪ್ರಬಲ ಪೈಪೋಟಿ ಒಡ್ಡುತ್ತಿವೆ. ಈ ವಾರ ಕೂಡ ಜೀ ಕನ್ನಡವೇ ನಂ 1 ಮನರಂಜನಾ ವಾಹಿನಿಯಾಗಿ ಮುಂದುವರೆದಿದೆ. ಸ್ಟಾರ್ ಸುವರ್ಣ ಹಾಗೂ ಕಲರ್ಸ್ ಕನ್ನಡದಿಂದ ಅಂತರವನ್ನು ಕಾಯ್ಡುಕೊಂಡಿದೆ.

ಜೀ ಕನ್ನಡದ ಐದು ಧಾರಾವಾಹಿಗಳು ಈ ಬಾರಿ ಟಿಆರ್‌ಪಿ ರೇಸ್‌ನಲ್ಲಿ ಗೆದ್ದಿವೆ. ಜೀ ಕನ್ನಡದಲ್ಲಿ ಪ್ರಸಾರ ಆಗುವ ಧಾರಾವಾಹಿಗಳಿಗೇ ಕಾಂಪಿಟೇಷನ್ ಕೊಟ್ಟು ಮುನ್ನುಗ್ಗುತ್ತಿವೆ. ಹಾಗಿದ್ದರೆ, ಕಳೆದ ವಾರ ಜೀ ಕನ್ನಡದ ಯಾವ ಐದು ಧಾರಾವಾಹಿಗಳು ಟಾಪ್ ಸ್ಥಾನವನ್ನು ಅಲಂಕರಿಸಿವೆ? ಯಾವ ಸೀರಿಯಲ್‌ಗಳಿಗೆ ಎಷ್ಟು ಅಂಕ ಬಂದಿವೆ ಎಂದು ತಿಳಿದುಕೊಳ್ಳಲು ಮುಂದೆ ಓದಿ.
ಟಾಪ್ 5 ಸೀರಿಯಲ್
ಈ ವಾರ ಕೂಡ ಜೀ ಕನ್ನಡದ ಧಾರಾವಾಹಿಗಳು ಟಾಪ್‌ನಲ್ಲಿ ಇವೆ. ನಗರ ಹಾಗೂ ಗ್ರಾಮಾಂತರ ಪ್ರದೇಶಗಳನ್ನು ಒಟ್ಟಾಗಿ ಸೇರಿಸಿ ಯಾವ ಧಾರಾವಾಹಿಯನ್ನು ಹೆಚ್ಚಾಗಿ ನೋಡಿದ್ದಾರೆಂದು ನೋಡುವುದಾರೇ, ಟಾಪ್ 5ನೇ ಸ್ಥಾನದಲ್ಲಿ 'ಶ್ರಾವಣಿ ಸುಬ್ರಹ್ಮಣ್ಯ' ಸೀರಿಯಲ್ ಇದೆ. ಕಳೆದ ವಾರ ಕಿರುತೆರೆ ವೀಕ್ಷಕರು ಈ ಧಾರಾವಾಹಿಯನ್ನು ತುಂಬಾನೇ ಮೆಚ್ಚಿಕೊಂಡಿದ್ದಾರೆ. ಕಳೆದ ವಾರ ಈ ಸೀರಿಯಲ್ ಗಳಿಸಿದ್ದು 8.7 ಟಿಆರ್‌ಪಿ. ಅದೇ ಅರ್ಬನ್‌ನಲ್ಲಿ 7.2 ಅಂಗಳನ್ನು ಪಡೆದುಕೊಂಡಿದೆ.

