Tap to Read ➤

ರಿ‍ಷಬ್ ಶೆಟ್ಟಿ ಪತ್ನಿ ಪ್ರಗತಿ ಬಗ್ಗೆ ನಿಮಗೆಷ್ಟು ಗೊತ್ತು?

ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ, ನಿರ್ದೇಶಕ ರಿ‍ಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಕುರಿತ ಇಂಟರೆಸ್ಟಿಂಗ್‌ ವಿಷಯಗಳು ಇಲ್ಲಿವೆ.
sowmya malnad
ರಿ‍ಷಬ್ ಪತ್ನಿ ಪ್ರಗತಿ ಶೆಟ್ಟಿಯ ಕುಟುಂಬದವರು ಮೂಲತಃ ಮಂದಾರ್ತಿಯವರು.
ಆದರೆ, ಪ್ರಗತಿ ಹುಟ್ಟಿ ಬೆಳೆದಿದ್ದು ಶಿವಮೊಗ್ಗದ ಅರಸಾಳು ಎಂಬ ಊರಿನಲ್ಲಿ.
ಪ್ರಗತಿ ಅವರ ವಿದ್ಯಾಭ್ಯಾಸ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ನಡೆಯಿತು.
ನಂತರ ಬೆಂಗಳೂರಿನ ಐಟಿ ಕಂಪನಿಯಲ್ಲಿ ನಾಲ್ಕು ವರ್ಷ ಕೆಲಸ ಮಾಡಿದರು.
ಪ್ರಗತಿ ಮತ್ತು ರಿಷಬ್‌ ಅವರದ್ದು ಲವ್‌ ಕಮ್‌ ಅರೇಂಜ್‌ ಮ್ಯಾರೇಜ್‌.
ಮದುವೆ ಬಳಿಕ ಸಿನಿಮಾ ರಂಗದ ಬಗ್ಗೆ ಆಸಕ್ತಿ ಬೆಳೆಸಿಕೊಂಡ ಪ್ರಗತಿ, ಫ್ಯಾಷನ್‌ ಡಿಸೈನಿಂಗ್‌ ಕೋರ್ಸ್‌ ಮಾಡಿದರು.
ನಂತರ ಸಿನಿಮಾಗಳಿಗೆ ಕಾಸ್ಟ್ಯೂಮ್‌ ಡಿಸೈನರ್‌ ಆಗಿ ಕೆಲಸ ಆರಂಭಿಸಿದರು.
ಸ.ಹಿ.ಪ್ರಾ.ಶಾಲೆ ಕಾಸರಗೋಡು, ಬೆಲ್‌ ಬಾಟಂ, ಕಥಾಸಂಗಮ, ರುದ್ರಪ್ರಯಾಗ, 777 ಚಾರ್ಲಿ ಚಿತ್ರಗಳಿಗೂ ಪ್ರಗತಿಯವರೇ ಕಾಸ್ಟ್ಯೂಮ್‌ ಡಿಸೈನರ್‌.
More