ಜೀ ಕನ್ನಡದ ಜೊತೆ ವೀಕ್ಷಕರನ್ನು ಹೊಸ ಚಾನೆಲ್ 'ಜೀ಼ ಪವರ್' ಆರಂಭ; ಅಪ್ಪುನೇ ಈ ಚಾನೆಲ್‌ಗೆ ಪವರ್!

ಕನ್ನಡಿಗರಿಗೆ ಮನರಂಜನೆ ನೀಡುವಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ಜೀ ಸಂಸ್ಥೆ ಮತ್ತೊಂದು ಹೊಸ ಚಾನೆಲ್ ಅನ್ನು ಆರಂಭಿಸಿದೆ. ಕಳೆದ ಮೂರು ದಶಕಗಳಿಂದ ಹಲವು ಭಾಷೆಗಳಲ್ಲಿ ವೀಕ್ಷಕರಿಗೆ ಮನರಂಜನೆಯನ್ನು ನೀಡುತ್ತಾ ಬಂದಿದೆ. ಕರ್ನಾಟಕದಲ್ಲಿ ಜೀ ಕನ್ನಡ ಧಾರಾವಾಹಿಗಳಿಂದ ಹಿಡಿದು ರಿಯಾಲಿಟಿ ಶೋವರೆಗೂ ತನ್ನ ವೀಕ್ಷಕರನ್ನು ರಂಜಿಸುತ್ತಲೇ ಮುಂದೆ ಸಾಗಿದೆ. ಜೀ಼ ಕನ್ನಡದ ಅಭೂತಪೂರ್ಣ ಯಶಸ್ಸಿನ ಬಳಿಕ 'ಜೀ಼ ಪವರ್'ಮೂಲಕ ಕನ್ನಡಿಗರಿಗೆ ಹೊಸ ಪ್ರಕಾರದಲ್ಲಿ ಮನರಂಜನೆ ನೀಡುವುದಕ್ಕೆ ಹೊರಟಿದೆ.

ಅಂದ್ಹಾಗೆ ಜೀ ಪವರ್ ಇದೇ ಆಗಸ್ಟ್ 23, 2025 ರಿಂದ ಜೀ಼ ಪವರ್ ಕನ್ನಡಿಗರಿಗೆ ಮನರಂಜನೆ ನೀಡುವುದಕ್ಕೆ ಆರಂಭಿಸಲಿದೆ. ಈ ಮೂಲಕ ಕನ್ನಡ ಕಿರುತೆರೆ ಲೋಕದಲ್ಲಿ ಹೊಸ ಯುಗವನ್ನು ಆರಂಭಿಸಲಿದೆ. "ಇದು ಕೇವಲ ವಾಹಿನಿಯಲ್ಲ ಕಲ್ಪನೆ, ನಿಜ ಜೀವನ ಹಾಗೂ ಕರುನಾಡಿನ ಸಂಸ್ಕೃತಿ ಬೆಸೆಯುವ ವಾಹಿನಿ" ಎಂದು ಸಂಸ್ಥೆ ಹೇಳಿಕೊಂಡಿದೆ. ಸಮಾಜವನ್ನು ತಲುಪುವ ಕಾರ್ಯಕ್ರಮಗಳು, ಮಹಿಳಾ ಪ್ರಧಾನ ಧಾರಾವಾಹಿಗಳು, ಬ್ಲಾಕ್‌ಬಸ್ಟರ್ ಸಿನಿಮಾಗಳು ಸೇರಿದಂತೆ ಹಬ್ಬದ ಮತ್ತು ವಿಶೇಷ ಕಾರ್ಯಕ್ರಮಗಳೊಂದಿಗೆ ಜೀ಼ ಪವರ್ ಯುವ ಪೀಳಿಗೆಯನ್ನು ಸೆಳೆಯುವುದಕ್ಕೆ ಹೊರಟಿವೆ.

