Zee Saregamapa ಬೆಂಗಳೂರಿನಲ್ಲಿ 'ಸರಿಗಮಪ' ಆಡಿಷನ್; ಎಲ್ಲೆಲ್ಲಿ ಯಾವಾಗ?
ಜೀ ಟಿವಿಯ ಜನಪ್ರಿಯ ಸಂಗೀತ ಕಾರ್ಯಕ್ರಮ 'ಸರಿಗಮಪ' ಹೊಸ ಸೀಸನ್‌ನೊಂದಿಗೆ ಮರಳಿ ಬರುತ್ತಿದೆ. ಸಂಗೀತಕ್ಕೆ ಯಾವುದೇ ಭಾಷೆಯ ಗಡಿಗಳಿಲ್ಲ ಎಂಬ ಸಂದೇಶವನ್ನು ಈ ಬಾರಿಯ ಪ್ರೋಮೋದಲ್ಲಿ ಅದ್ಭುತವಾಗಿ ತೋರಿಸಲಾಗಿದೆ. ಈ ಸೀಸನ್‌ನಲ್ಲಿ 100ಕ್ಕೂ ಹೆಚ್ಚು ಕಲಾವಿದರು ಸೇರಿ ಸಂಗೀತದ ಹಬ್ಬವನ್ನೇ ಸೃಷ್ಟಿಸಲಿದ್ದಾರೆ. ಜೊತೆಗೆ ಈ ಬಾರಿ ಬೆಂಗಳೂರಿನಲ್ಲಿ ಕೂಡ ಆಡಿಷನ್ ನಡೆಯಲಿದ್ದು, ಸಂಗೀತ ಪ್ರಿಯರಿಗೆ ಅದ್ಬುತ ಅವಕಾಶ ಸಿಗಲಿದೆ.
ಈಗಾಗಲೇ ವಾರಣಾಸಿ, ಲಕ್ನೋ, ದೆಹಲಿ, ಚಂಡೀಗಢ, ಜೈಪುರ ಮತ್ತು ಮುಂಬೈನಲ್ಲಿ ನಡೆದ ಆಡಿಷನ್‌ಗಳಿಗೆ ಸಾವಿರಾರು ಸಿಂಗರ್ಸ್ ಭಾಗವಹಿಸಿ ಭರ್ಜರಿ ಬೆಂಬಲ ನೀಡಿದ್ದಾರೆ. ಈಗ ಈ ಹುಡುಕಾಟ ಮುಂದಿನ ಹಂತಕ್ಕೆ ತಲುಪಿದ್ದು, ಬೆಂಗಳೂರು, ನಾಗ್ಪುರ ಮತ್ತು ಇಂದೋರ್‌ನಲ್ಲಿ ಆಡಿಷನ್‌ಗಳು ನಡೆಯಲಿವೆ.

ಆಡಿಷನ್ ಸ್ಥಳಗಳ ವಿವರ
ಬೆಂಗಳೂರು (ಜುಲೈ 19): ಯುನೈಟೆಡ್ ಮಿಷನ್ ಡಿಗ್ರಿ ಕಾಲೇಜು, ಪಿ. ಕಳಿಂಗ ರಾವ್ ರಸ್ತೆ, ಸಂಪಂಗಿರಾಮನಗರ (ಟೌನ್ ಹಾಲ್ ಬಳಿ), ಬೆಂಗಳೂರು - 560027.
ನಾಗ್ಪುರ (ಜುಲೈ 18): ವಿಬ್ಗೈರ್ ವರ್ಲ್ಡ್ ಸ್ಕೂಲ್, 103, ಎನ್ ಅಂಬಾಜರಿ ರಸ್ತೆ, ನ್ಯೂ ರಾಮ್‌ದಸ್‌ಪೇಠ್, ನಾಗ್ಪುರ, ಮಹಾರಾಷ್ಟ್ರ - 440010.
ಇಂದೋರ್ (ಜುಲೈ 19): ಆದರ್ಶ ಶಿಶು ವಿಹಾರ್ ಹೈಯರ್ ಸೆಕೆಂಡರಿ ಸ್ಕೂಲ್, 1398/1, ಬಿಚೋಲಿ ರಸ್ತೆ, ಬಂಗಾಳಿ ಸ್ಕ್ವೇರ್ ಹತ್ತಿರ, ಇಂದೋರ್ - 452016.


Click it and Unblock the Notifications