ಚೈತ್ರಾ ಆಚಾರ್ ಡೀಪ್ ನೆಕ್ ಇರುವಂತಹ ಮಲ್ಟಿಕಲರ್ ಡಿಸೈನರ್ ಲೇಹಂಗಾ ತೊಟ್ಟು ಫೋಟೋಶೂಟ್ ಮಾಡಿಸಿದ್ದಾರೆ.
PC:Chaitra Achar Instagram
ಜೊತೆಗೆ ವಿವಂತ್ ಗೋಲ್ಡ್ ಡೈಮಾಂಡ್ಸ್‌ನ ದೊಡ್ಡದಾದ ನೆಕ್ಲೇಸ್, ಸರ, ಕಿವಿಯೋಲೆ, ಉಂಗುರ ಹಾಗೂ ಕೈತುಂಬಾ ಬಳೆ ತೊಟ್ಟಿದ್ದಾರೆ.
PC:Chaitra Achar Instagram
ಜೊತೆಗೆ ಎರಡು ಜಡೆ ಹಾಕಿಕೊಂಡು ಟೋಪಿ ಹುಡುಗಿ ಕ್ಲಾಸಿ ಲುಕ್ನಲ್ಲೂ ಬೋಲ್ಡ್ ಆಗಿ ಪೋಸ್ ಕೊಟ್ಟಿದ್ದಾರೆ.
PC:Chaitra Achar Instagram
ಈ ನಟಿಯ ಫೋಟೋಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿವೆ.
PC:Chaitra Achar Instagram
ಚೈತ್ರಾ ಸದ್ಯ ಉತ್ತರಕಾಂಡ ಚಿತ್ರದಲ್ಲಿ ಲಚ್ಚಿ ಅನ್ನುವ ವಿಭಿನ್ನ ರೋಲ್ ಮಾಡುತ್ತಿದ್ದಾರೆ. ಇದರಲ್ಲಿ ಉತ್ತರ ಕರ್ನಾಟಕದ ಹೆಣ್ಣುಮಗಳಾಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ.
PC:Chaitra Achar Instagram
ಮಹಿರಾ, ಗಿಲ್ಕಿ, ತಲೆಂದಂಡ, ಆ ದೃಶ್ಯ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದ ಈ ನಟಿಗೆ ಹೆಚ್ಚು ಖ್ಯಾತಿ ತಂದುಕೊಟ್ಟಿದ್ದು ಟೋಬಿ & ಸಪ್ತಸಾಗರದಾಚೆ ಎಲ್ಲೋ ಸಿನಿಮಾಗಳು.
PC:Chaitra Achar Instagram
ಇವರು ನಟಿ ಮಾತ್ರವಲ್ಲದೆ, ಸಿಂಗರ್ ಕೂಡ ಆಗಿದ್ದಾರೆ. ಗರುಡ ಗಮನ ವೃಷಭ ವಾಹನ ಚಿತ್ರದ ಹಾಡಿಗಾಗಿ ಚೈತ್ರಾಗೆ ಸೈಮಾ ಪ್ರಶಸ್ತಿ ದೊರೆತಿದೆ.
PC:Chaitra Achar Instagram