Zee network launched new Kannada entertainment channel Zee Power

ಜೀ಼ ಪವರ್ ಯುವ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮಗಳನ್ನು ರೂಪಿಸಿದರೂ, ಎಲ್ಲ ವರ್ಗದವರನ್ನೂ ಆಕರ್ಷಿಸುತ್ತೆ ಎಂದು ಹೇಳಿಕೊಂಡಿದೆ. ಮಹಿಳಾ ಪ್ರಧಾನ ಕಥೆಗಳು ಇದ್ದರೂ ಯುವಕರು ಹಾಗೂ ಪುರುಷರ ಭಾವನೆಗಳಿಗೆ ಹೆಚ್ಚು ಒತ್ತು ಕೊಟ್ಟಿದೆ. ಹೀಗಾಗಿ ಎಲ್ಲರನ್ನೂ ತನ್ನತ್ತ ಸೆಳೆಯುವುದರಲ್ಲಿ ಜೀ಼ ಪವರ್ ಯಶಸ್ವಿ ಆಗಲಿದೆ.

ಕನ್ನಡದಲ್ಲಿ ಜೀ ಪವರ್ ಹೊಸ ಚಾನೆಲ್ ಆರಂಭಿಸುವ ಬಗ್ಗೆ ZEELನ ಚೀಫ್ ಕಂಟೆಂಟ್ ಆಫೀಸರ್ ರಾಘವೇಂದ್ರ ಹುಣಸೂರ್ ಹೀಗಂತಾರೆ. "ಜೀ಼ ಪವರ್ ಮನರಂಜನಾ ಕ್ಷೇತ್ರದಲ್ಲಿ ಒಂದು ದಿಟ್ಟ ಹೆಜ್ಜೆಯಾಗಿದೆ. ಈ ವಾಹಿನಿಯಲ್ಲಿನ ಪ್ರಸಾರ ಆಗುವ ಧಾರಾವಾಹಿಗಳು ತಮ್ಮ ವಿಭಿನ್ನ ಮತ್ತು ಅಮೋಘವಾದ ಕಥೆಗಳ ಮೂಲಕ ಯುವಜನತೆಯನ್ನೂ ತನ್ನತ್ತ ಸೆಳೆಯಲಿದೆ. ಅಷ್ಟೇ ಅಲ್ಲದೆ ನಮ್ಮ ಕಥೆಗಳು ಸಂಕ್ಷಿಪ್ತ ಮತ್ತು ವಾಸ್ತವ ಆಲೋಚನೆಯನ್ನು ಪ್ರೇರೇಪಿಸುವಂತೆ ಇರಲಿದೆ. ಜೀ಼ ಪವರ್‌ನ ಮೂಲಕ ಕನ್ನಡಿಗರಿಗೆ ಹಿಂದೆಂದೂ ಕಾಣದ ರೀತಿಯಲ್ಲಿ ಮನರಂಜನೆ ನೀಡುವ ಮೂಲಕ ಜೀ ಸಂಸ್ಥೆಯು ಜನರಿಗೆ ಮತ್ತಷ್ಟು ಹತ್ತಿರವಾಗಲಿದೆ" ಎಂದು ಹೇಳಿದ್ದಾರೆ.

Zee network launched new Kannada entertainment channel Zee Power

ಸೌತ್ ಅಂಡ್ ವೆಸ್ಟ್ ಚೀಫ್ ಕ್ಲಸ್ಟರ್ ಹೆಡ್, ಸಿಜು ಪ್ರಭಾಕರನ್ ಜೀ ಪವರ್ ಬಗ್ಗೆನೂ ಮಾಹಿತಿ ನೀಡಿದ್ದಾರೆ. " ಜೀ಼ ಪವರ್ ನ ಪ್ರಾರಂಭ ಕರ್ನಾಟಕದಲ್ಲಿನ ನಮ್ಮ ಪಯಣಕ್ಕೆ ಒಂದು ಮಹತ್ವದ ಮೈಲುಗಲ್ಲಾಗಿರಲಿದೆ." ಎಂದು ಹೇಳಿದ್ರೆ, ಜೀ಼ ಪವರ್‌ನ ಬಿಸಿನೆಸ್ ಹೆಡ್ ಭಾಸ್ಕರ್ ಅಯ್ಯರ್ "ಜೀ಼ ಪವರ್ ಹೈಬ್ರೀಡ್ ಚಾನೆಲ್ ಆಗಿದ್ದು ಇಲ್ಲಿ ಎಲ್ಲಾ ವರ್ಗದ ಜನರನ್ನು ತನ್ನತ್ತ ಸೆಳೆಯುವ ಕಂಟೆಂಟ್ ಇರೋದು ಈ ವಾಹಿನಿಯ ಒಂದು ವಿಶೇಷತೆ" ಎಂದಿದ್ದಾರೆ.