ಟಾಪ್ 4 ಸೀರಿಯಲ್
ಟಾಪ್ 4ನೇ ಸ್ಥಾನದಲ್ಲೂ ಜೀ ಕನ್ನಡದ ಧಾರಾವಾಹಿ 'ಅಣ್ಣಯ್ಯ' ಇದೆ. ಈ ಧಾರಾವಾಹಿ ಕೂಡ ಅರ್ಬನ್ ಹಾಗೂ ರೂರಲ್‌ನಲ್ಲಿ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ. ಎರಡೂ ಕಡೆ 'ಅಣ್ಣಯ್ಯ'ನಿಗೆ ವೀಕ್ಷಕರು ಬೆಂಬಲ ಸೂಚಿಸಿದ್ದಾರೆ. 'ಅಣ್ಣಯ್ಯ' ಧಾರಾವಾಹಿ ಈ ವಾರ 9.3ರಷ್ಟು ಟಿಆರ್‌ಪಿ ಪಡೆದುಕೊಂಡಿದೆ. ಅದೇ ಅರ್ಬನ್‌ನಲ್ಲಿ 8.1 ಅಂಕಗಳನ್ನು ಪಡೆದುಕೊಂಡಿದೆ.
ಟಾಪ್ 3 ಸೀರಿಯಲ್
ಟಿಆರ್‌ಪಿ ಲಿಸ್ಟ್‌ನಲ್ಲಿರುವ ಟಾಪ್ 3 ಸೀರಿಯಲ್ 'ನಾ ನಿನ್ನ ಬಿಡಲಾರೆ'. ಅರ್ಬನ್ ಹಾಗೂ ರೂರಲ್ ಎರಡೂ ಏರಿಯಾಗಳಲ್ಲಿ ಈ ಸೀರಿಯಲ್‌ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಧಾರಾವಾಹಿಗೆ ಸಿಕ್ಕ ಟಿಆರ್‌ಪಿ 9.4 ಅಂಕಗಳು. ಆದರೆ, ನಗರಗಳಲ್ಲಿ ಈ ಸೀರಿಯಲ್ ಅನ್ನು ಹೆಚ್ಚು ವೀಕ್ಷಣೆ ಮಾಡಿದ್ದಾರೆ. ಇಲ್ಲಿ 8.6 ಅಂಕಗಳನ್ನು ಪಡೆದುಕೊಂಡು ಟಾಪ್‌ನಲ್ಲಿ ಇದೆ.
ಟಾಪ್ 2 ಸೀರಿಯಲ್
ಕನ್ನಡ ಕಿರುತೆರೆಯ ಮತ್ತೊಂದು ಜನಪ್ರಿಯ ಧಾರಾವಾಹಿ 'ಲಕ್ಷ್ಮಿ ನಿವಾಸ'. ಈ ಕೌಟುಂಬಿಕ ಧಾರಾವಾಹಿಗೆ ಬಹಳಷ್ಟು ಮಂದಿ ಫ್ಯಾನ್ ಫಾಲೋವಿಂಗ್ ಇದೆ. ಈ ಸೀರಿಯಲ್ ಹಲವು ವಾರಗಳಿಂದ ಟಾಪ್ 3 ಒಳಗೆ ಸ್ಥಾನವನ್ನು ಗಟ್ಟಿಯಾಗಿಸಿಕೊಂಡು ಬಂದಿದೆ. ಅರ್ಬನ್ ಹಾಗೂ ರೂರಲ್ ಎರಡೂ ಏರಿಯಾಗಳಿಂದ 'ಲಕ್ಷ್ಮಿ ನಿವಾಸ' ಧಾರಾವಾಹಿ 9.8 ಅಂಕಗಳನ್ನು ಪಡೆದುಕೊಂಡಿದೆ. ಅರ್ಬನ್‌ನಲ್ಲಿ 8.5 ಟಿಆರ್‌ಪಿ ಬಂದಿದೆ.
ಟಾಪ್ ಸೀರಿಯಲ್
ಜೀ ಕನ್ನಡದಲ್ಲಿ ಕೆಲವೇ ತಿಂಗಳುಗಳಿಂದ ಪ್ರಸಾರ ಆಗುತ್ತಿರುವ ಧಾರಾವಾಹಿ 'ಕರ್ಣ'. ಕಿರಣ್ ರಾಜ್ ಹಾಗೂ ಭವ್ಯಾ ಗೌಡ ಜೋಡಿಯಾಗಿ ನಟಿಸುತ್ತಿರುವ ಈ ಧಾರಾವಾಹಿ ಟಾಪ್ ಸ್ಥಾನಕ್ಕೇರಿದೆ. ಅರ್ಬನ್ ಹಾಗೂ ರೂರಲ್ ಎರಡೂ ಏರಿಯಾಗಳಿಂದ 'ಕರ್ಣ'ಗೆ ಸಿಕ್ಕಿರುವ ಧಾರಾವಾಹಿ 10.1. ರೂರಲ್ ಏರಿಯಾಗಳಲ್ಲಿ ಹೆಚ್ಚು ಮಂದಿ ವೀಕ್ಷಿಸಿದರೂ, ಅರ್ಬನ್‌ನಲ್ಲಿ ಈ ವಾರ ಕೊಂಚ ಮಟ್ಟಿಗೆ ಡೌನ್ ಆಗಿದೆ.


Click it and Unblock the Notifications