ಮತ್ತೊಂದು ರಿಯಾಲಿಟಿ ಶೋ ಅಂತ್ಯ; 'ಹಳ್ಳಿ ಪವರ್' ಗ್ರಾಂಡ್ ಫಿನಾಲೆ ಯಾವಾಗ? ಎಲ್ಲಿ?

ಮನರಂಜನಾ ವಾಹಿನಿಗಳು ತನ್ನ ವೀಕ್ಷಕರಿಗಾಗಿ ಒಂದಲ್ಲ ಒಂದು ವಿಭಿನ್ನ ರಿಯಾಲಿಟಿ ಶೋಗಳನ್ನು ನೀಡುತ್ತಾ ಅವರನ್ನು ತನ್ನಡೆ ಸೆಳೆಯುವುದಕ್ಕೆ ಪ್ರಯತ್ನ ಮಾಡುತ್ತಲೇ ಇರುತ್ತೆ. ಅದರಲ್ಲೂ ಕನ್ನಡ ವಾಹಿನಿಗಳು ಒಂದು ಕೈ ಮೇಲು ಅಂತಲೇ ಹೇಳಬಹುದು. ತನ್ನ ವೀಕ್ಷಕರನ್ನು ಸೆಳೆಯುವುದಕ್ಕಾಗಿ ಹೊಸ ಹೊಸ ರಿಯಾಲಿಟಿ ಶೋಗಳನ್ನು ಪರಿಚಯಿಸುತ್ತಲೇ ಇರುತ್ತಾರೆ. ಅದರಲ್ಲಿ ಜೀ ಕನ್ನಡ ಮುಂದು.

ಈಗ ಜೀ ಕನ್ನಡದ ಮತ್ತೊಂದು ಹೊಸ ವಾಹಿನಿ ಜೀ ಪವರ್ ಇತ್ತೀಚೆಗಷ್ಟೇ ಶುರುವಾಗಿತ್ತು. ವೀಕ್ಷಕರನ್ನು ವಿಭಿನ್ನ ಕಾನ್ಸೆಪ್ಟ್‌ಗಳ ಮೂಲಕ ವೀಕ್ಷಕರನ್ನು ತನ್ನತ್ತ ಸೆಳೆಯುವುದಕ್ಕೆ ಮುಂದಾಗಿದ್ದರು. ಹೊಚ್ಚ ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳ ಮೂಲಕ ವೀಕ್ಷಕರನ್ನು ತನ್ನತ್ತ ಸೆಳೆಯುತ್ತಿದೆ. ಅದರಲ್ಲಿ ನಿರೂಪಕ ಅಕುಲ್ ಬಾಲಾಜಿ ನಡೆಸಿಕೊಡುತ್ತಿರುವ 'ಹಳ್ಳಿ ಪವರ್' ರಿಯಾಲಿಟಿ ಶೋ ಆರಂಭ ಆದ ದಿನದಿಂದಲೂ ಗಮನ ಸೆಳೆಯುತ್ತಿತ್ತು.

Zee Power reality show Halli Power Grand Finale telecast date and other details

ಈ ರಿಯಾಲಿಟಿ ಶೋ ಈಗ ಅಂತಿಮ ಘಟ್ಟ ತಲುಪಿದೆ. ಬಹುನಿರೀಕ್ಷಿತ ಈ ಫಿನಾಲೆ ಎಪಿಸೋಡ್‌ಗಳು ಡಿಸೆಂಬರ್ 27 ಮತ್ತು ಡಿಸೆಂಬರ್ 28 ರಂದು ಜೀ ಪವರ್‌ನಲ್ಲಿ ಪ್ರಸಾರವಾಗಲಿದೆ. ಈ ಮೂಲಕ ಜೀ ಪವರ್‌ನಲ್ಲಿ ಪ್ರಸಾರ ಆಗುತ್ತಿದ್ದ 'ಹಳ್ಳಿ ಪವರ್' ರಿಯಾಲಿಟಿ ಶೋಗೆ ಅಂತ್ಯ ಹಾಡಲಾಗುತ್ತಿದೆ. ಈ ಮೂಲಕ ಹಳ್ಳಿ ಪವರ್ ಸೀಸನ್ 1ರ ವಿನ್ನರ್ ಯಾರು ಎಂದು ಕಾದು ಕೂತಿರುವ ವೀಕ್ಷಕರಿಗೆ ಉತ್ತರವೂ ಸಿಗಲಿದೆ.

'ಹಳ್ಳಿ ಪವರ್' ಕನ್ನಡ ಕಿರುತೆರೆಯ ಒಂದು ವಿಭಿನ್ನ ಶೋ. ಈ ರಿಯಾಲಿಟಿ ಶೋ ಸಿಟಿಯಲ್ಲಿ ಬೆಳೆದ ಯುವತಿಯರು ತಮ್ಮ ಸಿಟಿ ಲೈಫ್ ಕಂಫರ್ಟ್ ಅನ್ನು ತ್ಯಜಿಸಿ ಹಳ್ಳಿಗೆ ಬರುತ್ತಾರೆ. ಅಲ್ಲಿಗೆ ಬಂದು ತನ್ನ ಹಳ್ಳಿ ಜೀವನವನ್ನು ಸಾಗಿಸುತ್ತಾರೆ. ಅಂದರೆ, ಹಳ್ಳಿಯಲ್ಲಿ ಅಲ್ಲಿನ ಜನರು ಬದುಕುವಂತೆ ಜೀವನ ನಡೆಸಲಿದ್ದಾರೆ. ಈ ಶೋನಲ್ಲಿ ಇಡೀ ಸೀಸನ್‌ನಲ್ಲಿ ಸ್ಪರ್ಧಿಗಳು ಹಳ್ಳಿ ಜೀವನದ ದಿನನಿತ್ಯದ ಕೆಲಸಗಳನ್ನು ಮಾಡುವುದಷ್ಟೇ ಅಲ್ಲ. ಅದರೊಂದಿಗೆ ಅಲ್ಲಿ ನೀಡಲಾಗುವ ಫಿಸಿಕಲ್ ಟಾಸ್ಕ್‌ಗಳನ್ನು ಮಾಡುತ್ತಾರೆ. ಇದು ಹಳ್ಳಿ ಪವರ್ ಶೋನ ಮತ್ತೊಂದು ಹೈಲೈಟ್.

