»   » ನಿಮಗಾಗಿ ಯಶ್ ನೀಡಿರುವ ವಿಡಿಯೋ ಸಂದೇಶ: ಮಿಸ್ ಮಾಡ್ದೆ ನೋಡಿ..

ನಿಮಗಾಗಿ ಯಶ್ ನೀಡಿರುವ ವಿಡಿಯೋ ಸಂದೇಶ: ಮಿಸ್ ಮಾಡ್ದೆ ನೋಡಿ..

Posted by:
Subscribe to Filmibeat Kannada

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ವಿವಾಹ ಮಹೋತ್ಸವದಲ್ಲಿ ಪಾಲ್ಗೊಳ್ಳಬೇಕು ಎಂಬ ಆಸೆ ನಿಮಗಿದ್ಯಾ? ನಿಮ್ಮ ಆಸೆಗೆ ನಟ ಯಶ್ ತಥಾಸ್ತು ಎಂದಿದ್ದಾರೆ.

ಹೌದು, ತಮ್ಮ ನೆಚ್ಚಿನ ಅಭಿಮಾನಿಗಳಿಗಾಗಿ ಒಂದು ಇಡೀ ದಿನವನ್ನ ರಾಕಿಂಗ್ ಸ್ಟಾರ್ ಯಶ್ ಹಾಗೂ ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಮೀಸಲಿಟ್ಟಿದ್ದಾರೆ. ಡಿಸೆಂಬರ್ 11 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಿಮ್ಮೆಲ್ಲರಿಗಾಗಿ ಯಶ್-ರಾಧಿಕಾ ಪಂಡಿತ್ ವಿಶೇಷ ಔತಣ ಕೂಟದ ವ್ಯವಸ್ಥೆ ಮಾಡಿದ್ದಾರೆ. ['ಯಶ್-ರಾಧಿಕಾ ಪಂಡಿತ್' ಮದುವೆ ಸಂಭ್ರಮ ಭಲೇ ಜೋರು]

ಈ ಔತಣ ಕೂಟದಲ್ಲಿ ನೀವೆಲ್ಲರೂ ಪಾಲ್ಗೊಳ್ಳಬೇಕು ಎಂದು ವಿಡಿಯೋ ಮೂಲಕ ನಟ ಯಶ್ ಆಹ್ವಾನ ನೀಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್

ಡಿಸೆಂಬರ್ 11 ರಂದು ಆಯೋಜಿಸಿರುವ ಔತಣ ಕೂಟದಲ್ಲಿ ಭಾಗಿಯಾಗಲು ಅಭಿಮಾನಿಗಳಿಗೆ ನಟ ಯಶ್ ಆಹ್ವಾನ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ನಟ ಯಶ್ ಏನು ಹೇಳಿದ್ದಾರೆ ಅಂತ ಅವರ ಮಾತುಗಳಲ್ಲೇ ಓದಿರಿ....

ಡಿಸೆಂಬರ್ 11 ರಂದು ಔತಣಕೂಟ

ಡಿಸೆಂಬರ್ 11 ರಂದು ಔತಣಕೂಟ

''ಎಲ್ಲರಿಗೂ ನಮಸ್ಕಾರ, ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಇದೇ ಡಿಸೆಂಬರ್ 9 ರಂದು ನನ್ನ-ರಾಧಿಕಾ ಮದುವೆ. 10ನೇ ತಾರೀಖು ರಿಸೆಪ್ಷನ್ ಪ್ಯಾಲೆಸ್ ಗ್ರೌಂಡ್ಸ್ ನಲ್ಲಿ ಇರುತ್ತೆ. 11ನೇ ತಾರೀಖು ಪ್ಯಾಲೆಸ್ ಗ್ರೌಂಡ್ಸ್ ನಲ್ಲಿಯೇ ವಿಶೇಷವಾಗಿ ನಿಮ್ಮೆಲ್ಲರಿಗೋಸ್ಕರ... ಅಂದ್ರೆ ನನ್ನ ಪ್ರೀತಿಯ ಅಭಿಮಾನಿಗಳಿಗಾಗಿ ಒಂದು ಔತಣಕೂಟ ಏರ್ಪಡಿಸಲಾಗಿದೆ'' - ಯಶ್, ನಟ ['ಯಶ್-ರಾಧಿಕಾ' ಮದುವೆ: ಸಂಗೀತ ಕಾರ್ಯಕ್ರಮದಲ್ಲಿ ತಾರೆಯರ ಮಿಂಚು]

ಅಭಿಮಾನಿಗಳಿಗೆ ಬೇಸರ ಆಗಬಾರದು ಅಂತ...

ಅಭಿಮಾನಿಗಳಿಗೆ ಬೇಸರ ಆಗಬಾರದು ಅಂತ...

''ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೂ ಊಟದ ವ್ಯವಸ್ಥೆ ಮಾಡಲಾಗಿದೆ. ಕಾರಣ ಇಷ್ಟೇ... ನಿಮ್ಮೆಲ್ಲರಿಗೂ 9 ಹಾಗೂ 10ನೇ ತಾರೀಖು ನಮ್ಮ ಮದುವೆಯಲ್ಲಿ ಭಾಗವಹಿಸಬೇಕು ಅಂತ ಆಸೆ ಇರುತ್ತದೆ. ನಮ್ಮನ್ನ ಮೀಟ್ ಮಾಡಬೇಕು ಅಂತ ಆಸೆ ಇರುತ್ತದೆ. ಆದ್ರೆ, ಅಲ್ಲಿ ಜಾಗದ ವ್ಯವಸ್ಥೆ ಹಾಗೂ ನಿರ್ಬಂಧಗಳು ಇರುವುದರಿಂದ ನನ್ನ ಅಭಿಮಾನಿಗಳಿಗೆ ಬೇಜಾರು ಆಗಬಾರದು ಎಂಬ ಕಾರಣಕ್ಕೆ 11 ನೇ ತಾರೀಖು ನಿಮ್ಮೆಲ್ಲರಿಗಾಗಿ ವಿಶೇಷ ಔತಣ ಕೂಟ ಆಯೋಜಿಸಿದ್ದೇವೆ'' - ಯಶ್, ನಟ ['ಯಶ್-ರಾಧಿಕಾ' ಮದುವೆಗೆ ರಾಜಕೀಯ ನಾಯಕರಿಗೆ ಆಮಂತ್ರಣ]

ಉಡುಗೊರೆ ತರಬೇಡಿ, ಹಾರೈಸಿ ಸಾಕು..

ಉಡುಗೊರೆ ತರಬೇಡಿ, ಹಾರೈಸಿ ಸಾಕು..

''ನಾನು ಹಾಗೂ ರಾಧಿಕಾ ಅಲ್ಲಿ ಇರುತ್ತೇವೆ. ನೀವೆಲ್ಲರೂ ಬರಬಹುದು. ನಮಗೆ ಹಾರೈಸಬಹುದು. ನೀವು ಯಾರೂ ಯಾವುದೇ ಕಾರಣಕ್ಕೂ ಉಡುಗೊರೆ ತರಬೇಡಿ. ಪ್ರೀತಿಯಿಂದ ಬಂದು ನಮ್ಮನ್ನ ಹರಸಿ. ಇದು ನಿಮಗೆಲ್ಲ ನನ್ನ ಮುಖ್ಯ ಕೋರಿಕೆ'' - ಯಶ್, ನಟ

ಒಕ್ಕೂಟದ ಸದಸ್ಯರಿಗೂ ಆಹ್ವಾನ

ಒಕ್ಕೂಟದ ಸದಸ್ಯರಿಗೂ ಆಹ್ವಾನ

''ನಮ್ಮ ಚಿತ್ರರಂಗದ ಒಕ್ಕೂಟದ ಸದಸ್ಯರಿಗೂ ಅವತ್ತೇ ಔತಣ ಕೂಟ ಕೂಡ ಏರ್ಪಡಿಸಲಾಗಿದೆ. ಅವತ್ತು ಸೆಕೆಂಡ್ ಸಂಡೇ ಆದ್ದರಿಂದ ಎಲ್ಲರಿಗೂ ರಜೆ ಇದೆ. ಎಲ್ಲರೂ ಭಾಗವಹಿಸಬಹುದು'' - ಯಶ್, ನಟ

ನೀವು ಸಾಕ್ಷಿಯಾಗಬೇಕು

ನೀವು ಸಾಕ್ಷಿಯಾಗಬೇಕು

''ನೀವೆಲ್ಲರೂ ಬಂದು ಭಾಗವಹಿಸಬೇಕು ಎಂಬುದು ನನ್ನ ಆಸೆ. ನಿಮ್ಮ ಪ್ರೀತಿ, ಹಾರೈಕೆ ನನ್ನ ಮೇಲೆ ಹೀಗೆ ಇರಲಿ. ನನ್ನ ಜೀವನದಲ್ಲಿ ನೀವೆಲ್ಲರೂ ಒಂದು ಮುಖ್ಯವಾದ ಭಾಗ. ನನ್ನ ಸಕ್ಸಸ್ ಗೆ ನೀವು ಕಾರಣ. ನನ್ನ ಜೀವನದ ಮುಖ್ಯವಾದ ಘಟಕ್ಕೆ ನಾನು ಕಾಲಿಡುತ್ತಿದ್ದೇನೆ. ಅದಕ್ಕೆ ನೀವೆಲ್ಲರೂ ಸಾಕ್ಷಿ ಆಗ್ಬೇಕು ಅನ್ನೋದು ನನ್ನ ಆಸೆ. ನಿಮ್ಮ ಪ್ರೀತಿ ಹಾರೈಕೆ ನಮ್ಮಿಬ್ಬರ ಮೇಲೂ ಇರಲಿ'' - ಯಶ್, ನಟ

ವಿಡಿಯೋ ನೋಡಿ...

ವಿಡಿಯೋ ನೋಡಿ...

ಅಭಿಮಾನಿಗಳಿಗೆ ಯಶ್ ಆಹ್ವಾನ ನೀಡಿರುವ ವಿಡಿಯೋ ಲಿಂಕ್ ಇಲ್ಲಿದೆ ನೋಡಿ...

English summary
Rocking Star Yash has given open invitation for his fans to take part in his marriage with Kannada Actress Radhika Pandit on December 11th at Tripura Vasini, Bengaluru Palace Grounds. Watch video.
Please Wait while comments are loading...

Kannada Photos

Go to : More Photos