ಘಾರ್ಗಾ ಸಿನಿಮಾ ಒಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದ್ದು, ಇದನ್ನು ಎಂ. ಶಶಿಧರ್ ನಿರ್ದೇಶಿಸಿದ್ದಾರೆ ಹಾಗೂ ಅಶ್ವಿನಿ ರಾಮಪ್ರಸಾದ್ ನಿರ್ಮಿಸಿದ್ದಾರೆ. ಈ ಚಿತ್ರಕ್ಕೆ ಗುರು ಕಿರಣ್ ಸಂಗೀತ ನೀಡಿದ್ದಾರೆ. ಅರುಣ್ ರಾಮಪ್ರಸಾದ್ ಮತ್ತು ರಾಗವಿ ಗೌಡ ಮುಖ್ಯ ನಾಯಕ–ನಾಯಕಿಯಾಗಿ ಅಭಿನಯಿಸಿದ್ದು, ಸಾಯಿ ಕುಮಾರ್, ಅರುಣ್ ಸಾಗರ್, ಮಿತ್ರಾ, ವಸಿಷ್ಠ ಸೇರಿದಂತೆ ಇನ್ನೂ ಹಲವರು ಸಹಾಯಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.