ಈ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ ಸ್ಪರ್ಧಿಗಳು ವ್ಯವಸಾಯ, ಜಾನುವಾರುಗಳನ್ನು ಸಾಕುವುದು, ಪಾಲನೆ-ಪೋಷಣೆ, ಹೀಗೆ ಹಳ್ಳಿ ಜನರು ಮಾಡುವ ಪ್ರತಿಯೊಂದು ಕೆಲಸವನ್ನು ಟಾಸ್ಕ್ ರೂಪದಲ್ಲಿ 'ಹಳ್ಳಿ ಪವರ್' ಸ್ಪರ್ಧಿಗಳಿಗೆ ನೀಡಲಾಗಿತ್ತು. ಇದನ್ನು ಸ್ಪರ್ಧಿಗಳು ಹೇಗೆ ನಿಬಾಯಿಸಿದ್ದರು ? ಅನ್ನೋದನ್ನು ಈಗಾಗಲೇ ಜನರು ನೋಡಿದ್ದಾರೆ. ಇನ್ನು ಈ ರಿಯಾಲಿಟಿ ಶೋ ಉತ್ತರ ಕರ್ನಾಟಕದ ಸಂಗೊಳ್ಳಿಯಲ್ಲಿ ಚಿತ್ರೀಕರಣ ಮಾಡಲಾಗಿದೆ.

Zee Power reality show Halli Power Grand Finale telecast date and other details

ಒಂದ್ಕಡೆ ಹಳ್ಳಿ ಸೊಗಡು, ಇನ್ನೊಂದ್ಕಡೆ ಅಕುಲ್ ಬಾಲಾಜಿ ನಿರೂಪಣೆ, ಮತ್ತೊಂದ್ಕಡೆ ಸ್ಪರ್ಧಿಗಳ ಛಲ ಇವೆಲ್ಲವೂ ಸೇರಿ 'ಹಳ್ಳಿ ಪವರ್' ಶೋ ಯಶಸ್ವೀ ಆಗಲು ಕಾರಣವಾಯ್ತು ಎಂದು ಜೀ ಪವರ್ ಹೇಳಿಕೊಂಡಿದೆ. ಈ ರಿಯಾಲಿಟಿ ಶೋನಲ್ಲಿ ರಗಡ್ ರಶ್ಮಿ, ಸಕ್ಕತ್ ಸೋನಿಯಾ, ಘಾಟಿ ಗಾನವಿ, ಮಿಲ್ಕಿ ಬ್ಯೂಟಿ ಮೋನಿಷಾ ಹಾಗೂ ಮಣ್ಣಿನ ಮಗಳು ಫರೀನ್ ಫಿನಾಲಿಸ್ಟ್‌ಗಳಾಗಿ ಹೊರಹೊಮ್ಮಿದ್ದಾರೆ. ಇವರ ಶ್ರಮ, ಸಾಧನೆ ಮತ್ತು ದೃಢತೆಯಿಂದ ಫಿನಾಲೆಯ ಹಂತಕ್ಕೆ ತಲುಪಿಸಿದ್ದು, ಸೀಸನ್ 1ರ ಕಿರೀಟವನ್ನು ಯಾರು ಮುಡಿಗೇರಿಸಿಕೊಳ್ಳಲಿದ್ದಾರೆ ಎಂಬ ಕುತೂಹಲಕ್ಕೆ ಉತ್ತರ ಇದೆ ಶನಿವಾರ ಮತ್ತು ಭಾನುವಾರ ತೆರೆ ಬೀಳಲಿದೆ.

'ಹಳ್ಳಿ ಪವರ್' ಶೋ ಹಳ್ಳಿ ಸೊಗಡನ್ನು ಜನರಿಗೆ ನೀಡುವಲ್ಲಿ ಯಶಸ್ವೀ ಆಗಿದೆ. ಇನ್ನು ಫಿನಾಲೆ ಎಪಿಸೋಡ್ ಗಳು ಭಾವನಾತ್ಮಕ, ರೋಚಕ ಕ್ಷಣಗಳಿಂದ ವೀಕ್ಷಕರನ್ನು ಸೆಳೆದಿದೆ. ಈ ಶೋ ವೀಕ್ಷಕರಿಗೆ ಸಿಕ್ಕಾಪಟ್ಟೆ ಮನರಂಜನೆ ನೀಡಿರುವುದರಲ್ಲಿ ಎರಡು ಮಾತಿಲ್ಲ. 'ಹಳ್ಳಿ ಪವರ್' ಸೀಸನ್ 1 ರ ಕಿರೀಟ ಯಾರ ಮುಡಿಗೆ ಎಂಬುದನ್ನು ತಿಳಿಯಲು ಡಿಸೆಂಬರ್ 27 ಮತ್ತು 28ರಂದು ಆತ್ರಿ 8:30 ರಿಂದ ರಾತ್ರಿ 10:30ರವರೆಗೆ ಜೀ ಪವರ್‌ನಲ್ಲಿ ಪ್ರಸಾರ ಆಗಲಿದೆ.

More from Filmibeat

English summary
Zee Power reality show Halli Power Grand Finale telecast date and other details.
Read more about: akul balaji tv show reality show
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X