ಇನ್ನು ಕನ್ನಡದ ಮೊದಲ ಹೈಬ್ರಿಟ್ ಚಾನೆಲ್‌ ಜೀ಼ ಪವರ್‌ನಲ್ಲಿ ಪ್ರಸಾರ ಆಗುವ ಧಾರಾವಾಹಿಗಳ ಬಗ್ಗೆನೂ ಮಾಹಿತಿ ನೀಡಿದ್ದಾರೆ. 'ರಾಜಕುಮಾರಿ', 'ಶುಭಸ್ಯ ಶೀಘ್ರಂ', 'ಜೋಡಿ ಹಕ್ಕಿ' ಮತ್ತು 'ಗೌರಿ', ಒಂದು ರಿಯಾಲಿಟಿ ಶೋ -ಹಳ್ಳಿ ಪವರ್ ಮತ್ತು ಭಕ್ತಿ ಕಾರ್ಯಕ್ರಮ, ಭವಿಷ್ಯ ದರ್ಶನ ಸೇರಿದಂತೆ ಹಲವು ಕಾರ್ಯಕ್ರಮಗಳು ಇಲ್ಲಿ ಇರಲಿವೆ. ಇವೆಲ್ಲವೂ ಕುಟುಂಬದವರು ಒಟ್ಟಾಗಿ ಕುಳಿತು ನೋಡುತ್ತಾ ಮತ್ತೆ ಹಳೆಯ ಕಳೆದು ಹೋದ ಫ್ಯಾಮಿಲಿ ಕ್ಷಣಗಳು ಮರುಕಳಿಸುವಂತೆ ಮಾಡುತ್ತದೆ. ಈ ಎಲ್ಲ ಧಾರಾವಾಹಿಗಳು ಆಗಸ್ಟ್ 25 ರಿಂದ ಶುರು ಆಗಲಿದ್ದು, ಗ್ರಾಂಡ್ ಲಾಂಚ್ ಇವೆಂಟ್ 23 ರಿಂದ ಪ್ರಸಾರ ಆಗಲಿದೆ.

ಇನ್ನು ಜೀ ಪವರ್ ಅಂತಲೇ ಹೆಸರು ಇಡುವುದಕ್ಕೆ ಕಾರಣವಿದೆ. ಪುನೀತ್ ರಾಜ್‌ಕುಮಾರ್ ಅವರನ್ನು ಸ್ಪೂರ್ತಿಯಾಗಿಟ್ಟುಕೊಂಡು ಈ ಹೊಸ ಚಾನೆಲ್‌ಗೆ ಪವರ್‌ ಎಂದು ಹೆಸರು ಇಡಲಾಗಿದೆ ಎಂದು ಜೀ ಸಂಸ್ಥೆಯ ಮುಖ್ಯಸ್ಥರು ಇದೇ ವೇದಿಕೆಯಲ್ಲಿ ಹೇಳಿದ್ದಾರೆ. ಈ ಮೂಲಕ ಅಪ್ಪು ನೆನಪಿಸುತ್ತಾ ಅಷ್ಟೇ ಪವರ್‌ಫುಲ್ ಆಗಿ ಜೀ ಪವರ್ ಆರಂಭ ಆಗುತ್ತಿದೆ. ಜೀ ಪವರ್ ಕನ್ನಡ ಮನರಂಜನಾ ಕ್ಷೇತ್ರಕ್ಕೆ ಕಾಲಿಡಲು ಕ್ಷಣಗಣನೆ ಶುರುವಾಗಿದ್ದು ಇದೇ 23 ರಂದು ಕರುನಾಡಿನ ಮನೆಮನಗಳಿಗೆ ಲಗ್ಗೆ ಇಡಲಿದೆ. ಆಗಸ್ಟ್ 25 ರಿಂದ ಧಾರಾವಾಹಿಗಳು, ಕಾರ್ಯಕ್ರಮಗಳು ಪ್ರಸಾರ ಆಗಲಿವೆ.

More from Filmibeat

English summary
Zee network launched new Kannada entertainment channel Zee Power.
Read more about: tv show serial zee kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X