2 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ 'ಜೀ ಪಿಕ್ಚರ್'

ಕನ್ನಡದ ಕಿರುತೆರೆಯಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ ಜೀ ಕನ್ನಡ. ಇದರ ಕೈ ಹಿಡಿದು ನಡೆಡೆಯುತ್ತಿರುವ ಜೀ ಪಿಚ್ಚರ್ ಕೂಡ ಇದೀಗ ಯಶಸ್ವಿಯಾಗಿ ಎರಡು ವರ್ಷಗಳನ್ನು ಪೂರೈಸಿದೆ. ಕನ್ನಡ ಟಿವಿಯೊಳಗಿನ ಮನರಂಜನಾ ಲೋಕದಲ್ಲಿ ನಂ.1 ಪಟ್ಟದಲ್ಲಿ ಪಡೆದುಕೊಂಡು ದಿನದಿಂದ ದಿನಕ್ಕೆ ತನ್ನ ಸ್ಥಾನವನ್ನು ಭದ್ರ ಪಡಿಸಿಕೊಂಡಿರುವ ಜೀ ಕನ್ನಡದ ಮತ್ತೊಂದು ಚಾನೆಲ್ ಜೀ ಪಿಚ್ಚರ್. ಇದೇ ಜೀ ಪಿಕ್ಚರ್ ಈಗ ಎರಡು ವರ್ಷದ ಸಂಭ್ರಮದಲ್ಲಿದೆ.

ಲಾಕ್‌ಡೌನ್‌ನಲ್ಲಿ ಕನ್ನಡಿಗರ ಮನೆ ಮಾತಾಗಿದ್ದ ಜೀ ಪಿಕ್ಚರ್ ಚಾನೆಲ್ ಹೊಸ ಹೊಸ ಸಿನಿಮಾಗಳನ್ನು ಪ್ರಸಾರ ಮಾಡಿತ್ತು. ಕಪ್ಪು ಬಿಳುಪಿನ ಸಿನಿಮಾಗಳಿಂದ ಹಿಡಿದು ಇತ್ತೀಚೆಗೆ ತೆರೆಕಂಡಿದ್ದ ಹೊಚ್ಚ ಸಿನಿಮಾಗಳನ್ನು ಪ್ರಚಾರ ಮಾಡಿತ್ತು. ಸಿನಿಪ್ರಿಯರಿಗೆ ಇಷ್ಟವಾಗುವ ಸಿನಿಮಾಗಳನ್ನು ತೋರಿಸುತ್ತಾ ಬಂದಿರುವ ಜೀ ಪಿಕ್ಷರ್ ಈಗ ಎರಡು ವರ್ಷಗಳನ್ನು ಪೂರೈಸಿದ ಸಂಭ್ರಮದಲ್ಲಿದೆ.

ಆರಂಭದಲ್ಲೇ 12 ವರ್ಲ್ಡ್‌ ಟೆಲಿವಿಷನ್‌ ಪ್ರೀಮಿಯರ್‌

ಕನ್ನಡಿಗರಿಗೆ ಉತ್ತಮ ಸಿನಿಮಾಗಳನ್ನು ತೋರಿಸಬೇಕು ಎನ್ನುವ ಅಭಿರುಚಿಯೊಂದಿಗೆ ʻಜೀ ಪಿಚ್ಚರ್‌ʼ ಅನ್ನು 2020, ಮಾರ್ಚ್‌ 1ನೇ ತಾರೀಖು ಆರಂಭ ಮಾಡಲಾಗಿತ್ತು. ಜೀ ಚಾನೆಲ್ ಆರಂಭ ಆದ ಹೊಸತರಲ್ಲಿಯೇ 12 ಸಿನಿಮಾಗಳನ್ನು ವರ್ಲ್ಡ್‌ ಟೆಲಿವಿಷನ್‌ ಪ್ರೀಮಿಯರ್‌ ಮಾಡಲಾಗಿತ್ತು. ದಿನಕ್ಕೊಂದರಂತೆ ಒಂದು ಬ್ರೇಕ್‌ ನೀಡಿ ಇಡೀ ಸಿನಿಮಾವನ್ನು ತೋರಿಸಲಾಗಿತ್ತು. ತನ್ನ ವಿಭಿನ್ನ ಕಾನ್ಸೆಪ್ಟ್ ಮೂಲಕ ಜೀ ಪಿಕ್ಚರ್ ಜನರ ಮನಗೆದ್ದಿದೆ.

