Sowmya Bairappa       May 28, 2024

ನಟಿ ಐಶ್ವರ್ಯಾ ಸಾಲಿಮಠ ಕುರಿತ ಮಾಹಿತಿ ಇಲ್ಲಿದೆ.

ಧಾರಾವಾಡದವರು

ರಾಮಾಚಾರಿ ಸೀರಿಯಲ್‌ನ ವೈಶಾಖ ಪಾತ್ರಧಾರಿ ಐಶ್ವರ್ಯಾ ಸಾಲಿಮಠ ಮೂಲತಃ ಧಾರಾವಾಡದವರು. ಸದ್ಯ ಬೆಂಗಳೂರಿನಲ್ಲಿ ನೆಲಸಿದ್ದಾರೆ.

PC: Aishwarya Salimath

ವಯಸ್ಸು?

ಐಶ್ವರ್ಯಾ ಸಾಲಿಮಠ ಜನಿಸಿದ್ದು 1995ರ ಮಾರ್ಚ್‌ 25ರಂದು. ಇವರಿಗೀಗ 29 ವರ್ಷ ವಯಸ್ಸು.

PC: Aishwarya Salimath

ವಿದ್ಯಾಭ್ಯಾಸ

ಧಾರಾವಾಡದ ಜೆಎಸ್‌ಎಸ್‌ ಕಾಲೇಜಿನಲ್ಲಿ ಓದಿರುವ ಇವರು, ಕೆ.ಎಚ್ ಕಬ್ಬೂರ್ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್‌ನಲ್ಲಿ ಶಿಕ್ಷಣ ಪಡೆದಿದ್ದಾರೆ.

PC: Aishwarya Salimath

ಮೊದಲ ಸೀರಿಯಲ್

ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮಹಾಸತಿ' ಧಾರಾವಾಹಿ ಮೂಲಕ ಐಶ್ವರ್ಯಾ ಕನ್ನಡ ಕಿರುತೆರೆಗೆ ಕಾಲಿಟ್ಟರು.

PC: Aishwarya Salimath

ಧಾರಾವಾಹಿಗಳು

ಆನಂತರ ಸರಯೂ, ಅನಂತಿನಿ, ಅಗ್ನಿಸಾಕ್ಷಿ, ಸೇವಂತಿ ಮುಂತಾದ ಸೀರಿಯಲ್‌ಗಳಲ್ಲಿ ನಟಿಸಿರುವ ಇವರು, ಸದ್ಯ ರಾಮಾಚಾರಿಯಲ್ಲಿ ಅಭಿನಯಿಸುತ್ತಿದ್ದಾರೆ.

PC: Aishwarya Salimath

ನಾಯಕಿ

ತಮಿಳಿನ 'ಉಯಿರೆ' ಸೀರಿಯಲ್‌ನಲ್ಲಿ ನಾಯಕಿಯಾಗಿ ಐಶ್ವರ್ಯಾ ಸಾಲಿಮಠ ಅಭಿನಯಿಸಿದ್ದಾರೆ. 

PC: Aishwarya Salimath

ಮದುವೆ

2022ರಲ್ಲಿ ಕಿರುತೆರೆ ನಟ ವಿನಯ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ವಿನಯ್ ಇತ್ತೀಚೆಗೆ ಶಾಖಾಹಾರಿ ಸಿನಿಮಾದಲ್ಲಿ ನಟಿಸಿದ್ದರು. 

PC: Aishwarya Salimath