Zee Picchar completed 2 years

ಅಣ್ಣಾವ್ರು ನಟಿಸಿದ ಕಪ್ಪು ಬಿಳುಪು ಸಿನಿಮಾಗಳಿಂದ ಹಿಡಿದು ಇತ್ತೀಚೆಗೆ ತೆರೆಕಂಡ ಬ್ಲಾಕ್‌ ಬಸ್ಟರ್‌ ಸಿನಿಮಾ ಮೂಲಕ ಜನರಿಗೆ ಮನರಂಜನೆಯನ್ನು ನೀಡಿತ್ತು. ಪ್ರತಿ ದಿನ ವೀಕ್ಷಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿರುವ ಈ ಚಾನೆಲ್, ಈಗ 2ನೇ ಸ್ಥಾನಕ್ಕೇರಿದೆ. ಕನ್ನಡ ಸಿನಿಮಾ ವಾಹಿನಿಗಳ ಸ್ಥಾನದಲ್ಲಿ ಮೊದಲಿನಿಂದಲೂ ಎರಡನೇ ಸ್ಥಾನದಲ್ಲಿ ಮುಂದುವರೆದಿದೆ. ಹಾಗಂತ ಕೇವಲ ಸಿನಿಮಾಗಳಷ್ಟೇ ಅಲ್ಲ. ಪ್ರತಿ ವಾರ ಹೊಸ ಹೊಸ ಕಾನ್ಸೆಪ್ಟ್‌ಗಳ ಮೂಲಕ ಜನರನ್ನು ರಂಜಿಸುತ್ತಿದೆ.

ಮುಂದೆ ಪ್ರಸಾರ ಆಗಲಿರುವ ಸಿನಿಮಾ ಪಟ್ಟಿ ದೊಡ್ಡದಿದೆ

ಜೀ ಪಿಕ್ಷರ್ ಹೊಸ ಹೊಸ ಸಿನಿಮಾಗಳನ್ನು ಈಗಾಗಲೇ ಖರೀದಿ ಮಾಡಿದೆ. ಯಶ್ ಅಭಿನಯದ 'ಕೆಜಿಎಫ್ 2' ಜೀ ಪಿಕ್ಚರ್ ಪ್ರಸಾರ ಮಾಡಲಿದೆ. ಹಾಗೆಯೇ ರಿಷಬ್ ಶೆಟ್ಟಿ, ರಾಜ್ ಬಿ ಶೆಟ್ಟಿ ಅಭಿನಯದ 'ಗರುಡ ಗಮನ ವೃಷಭ ವಾಹನ' ಸಿನಿಮಾ ಈಗಾಗಲೇ ಜೀ 5 ಒಟಿಟಿಯಲ್ಲಿ ಪ್ರಸಾರ ಆಗಿದೆ. ಈಗ ಟಿವಿಯಲ್ಲೂ ಪ್ರಸಾರವಾಗಲು ಸಿದ್ಧತೆಗಳನ್ನು ಮಾಡಿಕೊಂಡಿದೆ. ಹಾಗೇ ಕಿಚ್ಚ ಸುದೀಪ್ ಅಭಿನಯದ 'ವಿಕ್ರಾಂತ್ ರೋಣ' ಕೂಡ ಜೀ ಕನ್ನಡದ ಪಾಲಾಗಿದೆ.

ಜೀ ಪಿಕ್ಚರ್‌ ಚಾನೆಲ್ ಬಳಿ ಸುಮಾರು 150 ಕ್ಕೂ ಅಧಿಕ ಸಿನಿಮಾಗಳನ್ನು ಕಳೆದ ವರ್ಷ ಖರೀದಿ ಮಾಡಿದೆ. ಇನ್ನೂ ಹಲವು ಸಿನಿಮಾಗಳು ಜೀ ಪಿಕ್ಷರ್ ವಾಹಿನಿಯನ್ನು ಸೇರಿಕೊಳ್ಳಲಿದೆ.

ಸೆಲೆಬ್ರೆಟಿಗಳ ಹುಟ್ಟುಹಬ್ಬಕ್ಕೆ ವಿಶೇಷ ಸಿನಿಮಾಗಳ ಪ್ರಸಾರ, ಅಂದೇ ಆಯಾ ನಟ,ನಟಿಯರ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಸಂಚಿಕೆಯ ಪ್ರಸಾರ ಮಾಡುತ್ತಿದೆ. ಇದಲ್ಲದೆ ದೊಡ್ಮನೆ ಪಿಚ್ಚರ್ ವೀಕೆಂಡ್, ಫ್ಯಾಂಟೆಸಿ ವೀಕೆಂಡ್, ಬ್ಲ್ಯಾಕ್ ಅಂಡ್ ವೈಟ್ ವೀಕೆಂಡ್ ಹೀಗೆ ಮುಂತಾದ ವಿಶೇಷ ವೀಕೆಂಡ್ ಕಾರ್ಯಕ್ರಮಗಳನ್ನು ನೀಡುತ್ತಿದೆ.

More from Filmibeat

English summary
Zee Kannada's parent company Zee Picchar completed 2 years. currenty Zee Kannada in second position behind Udaya movies.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X